ಹಲೋ... ನಾನು ವ್ಯೋಮಮಿತ್ರ ಮಾನವರಹಿತ ಗಗನಯಾನಕ್ಕೆ ಸಿದ್ಧವಾಗಿರುವ ಮಹಿಳಾ ರೊಬೊಟ್ ಮಾತಿನ ಪರಿ

ಸಂಸ್ಕೃತದ ವ್ಯೋಮ (ಬಾಹ್ಯಾಕಾಶ) ಮತ್ತು ಮಿತ್ರ (ಸ್ನೇಹಿತ) ಪದಗಳನ್ನು ಕೂಡಿಸಿ ರೋಬೊಟ್​ಗೆ ವ್ಯೋಮಮಿತ್ರ ಎಂದು ನಾಮಕರಣ ಮಾಡಲಾಗದೆ. ಮಹಿಳಾ ರೊಬೊಟ್ ತನ್ನನ್ನು ಪರಿಚಯಿಸಿಕೊಳ್ಳುವ ಮೂಲಕ ನೆರೆದವರಲ್ಲಿ ಅಚ್ಚರಿ ಉಂಟು ಮಾಡಿತು.

HR Ramesh | news18-kannada
Updated:January 22, 2020, 7:17 PM IST
ಹಲೋ... ನಾನು ವ್ಯೋಮಮಿತ್ರ ಮಾನವರಹಿತ ಗಗನಯಾನಕ್ಕೆ ಸಿದ್ಧವಾಗಿರುವ ಮಹಿಳಾ ರೊಬೊಟ್ ಮಾತಿನ ಪರಿ
ವ್ಯೋಹಮಿತ್ರ ಮಹಿಳಾ ರೊಬೊಟ್.
  • Share this:
ಬೆಂಗಳೂರು: "ಹಲೋ... ನಾನು ವ್ಯೋಮಮಿತ್ರ. ಮೊದಲ ಮಾನವರಹಿತ ಗಗನಯಾತ್ರೆ ಯೋಜನೆಗಾಗಿ ನನ್ನನ್ನು ಸಿದ್ಧಪಡಿಸಲಾಗಿದೆ. ಮುನ್ನೆಚ್ಚರಿಕೆ ನೀಡುವುದು ಹಾಗೂ ಜೀವ ರಕ್ಷಣ ಕಾರ್ಯಗಳಲ್ಲಿ ನಾನು ಸಹಕರಿಸುತ್ತೇನೆ. ಸ್ವಿಚ್ ಪ್ಯಾನಲ್ ಕಾರ್ಯ ಸೇರಿದಂತೆ ಹಲವು ಚಟುವಟಿಕೆಗಳನ್ನು ನಡೆಸಬಲ್ಲೆ..." ಎಂದು ನೆರೆದಿದ್ದವರಿಗೆ ತನ್ನ ಪರಿಚಯ ಹೇಳಿಕೊಂಡಿದ್ದು ಮಹಿಳಾ ರೊಬೊಟ್.

ಹೌದು, ಗಗನಯಾತ್ರಿಗಳನ್ನು ಒಳಗೊಂಡ ಗಗನಯಾನಕ್ಕೂ ಮುನ್ನ ಮಾನವರಹಿತ ಗಗನಯಾತ್ರೆಗೆ ರೊಬೊಟ್ ಮಹಿಳೆಯನ್ನು ಕಳುಹಿಸಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಸಿದ್ಧತೆ ನಡೆಸಿದೆ. ಆ ಹಿನ್ನೆಲೆಯಲ್ಲಿ ಇಂದು ಮಾನವ ಗಗನಯಾನ ಮತ್ತು ಪರಿಶೋಧನೆ-ಪ್ರಸ್ತುತ ಸವಾಲುಗಳು ಮತ್ತು ಮುಂದಿನ ಒಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ವ್ಯೋಮಮಿತ್ರ ರೊಬೊಟ್ ಎಲ್ಲರ ಪ್ರಮುಖ ಆಕರ್ಷಣೆಯಾಗಿತ್ತು. 2021ರ ಡಿಸೆಂಬರ್​ಗೆ ಗಗನಯಾತ್ರಿಗಳ ಗಗನಯಾನ ನಡೆಯಲಿದ್ದು, ಅದಕ್ಕೂ ಮುನ್ನ ವ್ಯೋಮಮಿತ್ರ ಬಾಹ್ಯಾಕಾಶ ಯಾನ ನಡೆಯಲಿದೆ.

ಸಂಸ್ಕೃತದ ವ್ಯೋಮ (ಬಾಹ್ಯಾಕಾಶ) ಮತ್ತು ಮಿತ್ರ (ಸ್ನೇಹಿತ) ಪದಗಳನ್ನು ಕೂಡಿಸಿ ರೋಬೊಟ್​ಗೆ ವ್ಯೋಮಮಿತ್ರ ಎಂದು ನಾಮಕರಣ ಮಾಡಲಾಗದೆ. ಮಹಿಳಾ ರೊಬೊಟ್ ತನ್ನನ್ನು ಪರಿಚಯಿಸಿಕೊಳ್ಳುವ ಮೂಲಕ ನೆರೆದವರಲ್ಲಿ ಅಚ್ಚರಿ ಉಂಟು ಮಾಡಿತು.

ಗಗನಯಾನಿಗಳಿಗೆ ಒಡನಾಡಿಯಂತೆ ವರ್ತಿಸಬಹುದಾದ ರೊಬೊಟ್ ಅವರನ್ನು ಗುರುತಿಸುವುದು ಹಾಗೂ ಅವರೊಂದಿಗೆ ಸಂಭಾಷಣೆ ನಡೆಸಬಲ್ಲದು. ಅವರು ಕೇಳುವ ಪ್ರಶ್ನೆಗಳಿಗೆ ಪ್ರತಿಕ್ರಿಯಿಸುವ ಸಾಮರ್ಥ್ಯವನ್ನು ಈ ರೊಬೊಟ್ ಹೊಂದಿದೆ. ಮಾನವನಂತೆಯೇ ಕಾಣುವ ರೊಬೊಟ್ ಬಾಹ್ಯಾಕಾಶದಲ್ಲಿ ಮನುಷ್ಯರ ರೀತಿಯಲ್ಲಿಯೇ ಕಾರ್ಯ ನಿರ್ವಹಣೆಯನ್ನು ಅನುಕರಿಸುತ್ತದೆ ಎಂದು ಇಸ್ರೋ ಅಧ್ಯಕ್ಷ ಕೆ.ಶಿವನ್ ಹೇಳಿದರು.

ಇದನ್ನು ಓದಿ: ಈ ವರ್ಷವೇ ಚಂದ್ರಯಾನ-3 ಮತ್ತು ಗಗನಯಾನ ಯೋಜನೆಗಳ ಉಡಾವಣೆ; ಇಸ್ರೋ ಅಧ್ಯಕ್ಷ ಕೆ.ಶಿವನ್​ ಘೋಷಣೆ

2020ರ ಡಿಸೆಂಬರ್ ಹಾಗೂ 2021ರ ಜೂನ್​ನಲ್ಲಿ ಎರಡು ಬಾರಿ ಇಸ್ರೋ ಮಾನವ ರಹಿತ ಬಾಹ್ಯಾಕಾಶ ಯಾನ ನಡೆಸಲಿದೆ. ಆ ಬಳಿಕ ದೇಶದ ಮೊದಲ ಮಾನವ ಸಹಿತ ಗಗನಯಾತ್ರೆ ನಡೆಯಲಿದೆ.
First published:January 22, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ