2021 ರ ಡಿಸೆಂಬರ್​ನಲ್ಲಿ ಮಾನವ ಸಹಿತ ಗಗನಯಾನ; ಇಸ್ರೋ ಅಧ್ಯಕ್ಷ ಕೆ.ಶಿವನ್​

ಇಸ್ರೋ ಇದೇ ಮೊದಲ ಬಾರಿಗೆ ಮಾನವ ಸಹಿತ ಗಗನಯಾನ ಕೇಂದ್ರವನ್ನು ಸ್ಥಾಪಿಸಲಿದೆ. ಈ ಕೇಂದ್ರದ ನಿರ್ದೇಶಕರಾಗಿ ಡಾ.ಉನ್ನಿಕೃಷ್ಣನ್ ಇರಲಿದ್ದಾರೆ. ಇನ್ನು ಮುಂದೆ ನಡೆಯುವ ಮಾನವ ಸಹಿತ ಗಗನಯಾನ ಯೋಜನೆ ನಿರ್ದೇಶಕರಾಗಿ ಹಟ್ಟನ್ ಅವರನ್ನು ನೇಮಿಸಲಾಗುತ್ತದೆ.

Latha CG | news18india
Updated:January 12, 2019, 8:58 AM IST
2021 ರ ಡಿಸೆಂಬರ್​ನಲ್ಲಿ ಮಾನವ ಸಹಿತ ಗಗನಯಾನ; ಇಸ್ರೋ ಅಧ್ಯಕ್ಷ ಕೆ.ಶಿವನ್​
ಸಾಂದರ್ಭಿಕ ಚಿತ್ರ
  • Share this:
- ಶ್ಯಾಮ್ ಎಸ್​ 

ಬೆಂಗಳೂರು(ಜ. 11):  2020 ಡಿಸೆಂಬರ್​ನಲ್ಲಿ ಮಾನವ ರಹಿತ ನೌಕೆ ಪ್ರಾಯೋಗಿಕ ಉಡಾವಣೆ ಮಾಡಲಾಗುತ್ತದೆ. 2021 ರ ಜುಲೈನಲ್ಲಿ ಮತ್ತೆ ಮಾನವ ರಹಿತ ನೌಕೆ ಉಡಾವಣೆಯಾಗಲಿದೆ. ಅಂತಿಮವಾಗಿ 2021 ಇಸವಿಯ ಡಿಸೆಂಬರ್ ನಲ್ಲಿ ಮಾನವ ಸಹಿತ ಗಗನಯಾನ ನಡೆಯಲಿದೆ ಎಂದು ಇಸ್ರೋ ಅಧ್ಯಕ್ಷ ಕೆ.ಶಿವನ್ ಹೇಳಿದ್ದಾರೆ.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಸ್ರೋ ಇದೇ ಮೊದಲ ಬಾರಿಗೆ ಮಾನವ ಸಹಿತ ಗಗನಯಾನ ಕೇಂದ್ರವನ್ನು ಸ್ಥಾಪಿಸಲಿದೆ. ಈ ಕೇಂದ್ರದ ನಿರ್ದೇಶಕರಾಗಿ ಡಾ.ಉನ್ನಿಕೃಷ್ಣನ್ ಇರಲಿದ್ದಾರೆ. ಇನ್ನು ಮುಂದೆ ನಡೆಯುವ ಮಾನವ ಸಹಿತ ಗಗನಯಾನ ಯೋಜನೆ ನಿರ್ದೇಶಕರಾಗಿ ಹಟ್ಟನ್ ಅವರನ್ನು ನೇಮಿಸಲಾಗುತ್ತದೆ ಎಂದರು.

ಗಗನಯಾನಕ್ಕೆ ಒಟ್ಟು 10 ಸಾವಿರ ಕೋಟಿ ರೂಪಾಯಿ ವೆಚ್ಚ ಮಾಡಲಿದೆ. ಇದರ ಶೇ.80 ರಷ್ಟು ಹಣ ಕೈಗಾರಿಕೆಗೆ ಹೋಗಲಿದೆ. ಇದರಿಂದ 20 ಸಾವಿರ ಉದ್ಯೋಗ ಸಿಗಲಿದೆ. ಗಗನಯಾನ ಇಸ್ರೋಗೆ ಪ್ರಮುಖ ತಿರುವು ಆಗಲಿದೆ. ‌7 ದಿನಗಳ ಗಗನಯಾನ ಇರಲಿದೆ. ಇಂಜಿನಿಯರಿಂಗ್ ಮತ್ತು ಮಾನವ ಸಹಿತ ಎಂಬ ಭಾಗಗಳಿವೆ. ನೌಕೆಯಲ್ಲಿ ಹೋಗುವ ಗಗನಯಾನಿಗಳಿಗೆ ತರಬೇತಿ ನೀಡಲಿದೆ. ಈ ನಿಟ್ಟಿನಲ್ಲಿ ಬಾಹ್ಯಾಕಾಶದಲ್ಲಿ ಸ್ಪೇಸ್ ಸ್ಟೇಷನ್, ಮಾನವ ಸಹಿತ ಚಂದ್ರಯಾನ ಮತ್ತಿತರ ಚಟುವಟಿಕೆಗಳಿಗೂ ಈ ಯೋಜನೆ ನಾಂದಿ ಹಾಡಲಿದೆ ಎಂದರು.

ಇದನ್ನೂ ಓದಿ: ಭಾರತದಿಂದ ಮಹತ್ವಾಕಾಂಕ್ಷಿ ಗಗನಯಾನ; 3 ವರ್ಷದಲ್ಲಿ ಬಾಹ್ಯಾಕಾಶಕ್ಕೆ ಹಾರಲಿದ್ದಾರೆ ಮೂವರು ಭಾರತೀಯರು

2019 ರ ಇಸವಿಯಲ್ಲಿ 32 ಪ್ರಮುಖ ಯೋಜನೆಗಳನ್ನು ಕಾರ್ಯಗತ ಮಾಡುತ್ತೇವೆ. ಈ ವರ್ಷ ಮರುಬಳಕೆಯ ರಾಕೇಟ್ ಪರೀಕ್ಷಾರ್ಥ ಉಡಾವಣೆ ಮಾಡಲಿದ್ದೇವೆ. ಸೆಪ್ಟೆಂಬರ್ ಅಥವಾ ಅಕ್ಟೋಬರ್ ನಲ್ಲಿ ಜಿಸ್ಯಾಟ್ -20 ಸಂಪರ್ಕ ಉಪಗ್ರಹ ಉಡಾವಣೆ ಮಾಡಲಿದ್ದೇವೆ. ಇದರಿಂದ ಕೇಂದ್ರಸರ್ಕಾರದ ಡಿಜಿಟಲ್ ಇಂಡಿಯಾ ಯೋಜನೆಯಡಿ ಉಪಗ್ರಹ ಉಡಾವಣೆ ಪೂರ್ಣವಾಗಲಿದೆ. ಇದರಿಂದ 100ಜಿಬಿಪಿಎಸ್ ಇಂಟರ್ ನೆಟ್ ಸ್ಪೀಡ್ ಲಭ್ಯವಾಗಲಿದೆ ಎಂದು ಹೇಳಿದರು. 

ಇಸ್ರೋದಿಂದ ಅಂತರ್ ಗ್ರಹ ಯೋಜನೆ ಚಾಲನೆಯಲ್ಲಿದೆ. 2020ರ ಜನವರಿಯಲ್ಲಿ ಇಸ್ರೊ ಆದಿತ್ಯ ಎಲ್-1 ಯೋಜನೆ ಸಾಕಾರವಾಗಲಿದೆ‌‌‌. ಈ ಯೋಜನೆಯಲ್ಲಿ ಪ್ರಮುಖವಾಗಿ ಸೂರ್ಯ ಹಾಗೂ ಹಿಲಿಯೋಫಿಸಿಕ್ಸ್ ಕುರಿತು ಉಪಗ್ರಹವು ಅಧ್ಯಯನ ಮಾಡಲಿದೆ.ಚಂದ್ರಯಾನ-2 ರಲ್ಲಿನ ರೋವರ್ ಚಂದ್ರನ ಮೇಲ್ಮೈ ವಾತಾವರಣವನ್ನು ಪರೀಕ್ಷೆ ಮಾಡಲಿದೆ. ಲ್ಯಾಂಡರ್ ಮತ್ತು ರೋವರ್ ಕಾರ್ಯಾವಧಿ 14 ದಿನಗಳಾಗಲಿದೆ. ರೋವರ್ ಚಂದ್ರನಲ್ಲಿ 500 ಮೀಟರ್ ನಷ್ಟು ಚಲಿಸುವ ರೀತಿ ಯೋಜನೆ ರೂಪಿಸುತ್ತಿದ್ದೇವೆ ಎಂದು ಮಾಹಿತಿ ನೀಡಿದರು. ಲ್ಯಾಂಡರ್​ನ್ನ ಚಂದ್ರನ ದಕ್ಷಿಣ ದ್ರುವದಲ್ಲಿ ಇಳಿಸಲು ಯೋಜನೆ ರೂಪಿಸಲಾಗುತ್ತಿದೆ. ಆಮೂಲಕ  ಇಸ್ರೋ ಇತಿಹಾಸ ಸೃಷ್ಟಿಸಲು ಉದ್ದೇಶಿಸಿದೆ. ದಕ್ಷಿಣ ದ್ರುವದಲ್ಲಿ ನೀರಿನ ಅಂಶದ ಬಗ್ಗೆಯೂ ಅಧ್ಯಯನ ಕೈಗೊಳ್ಳಲಾಗುತ್ತದೆ.

ಕಳೆದ ಒಂದು ವರ್ಷದಲ್ಲಿ ಇಸ್ರೋವಿನ 17 ಮಿಷನ್ ನಲ್ಲಿ 16 ಯಶಸ್ವಿಯಾಗಿದೆ. ಕಳೆದ ವರ್ಷ ಅತ್ಯಂತ ಭಾರವಾದ ಜಿಸ್ಯಾಟ್ -29 ಹಾಗೂ ಜಿಸ್ಯಾಟ್ -11 ಉಪಗ್ರಹಗಳನ್ನು ಇಸ್ರೋ ಯಶಸ್ವಿಯಾಗಿ ಹಾರಿಬಿಟ್ಟಿದೆ ಎಂದು ಅವರು ಹೇಳಿದರು.

First published:January 11, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading