ಚಂದ್ರಯಾನ-2 ಯಶಸ್ವಿಗಾಗಿ ತಿರುಪತಿ ತಿಮ್ಮಪ್ಪನಿಗೆ ಪ್ರಾರ್ಥನೆ ಸಲ್ಲಿಸಿದ ಇಸ್ರೋ ಮುಖ್ಯಸ್ಥ ಕೆ.ಶಿವನ್​

ಯಶಸ್ವಿ ಉಡಾವಣೆ ಮಾಡಿದ ಬಳಿಕ ರಾಕಟ್​ 2 ತಿಂಗಳಲ್ಲಿ ಚಂದ್ರನ ದಕ್ಷಿಣ ಗೋಳಾರ್ಧವನ್ನ ತಲುಪಿ ಬಳಿಕ  ಅಧ್ಯಯನ ಮಾಡುತ್ತದೆ ಎಂದು ತಿಳಿಸಿದರು.

Latha CG | news18
Updated:July 14, 2019, 12:20 PM IST
ಚಂದ್ರಯಾನ-2 ಯಶಸ್ವಿಗಾಗಿ ತಿರುಪತಿ ತಿಮ್ಮಪ್ಪನಿಗೆ ಪ್ರಾರ್ಥನೆ ಸಲ್ಲಿಸಿದ ಇಸ್ರೋ ಮುಖ್ಯಸ್ಥ ಕೆ.ಶಿವನ್​
ಇಸ್ರೋ ಮುಖ್ಯಸ್ಥ ಕೆ.ಶಿವನ್- ತಿರುಪತಿ ದೇವಾಲಯ
  • News18
  • Last Updated: July 14, 2019, 12:20 PM IST
  • Share this:
ಭಾರತದ ಮಹತ್ವಾಕಾಂಕ್ಷಿ ಚಂದ್ರಯಾನ-2 ಯೋಜನೆಗೆ ಕ್ಷಣಗಣನೆ ಶುರುವಾಗಿದೆ. ಜುಲೈ 15ರಂದು ಅಂದರೆ ನಾಳೆ ಚಂದ್ರಯಾನ-2 ಯೋಜನೆ ಉಡಾವಣೆಗೊಳ್ಳಲಿದೆ. ಈ ಯೋಜನೆಯ ಯಶಸ್ಸಿಗಾಗಿ ಇಸ್ರೋ ಮುಖ್ಯಸ್ಥ ಕೆ.ಶಿವನ್ ತಿರುಪತಿಗೆ ಭೇಟಿ ನೀಡಿ, ತಿಮ್ಮಪ್ಪನಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ.

ಬಾಹ್ಯಾಕಾಶಕ್ಕೆ ಸಂಬಂಧಿಸಿದ ಯಾವುದೇ ಹೊಸ ಮಹತ್ವ ಯೋಜನೆ ಪ್ರಾರಂಭಿಸುವ ಮುನ್ನ ದೇವಾಲಯಕ್ಕೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆಯುವುದು ವಾಡಿಕೆ. ಅದೇ ರೀತಿಯಾಗಿ ಇಸ್ರೋ ಅಧ್ಯಕ್ಷ ಕೆ.ಶಿವನ್​ ಕೂಡ ತಿರುಪತಿಯ ಬಾಲಾಜಿ ದೇವಸ್ಥಾನಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದಿದ್ದಾರೆ.

ಇಸ್ರೋ ಮುಖ್ಯಸ್ಥ ಕೆ.ಶಿವನ್​ ಕೆಲವು ವಿಜ್ಞಾನಿಗಳ ಜೊತೆ ತಿರುಪತಿಗೆ ತೆರಳಿ ಚಂದ್ರಯಾನ-2 ಯೋಜನೆ ಯಶಸ್ವಿಯಾಗಲೆಂದು ಪ್ರಾರ್ಥನೆ ಸಲ್ಲಿಸಿದರು.ಇಸ್ರೋ ಮುಖ್ಯಸ್ಥರು ದೇವಾಲಯಕ್ಕೆ ಬಂದು  ಸರ್ವಶಕ್ತ ಸೌಮ್ಯಸ್ವರೂಪಿಯ ಆಶೀರ್ವಾದ ಪಡೆದರು ಎಂದು  ತಿರುಮಲ ತಿರುಪತಿ ದೇವಸ್ಥಾನಂ(ಟಿಟಿಡಿ) ಮಂಡಳಿಯ ಅಧಿಕಾರಿಗಳು ತಿಳಿಸಿದ್ದಾರೆ.

ಕೆ.ಶಿವನ್​ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಬಳಿಕ,  ಶ್ರೀ ಚೆಂಗಾಲಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯಲ್ಲಿ ರಾಕೆಟ್​ ಉಡಾವಣೆ ಮಾಡುವ ಶ್ರೀಹರಿಕೋಟಾ ಬಳಿಯ ಸುಲ್ಲೂರುಪೇಟೆಯಲ್ಲಿ ಈ ದೇವಾಲಯ ಇದೆ.

ಚಂದ್ರನ ಮೇಲ್ಮೈ ಕುರಿತ ಹೆಚ್ಚಿನ ಅಧ್ಯಯನಕ್ಕೆ ಚಂದ್ರಯಾನ-2 ಹೇಗೆ ಸಹಕಾರಿ? ಇಲ್ಲಿದೆ ಸಂಪೂರ್ಣ ಮಾಹಿತಿ

ದೇವಾಲಯ ಭೇಟಿ ಬಳಿಕ ಇಸ್ರೋ ಮುಖ್ಯಸ್ಥ ಕೆ.ಶಿವನ್​ ಸುದ್ದಿಗಾರರೊಂದಿಗೆ ಮಾತನಾಡಿದರು. ಇಸ್ರೋದ ಮಹತ್ವಾಕಾಂಕ್ಷಿ ಮತ್ತು ಪ್ರತಿಷ್ಠಿತ ಚಂದ್ರಯಾನ-2 ಯೋಜನೆಯನ್ನು ಸೋಮವಾರ ಮಧ್ಯರಾತ್ರಿ 2.51 ಕ್ಕೆ ಉಡಾವಣೆ ಮಾಡಲಾಗುತ್ತದೆ.  ಚಂದ್ರಯಾನ-2 ಯೋಜನೆಗಾಗಿ ಇಸ್ರೋ GSLV MK III (ಜಿಎಸ್​ಎಲ್​ವಿ ಎಂಕೆ 3) ಎಂಬ ಹೊಸ ಮಾದರಿಯ ನೂತನ ತಂತ್ರಜ್ಞಾನಗಳನ್ನು ಹೊಂದಿರುವ ರಾಕೆಟ್ ಒಂದನ್ನು ಸಿದ್ಧಪಡಿಸಲಾಗಿದೆ. ಯಶಸ್ವಿ ಉಡಾವಣೆ ಮಾಡಿದ ಬಳಿಕ ರಾಕಟ್​ 2 ತಿಂಗಳಲ್ಲಿ ಚಂದ್ರನ ದಕ್ಷಿಣ ಗೋಳಾರ್ಧವನ್ನ ತಲುಪಿ ಬಳಿಕ  ಅಧ್ಯಯನ ಮಾಡುತ್ತದೆ ಎಂದು ತಿಳಿಸಿದರು.

ಚಂದ್ರಯಾನ-2 ಯೋಜನೆಗೆ ಸಂಬಂಧಿಸಿದಂತೆ ಎಲ್ಲಾ ಸಿದ್ಧತೆಗಳು ಅಡೆತಡೆ ಇಲ್ಲದೇ ನಡೆಯುತ್ತಿವೆ. ಈ ಯೋಜನೆ ಚಂದ್ರನ ಬಗ್ಗೆ ಅಧ್ಯಯನ ಮಾಡಿ ಸಾಕಷ್ಟು ಮಾಹಿತಿ ಕೊಡುವ ನಿರೀಕ್ಷೆ ಇದೆ ಎಂದು ಹೇಳಿದರು.
First published:July 14, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ