HOME » NEWS » National-international » ISRAELI POLICE PALESTINIANS CLASH AT JERUSALEM SESR

Jerusalem clash: ಪವಿತ್ರ ರಂಜಾನ್​ ತಿಂಗಳಿನಲ್ಲಿ ಹಿಂಸಾಚಾರ: ಅಲ್​ ಅಕ್ಸಾ ಮಸೀದಿ ಮೇಲೆ ದಾಳಿ

ರಂಜಾನ್​ ಹಿನ್ನಲೆ ಸಾವಿರಾರು ಮುಸ್ಲಿಂರು ಇಲ್ಲಿ ಪ್ರಾರ್ಥನೆ ಸಲ್ಲಿಸಲು ಬಂದಾಗ ಈ ಹಿಂಸಾಚಾರ ನಡೆದಿದೆ.

news18-kannada
Updated:May 8, 2021, 6:28 PM IST
Jerusalem clash: ಪವಿತ್ರ ರಂಜಾನ್​ ತಿಂಗಳಿನಲ್ಲಿ ಹಿಂಸಾಚಾರ: ಅಲ್​ ಅಕ್ಸಾ ಮಸೀದಿ ಮೇಲೆ ದಾಳಿ
ಅಲ್​ ಅಕ್ಸಾ ಮಸೀದಿ
  • Share this:
ಜೆರುಸಲೇಂನ ಅಲ್​ ಆಕ್ಸಾರ ಮಸೀದಿಯಲ್ಲಿ ಯುವಕರ ಮೇಲೆ ಇಸ್ರೇಲ್​ ಪೊಲೀಸರು ದಾಳಿ ನಡೆಸಿದ್ದು ಘಟನೆಯಲ್ಲಿ 163ಜನ ಪಾಲೆಸ್ತೇನಿಯನರಯ ಮತ್ತು ಆರು ಜನ ಇಸ್ರೇಲ್​ ಪೊಲೀಸರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಪಾಲೇಸ್ತೇನಿಯಾದವರು ಕಲ್ಲು ಮತ್ತು ಬಾಟೆಲ್​ಗಳನ್ನು ಎಸೆದ ಪರಿಣಾಮವಾಗಿ ಇಸ್ರೇಲ್​ ಪೊಲೀಸರು ರಬ್ಬರ್​ ಮತ್ತು ಸ್ಟೋನ್​ ಗ್ರೆನೇಡ್​ ದಾಳಿ ಮಾಡಿದ್ದಾರೆ. ಈ ಹಿನ್ನಲೆ ಪರಿಸ್ಥಿತಿ ಉದ್ವಿಗ್ನ ಗೊಂಡಿದೆ. ಮುಸ್ಲಿಂರ ಪವಿತ್ರ ರಂಜಾನ್​ತ ತಿಂಗಳಲ್ಲಿ ಈ ಘಟನೆ ನಡೆದಿದೆ. ಯಹೂದಿ ವಸಾಹತುಗಾರರು ಪಾಲೆಸ್ತಿನಿಯನ್ನರನ್ನು ಹೊರ ಹಾಕುತ್ತಿರುವ ಹಿನ್ನಲೆ ಈ ಉದ್ವಿಘ್ನತೆ ಏರ್ಪಟ್ಟಿದೆ. ರೆಡ್​ ಕ್ರಾಸ್​ ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಜೆರುಸಲೇಂ​ ಹಳೆ ನಗರದಲ್ಲಿ ಈ ಆಲ್​ ಅಕ್ಸಾ ಮಸೀದಿ ಇದ್ದು, ಮುಸ್ಲಿಂರ ಪವಿತ್ರ ಸ್ಥಳಗಳಲ್ಲಿ ಒಂದಾಗಿದೆ. ಇದು ಜುಡೋಗಳಿಗೂ ಪವಿತ್ರ ಸ್ಥಳವಾಗಿದ್ದು ಇದನ್ನು ಟೆಂಪಲ್​ ಮೌಟ್​ ಎಂದು ಕರೆಯಲಾಗುತ್ತದೆ.

ರಂಜಾನ್​ ಹಿನ್ನಲೆ ಸಾವಿರಾರು ಮುಸ್ಲಿಂರು ಇಲ್ಲಿ ಪ್ರಾರ್ಥನೆ ಸಲ್ಲಿಸಲು ಬಂದಾಗ ಈ ಹಿಂಸಾಚಾರ ನಡೆದಿದೆ. ಸಾವಿರಾರು ಮುಸ್ಲಿಂರು ಪ್ರಾರ್ಥನೆ ಬಳಿಕ ಇಸ್ರೇಲ್​ ಮತ್ತು ಪ್ಯಾಲೆಸ್ತೇನಿಯರ ನಡುವೆ ಈ ಘರ್ಷಣೆ ನಡೆದಿದೆ. ಪೂರ್ವ ಜೆರುಸೆಲೆಂನ ಜೇಖ್​ ಜರ್ರಾ ಜಿಲ್ಲೆಯಲ್ಲಿ ಪ್ಯಾಲೆಸ್ತೇನಿಯನ್​ ಕುಟುಂಬಗಳನ್ನು ಹೊರಹಾಕುವ ಬೆದರಿಕೆ ಹಾಕಲಾಗಿತ್ತು. ಈ ಘಟನೆ ಈ ಹಿಂಸಾಚಾರಕ್ಕೆ ಕಾರಣವಾಗಿದೆ

ಈ ವೇಳೆ ಅಲ್​ ಅಕ್ಸಾ ಅಧಿಕಾರಿಗಳು ಧ್ವನಿ ವರ್ಧಕದ ಮೂಲಕ ಪೊಲೀಸರಿಗೆ ದಾಳಿ ನಡೆಸುವುದನ್ನು ನಿಲ್ಲಿಸುವಂತೆ ತಿಳಿಸಿದರು ಜೊತೆಗೆ ಯುವಕರಿಗೂ ಕೂಡ ಶಾಂತವಾಗುವಂತೆ ತಿಳಿಸಿದರು ಎಂದು ರಾಯಿಟರ್​​ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಘಟನೆಯ ಉದ್ವಿಗ್ನತೆಯ ಕುರಿತು ಅಮೆರಿಕ ವಕ್ತಾರರು ಕಳವಳ ವ್ಯಕ್ತಪಡಿಸಿದ್ದಾರೆ. ಈ ಘಟನೆ ಕುರಿತ ಮಾತನಾಡಿರುವ ವಕ್ತಾರರು, ಯುರೋಪಿಯನ್​ ಯೂನಿಯನ್​ ಹಿಂಸಾಚಾರವನ್ನು ಖಂಡಿಸುತ್ತದೆ, ಈ ಘಟನೆಗೆ ದುಷ್ಕರ್ಮಿಗಳು ಜವಾಬ್ದಾರರಾಗಿರುತ್ತಾರೆ ಎಂದು ತಿಳಿಸಿದ್ದಾರೆ
Published by: Seema R
First published: May 8, 2021, 6:23 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories