HOME » NEWS » National-international » ISRAEL STAMPEDE DONZENS KILLED IN STAMPEDE AT ISRAEL RELIGIOUS FESTIVAL CRASH

Israel Stampede | ಇಸ್ರೇಲ್​ನಲ್ಲಿ ಕಾಲ್ತುಳಿತದಿಂದ 44 ಜನ ಸಾವು; ನೂರಾರು ಮಂದಿಗೆ ಗಾಯ

ಇಸ್ರೇಲ್​ನಲ್ಲಿ ನಡೆಯುತ್ತಿದ್ದ ಬೋನ್​ಫೈರ್ ಫೆಸ್ಟಿವಲ್​ನಲ್ಲಿ ಕಾಲ್ತುಳಿತದಿಂದ 44ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ.

news18-kannada
Updated:April 30, 2021, 10:31 AM IST
Israel Stampede | ಇಸ್ರೇಲ್​ನಲ್ಲಿ ಕಾಲ್ತುಳಿತದಿಂದ 44 ಜನ ಸಾವು; ನೂರಾರು ಮಂದಿಗೆ ಗಾಯ
ಇಸ್ರೇಲ್​ನಲ್ಲಿ ಕಾಲ್ತುಳಿತ ಉಂಟಾದ ಸ್ಥಳ
  • Share this:
ನವದೆಹಲಿ (ಏ. 30): ಇಸ್ರೇಲ್​ನಲ್ಲಿ ನಡೆದ ಧಾರ್ಮಿಕ ಉತ್ಸವದಲ್ಲಿ ಕಾಲ್ತುಳಿತದಿಂದ 44ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಈ ಬಗ್ಗೆ ಅಲ್ಲಿನ ಮಾಧ್ಯಮಗಳು ವರದಿ ಮಾಡಿದ್ದು, ಇಸ್ರೇಲ್​ನಲ್ಲಿ ನಡೆಯುತ್ತಿದ್ದ ಬೋನ್​ಫೈರ್ ಫೆಸ್ಟಿವಲ್​ನಲ್ಲಿ ಕಾಲ್ತುಳಿತದಿಂದ 44ಕ್ಕೂ ಅಧಿಕ ಜನರು ಸಾವನ್ನಪ್ಪಿರುವುದು ದೊಡ್ಡ ದುರಂತ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆಟನ್ಯಹು ಸಂತಾಪ ಸೂಚಿಸಿದ್ದಾರೆ.

ಇಸ್ರೇಲ್​ನ ಹಾರೆಟ್ಜ್ ಪತ್ರಿಕೆಯ ವರದಿ ಪ್ರಕಾರ, ಈ ದುರಂತದಲ್ಲಿ 44ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, ನೂರಾರು ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಧಾರ್ಮಿಕ ಉತ್ಸವ ನಡೆದ ಸ್ಥಳದಲ್ಲಿ 38 ಜನರು ಗಂಭೀರವಾಗಿ ಗಾಯಗೊಂಡಿದ್ದರು.

ಇಸ್ರೇಲ್​ನ ಮೌಂಟ್ ಮರೂನ್​ನಲ್ಲಿ ಬೋನ್​ಫೈರ್ ಫೆಸ್ಟಿವಲ್ ಆಚರಿಸಲು ಸಾಮೂಹಿಕ ಸಭೆಯನ್ನು ನಡೆಸಲಾಗಿತ್ತು. ಈ ವೇಳೆ ಕಾಲ್ತುಳಿತದಿಂದ 40ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ.ಆ್ಯಂಬುಲೆನ್ಸ್​ ಮತ್ತು ಹೆಲಿಕಾಪ್ಟರ್ ಮೂಲಕ ಗಾಯಗೊಂಡವರನ್ನು ನಹಾರಿಯಾದಲ್ಲಿರುವ ಗಾಲಿಲಿ ಮೆಡಿಕಲ್ ಸೆಂಟರ್ ಹಾಗೂ ಸಫೆಸ್​ನಲ್ಲಿರುವ ಜೀವ್ ಆಸ್ಪತ್ರೆಗೆ ದಾಖಲಿಸಲಾಗಿದೆ.
Published by: Sushma Chakre
First published: April 30, 2021, 10:29 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories