ಕುಲಭೂಷಣ್ ಜಾಧವ್​ಗೆ ನಾಳೆ ರಾಜತಾಂತ್ರಿಕ ಸಂಪರ್ಕಕ್ಕೆ ಅವಕಾಶ: ಪಾಕ್ ಸ್ಪಷ್ಟನೆ

ರಾಜತಾಂತ್ರಿಕ ಸಂಬಂಧಗಳ ನಿಯಮ, ಅಂತಾರಾಷ್ಟ್ರೀಯ ಕೋರ್ಟ್​ನ ತೀರ್ಪು ಹಾಗೂ ಪಾಕಿಸ್ತಾನದ ಕಾನೂನುಗಳಿಗೆ ಅನುಸಾರವಾಗಿ 49 ವರ್ಷದ ಕುಲಭೂಷಣ್ ಜಾಧವ್ ಅವರಿಗೆ ಸೆ. 2ರಂದು ರಾಜತಾಂತ್ರಿಕ ಸಂಪರ್ಕದ ಅವಕಾಶ ನೀಡಲಾಗುವುದು ಎಂದು ಮೊಹಮ್ಮದ್ ಫೈಸಲ್ ತಿಳಿಸಿದರು.

Vijayasarthy SN | news18
Updated:September 2, 2019, 10:51 AM IST
ಕುಲಭೂಷಣ್ ಜಾಧವ್​ಗೆ ನಾಳೆ ರಾಜತಾಂತ್ರಿಕ ಸಂಪರ್ಕಕ್ಕೆ ಅವಕಾಶ: ಪಾಕ್ ಸ್ಪಷ್ಟನೆ
ಕುಲಭೂಷಣ್ ಜಾಧವ್ (ರಾಯ್ಟರ್ಸ್ ಚಿತ್ರ)
  • News18
  • Last Updated: September 2, 2019, 10:51 AM IST
  • Share this:
ನವದೆಹಲಿ: ಅಂತಾರಾಷ್ಟ್ರೀಯ ನ್ಯಾಯಾಲಯದ (ಐಸಿಜೆ) ಆದೇಶದಂತೆ ಪಾಕಿಸ್ತಾನವು ನಾಳೆ ಸೋಮವಾರದಂದು ಕುಲಭೂಷಣ್ ಜಾಧವ್ ಅವರಿಗೆ ರಾಜತಾಂತ್ರಿಕ ಸಂಪರ್ಕಕ್ಕೆ ಅವಕಾಶ ಮಾಡಿಕೊಡಲಿದೆ. ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ವಕ್ತಾರ ಮೊಹಮ್ಮದ್ ಫೈಸಲ್ ಅವರು ಈ ವಿಷಯವನ್ನು ಇವತ್ತು ಸ್ಪಷ್ಟಪಡಿಸಿದರು.

ರಾಜತಾಂತ್ರಿಕ ಸಂಬಂಧಗಳ ನಿಯಮ, ಅಂತಾರಾಷ್ಟ್ರೀಯ ಕೋರ್ಟ್​ನ ತೀರ್ಪು ಹಾಗೂ ಪಾಕಿಸ್ತಾನದ ಕಾನೂನುಗಳಿಗೆ ಅನುಸಾರವಾಗಿ 49 ವರ್ಷದ ಕುಲಭೂಷಣ್ ಜಾಧವ್ ಅವರಿಗೆ ಸೆ. 2ರಂದು ರಾಜತಾಂತ್ರಿಕ ಸಂಪರ್ಕದ ಅವಕಾಶ ನೀಡಲಾಗುವುದು ಎಂದು ಮೊಹಮ್ಮದ್ ಫೈಸಲ್ ತಿಳಿಸಿದರು.

ಇದನ್ನೂ ಓದಿ: ಬ್ಯಾಂಕ್ ವಿಲೀನದಿಂದಾಗಿ ಉದ್ಯೋಗ ಕಳೆದುಕೊಳ್ಳುವ ಭೀತಿ ಬೇಡ; ಬ್ಯಾಂಕ್ ನೌಕರರ ಉದ್ಯೋಗ ಭದ್ರತೆಗೆ ಖಾತರಿ ನೀಡಿದ ಸೀತಾರಾಮನ್

ನೆದರ್​ಲೆಂಡ್ಸ್​ನ ಹೇಗ್ ನಗರದಲ್ಲಿರುವ ಅಂತಾರಾಷ್ಟ್ರೀಯ ನ್ಯಾಯಾಲಯವು ಜುಲೈ ತಿಂಗಳಲ್ಲಿ ನೀಡಿದ್ದ ತೀರ್ಪಿನಲ್ಲಿ ಕುಲಭೂಷಣ್ ಜಾಧವ್​ಗೆ ಆದಷ್ಟೂ ಶೀಘ್ರದಲ್ಲಿ ರಾಜತಾಂತ್ರಿಕ ಸಂಪರ್ಕ ಕಲ್ಪಿಸುವಂತೆ ಪಾಕಿಸ್ತಾನಕ್ಕೆ ಆದೇಶ ನೀಡಿತ್ತು. ಅದಾಗಿ ಇಷ್ಟು ದಿನವಾದರೂ ಜಾಧವ್​ರನ್ನು ಭೇಟಿ ಮಾಡಲು ಭಾರತದ ರಾಯಭಾರಿ ಕಚೇರಿಗೆ ಸಾಧ್ಯವಾಗಿರಲಿಲ್ಲ. ರಾಜತಾಂತ್ರಿಕ ಭೇಟಿಗೆ ಪಾಕಿಸ್ತಾನ ಕೆಲ ಷರತ್ತುಗಳನ್ನೂ ಹಾಕಿತ್ತು. ಇದಕ್ಕೆ ಭಾರತ ಒಪ್ಪಿಕೊಂಡಿಲ್ಲ. ಬೇಷರತ್ ಆಗಿ ಕುಲಭೂಷಣ್ ಜಾಧವ್​ಗೆ ರಾಜತಾಂತ್ರಿಕ ಸಂಪರ್ಕದ ಅವಕಾಶ ಮಾಡಿಕೊಡಬೇಕೆಂಬುದು ಭಾರತದ ನಿಲುವಾಗಿದೆ.

ಕಳೆದ ವಾರವಷ್ಟೇ ಭಾರತ ಸರ್ಕಾರ ಈ ವಿಚಾರವನ್ನು ಪಾಕಿಸ್ತಾನಕ್ಕೆ ನೆನಪಿಸಿ, ಕೂಡಲೇ ರಾಜತಾಂತ್ರಿಕ ಸಂಪರ್ಕಕ್ಕೆ ಅವಕಾಶ ಮಾಡಿಕೊಡುವಂತೆ ಕೇಳಿತ್ತು. ಪಾಕಿಸ್ತಾನ ಇದೀಗ ಯಾವುದೇ ಷರತ್ತು ಇಲ್ಲದೇ ಕುಲಭೂಷಣ್​ಗೆ ಅವಕಾಶ ಕಲ್ಪಿಸಲು ನಿರ್ಧರಿಸಿದೆ.

ಇದನ್ನೂ ಓದಿ: ಯಾರಲ್ಲೂ ಮಂದಹಾಸ, ಸಮಾಧಾನ ತರದ ಎನ್ಆರ್​ಸಿ; ಮೂಲ ಹೋರಾಟಗಾರರಿಗೇ ಗೊಂದಲ ತಂದ ಅಂತಿಮ ಪಟ್ಟಿ

ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿಯಾಗಿರುವ ಕುಲಭೂಷಣ್ ಜಾಧವ್ ಅವರನ್ನು 2016, ಮಾರ್ಚ್ 3ರಂದು ಪಾಕಿಸ್ತಾನ ಬಂಧಿಸಿತ್ತು. ಭಾರತದ ಗೂಢಚಾರಿಯಾಗಿ ಪಾಕಿಸ್ತಾನದಲ್ಲಿ ವಿಧ್ವಂಸಕ ಕೃತ್ಯಗಳನ್ನು ಆಯೋಜಿಸುತ್ತಿರುವ ಆರೋಪದ ಮೇಲೆ ಕುಲಭೂಷಣ್ ಜಾಧವ್ ಅವರನ್ನು ಖೈಬರ್ ಪಖ್ತುಂಕ್ವ ಪ್ರಾಂತ್ಯದಲ್ಲಿ ಬಂಧಿಸಿದ್ದಾಗಿ ಪಾಕ್ ಸರ್ಕಾರ ಹೇಳಿಕೊಂಡಿತ್ತು. ಆದರೆ, ವೈಯಕ್ತಿಕ ವ್ಯವಹಾರ ಸಂಬಂಧ ಇರಾನ್ ದೇಶಕ್ಕೆ ಹೋಗಿದ್ದಾಗ ಪಾಕಿಸ್ತಾನದವರು ಅಕ್ರಮವಾಗಿ ಕುಲಭೂಷಣ್ ಅವರನ್ನು ಬಂಧಿಸಿ ಕರೆದೊಯ್ದರು ಎಂಬುದು ಭಾರತದ ವಾದವಾಗಿದೆ.ಪಾಕಿಸ್ತಾನದ ಮಿಲಿಟರಿ ನ್ಯಾಯಾಲಯದಲ್ಲಿ ರಹಸ್ಯ ವಿಚಾರಣೆಗಳು ನಡೆದ ಬಳಿಕ ಕುಲಭೂಷಣ್ ಜಾಧವ್ ಅವರಿಗೆ 2017ರ ಏಪ್ರಿಲ್ 10ರಂದು ಮರಣ ದಂಡನೆ ಶಿಕ್ಷೆ ವಿಧಿಸಲಾಗಿದೆ. ಇದನ್ನು ಪ್ರಶ್ನಿಸಿ ಭಾರತ ಅಂತಾರಾಷ್ಟ್ರೀಯ ಕೋರ್ಟ್ ಮೆಟ್ಟಿಲೇರಿತು. ಅಂತಿಮ ತೀರ್ಪು ನೀಡುವವರೆಗೂ ಕುಲಭೂಷಣ್ ಅವರಿಗೆ ಗಲ್ಲು ಶಿಕ್ಷೆ ವಿಧಿಸಬಾರದೆಂದು ಹೇಳಿ ಐಸಿಜೆ ತಡೆ ನೀಡಿತು.

ಇದನ್ನೂ ಓದಿ: ಭಾರತದಲ್ಲಿರುವ ಪಾಕ್ ಗೂಢಚಾರಿಗಳಲ್ಲಿ ಮುಸ್ಲಿಮೇತರರೇ ಹೆಚ್ಚು; ಬಿಜೆಪಿಯವರೂ ಐಎಸ್ಐನಿಂದ ಹಣ ಪಡೆಯುತ್ತಾರೆ: ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಆರೋಪ

2019ರ ಜುಲೈ 17ರಂದು ಐಸಿಜೆ ಅಂತಿಮ ತೀರ್ಪು ನೀಡಿತು. ಕುಲಭೂಷಣ್ ಅವರನ್ನು ಬಿಡುಗಡೆ ಮಾಡಬೇಕೆಂಬ ಭಾರತದ ಮನವಿಯನ್ನು ಕೋರ್ಟ್ ತಿರಸ್ಕರಿಸಿತು. ಆದರೆ, ಅವರಿಗೆ ಆದಷ್ಟೂ ಶೀಘ್ರದಲ್ಲಿ ರಾಜತಾಂತ್ರಿಕ ಸಂಪರ್ಕಕ್ಕೆ ಅವಕಾಶ ಮಾಡಿಕೊಡುವಂತೆ ಪಾಕಿಸ್ತಾನಕ್ಕೆ ಸೂಚಿಸಿತು. ಅದರಂತೆ ಇದೀಗ ಕುಲಭೂಷಣ್ ಜಾಧವ್ ಸಂಪರ್ಕಕ್ಕೆ ಭಾರತಕ್ಕೆ ಅವಕಾಶ ಸಿಕ್ಕಿದೆ. ಇದಾದ ಬಳಿಕ ಪಾಕಿಸ್ತಾನದವರು ಕುಲಭೂಷಣ್ ಜಾಧವ್ ಅವರಿಗೆ ಯಾವಾಗ ಬೇಕಾದರೂ ಗಲ್ಲು ಶಿಕ್ಷೆ ಜಾರಿ ಮಾಡುವ ಸಾಧ್ಯತೆ ಇದೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published:September 1, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading