ಕಾಬೂಲ್, ಅಫ್ಘಾನಿಸ್ತಾನ್: ಐಸಿಸ್ ಉಗ್ರರು (ISIS Terrorist) ಮತ್ತೆ ಅಟ್ಟಹಾಸ ಗೈದಿದ್ದಾರೆ. ತಾಲೀಬಾನ್ ಸರ್ಕಾರ (Taliban government) ಆಳುತ್ತಿರುವ ಅಫ್ಘಾನಿಸ್ತಾನದಲ್ಲಿ (Afghanistan) ಮತ್ತೆ ತಮ್ಮ ರಾಕ್ಷಸೀಕೃತ್ಯ ಮುಂದುವರೆಸಿದ್ದಾರೆ. ಕಾಬೂಲ್‌ನ (Kabul) ಕರ್ತೆ-ಇ-ಪರ್ವಾನ್ (Kart-e-Parwan) ಎಂಬಲ್ಲಿನ ಸಿಖ್ ಗುರುದ್ವಾರದ (Sikh Gurudwara) ಮೇಲೆ ಗುಂಡಿನ (Firing) ದಾಳಿ ನಡೆಸಿದ್ದಾರೆ. ಈ ಗುಂಡಿನ ದಾಳಿಯಲ್ಲಿ ಕನಿಷ್ಠ ಇಬ್ಬರು ಸಾವನ್ನಪ್ಪಿದ್ದು (Death), ಹಲವರು ಗಾಯಗೊಂಡಿದ್ದಾರೆ (Injured). ಈ ಪೈಕಿ ಅನೇಕರ ಸ್ಥಿತಿ ಚಿಂತಾಜನಕವಾಗಿದ್ದು (Serious), ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಇನ್ನು ದಾಳಿಯ (Attack) ಹೊಣೆಯನ್ನು ಐಸಿಸ್ ಉಗ್ರ ಸಂಘಟನೆ ಹೊತ್ತುಕೊಂಡಿದೆ. ಇತ್ತ ಗುರುದ್ವಾರದ ಮೇಲಿನ ದಾಳಿಗೆ ಭಾರತ (India) ತೀವ್ರ ಖಂಡನೆ ವ್ಯಕ್ತಪಡಿಸಿದೆ.
ಐಸಿಸ್ ಉಗ್ರರ ದಾಳಿಗೆ ಇಬ್ಬರು ಸಾವು
ಕಾಬೂಲ್‌ನ ಗುರುದ್ವಾರದ ಮೇಲೆ ಐಸಿಸ್ ದಾಳಿ ಕರ್ತೆ-ಇ-ಪರ್ವಾನ್ ಎಂಬ ಸಿಖ್ ಗುರುದ್ವಾರದ ಮೇಲೆ ಇಂದು ಬೆಳಗ್ಗೆ ಉಗ್ರರ ದಾಳಿ ನಡೆದಿದೆ. ಗುರುದ್ವಾರಕ್ಕೆ ನುಗ್ಗಿದ್ದ ಐಸಿಸ್ ಉಗ್ರರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಪರಿಣಾಮ ಇಬ್ಬರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ.
#WATCH | Explosions heard in Karte Parwan area of Kabul city in Afghanistan.
(Video Source: Locals) pic.twitter.com/jsiv2wVGe8
— ANI (@ANI) June 18, 2022
ಕಾಬೂಲ್‌ನ ಕಾರ್ಟೆ ಪರ್ವಾನ್ ಪ್ರದೇಶದ ಗುರುದ್ವಾರದ ಸಮೀಪವಿರುವ ಜನನಿಬಿಡ ರಸ್ತೆಯಲ್ಲಿ ಸ್ಥಳೀಯ ಸಮಯ (ಕಾಬೂಲ್) ಸುಮಾರು 7 ಗಂಟೆಗೆ ಕನಿಷ್ಠ ಎರಡು ದಾಳಿಗಳು ನಡೆದಿರುವ ಬಗ್ಗೆ ವರದಿಯಾಗಿದೆ. ಈ ಪ್ರದೇಶವು ಜನನಿಬಿಡವಾಗಿದೆ ಮತ್ತು ಅಫಘಾನ್ ಹಿಂದೂ ಮತ್ತು ಸಿಖ್ ಸಮುದಾಯಗಳ ಪ್ರಮುಖ ಧಾರ್ಮಿಕ ಕೇಂದ್ರವಾಗಿದೆ. ಗುರುದ್ವಾರಕ್ಕೆ ನುಗ್ಗಿದ್ದ ಐಸಿಸ್ ಉಗ್ರರು ಗುರುದ್ವಾರದ ದಶ್ಮೇಶ್ ಪಿತಾ ಸಾಹಿಬ್ ಜಿ, ಕಾರ್ಟೆ ಪರ್ವಾನ್ ಎಂಬ ಎರಡು ಗೇಟ್‌ನಲ್ಲಿ ಗುಂಡಿನ ಸುರಿಮಳೆ ಗೈದಿದ್ದಾರೆ.
ಇದನ್ನೂ ಓದಿ: Agnipath: ಒಂದೆಡೆ ಹೊತ್ತಿ ಉರಿಯುತ್ತಿರುವ 'ಅಗ್ನಿ', ಮತ್ತೊಂದೆಡೆ ಮೀಸಲಾತಿ! ಅಗ್ನಿವೀರರಿಗೆ ಕೇಂದ್ರದಿಂದ ಗುಡ್ ನ್ಯೂಸ್
ಸಾವಿನ ಸಂಖ್ಯೆ ಮತ್ತಷ್ಟು ಏರಿಕೆ ಸಾಧ್ಯತೆ
ಗುಂಡಿನ ದಾಳಿಯಲ್ಲಿ ಹಲವರು ಗಾಯಗೊಂಡಿದ್ದಾರೆ. ಈ ಪೈಕಿ ಅನೇಕರ ಸ್ಥಿತಿ ಚಿಂತಾಜನಕವಾಗಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಗುರುದ್ವಾರದಲ್ಲಿ ಹೆಚ್ಚಿನ ಸಂಖ್ಯೆಯ ಸಿಖ್ ಭಕ್ತರು ಇದ್ದರು ಎನ್ನಲಾಗಿದೆ. ಗುಂಡಿನ ದಾಳಿ ನಡೆಯುತ್ತಿದ್ದಂತೆ ಕೆಲವರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ಕಳುಹಿಸಲಾಗಿದೆ.
ದಾಳಿಯ ಹೊಣೆ ಹೊತ್ತುಕೊಂಡ ಐಸಿಸ್ ಉಗ್ರ ಸಂಘಟನೆ
ಇನ್ನು ಗುರುದ್ವಾರದ ಮೇಲಿನ ದಾಳಿಯನ್ನು ತಾನೇ ನಡೆಸಿದ್ದಾಗೆ ಉಗ್ರ ಸಂಘಟನೆ ಐಸಿಸ್ ತಿಳಿಸಿದೆ. ಶಸ್ತ್ರಸಜ್ಜಿತ ಐಸಿಸ್ ಭಯೋತ್ಪಾದಕರು ಸ್ಫೋಟ ನಡೆಸಿದ್ದು, ಪ್ರಸ್ತುತ ಪೂಜಾ ಸ್ಥಳವನ್ನು ವಶಪಡಿಸಿಕೊಳ್ಳಲಾಗಿದೆ.
The cowardly attack on Gurudwara Karte Parwan should be condemned in the strongest terms by all.
We have been closely monitoring developments since the news of the attack was received. Our first and foremost concern is for the welfare of the community. https://t.co/ocfuY0RBhN
— Dr. S. Jaishankar (@DrSJaishankar) June 18, 2022
ಕಾಬೂನ್‌ನಲ್ಲಿ ಸಿಖ್ ಗುರುದ್ವಾರದ ಮೇಲೆ ನಡೆದ ಉಗ್ರರ ದಾಳಿಯನ್ನು ಭಾರತ ತೀವ್ರವಾಗಿ ಖಂಡಿಸಿದೆ. "ಗುರುದ್ವಾರ ಕರ್ತೆ ಪರ್ವಾನ್ ಮೇಲಿನ ಹೇಡಿತನದ ದಾಳಿಯನ್ನು ಎಲ್ಲರೂ ತೀವ್ರವಾಗಿ ಖಂಡಿಸಬೇಕು. ದಾಳಿಯ ಸುದ್ದಿ ಬಂದ ನಂತರ ನಾವು ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ" ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: Shocking News: ನಿಗಿ ನಿಗಿ ಕೆಂಡದ ಮೇಲೆ ಓಡಾಟ! ಹುಚ್ಚು ಸಾಹಸ ಮಾಡಿದ 25ಕ್ಕೂ ಹೆಚ್ಚು ಮಂದಿಗೆ ಗಾಯ
ಭಾರತೀಯರನ್ನು ವಾಪಸ್ ಕರೆಸಿಕೊಳ್ಳುವಂತೆ ಮನವಿ
ಇನ್ನು ಯಾವುದೇ ವಿಳಂಬ ಮಾಡದೆ ತಕ್ಷಣವೇ ಆಫ್ಘನ್ ಅಲ್ಪಸಂಖ್ಯಾತರನ್ನು ಅಲ್ಲಿಂದ ವಾಪಸ್ ಭಾರತಕ್ಕೆ ಕರೆಸಿಕೊಳ್ಳಬೇಕು ಎಂಬ ಕೂಗು ಕೇಳಿ ಬಂದಿದೆ. ಅಫ್ಘಾನಿಸ್ತಾನಲ್ಲಿರುವ ಇಂಡಿಯನ್ ವರ್ಲ್ಡ್ ಫೋರಂ ಮುಖ್ಯಸ್ಥ ಪುನೀತ್ ಸಿಂಗ್ ಭಾರತ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ