ವೈರಲ್​ ಆಯ್ತು ಅಂಬಾನಿ ಮಗಳ ಮದುವೆ ಆಮಂತ್ರಣ ಪತ್ರಿಕೆ; ಹೇಗಿದೆ ಗೊತ್ತಾ ಇದರ ವಿನ್ಯಾಸ?

  • News18
  • 2-MIN READ
  • Last Updated :
  • Share this:

News18Kannada

ಇತ್ತೀಚೆಗಷ್ಟೆ ಮಗನ ಮದುವೆ ಸಂಭ್ರಮ ಮುಗಿಸಿರುವ ರಿಲಯನ್ಸ್​ ಇಂಡಸ್ಟ್ರಿ ಒಡೆಯ ಮುಖೇಶ್​ ಅಂಬಾನಿ ಮನೆಯಲ್ಲಿ ಈಗ ಮತ್ತೊಂದು ಮದುವೆ ಸಂಭ್ರಮ. ಮುಖೇಶ್​ ಅಂಬಾನಿ ಅವರ ಒಬ್ಬಳೆ ಮಗಳಾದ ಇಶಾ ಅಂಬಾನಿ ಇದೇ ಡಿಸೆಂಬರ್​ 12ರಂದು ಆನಂದ್​ ಅವರನ್ನು ಕೈ ಹಿಡಿಯಲ್ಲಿದ್ದು, ಮನೆಯಲ್ಲಿ ಈಗಾಗಲೇ ಸಂಭ್ರಮ ಹೆಚ್ಚಿದೆ.

ದೇಶದ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾದ ಮುಖೇಶ್​  ಮಗಳ ವೈಭೋವಪೀತ ಮದುವೆಗೆ ವಿಶೇಷ ಆಮಂತ್ರಣ ಪತ್ರಿಕೆ ಈಗಾಗಲೇ ಸಿದ್ಧವಾಗಿದೆ. ಇದು ಎಲ್ಲೆಡೆ ಈಗ ಸದ್ದು ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.
ಇಶಾ, ಆನಂದ್​ ಹೆಸರಿನ ಮೊದಲ ಅಕ್ಷರ ಹೊಂದಿರುವ ಈ ಲಗ್ನ ಪತ್ರಿಕೆಯನ್ನು ವಿಶೇಷವಾಗಿ ವಿನ್ಯಾಸ ಮಾಡಲಾಗಿದೆ. ಒಂದು ಕಾರ್ಡಿಗೆ ಲಕ್ಷಾಂತರ ರೂ ಖರ್ಚು  ಮಾಡಲಾಗಿದ್ದು, ಆಪ್ತರಿಗಷ್ಟೇ ಈ ಕಾರ್ಡ್​ ಹೋಗಿದೆ ಎನ್ನಲಾಗಿದೆ.ಹೂವಿನ ಚಿತ್ತಾರವಿರುವ ಸುಂದರ ಬಾಕ್ಸ್​ ತೆರೆದಾಕ್ಷಣ ಡೈರಿ ರೂಪದಲ್ಲಿ ಇಶಾ, ಆನಂದ್​ ವಿವಾಹ ಆಮಂತ್ರಣ ಪತ್ರಿಕೆಯಿದೆ. ಜೊತೆಗೆ ಲಕ್ಷ್ಮೀದೇವಿ. ಕೃಷ್ಣನ ಪೋಟೋಗಳು ಇದೆ.

ಇದನ್ನು ಓದಿ: Video: DeepVeer Ki Shaadi: ವಿವಾಹಕ್ಕಾಗಿ ಇಟಲಿಗೆ ಹಾರಿದ ರಣವೀರ್​-ದೀಪಿಕಾ ಜೋಡಿ ..!

ಸೆಪ್ಟೆಂಬರ್​ನಲ್ಲಿ ಇಟಲಿಯ ಲೆಕ್ ಕೊಮೋದಲ್ಲಿ ಇವರ  ನಿಶ್ಚಿತಾರ್ಥ ನಡೆದಿತ್ತು. ಅ.29ರಂದು ಮುಂಬೈನ ಪ್ರಸಿದ್ಧ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ವಿವಾಹ ಆಮಂತ್ರಣ ಪತ್ರಿಕೆ ಪೂಜೆ ನಡೆಸಲಾಗಿತ್ತು.

ಈ ಹಿಂದೆ ಮುಕೇಶ್​ ಅಂಬಾನಿ ಮಗ ಆಕಾಶ್​​ ಮದುವೆಯಲ್ಲಿಯೂ ಕೂಡ ವಿವಾಹ ಆಮಂತ್ರಣ ಪತ್ರಿಕೆ ಸದ್ದು ಮಾಡಿತ್ತು.

First published: