ಮುಂಬೈನಲ್ಲಿ ಇಂದು ಉದ್ಯಮಿ ಮುಖೇಶ್ ಅಂಬಾನಿ ಮಗಳು ಇಶಾ ಮದುವೆ; ಗಣ್ಯಾತಿಗಣ್ಯರು ಭಾಗಿ

ವಿವಾಹಕ್ಕೆ ಗಣ್ಯಾತಿಗಣ್ಯರು ಆಗಮಿಸಲಿದ್ದಾರೆ. ಸೂಪರ್​ ಸ್ಟಾರ್​ ರಜನಿಕಾಂತ್​,  ಬಾಲಿವುಡ್​ ನಟರು, ಮಾಜಿ ರಾಷ್ಟ್ರಪತಿ ಪ್ರಣಬ್​ ಮುಖರ್ಜಿ, ಪ್ರಕಾಶ್​ ಜಾವ್ಡೇಕರ್​, ಮಮತಾ ಬ್ಯಾನರ್ಜಿ ಸೇರಿ ಅನೇಕರು ಇಶಾ ಮದುವೆಗೆ ಸಾಕ್ಷಿಯಾಗಲಿದ್ದಾರೆ.

Rajesh Duggumane | news18
Updated:December 12, 2018, 12:01 PM IST
ಮುಂಬೈನಲ್ಲಿ ಇಂದು ಉದ್ಯಮಿ ಮುಖೇಶ್ ಅಂಬಾನಿ ಮಗಳು ಇಶಾ ಮದುವೆ; ಗಣ್ಯಾತಿಗಣ್ಯರು ಭಾಗಿ
ಇಶಾ, ಆನಂದ್​, ನೀತಾ, ಮುಖೇಶ್​ ಅಂಬಾನಿ
  • News18
  • Last Updated: December 12, 2018, 12:01 PM IST
  • Share this:
ಮುಂಬೈ(ಡಿ.12): ಖ್ಯಾತ ಉದ್ಯಮಿ ಹಾಗೂ ರಿಲಯನ್ಸ್​ ಸಂಸ್ಥೆಯ ಮುಖ್ಯಸ್ಥ ಮುಖೇಶ್​​ ಅಂಬಾನಿ ಪುತ್ರಿ ಇಶಾ ಹಾಗೂ ಉದ್ಯಮಿ ಆನಂದ್​ ಪಿರಮಾಳ್​ ವಿವಾಹ ಇಂದು ಮುಂಬೈನಲ್ಲಿ ಅದ್ಧೂರಿಯಾಗಿ ನೆರವೇರಲಿದೆ.

ಕಳೆದ ಕೆಲ ದಿನಗಳಿಂದ ಇಶಾ ವಿವಾಹಪೂರ್ವ ಕಾರ್ಯಕ್ರಮಗಳು ನಡೆದಿದ್ದವು. ಈ ವೇಳೆ ಅಂಬಾನಿ ಕುಟುಂಬದಿಂದ ಅನ್ನದಾನ, ಮನರಂಜನೆ ಮತ್ತಿತ್ಯಾದಿ ಕಾರ್ಯಕ್ರಮಗಳು ನೆರವೇರಿದ್ದವು.  ಬಾಲಿವುಡ್​ ನಟರು, ಅಮೆರಿಕದ ಮಾಜಿ ಅಧ್ಯಕ್ಷರಾದ ಬಿಲ್​ ಕ್ಲಿಂಟನ್​ ಪತ್ನಿ ಹಿಲರಿ ಕ್ಲಿಂಟನ್​ ಸೇರಿ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇಂದು ಮುಂಬೈನಲ್ಲಿರುವ ಅವರ ನಿವಾಸ ಅಂಟಿಲ್ಲಾದಲ್ಲಿ ವಿವಾಹ ಕಾರ್ಯಗಳು ನೆರವೇರಲಿವೆ.

ವಿವಾಹಕ್ಕೆ ಗಣ್ಯಾತಿಗಣ್ಯರು ಆಗಮಿಸಲಿದ್ದಾರೆ. ಸೂಪರ್​ ಸ್ಟಾರ್​ ರಜನಿಕಾಂತ್​,  ಬಾಲಿವುಡ್​ ನಟರು, ಮಾಜಿ ರಾಷ್ಟ್ರಪತಿ ಪ್ರಣಬ್​ ಮುಖರ್ಜಿ, ಪ್ರಕಾಶ್​ ಜಾವ್ಡೇಕರ್​, ಮಮತಾ ಬ್ಯಾನರ್ಜಿ ಸೇರಿ ಅನೇಕರು ಇಶಾ ಮದುವೆಗೆ ಸಾಕ್ಷಿಯಾಗಲಿದ್ದಾರೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆಯೇ ಅಥವಾ ಇಲ್ಲವೇ ಎನ್ನುವ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ.

ಇದನ್ನೂ ಓದಿ: ಇಶಾ ಅಂಬಾನಿ ವಿವಾಹ ಪೂರ್ವ ಕಾರ್ಯಕ್ರಮಕ್ಕೆ ಆಗಮಿಸಿದ ವಿಶ್ವದ ಖ್ಯಾತನಾಮರು

ಅಂಬಾನಿ ಮನೆ 27 ಅಂತಸ್ತನ್ನು ಹೊಂದಿದೆ. ಎಲ್ಲ ಅಂತಸ್ತಿನಲ್ಲೂ ವಿಶೇಷ ಅಲಂಕಾರ ಮಾಡಲಾಗಿದೆ. ಮಂಗಳವಾರದಿಂದಲೇ ಅತಿಥಿಗಳು ಮುಂಬೈಗೆ ಆಗಮಿಸುತ್ತಿದ್ದು, ಹೋಟೆಲ್​ನಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಮದುವೆಯಲ್ಲಿ ಕೇವಲ ಆಪ್ತರಿಗೆ ಹಾಗೂ ಗಣ್ಯರಿಗೆ ಮಾತ್ರ ಆಹ್ವಾನ ನೀಡಲಾಗಿದ್ದು, 600 ಜನರು ಪಾಲ್ಗೊಳ್ಳುವ ಸಾಧ್ಯತೆ ಇದೆಯಂತೆ. ಇನ್ನು, ಉದೈಪುರ್​ನಲ್ಲಿ ಸಂಗೀತ ಕಾರ್ಯಕ್ರಮ ನೆರವೇರಿತ್ತು. ಈ ವೇಳೆ ಮುಖೇಶ್​ ಅಂಬಾನಿ, ಇಶಾ ಅಂಬಾನಿ, ನೀತಾ ಅಂಬಾನಿ ಹಾಗೂ ಕುಟುಂಬದವರು ಬಾಲಿವುಡ್ ಹಾಡಿಗೆ ಹೆಜ್ಜೆಗೆ ಹಾಕಿದರು.

ಇದನ್ನೂ ಓದಿ: ಇಶಾ ಅಂಬಾನಿ ಸಂಗೀತ್ ಕಾರ್ಯಕ್ರಮ: ಸಖತ್ ಸ್ಟೆಪ್ಸ್ ಹಾಕಿದ ಅಂಬಾನಿ ದಂಪತಿ

First published:December 12, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ