ಮುಂಬೈ: ಭಾರತ ಆರ್ಥಿಕ ರಾಜಧಾನಿ ಮುಂಬೈನ (Mumbai) ಜಿಯೋ ಗ್ಲೋಬಲ್ ಸೆಂಟರ್‌ನಲ್ಲಿ (Jio Global Center) ನಡೆದ ನೀತಾ ಮುಕೇಶ್ ಅಂಬಾನಿ ಕಲ್ಚರ್ ಸೆಂಟರ್ನ (Nita Mukesh Ambani Cultural Centre) ಉದ್ಘಾಟನಾ ಸಮಾರಂಭ ಅದ್ಧೂರಿಯಾಗಿ ನಡೆಯಿತು. ಕಾರ್ಯಕ್ರಮದಲ್ಲಿ ರಿಲಯನ್ಸ್ ಇಂಡಸ್ಟ್ರಿ ಸಿಎಂಡಿ ಮುಕೇಶ್ ಅಂಬಾನಿ (Mukesh Ambani) ಮತ್ತು ಅವರ ಪುತ್ರಿ ರಿಲಯನ್ಸ್ ರಿಟೈಲ್ ವೆಂಚರ್ಸ್ ಲಿಮಿಟೆಡ್ ನಿರ್ದೇಶಕಿ ಇಶಾ ಅಂಬಾನಿ (Isha Ambani) ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಿದ ಇಶಾ ಅಂಬಾನಿ ಅವರು, ಜೀವಿತಾವಧಿಯಲ್ಲಿ ಒಮ್ಮೆ ಮಾತ್ರ ಇಂತಹ ಅದ್ಭುತ ಸಂದರ್ಭ ಬರುತ್ತದೆ. ನನ್ನ ಕುಟುಂಬದ ಪರವಾಗಿ ಜಗತ್ತಿನ ಬೇರೆ ಬೇರೆ ಸ್ಥಳಗಳಿಂದ ಆಗಮಿಸಿರುವ ಎಲ್ಲಾ ಗಣ್ಯರಿಗೂ ನೀತಾ ಮುಖೇಶ್ ಅಂಬಾನಿ ಸಾಂಸ್ಕೃತಿಕ ಕೇಂದ್ರಕ್ಕೆ ಆತ್ಮೀಯ ಸ್ವಾಗತ ಕೋರುತ್ತಿದ್ದೇನೆ. ಭಾರತ ಸಂಸ್ಕೃತಿ, ವೈವಿಧ್ಯತೆಯನ್ನು ಜಗತ್ತಿನ ಎದುರು ಪ್ರಸ್ತುತಪಡಿಸಲು ನೀತಾ ಮುಕೇಶ್ ಅಂಬಾನಿ ಕಲ್ಚರ್ ಸೆಂಟರ್ ಅತ್ಯುತ್ತಮ ವೇದಿಕೆಯಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ನೀತಾ ಮುಕೇಶ್ ಅಂಬಾನಿ ಕಲ್ಚರ್ ಸೆಂಟರ್ ಎಂಬುವುದು, ಎಲ್ಲಾ ಪ್ರಕಾರಗಳ ಕಲೆ ಮತ್ತು ಸಂಸ್ಕೃತಿಯ ನೆಲೆಯಾಗಿದೆ. ದೃಶ್ಯ ಕಲೆಗಳಿಂದ ಹಿಡಿದು ಪ್ರದರ್ಶನ ಕಲೆಗಳವರೆಗೆ, ಸಂಗೀತ ಕಾರ್ಯಕ್ರಮಗಳಿಂದ ವೇಷಭೂಷಣದ ವರೆಗೆ, ಫ್ಯಾಷನ್‌ನಿಂದ ಆಹಾರದವರೆಗೆ, ಸಮಾವೇಶಗಳಿಂದ ಹಿಡಿದು ಆಚರಣೆಗಳವರೆಗೆ ಎಲ್ಲಾ ಕಲೆಗಳ ನೆಲೆಯಾಗಿದೆ ಎಂದು ಇಶಾ ಅಂಬಾನಿ ಹೇಳಿದ್ದಾರೆ.
ಇದನ್ನೂ ಓದಿ: NMACC Event: ನೀತಾ ಅಂಬಾನಿ ಕನಸಿನ ಕಲ್ಚರಲ್ ಸೆಂಟರ್ ಉದ್ಘಾಟನೆಯಲ್ಲಿ ಬಾಲಿವುಡ್ ದಿಗ್ಗಜರ ಸಮಾಗಮ
ನೀತಾ ಮುಕೇಶ್ ಅಂಬಾನಿ ಸಾಂಸ್ಕೃತಿಕ ಕೇಂದ್ರದಲ್ಲಿ ಮಾತ್ರ ಎಲ್ಲಾ ಒಂದೇ ಸೂರಿನಡಿ ಲಭ್ಯವಿದೆ. ಈ ಕೇಂದ್ರವನ್ನು ಪ್ರಾರಂಭಿಸುವುದು ಪ್ರೀತಿ ಮತ್ತು ಸಂತೋಷದ ತುಂಬುವ ಕೆಲಸವಾಗಿದೆ. ನನ್ನ ತಾಯಿಯ ಹೆಸರಲ್ಲಿ ಕೇಂದ್ರವನ್ನು ಪ್ರಾರಂಭಿಸಿರುವುದು ನೀತಾ ಮುಕೇಶ್ ಅಂಬಾನಿ ಸಾಂಸ್ಕೃತಿಕ ಕೇಂದ್ರ ಅವರಿಗೆ ನೀಡುವ ಉತ್ಯುತ್ತಮ ಗೌರವವಾಗಿದೆ.
ಓರ್ವ ಶಾಸ್ತ್ರೀಯ ನೃತ್ಯಗಾರ್ತಿಯಾಗಿ ಈ ವೇದಿಕೆಯೂ ನನ್ನ ತಾಯಿಯ ದೇವಾಲಯವಾಗಿರಲಿದೆ. ಆದರೆ ಅವರಿಗೆ ಕಲೆಗಳ ಮೇಲೆ ಇರುವ ಗೌರವ, ಪ್ರೀತಿ ಮತ್ತಷ್ಟು ಹೆಚ್ಚಿದೆ. ಹಲವು ವರ್ಷಗಳಿಂದ ಅವರು ಭಾರತದ ಸಾಂಪ್ರದಾಯಿಕ ಕಲೆ, ಸಂಸ್ಕೃತಿ ಪುನರುಜ್ಜೀವನಗೊಳಿಸಲು, ಸಂರಕ್ಷಿಸಲು ಕಾರ್ಯನಿರ್ವಹಿಸುತ್ತಿರುವುದನ್ನು ನೋಡಿದ್ದೇನೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಅವರ ಗುರಿ ನೀತಾ ಮುಖೇಶ್ ಅಂಬಾನಿ ಸಾಂಸ್ಕೃತಿಕ ಕೇಂದ್ರ ಎಂದಿದ್ದಾರೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಿಮಗೆ ಧನ್ಯವಾದಗಳು. ನಿಮ್ಮ ಹಾಜರಿ ನಮ್ಮ ಸಂತೋಷ ಮತ್ತು ಉತ್ಸಾಹ ಹಂಚಿಸಿದೆ ಎಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ