ಮುಂಬೈ: ಖ್ಯಾತ ಉದ್ಯಮಿ ಮುಕೇಶ್ ಅಂಬಾನಿ (Mukesh Ambani) ಅವರ ಪುತ್ರಿ, ರಿಲಯನ್ಸ್ ರೀಟೇಲ್ ನಿರ್ದೇಶಕಿ (Reliance Retail director) ಇಶಾ ಅಂಬಾನಿ (Isha Ambani) ಅವರು ಅಮೆರಿಕಾದಿಂದ ಮುಂಬೈಗೆ (America to Mumbai) ಇಂದು ವಾಪಸ್ ಆಗಿದ್ದಾರೆ. ಹೀಗೆ ಅವರೊಬ್ಬರೇ ಅಮೆರಿಕದಿಂದ ಮುಂಬೈಗೆ ಬಂದಿಲ್ಲ, ಬದಲಾಗಿ ಅವರೊಂದಿಗೆ ಎರಡು ಮುದ್ದು ಕಂದಮ್ಮಗಳೂ ಮುಂಬೈಗೆ ಬಂದಿವೆ. ಹೌದು, ಅಮೆರಿಕದಲ್ಲಿ ಡೆಲಿವರಿಯಾಗಿ, ಅವಳಿ ಮಕ್ಕಳಿಗೆ ಜನ್ಮ (Twins) ನೀಡಿದ್ದ ಇಶಾ ಅಂಬಾನಿ ಇಂದು ಮುಂಬೈಗೆ ಆಗಮಿಸಿದ್ದಾರೆ. ಆನಂದ್ ಪಿರಾಮಲ್ (Anand Piramal) ಅವರನ್ನು ವಿವಾಹವಾಗಿರುವ ಇಶಾ, ಕಳೆದ ನವೆಂಬರ್ 19ರಂದು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಇಂದು ಮಕ್ಕಳ ಸಮೇತ ಅಮೆರಿಕದಿಂದ ಮುಂಬೈಗೆ ಇಶಾ ಅಂಬಾನಿ ಆಗಮಿಸಿದ್ದು, ಉದ್ಯಮಿ ಮುಕೇಶ್ ಅಂಬಾನಿ, ಪತ್ನಿ ನೀತಾ ಅಂಬಾನಿ (Nita Ambani) ಸೇರಿದಂತೆ ಇಡೀ ಕುಟುಂಬಸ್ಥರು ಅದ್ಧೂರಿ ಸ್ವಾಗತ ಕೋರಿದ್ದಾರೆ.
ಮನೆಯಲ್ಲಿ ವಿಶೇಷ ಪೂಜೆ
ಇಶಾ ಅಂಬಾನಿ ತಮ್ಮ ಮುದ್ದು ಅವಳಿ ಮಕ್ಕಳೊಂದಿಗೆ ಆಗಮಿಸಿದ್ದಾರೆ. ಉದ್ಯಮಿ ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಕೂಡ ಅವಳಿ ಮಕ್ಕಳನ್ನು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ನಾಳೆ ಅಂದರೆ ಡಿಸೆಂಬರ್ 25 ರಂದು ಅವರ ನಿವಾಸ ಕರುಣಾ ಸಿಂಧುದಲ್ಲಿ ವಿಶೇಷ ಪೂಜೆ ನಡೆಯಲಿದೆ. ಹೊತ್ತೊಯ್ದಿದ್ದಾರೆ. ರಿಪೋಸ್ಟ್ಗಳ ಪ್ರಕಾರ, ತಿರುಮಲ, ಶ್ರೀ ದ್ವಾರಕಾದೀಶ್ ದೇವಸ್ಥಾನ ಇತ್ಯಾದಿಗಳ ಅರ್ಚಕರು ಅವಳಿ ಮಕ್ಕಳ ಶ್ರೇಯಸ್ಸಿಗಾಗಿ ವಿಶೇಷ ಪೂಜೆಯನ್ನು ಮಾಡುತ್ತಾರೆ ಎನ್ನಲಾಗಿದೆ.
ನವೆಂಬರ್ 19ರಂದು ಅವಳಿ ಮಕ್ಕಳಿಗೆ ಜನ್ಮ
ಖ್ಯಾತ ಉದ್ಯಮಿ ಮುಕೇಶ್ ಅಂಬಾನಿ ಅವರ ಪುತ್ರಿ ಇಶಾ ಅಂಬಾನಿ ಮತ್ತು ಪತಿ ಆನಂದ್ ಪಿರಾಮಲ್ ಅವರು ನವೆಂಬರ್ 19 ರಂದು ಅವಳಿ ಮಕ್ಕಳಿಗೆ ಪೋಷಕರಾದರು. ಹೆಣ್ಣು ಮಗುವಿಗೆ ಆದಿಯಾ ಮತ್ತು ಗಂಡು ಮಗುವಿಗೆ ಕೃಷ್ಣ ಎಂದು ಹೆಸರಿಸಲಾಯಿತು. ಮುಕೇಶ್ ಅಂಬಾನಿ, ಪತ್ನಿ ನೀತಾ ಅಂಬಾನಿ, ಆನಂದ್ ಪಿರಾಮಲ್ ಅವರ ಪೋಷಕರಾದ ಸ್ವಾತಿ ಮತ್ತು ಅಜಯ್ ಪಿರಾಮಲ್ ಅವರು ನೀಡಿದ ಅಧಿಕೃತ ಹೇಳಿಕೆಯಲ್ಲಿ, ಇಶಾ ಮತ್ತು ಮಕ್ಕಳು ಇಬ್ಬರೂ ಚೆನ್ನಾಗಿದ್ದಾರೆ ಎಂದು ತಿಳಿಸಲಾಗಿದೆ.
ಇದನ್ನೂ ಓದಿ: Forbes 100 Richest Indians: ಫೋರ್ಬ್ಸ್ 100 ಶ್ರೀಮಂತ ಭಾರತೀಯರ ಪಟ್ಟಿ ರಿಲೀಸ್, ಮುಕೇಶ್ ಅಂಬಾನಿ ಸೇರಿ ಹಲವರಿಗೆ ಸ್ಥಾನ
ಅಮೆರಿಕದಲ್ಲಿ ಜನ್ಮ ನೀಡಿದ್ದ ಇಶಾ ಅಂಬಾನಿ
ಇಶಾ ಮತ್ತು ಆನಂದ್ 2018 ರಲ್ಲಿ ವಿವಾಹವಾದರು. ಆನಂದ್ ಪಿರಮಲ್ ಗ್ರೂಪ್ನ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದಾರೆ. ಇಶಾ ಕಳೆದ ತಿಂಗಳು ನವೆಂಬರ್ 19ರಂದು ಅಮೆರಿಕದ ಲಾಸ್ ಏಂಜಲೀಸ್ ನಲ್ಲಿ ಇಶಾ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಈ ಪೈಕಿ ಒಂದು ಗಂಡು ಮತ್ತೊಂದು ಹೆಣ್ಣು ಮಗುವಾಗಿದೆ. ಹೆಣ್ಣು ಮಗುವಿಗೆ ಆದಿಯಾ ಮತ್ತು ಗಂಡು ಮಗುವಿಗೆ ಕೃಷ್ಣ ಎಂದು ಹೆಸರಿಸಲಾಯಿತು.
View this post on Instagram
ಇಂದು ಅಂಬಾನಿ ಮತ್ತು ಪಿರಮಾಲ್ ಕುಟುಂಬಗಳಿಗೆ ಅತ್ಯಂತ ಸಂತೋಷದಾಯಕ ದಿನವಾಗಿದೆ. ಇಶಾ ಮತ್ತು ಆನಂದ್ ಅವರ ಮಕ್ಕಳು ಮತ್ತು ಅಂಬಾನಿಗಳು ಮತ್ತು ಪಿರಮಾಲ್ಗಳ ಮೊಮ್ಮಕ್ಕಳು ತಮ್ಮ ಜನನದ ನಂತರ ಭಾರತಕ್ಕೆ ಬಂದರು ಅದರಲ್ಲೂ ಅವರ ಮನೆ ಕರುಣಾಸಿಂಧುಗೆ ಬಂದರು. ಅತೀವ ಸಂತಸಗೊಂಡ ಪೋಷಕರು, ಹೆಮ್ಮೆಯ ಅಜ್ಜಿಯರು, ಚಿಕ್ಕಪ್ಪ ಚಿಕ್ಕಮ್ಮ ಮತ್ತು ಕೋಕಿಲಾಬೆನ್ - ಆದಿಯಾ ಮತ್ತು ಕೃಷ್ಣನ ಮುತ್ತಜ್ಜಿ ಇಡೀ ಕುಟುಂಬವನ್ನು ಮತ್ತೆ ಒಟ್ಟಿಗೆ ನೋಡಲು ತುಂಬಾ ಸುಂದರ ಮತ್ತು ಹೃದಯಸ್ಪರ್ಶಿ ಅನಿಸುತ್ತದೆ! ಕರುಣಾ ಸಿಂಧುವಿನಲ್ಲಿ ಇಂದಿನ ಕೆಲವು ಸುಂದರ ನೆನಪುಗಳು… ದೇವರು ಈ ಸುಂದರ ಕುಟುಂಬ ಮತ್ತು ಪುಟ್ಟ ದೇವತೆಗಳನ್ನು ಯಾವಾಗಲೂ ಮತ್ತು ಎಂದೆಂದಿಗೂ ಆಶೀರ್ವದಿಸಲಿ.. ಅಂತಾ ಇಶಾ ತಮ್ಮ ಇನ್ಸ್ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಮಕ್ಕಳನ್ನು ನೋಡಿಕೊಳ್ಳಲು ವಿಶೇಷ ತರಬೇತಿ ಪಡೆದ ನರ್ಸ್ಗಳು
ಇಶಾ ಅಂಬಾನಿ ಇಂದೇಷ್ಟೇ ಅಮೆರಿಕಾದಿಂದ ಮುಂಬೈನ ತಮ್ಮ ನಿವಾಸಕ್ಕೆ ಬಂದಿದ್ದಾರೆ. ಅವರ ಅವಳಿ ಮಕ್ಕಳನ್ನು 8 ವಿಶೇಷ ತರಬೇತಿ ಪಡೆದ ಅಮೇರಿಕನ್ ದಾದಿಯರು ಮತ್ತು ವಿಶೇಷ ನರ್ಸ್ಗಳು ನೋಡಿಕೊಳ್ಳುತ್ತಾರೆ ಎನ್ನಲಾಗಿದೆ.
ಇದನ್ನೂ ಓದಿ: Reliance: 2,850 ಕೋಟಿ ಕೊಟ್ಟು ಮೆಟ್ರೋ ಖರೀದಿಸಿದ ರಿಲಯನ್ಸ್!
ಮುಕೇಶ್ ಅಂಬಾನಿ ಕುಟುಂಬಸ್ಥರಿಂದ ಅದ್ಧೂರಿ ಸ್ವಾಗತ
ಇನ್ನು ಇಂದು ಮುಂಬೈಗೆ ಬಂದಿಳಿದ ಅವರನ್ನು ಮುಕೇಶ್ ಅಂಬಾನಿ, ಪತ್ನಿ ನೀತಾ ಅಂಬಾನಿ, ಆನಂದ್ ಪಿರಾಮಲ್ ಅವರ ಪೋಷಕರಾದ ಸ್ವಾತಿ ಮತ್ತು ಅಜಯ್ ಪಿರಾಮಲ್, ಮುಕೇಶ್ ಅಂಬಾನಿ ಪುತ್ರರಾದ ಅನಂತ್ ಅಂಬಾನಿ ಮತ್ತು ಆಕಾಶ್ ಅಂಬಾನಿ ಸೇರಿದಂತೆ ಅಂಬಾನಿ ಕುಟುಂಬದ ಹಲವಾರು ಸದಸ್ಯರು, ಪಿರಾಮಲ್ ಕುಟುಂಬದ ಸದಸ್ಯರು ಅದ್ಧೂರಿಯಾಗಿ ಸ್ವಾಗತಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ