Isha Ambani: ಅಮೆರಿಕದ ಸ್ಮಿತ್ಸೋನಿಯನ್ಸ್​ನ ನ್ಯಾಷನಲ್ ಮ್ಯೂಸಿಯಂ ಮಂಡಳಿಗೆ ಇಶಾ ಅಂಬಾನಿ ನೇಮಕ

ನ್ಯಾಷನಲ್ ಮ್ಯೂಸಿಯಂ ಆಫ್ ಏಷ್ಯನ್ ಆರ್ಟ್ ಸ್ಮಿತ್ಸೋನಿಯನ್‌ನದಲ್ಲಿ ಕಲೆಗೆ ಮೀಸಲಾದ ಮೊದಲ ವಸ್ತುಸಂಗ್ರಹಾಲಯವಾಗಿದೆ

ಇಶಾ ಅಂಬಾನಿ

ಇಶಾ ಅಂಬಾನಿ

 • Share this:
  ಅಮೆರಿಕದ ಸ್ಮಿತ್ಸೋನಿಯನ್ಸ್​ನ ನ್ಯಾಷನಲ್ ಮ್ಯೂಸಿಯಂ ಆಫ್ ಏಷ್ಯನ್ ಆರ್ಟ್ (Smithsonian’s National Museum of Asian Art)  ಮಂಡಳಿ ಸದಸ್ಯರಾಗಿ ಇಶಾ ಅಂಬಾನಿ (Isha Ambani) ಕ್ಯಾರೊಲಿನ್ ಬ್ರೆಹ್ಮ್ (Carolyn Brehm)  ಮತ್ತು ಪೀಟರ್ ಕಿಮ್ಮೆಲ್​ಮ್ಯಾನ್ (Peter Kimmelman) ​​ ನೇಮಕವಾಗಿದ್ದಾರೆ. ನಾಲ್ಕು ವರ್ಷಗಳ ಅವಧಿಗೆ ಇವರನ್ನು ಆಯ್ಕೆ ಮಾಡಿ ಸ್ಮಿತ್ಸೋನಿಯನ್ ಬೋರ್ಡ್ ಆಫ್ ರೀಜೆಂಟ್ಸ್ ಅನುಮೋದನೆ ನೀಡಿದ್ದಾರೆ. 17 ಸದಸ್ಯರನ್ನು ಒಳಗೊಂಡಿರುವ ಈ ಮಂಡಳಿಯಲ್ಲಿ ಯುಎಸ್​ನ (United States) ಮುಖ್ಯ ನ್ಯಾಯಾಧೀಶರು, ಯುಎಸ್​ನ ಉಪಾಧ್ಯಕ್ಷರು, ಮೂವರು ಸದಸ್ಯರು, ಯುಎಸ್​ನ ಸೆನೆಟ್, ಯುಎಸ್​ನ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನ ಮೂವರು ಸದಸ್ಯರು ಮತ್ತು ಒಂಬತ್ತು ನಾಗರಿಕರು ಇರಲಿದ್ದಾರೆ. ಈ ಹೊಸ ನೇಮಕಾತಿಗಳ ಜೊತೆಗೆ, ವಸ್ತುಸಂಗ್ರಹಾಲಯದ ಮಂಡಳಿಯ ಅಧ್ಯಕ್ಷರಾಗಿ ಆಂಟೊಯಿನ್ ವ್ಯಾನ್ ಅಗ್ಟ್ಮೇಲ್ (Antoine van Agtmael’s t)  ಅವರ ಅಧಿಕಾರಾವಧಿಯನ್ನು 2023ರವರೆಗೆ ವಿಸ್ತರಿಸಲಾಗಿದೆ. ಡಾ. ವಿಜಯ್ ಆನಂದ್ ಅವರನ್ನು ಮಂಡಳಿಯ ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿದೆ. ರಾಯಭಾರಿ ಪಮೇಲಾ ಎಚ್. ಸ್ಮಿತ್ ಅವರನ್ನು ಮಂಡಳಿಯ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

  ಏನಿದು ನ್ಯಾಷನಲ್​ ಮ್ಯೂಸಿಯಂ ಆಫ್​ ಏಷ್ಯನ್​ ಆರ್ಟ್​
  ನ್ಯಾಷನಲ್ ಮ್ಯೂಸಿಯಂ ಆಫ್ ಏಷ್ಯನ್ ಆರ್ಟ್ (asia.si.edu) ಸ್ಮಿತ್ಸೋನಿಯನ್‌ನದಲ್ಲಿ ಕಲೆಗೆ ಮೀಸಲಾದ ಮೊದಲ ವಸ್ತುಸಂಗ್ರಹಾಲಯವಾಗಿದೆ. 1923 ರಲ್ಲಿ ಫ್ರೀರ್ ಗ್ಯಾಲರಿ ಆಫ್ ಆರ್ಟ್ ಆಗಿದ್ದ ಈ ಮ್ಯೂಸಿಯಂನಲ್ಲಿ ಶತಮಾನದ ವಸ್ತುಗಳು, ಸಂಶೋಧನೆ, ಕಲೆ, ವಿಜ್ಞಾನದ ವಸ್ತುಗಳ ಸಂರಕ್ಷಣೆ ಮಾಡಲಾಗಿದ್ದು, ಅಂತರರಾಷ್ಟ್ರೀಯ ಮನ್ನಣೆ ಗಳಿಸಿದೆ. ಇನ್ನು ಶತಮಾನೋತ್ಸವ ಸಂಭ್ರಮದಲ್ಲಿರುವ ಮ್ಯೂಸಿಯಂ ಆಚರಣೆಗೆ ಮಂಡಳಿ ತಯಾರಿ ನಡೆಸಿದೆ. ಈ ಸಂಬಂಧ ಈ ಹೊಸ ನೇಮಕಾತಿಗಳು ನಡೆದಿದೆ.

  ಹೊಸ ಸದಸ್ಯರನ್ನು ಸ್ವಾಗತಿಸಿರುವ ಮಂಡಳಿ, ಪ್ರತಿಭಾವಂತ ಹೊಸ ಸದಸ್ಯರು, ಅಧಿಕಾರಿಗಳ ದೃಷ್ಟಿ ಮತ್ತು ಉತ್ಸಾಹವು ನಮ್ಮ ವೇಗವನ್ನು ಹೆಚ್ಚಿಸುತ್ತದೆ. ನಮ್ಮ ಸಂಗ್ರಹಣೆಗಳು ಸುಲಭವಾಗಿ ಮಾಡಲು ಪ್ರಯತ್ನ ಮಾಡಲಾಗುವುದು. ನಮ್ಮ ಸಂಗ್ರಹವನ್ನು ವಿಸ್ತರಿಸಲು, ಮತ್ತು ಏಷ್ಯಾದ ಕಲೆಗಳು ಮತ್ತು ಸಂಸ್ಕೃತಿಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಆಚರಿಸಲು ಮಂಡಳಿ ದೊಡ್ಡದಾಗಿದೆ. ಹಿಂದೆಂದಿಗಿಂತಲೂ ವೈವಿಧ್ಯಮಯವಾಗಿದೆ. ಈ ಸದಸ್ಯರೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ. ಅವರ ಸೇವೆಗಾಗಿ ನನ್ನ ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.

  ಇದನ್ನು ಓದಿ: ತಾಯಿ-ಮಗು ರಕ್ಷಿಸಲು ಬಂದವರೇ ಸಿಲುಕಿದ್ರು ಅಪಾಯಕ್ಕೆ : ಪ್ರವಾಹಕ್ಕೆ ಮುಖಮಾಡಿ ಗೆದ್ದು ಬಂದಿದ್ದೇ ಬಲು ರೋಚಕ!

  ಹೊಸ ಸದಸ್ಯರ ಪರಿಚಯ
  ಇಶಾ ಅಂಬಾನಿ ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್ (ಜಿಯೋ) ನ ಅಂಗಸಂಸ್ಥೆಯ ನಿರ್ದೇಶಕರಾಗಿದ್ದಾರೆ.ಅಂಬಾನಿ ಬಹು ವಹಿವಾಟುಗಳಲ್ಲಿ ಪ್ರಮುಖ ಸಮಾಲೋಚಕರಲ್ಲಿ ಒಬ್ಬರಾಗಿದ್ದಾರೆ. ಅಂಬಾನಿ ಬ್ರ್ಯಾಂಡಿಂಗ್ ಅನ್ನು ನಿರ್ವಹಿಸುತ್ತಾರೆ. ರಿಲಯನ್ಸ್ ರಿಟೇಲ್ ಮತ್ತು ಜಿಯೋದ ಗ್ರಾಹಕರ ಅನುಭವ ಮತ್ತು ಮಾರ್ಕೆಟಿಂಗ್ ಕಾರ್ಯ ನಿರ್ವಹಿಸುತ್ತಿದ್ದಾರೆ.

  ಇದನ್ನು ಓದಿ: ಮೊದಲ ಮೊಬಿಲಿಟಿ ಕೇಂದ್ರ ಆರಂಭಿಸಿದ Jio-bp

  ಕ್ಯಾರೊಲಿನ್ ಬ್ರೆಹ್ಮ್ ಕಾರ್ಪೊರೇಟ್ ಕಾರ್ಯನಿರ್ವಾಹಕ ಮತ್ತು 40 ವರ್ಷಗಳ ಕಾಲ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಜಾಗತಿಕ ಸರ್ಕಾರಿ ಸಂಬಂಧಗಳು, ಸಾರ್ವಜನಿಕ ನೀತಿ ಮತ್ತು ಅಂತರರಾಷ್ಟ್ರೀಯ ವ್ಯಾಪಾರದಲ್ಲಿ ಅನುಭವ ಹೊಂದಿದ್ದಾರೆ.

  ಪೀಟರ್ ಕಿಮ್ಮೆಲ್​ಮ್ಯಾನ್​​ 2015 ರಿಂದ 2019 ರವರೆಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ನಂತರ ಮಂಡಳಿಗೆ ಮರುಸೇರ್ಪಡೆಗೊಂಡಿದ್ದಾರೆ. ಗಣರಾಜ್ಯದ ಕಾರ್ಯಕಾರಿ ಸಮಿತಿಯ ನಿರ್ದೇಶಕ ಮತ್ತು ನ್ಯಾಷನಲ್ ಬ್ಯಾಂಕ್ ಆಫ್ ನ್ಯೂಯಾರ್ಕ್ ಹಾಗೂ ನಂತರ HSBC ಯ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ.
  Published by:Seema R
  First published: