Isha Ambani-Anand Piramal: ಅವಳಿ ಮಕ್ಕಳಿಗೆ ಅಮ್ಮನಾದ ಇಶಾ ಅಂಬಾನಿ

ಇಶಾ ಅಂಬಾನಿ ಮತ್ತು ಆನಂದ್ ಪಿರಾಮಲ್

ಇಶಾ ಅಂಬಾನಿ ಮತ್ತು ಆನಂದ್ ಪಿರಾಮಲ್

ಮಕ್ಕಳಿಗೆ ಅದಿಯಾ ಮತ್ತು ಕೃಷ್ಣ ಎಂದು ನಾಮಕರಣ ಮಾಡಲು ನಿರ್ಧರಿಸಲಾಗಿದೆ ಎಂದು ವರದಿಯಾಗಿದೆ.

  • News18 Kannada
  • Last Updated :
  • Karnataka, India
  • Share this:

    ಮುಂಬೈ: ಇಶಾ ಅಂಬಾನಿ (Isha Ambani) ಮತ್ತು ಆನಂದ್ ಪಿರಮಲ್ (Anand Piramal) ದಂಪತಿ ಅವಳಿ ಮಕ್ಕಳು ಪಾಲಕರಾಗಿದ್ದಾರೆ. ಖ್ಯಾತ ಉದ್ಯಮಿ ಮುಕೇಶ್ ಅಂಬಾನಿಯವರ (Mukesh Ambani Daugher) ಮಗಳಾದ ಇಶಾ ಅಂಬಾನಿಗೆ ಇಂದು ಗಂಡು ಮತ್ತು ಹೆಣ್ಣು ಮಗು ಜನಿಸಿದೆ. ಮಕ್ಕಳಿಗೆ ಅದಿಯಾ (Aadiya) ಮತ್ತು ಕೃಷ್ಣ (Krishna) ಎಂದು ನಾಮಕರಣ ಮಾಡಲು ನಿರ್ಧರಿಸಲಾಗಿದೆ ಎಂದು ವರದಿಯಾಗಿದೆ.


    ಇಶಾ ಮತ್ತು ಆನಂದ್ ದಂಪತಿಗೆ ಅವಳಿ ಮಕ್ಕಳು ಹುಟ್ಟಿರುವ ಸುದ್ದಿ ಹಂಚಿಕೊಳ್ಳಲು ನಮಗೆ ಸಂತಸವಾಗುತ್ತಿದೆ. ಆ ದೇವರ ಕರುಣೆಯಿಂದ ಇಬ್ಬರೂ ಮಕ್ಕಳು ಆರೋಗ್ಯದಿಂದಿದ್ದಾರೆ ಎಂದು ಅಂಬಾನಿ ಕುಟುಂಬದ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಲಾಗಿದೆ.


    ಆಶೀರ್ವಾದ ಮತ್ತು ಹಾರೈಕೆಗಳ ಅಪೇಕ್ಷೆಯಲ್ಲಿ ಅಂಬಾನಿ ಕುಟುಂಬ
    ಈ ಶುಭ ಸಂದರ್ಭದಲ್ಲಿ ನಿಮ್ಮೆಲ್ಲರ ಆಶೀರ್ವಾದ ಮತ್ತು ಹಾರೈಕೆಯನ್ನು ಅಪೇಕ್ಷಿಸುತ್ತೇವೆ ಎಂದು ಅಂಬಾನಿ ಕುಟುಂಬ ಪ್ರಕಟಣೆಯಲ್ಲಿ ತಿಳಿಸಿದೆ.


    ಇದನ್ನೂ ಓದಿ: Gujarat Election: ಗುಜರಾತ್‌ ಚುನಾವಣೆ: ಪೋಸ್‌ ನೀಡಿ ಫೋಟೋ ಪೋಸ್ಟ್‌ ಮಾಡಿದ್ದ ಐಎಎಸ್‌ ಅಧಿಕಾರಿ ವಜಾ


    2018ರಲ್ಲಿ ಮದುವೆಯಾಗಿದ್ದ ದಂಪತಿ
    ರಿಲಯನ್ಸ್ ಚೇರ್​ಮನ್ ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ದಂಪತಿಯ ಮಗಳು ಇಶಾ ಅಂಬಾನಿ ಕೈಗಾರಿಕೋದ್ಯಮಿ ಅಜಯ್ ಪಿರಮಲ್ ಮತ್ತ ಸ್ವಾಮಿ ಪಿರಮಲ್ ದಂಪತಿಯ ಮಗ ಆನಂದ್ ಪಿರಮಲ್ ಅವರನ್ನು 2018ರಲ್ಲಿ ಮದುವೆಯಾಗಿದ್ದರು.


    ರಿಲಯನ್ಸ್ ರೀಟೆಲ್ ವೆಂಚರ್​ನ ಎಕ್ಸ್​ಕ್ಯೂಟಿವ್ ಡೈರೆಕ್ಟರ್ ಆಗಿರುವ ಇಶಾ ಅಂಬಾನಿ
    ಸದ್ಯ ಇಶಾ ಅಂಬಾನಿ ರಿಲಯನ್ಸ್ ರೀಟೆಲ್ ವೆಂಚರ್​ನ ಎಕ್ಸ್​ಕ್ಯೂಟಿವ್ ಡೈರೆಕ್ಟರ್ ಆಗಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಆನಂದ ಪಿರಮಲ್ ಅವರು ಪಿರಮಲ್ ಗ್ರೂಪ್​ನ  ಆರ್ಥಿಕ ವಿಭಾಗವನ್ನು ಮುನ್ನಡೆಸುತ್ತಿದ್ದಾರೆ. 


    ಮುಕೇಶ್ ಅಂಬಾನಿ ಅವರಿಗೆ 2020ರಲ್ಲಿ ಮೊದಲ ಮೊಮ್ಮಗ ಜನಿಸಿದ್ದ. ಆಕಾಶ್ ಅಂಬಾನಿ ಮತ್ತು ಶ್ಲೋಕ ದಂಪತಿಗೆ 2020ರಲ್ಲಿ ಪೃಥ್ವಿ ಎಂಬ ಮಗ ಜನಿಸಿದ್ದ.


    ವಿಶ್ವದ ವಿವಿಧ ಖ್ಯಾತನಾಮರು ಹಾಜರಿದ್ದ ಮದುವೆ
    ಇಶಾ ಅಂಬಾನಿಯವರ ಮದುವೆಯಲ್ಲಿ ಭಾಗವಹಿಸಲು ವಿಶ್ವದ ಖ್ಯಾತನಾಮ ಉದ್ಯಮಿಗಳು ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಆಗಮಿಸಿದ್ದರು. ಅಮೆರಿಕದ ಮಾಜಿ ಅಧ್ಯಕ್ಷ ಕ್ಲಿಂಟನ್ ಅವರ ಪತ್ನಿ ಹಿಲರಿ ಕ್ಲಿಂಟನ್, ಸಚಿನ್ ತೆಂಡುಲ್ಕರ್, ಉದ್ಯಮಿ ಲಕ್ಷ್ಮಿ ಮಿತ್ತಲ್ ಕುಟುಂಬ, ಹಫ್ಫಿಂಗ್ಟನ್​ ಫೋಸ್ಟ್​ನ ಅರಿಯಾನಾ ಹಫ್ಫಿಂಗ್ಟನ್, ನೆಸ್ಲೆ ಚೇರ್​ಮನ್ ಎಮಿರಟಸ್, ಜೆಪಿ ಮೋರ್ಗನ್ ಚೇರ್​ಮನ್ ನಿಕಾಲೊಸ್ ಅಗಜಿನ್, ಎಎನ್​ಜೆಡ್ ಸಿಇಒ ಫರ್ಹಾನ್ ಫಾರೂಕಿ ಸೇರಿದಂತೆ ಅನೇಕ ಉದ್ಯಮಿಗಳು ಸಮಾರಂಭದಲ್ಲಿ ಭಾಗವಹಿಸಿದ್ದರು. ಸಿನಿಮಾ ತಾರೆಯರಾದ ಅಭಿಷೇಕ್ ಬಚ್ಚನ್, ಐಶ್ವರ್ಯ ರೈ ದಂಪತಿ, ಸಲ್ಮಾನ್ ಖಾನ್, ಅಮೀರ್ ಖಾನ್, ಕರಣ್ ಜೋಹರ್, ಅನಿಲ್ ಕಪೂರ್, ಡೇವಿಡ್ ಧವನ್, ಜಾನ್ ಅಬ್ರಹಾಂ, ಜಾವೇದ್ ಜಫ್ರಿ, ವಿದ್ಯಾ ಬಾಲನ್, ಪ್ರಿಯಾಂಕಾ ಚೋಪ್ರಾ, ಕ್ರಿಕೆಟರ್ ಮಹೇಂದರ್​ ಸಿಂಗ್ ಧೋನಿ ಪತ್ನಿ ಸಾಕ್ಷಿ ಧೋನಿ ಮತ್ತು ಮಗಳು ಜೀವಾ, ತೆಂಡುಲ್ಕರ್ ಪುತ್ರಿ ಅಂಜಲಿ ಸೇರಿದಂತೆ ಖ್ಯಾತನಾಮರದ ಕುಟುಂಬ ಸದ್ಯಸರು ಕಾರ್ಯಕ್ರಮದಲ್ಲಿ ಪಾಲ್ಗೊಳಲು ಆಗಮಿಸಿದ್ದರು.


    ಇದನ್ನೂ ಓದಿ: Kim Jong Un Daughter: ಮೊಟ್ಟಮೊದಲ ಬಾರಿಗೆ ಮಗಳ ಮುಖ ಬಹಿರಂಗಪಡಿಸಿದ ಉತ್ತರ ಕೊರಿಯಾದ ಅಧ್ಯಕ್ಷ!


    ಉದ್ಯಮಿ ಹಾಗೂ ರಿಲಯನ್ಸ್​ ಸಂಸ್ಥೆಯ ಮುಖ್ಯಸ್ಥ ಮುಖೇಶ್​​ ಅಂಬಾನಿ ಮಗಳು ಇಶಾ ಹಾಗೂ ಉದ್ಯಮಿ ಆನಂದ್​ ಪಿರಮಾಳ್​ ವಿವಾಹ ಮುಂಬೈನಲ್ಲಿ ಅದ್ಧೂರಿಯಾಗಿ ನೆರವೇರಿತ್ತು. 27 ಅಂತಸ್ತು ಹೊಂದಿರುವ ಅವರ ಮನೆಯಲ್ಲೇ ವಿವಾಹ ನೆರವೇರಿತ್ತು. ಎಲ್ಲ ಅಂತಸ್ತಿಗೂ ವಿಶೇಷ ಅಲಂಕಾರ ಮಾಡಲಾಗಿತ್ತು.

    Published by:ಗುರುಗಣೇಶ ಡಬ್ಗುಳಿ
    First published: