1991 ರಲ್ಲಿ ಬಿಡುಗಡೆಯಾದ ನಾರ್ಮನ್ ರಶ್ (Norman Rush) ಅವರ ಪ್ರಶಸ್ತಿ ವಿಜೇತ ಕಾದಂಬರಿ 'ಮೇಟಿಂಗ್' (Mating) ರಾಷ್ಟ್ರೀಯ ಪುಸ್ತಕ ಪ್ರಶಸ್ತಿಯನ್ನು (Award Winning N ovel) ಗೆದ್ದುಕೊಂಡಿದೆ ಹಾಗೂ ಇಂದಿಗೂ ಮುದ್ರಣಗೊಳ್ಳುತ್ತಿದೆ. ಕಾದಂಬರಿಗಳನ್ನು ಇಷ್ಟಪಡುವವರಿಗೆ ಮೇಟಿಂಗ್ ಪುಸ್ತಕ ಹೆಚ್ಚು ಇಷ್ಟವಾಗುವ ಕೃತಿಯಾಗಿದೆ. ನಿಜವಾದ ಪ್ರೀತಿ (Love) ಹೇಗಿರುತ್ತದೆ ಹಾಗೂ ಮಹಿಳೆ (Women) ಪುರುಷರ (Man) ನಡುವಿನ ಪ್ರಣಯವನ್ನು ಮೇಟಿಂಗ್ ಕಾದಂಬರಿ ತುಂಬಾ ವಿಶೇಷವಾಗಿ ವ್ಯಾಖ್ಯಾನಿಸಿದೆ.
ಕಾದಂಬರಿಗೆ ಸ್ಫೂರ್ತಿ ಪತ್ನಿ ಎಂದು ಹೇಳಿರುವ ಲೇಖಕ ರಶ್
ತಮ್ಮ ಪ್ರೀತಿಯ ಪತ್ನಿಗಾಗಿ ಈ ಕಾದಂಬರಿಯನ್ನು ಬರೆದಿರುವೆ ಎಂದು ಹೇಳಿರುವ ಲೇಖಕ ರಶ್, ವಿಡಿಯೋ ಸಂದರ್ಶನವೊಂದರಲ್ಲಿ ನನಗೆ ಈ ಕಾದಂಬರಿ ಬರೆಯಲು ಸ್ಫೂರ್ತಿಯೇ ನನ್ನ ಪತ್ನಿ ಎಂದು ತಿಳಿಸಿದ್ದಾರೆ. ಈ ಪುಸ್ತಕದಲ್ಲಿ ಬರೆದಿರುವ ಒಂದೊಂದು ಅಂಶ ಕೂಡ ಅವಳಿಗೆ ಅರ್ಪಣೆ ಎಂದು ರಶ್ ಸಂದರ್ಶನದಲ್ಲಿ ತಿಳಿಸಿದ್ದಾರೆ. ಈ ಪುಸ್ತಕ ತಮ್ಮ ಪತ್ನಿಯಲ್ಲಿರುವ ಹೃದಯದ ಭಾಷೆ, ಸಂವೇದನೆ ಹಾಗೂ ಬುದ್ಧಿವಂತಿಕೆಯ ಸಂಕೇತವಾಗಿದೆ ಎಂದು ರಶ್ ತಿಳಿಸಿದ್ದಾರೆ.
ಪತಿ ಹಾಗೂ ಪತ್ನಿಯ ಸುಗಮವಾಗಿ ಸಾಗಬೇಕು ಎಂದರೆ ಪ್ರೀತಿಯ ಆಳವನ್ನು ಅರಿತುಕೊಳ್ಳಬೇಕು ಎಂದು ರಶ್ ತಿಳಿಸುತ್ತಾರೆ. ಸಂಬಂಧದಲ್ಲಿ ಸಮಾನತೆ ಸಾಧಿಸುವುದು ಹಾಗೂ ಪ್ರೀತಿಯಲ್ಲಿರಬೇಕಾದ ಕನಿಷ್ಠ ಅಗತ್ಯತೆಗಳನ್ನು ಅರಿತುಕೊಳ್ಳುವುದು ಸಂಬಂಧವನ್ನು ಬಲಪಡಿಸುತ್ತದೆ. ತಮ್ಮ ಪತ್ನಿಯೊಂದಿಗಿ ಭೇಟಿ ಹಾಗೂ ನಂತರ ಅದು ದಾಂಪತ್ಯವಾಗಿ ಹೇಗೆ ರೂಪುಗೊಂಡಿತು ಎಂಬುದನ್ನು ರಶ್ ಸ್ವಯಂ ವಿವರಿಸಿದ್ದಾರೆ.
ಎಲ್ಸಾ ರಶ್ ಜೀವನದ ಪ್ರಮುಖ ಪಾತ್ರವಾಗಿದ್ದಾರೆ
ರಶ್ ಪೆನ್ಸಿಲ್ವೇನಿಯಾದ ಸ್ವಾರ್ಥ್‌ಮೋರ್ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದಾಗ ತಮ್ಮ ಪತ್ನಿ ಎಲ್ಸಾ ಸ್ಕಿಡ್ಟ್ ಅವರನ್ನು ಭೇಟಿಯಾದರು. 1955 ರಲ್ಲಿ ಇವರಿಬ್ಬರೂ ವಿವಾಹವಾದರು ನಂತರ ರಶ್ ಪುಸ್ತಕ ವ್ಯಾಪಾರಿ ಮತ್ತು ಶಿಕ್ಷಕರಾಗಿ ಕೆಲಸ ಮಾಡಿದರು. 1978 ರಿಂದ 1983 ರವರೆಗೆ, ಅವರು ಮತ್ತು ಅವರ ಪತ್ನಿ ಬೋಟ್ಸ್ವಾನಾದ ಪೀಸ್ ಕಾರ್ಪ್ಸ್ನಲ್ಲಿ ಸಹ-ನಿರ್ದೇಶಕರಾಗಿ ಸೇವೆ ಸಲ್ಲಿಸಿದರು. ಮೇಟಿಂಗ್‌ಗೂ ಮುನ್ನ ರಶ್ ತಮ್ಮ 53 ರ ವಯಸ್ಸಿನಲ್ಲಿ ಬರೆದ ಸಣ್ಣ ಕಥಾ ಸಂಗ್ರಹ ವೈಟ್ಸ್ ಅನ್ನು 1986 ರವರೆಗೆ ಪ್ರಕಟಿಸಿರಲಿಲ್ಲ ಎಂದು ತಿಳಿಸಿದ್ದಾರೆ.
ರಶ್ ಪುಸ್ತಕಗಳಿಗೆ ಎಲ್ಸಾ ರಶ್ ಮೊದಲ ಎಡಿಟರ್
ತಮ್ಮ ಯಾವುದೇ ಪುಸ್ತಕವನ್ನು ಮೊದಲು ಎಡಿಟ್ ಮಾಡುವ ರಶ್ ಪತ್ನಿ ಎಲ್ಸಾ ರಶ್ ಮೇಟಿಂಗ್‌ನಲ್ಲಿ ತಮ್ಮ ಪತಿ ಬರೆದಿದ್ದ ಕೆಲವೊಂದು ಸಾಲುಗಳನ್ನು ಟೀಕಿಸಿದ್ದರು ಎಂದು ರಶ್ ನೆನಪಿಸಿಕೊಳ್ಳುತ್ತಾರೆ. ಕೆಲವೊಂದು ಓದುಗರೂ ಕೂಡ ರಶ್ ಕೆಲವೊಂದು ವಾಕ್ಯಗಳನ್ನು ವಿಪರೀತವಾಗಿಯೇ ಪುಸ್ತಕದಲ್ಲಿ ಬರೆದಿದ್ದಾರೆ ಎಂಬ ಟೀಕೆಗಳನ್ನು ನೀಡಿದ್ದರು. ಆದರೆ ಆ ಸಾಲುಗಳನ್ನು ರಶ್ ಬದಲಾಯಿಸಲಿಲ್ಲ ಹಾಗೆಯೇ ಉಳಿಸಿಕೊಂಡರು ಎಂದು ಸಮರ್ಥಿಸಿಕೊಳ್ಳುತ್ತಾರೆ.
ಪತ್ನಿಯ ಆರೈಕೆಯಲ್ಲಿ ಕಾಲ ಕಳೆಯುತ್ತಿರುವ ರಶ್
ಪತಿ ಹಾಗೂ ಪತ್ನಿಯ ಬಾಂಧವ್ಯ ಹಾಗೂ ಗೆಳೆತನವನ್ನು ತಮ್ಮ ಪುಸ್ತಕ ಮೇಟಿಂಗ್‌ನಲ್ಲಿ ವಿವರಿಸಿರುವ ರಶ್, ನಿಜವಾದ ಪ್ರೀತಿ ಇಂದಿಗೂ ಇದೆ ಎಂಬುದನ್ನು ತಿಳಿಸಿದ್ದಾರೆ. ಸ್ವತಃ ಬುದ್ಧಿಮಾಂದ್ಯತೆ ಹಾಗೂ ಸೊಂಟದ ಪೆಟ್ಟಿನಿಂದ ಚೇತರಿಸಿಕೊಳ್ಳುತ್ತಿರುವ ತಮ್ಮ ಪತ್ನಿ ಎಲ್ಸಾ ರಶ್‌ರ ಆರೈಕೆಯಲ್ಲಿಯೇ ರಶ್ ಅವರು ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ. ನಿಜವಾದ ಪ್ರೀತಿ ಎಂಬುದು ಜೀವಂತವಾಗಿದೆ ಎಂಬುದನ್ನು ಸ್ವತಃ ಲೇಖಕ ತಮ್ಮ ಪುಸ್ತಕದ ಮೂಲಕ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ