Viral Post: ವಿಕ್ಟೋರಿಯಾ ಟರ್ಮಿನಸ್‌ಗಿಂತ ಸುಂದರವಾದ ಕಟ್ಟಡ ಭಾರತದಲ್ಲಿದ್ಯಾ? ನೆಟ್ಟಿಗರು ಕೊಟ್ಟ ಉತ್ತರವುದು!

WSJ ಅಂಕಣಕಾರ ಸದಾನಂದ್ ಧುಮೆ ಅವರು ಮುಂಬೈನ ವಿಕ್ಟೋರಿಯಾ ಟರ್ಮಿನಸ್ ರೈಲು ನಿಲ್ದಾಣದಷ್ಟು 'ಸುಂದರ'ವಾದ ಸ್ವಾತಂತ್ರ್ಯ ನಂತರ ನಿರ್ಮಿಸಲಾದ ಒಂದು ಸ್ಮಾರಕದ ಫೋಟೋ ಹಂಚಿಕೊಳ್ಳಲು ಇಲ್ಲವೇ ಮಾಹಿತಿ ನೀಡಲು ಭಾರತೀಯರಿಗೆ ಸವಾಲು ಹಾಕಿದರು. ಟಕರ್ ಕಾರ್ಲ್‌ಸನ್ ಹಾಗೂ ಸದಾನಂದ್ ಧುಮೆಯವರ ಹೇಳಿಕೆಗೆ ಉತ್ತರವಾಗಿ ನೆಟ್ಟಿಗರು ಸ್ವಾತಂತ್ರ್ಯ ನಂತರ ಹಾಗೂ ಸ್ವಾತಂತ್ರ್ಯ ಪೂರ್ವದ ಸ್ಮಾರಕಗಳು, ದೇವಾಲಯಗಳು, ಶಿಲ್ಪ ಕಲೆಗಳ ಚಿತ್ರಗಳು ಹಾಗೂ ಮಾಹಿತಿಗಳನ್ನು ಹಂಚಿಕೊಂಡಿದ್ದು ಭಾರತದ ಹಿರಿಮೆಯನ್ನು ಎತ್ತಿಹಿಡಿದಿದ್ದಾರೆ

ವಿಕ್ಟೋರಿಯಾ ಟರ್ಮಿನಸ್‌

ವಿಕ್ಟೋರಿಯಾ ಟರ್ಮಿನಸ್‌

  • Share this:
ಭಾರತ ಬ್ರಿಟಿಷರಿಂದ (British) ಮಾತ್ರವೇ ಪ್ರಗತಿ ಸಾಧಿಸಿದೆ ಹಾಗೂ ಬ್ರಿಟಿಷರು ಭಾರತವನ್ನು ತೊರೆದ ಬಳಿಕ ದೇಶವು ವಾಸ್ತುಶಿಲ್ಪದ (architecture) ಅಂಶಗಳನ್ನು ಪ್ರತಿನಿಧಿಸುವ ಅದ್ಭುತ ಶಿಲ್ಪಕಲೆಗಳನ್ನು ನಿರ್ಮಿಸಿಲ್ಲ ಎಂಬ ಫಾಕ್ಸ್ ನ್ಯೂಸ್‌ನ ಟಕರ್ ಕಾರ್ಲ್‌ಸನ್ ಅವರ ಹೇಳಿಕೆಗೆ ಬೆಂಬಲ ವ್ಯಕ್ತಪಡಿಸಿದ WSJ ಅಂಕಣಕಾರ ಸದಾನಂದ್ ಧುಮೆ ಅವರು ಮುಂಬೈನ ವಿಕ್ಟೋರಿಯಾ ಟರ್ಮಿನಸ್ (Victoria Terminus) ರೈಲು ನಿಲ್ದಾಣದಷ್ಟು 'ಸುಂದರ'ವಾದ ಸ್ವಾತಂತ್ರ್ಯ ನಂತರ ನಿರ್ಮಿಸಲಾದ ಒಂದು ಸ್ಮಾರಕದ ಫೋಟೋ ಹಂಚಿಕೊಳ್ಳಲು ಇಲ್ಲವೇ ಮಾಹಿತಿ ನೀಡಲು ಭಾರತೀಯರಿಗೆ (Indian) ಸವಾಲು ಹಾಕಿದರು. ಟಕರ್ ಕಾರ್ಲ್‌ಸನ್ ಹಾಗೂ ಸದಾನಂದ್ ಧುಮೆಯವರ ಹೇಳಿಕೆಗೆ ಉತ್ತರವಾಗಿ ನೆಟ್ಟಿಗರು ಸ್ವಾತಂತ್ರ್ಯ ನಂತರ ಹಾಗೂ ಸ್ವಾತಂತ್ರ್ಯ ಪೂರ್ವದ ಸ್ಮಾರಕಗಳು, ದೇವಾಲಯಗಳು (Temples), ಶಿಲ್ಪ ಕಲೆಗಳ ಚಿತ್ರಗಳು ಹಾಗೂ ಮಾಹಿತಿಗಳನ್ನು ಹಂಚಿಕೊಂಡಿದ್ದು ಭಾರತದ ಹಿರಿಮೆಯನ್ನು ಎತ್ತಿಹಿಡಿದಿದ್ದಾರೆ

ಬ್ರಿಟಿಷರೇ ಭಾರತಕ್ಕೆ ಕೊಡುಗೆ ನೀಡಿದ್ದಾರೆ: ಕಾರ್ಲ್‌ಸನ್‌ ಹೇಳಿಕೆ
ರಾಣಿ ಎಲಿಜಬೆತ್ II ರ ನಿಧನದ ನಂತರ ಫಾಕ್ಸ್ ನ್ಯೂಸ್‌ನಲ್ಲಿನ ತನ್ನ 5-ನಿಮಿಷಗಳ ಸುದೀರ್ಘ ಭಾಷಣದಲ್ಲಿ ಕಾರ್ಲ್‌ಸನ್‌ ಯುಎಸ್ ಸರಕಾರವು 20 ವರ್ಷಗಳ ನಂತರ ಅಪ್ಘಾನಿಸ್ತಾನದಿಂದ ಮರಳುವಾಗ ಏರ್‌ಸ್ಟ್ರಿಪ್‌ಗಳು, ಹಡಗು ಕಂಟೈನರ್‌ಗಳು ಮತ್ತು ಬಂದೂಕುಗಳನ್ನು ಅಲ್ಲಿಯೇ ಬಿಟ್ಟುಬಂದಿವೆ. ಅದೇ ರೀತಿ ಬ್ರಿಟಿಷರು ಭಾರತದಿಂದ ನಿರ್ಗಮಿಸಿದಾಗ ಸಂಪೂರ್ಣ ನಾಗರಿಕತೆ, ಭಾಷೆ, ಕಾನೂನು ವ್ಯವಸ್ಥೆ, ಶಾಲೆಗಳು, ಚರ್ಚ್‌ಗಳು ಮತ್ತು ಸಾರ್ವಜನಿಕ ಕಟ್ಟಡಗಳನ್ನು ಭಾರತೀಯರಿಗಾಗಿ ಬಿಟ್ಟುಹೋಗಿದ್ದಾರೆ. ಇವೆಲ್ಲವೂ ದೇಶದಲ್ಲಿ ಇಂದಿಗೂ ಬಳಕೆಯಲ್ಲಿವೆ. ಬಾಂಬೆಯಲ್ಲಿ ಆಂಗ್ಲರು ನಿರ್ಮಿಸಿದ ರೈಲುನಿಲ್ದಾಣ ಇಂದಿಗೂ ಬಳಕೆಯಲ್ಲಿದೆ. ವಾಶಿಂಗ್ಟನ್‌ನಲ್ಲಿ ಇಂತಹ ಯಾವುದೇ ಕಟ್ಟಡಗಳಿಲ್ಲ ಕಾಬೂಲ್ ಹಾಗೂ ಬಾಗ್ದಾದ್‌ನಲ್ಲಿ ಕೂಡ ಇಲ್ಲ ಎಂದೇ ತಿಳಿಸಿದರು.

ಕಾರ್ಲ್‌ಸನ್ ಹೇಳಿಕೆಗೆ ಬೆಂಬಲ ವ್ಯಕ್ತಪಡಿಸಿದ ಧುಮೆ
ಕಾರ್ಲ್‌ಸನ್‌ರ ಈ ಹೇಳಿಕೆಗೆ ಪ್ರತಿರೋಧ ವ್ಯಕ್ತಪಡಿಸಿದ ನೆಟಿಜನ್‌ಗಳು ವಿರೋಧ ವ್ಯಕ್ತಪಡಿಸಿದರು ತಮ್ಮ ಹೇಳಿಕೆಯನ್ನು ಹಿಂದಕ್ಕೆ ತೆಗೆದುಕೊಳ್ಳುವಂತೆ ಕಾರ್ಲ್‌ಸನ್‌ಗೆ ಸವಾಲು ಹಾಕಿದರು. ಕಾರ್ಲ್‌ಸನ್ ಹೇಳಿಕೆಗೆ ಬೆಂಬಲ ವ್ಯಕ್ತಪಡಿಸಿದ ಸದಾನಂದ್ ಧುಮೆಯವರು 1947 ರ ನಂತರ ವಿಕ್ಟೋರಿಯಾ ಟರ್ಮಿನಸ್‌ಗಿಂತಲೂ ಸುಂದರವಾಗಿರುವ ಭಾರತದಲ್ಲಿ ನಿರ್ಮಾಣವಾದ ಯಾವುದೇ ಕಟ್ಟಡದ ಛಾಯಾಚಿತ್ರವನ್ನು ತೋರಿಸುವಂತೆ ಇದೇ ನೆಟಿಜನ್‌ಗಳಿಗೆ ಸವಾಲು ಹಾಕಿದ್ದಾರೆ.

ವಿಟಿಗಿಂತಲೂ ಸುಂದರ ಕಟ್ಟಡ ಭಾರತದಲ್ಲಿ ಇದೆಯೇ? ಸವಾಲು ಹಾಕಿದ ಧುಮೆ
1888 ರಲ್ಲಿ ಪೂರ್ಣಗೊಂಡ ಬಾಂಬೆಯ ವಿಕ್ಟೋರಿಯಾ ಟರ್ಮಿನಸ್ ರೈಲು ನಿಲ್ದಾಣಕ್ಕೆ ಹೊಂದಿಕೆಯಾಗುವಂತೆ ಸ್ವತಂತ್ರ ಭಾರತವು ಏನನ್ನೂ ನಿರ್ಮಿಸಿಲ್ಲ ಎಂದು ಹೇಳಿದ್ದಕ್ಕಾಗಿ ಜನರು ಟಕರ್ ಕಾರ್ಲ್ಸ್‌ಸನ್ ಮೇಲೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅವರ ಹೇಳಿಕೆ ತಪ್ಪಾಗಿದ್ದರೆ ವಿಟಿಗಿಂತ ಹೆಚ್ಚು ಸುಂದರವಾಗಿರುವ 1947 ರ ನಂತರ ನಿರ್ಮಿಸಲಾದ ಕಟ್ಟಡದ ಚಿತ್ರವನ್ನು ಹಂಚಿಕೊಳ್ಳುವಂತೆ ನೆಟ್ಟಿಗರಿಗೆ ಸವಾಲು ಹಾಕಿದರು.

ವಾಸ್ತುಶಿಲ್ಪದ ಅದ್ಭುತ ಕಲಾಕೃತಿಗಳನ್ನು ಹಂಚಿಕೊಂಡ ನೆಟ್ಟಿಗರು
ಕಾರ್ಲ್‌ಸನ್ ಹಾಗೂ ಧುಮೆಯವರ ಹೇಳಿಕೆಗೆ ನೆಟ್ಟಿಗರು ಭಾರತದ ಅತ್ಯಪೂರ್ಣ ಕಟ್ಟಡಗಳು, ಶಿಲ್ಪಕಲಾಕೃತಿಗಳ ಚಿತ್ರಗಳನ್ನು, ವಿವರಗಳನ್ನು ಹಂಚಿಕೊಂಡಿದ್ದು ಆ ಮಾಹಿತಿ ಇಲ್ಲಿದೆ

ಅಕ್ಷರಧಾಮ ಮಂದಿರ, ದೆಹಲಿ
ದೆಹಲಿಯಲ್ಲಿರುವ ಅಕ್ಷರಧಾಮ ಅಥವಾ ಸ್ವಾಮಿನಾರಾಯಣ ಅಕ್ಷರಧಾಮ ಕಟ್ಟಡವನ್ನು 2005 ರಲ್ಲಿ ಸಾರ್ವಜನಿಕರಿಗಾಗಿಯೇ ತೆರೆಯಲಾದ ಹಿಂದೂ ದೇವಾಲಯವಾಗಿದೆ. ಇದು ಸಾಂಪ್ರದಾಯಿಕ ಹಿಂದೂ ಮತ್ತು ಭಾರತೀಯ ಸಂಸ್ಕೃತಿ, ಆಧ್ಯಾತ್ಮಿಕತೆ ಮತ್ತು ವಾಸ್ತುಶಿಲ್ಪದ ವಿಶಾಲ ಇತಿಹಾಸವನ್ನು ಪ್ರದರ್ಶಿಸುವ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ತಾಣವಾಗಿದೆ.

ಲೋಟಸ್ ಟೆಂಪಲ್, ದೆಹಲಿ
ಬಹಾಯಿ ಹೌಸ್ ಆರಾಧನೆಯ ಲೋಟಸ್ ಟೆಂಪಲ್ ಅನ್ನು ಡಿಸೆಂಬರ್ 1986 ರಲ್ಲಿ ಸಾರ್ವಜನಿಕರಿಗೆ ಸಮರ್ಪಿಸಲಾಯಿತು. ಇದು ಗಮನಾರ್ಹವಾದ ಕಮಲದ ಹೂವಿನಂತಹ ರಚನೆಯನ್ನು ಹೊಂದಿದೆ ಮತ್ತು ನಗರದಲ್ಲಿ ಪ್ರಮುಖ ಆಕರ್ಷಣೆಯ ಕೇಂದ್ರ ಬಿಂದು ಎಂದೆನಿಸಿದೆ.

ಸೋಮನಾಥ ಮಂದಿರ, ಗುಜರಾತ್
ಸೋಮನಾಥ ದೇವಾಲಯದ ಇತಿಹಾಸವು ಶತಮಾನಗಳ ಹಿಂದಿನ ಕಾಲಮಾನವನ್ನು ನೆನಪಿಸುತ್ತದೆಯಾದರೂ, ದೇವಾಲಯದ ಸ್ಥಳದಲ್ಲಿ ನಿರ್ಮಿಸಲಾದ ಮಸೀದಿಯ ಅವಶೇಷಗಳನ್ನು ಹತ್ತಿರದ ಸ್ಥಳಕ್ಕೆ ಸ್ಥಳಾಂತರಿಸಿದ ಮೇಲೆ ಸ್ವಾತಂತ್ರ್ಯದ ನಂತರ ಇತ್ತೀಚಿನ ನಿರ್ಮಾಣವನ್ನು ಮಾಡಲಾಯಿತು. ದೇವಾಲಯದ ನಿರ್ಮಾಣವು 1951 ರಲ್ಲಿ ಪೂರ್ಣಗೊಂಡಿತು ಮತ್ತು ಅಂದಿನ ಭಾರತದ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಅವರು ದೇವಾಲಯದ ಪ್ರತಿಷ್ಠಾಪನಾ ಸಮಾರಂಭವನ್ನು ನೆರವೇರಿಸಿದರು.

ವಿಧಾನ ಸೌಧ, ಕರ್ನಾಟಕ
1951 ರಲ್ಲಿ ಅಂದಿನ ಭಾರತದ ಪ್ರಧಾನಿ ಪಂಡಿತ್ ಜವಾಹರ್ ಲಾಲ್ ನೆಹರು ಅವರು ವಿಧಾನಸೌಧದ ಅಡಿಪಾಯವನ್ನು ಹಾಕಿದರು. ಕಟ್ಟಡವು 1956 ರಲ್ಲಿ ಪೂರ್ಣಗೊಂಡಿತು. ಇದನ್ನು ಮೈಸೂರು ನವ-ದ್ರಾವಿಡ ಶೈಲಿಯಲ್ಲಿ ನಿರ್ಮಿಸಲಾಯಿತು. ಇಲ್ಲಿಯವರೆಗೆ, ಸ್ವಾತಂತ್ರ್ಯದ ನಂತರ ನಿರ್ಮಿಸಲಾದ ಅತ್ಯಂತ ಸುಂದರವಾದ ಕಟ್ಟಡಗಳಲ್ಲಿ ಇದು ಒಂದಾಗಿದೆ.

ಪ್ರೇಮ್ ಮಂದಿರ, ವೃಂದಾವನ
ಪ್ರೇಮ್ ಮಂದಿರವು ವೃಂದಾವನದಲ್ಲಿರುವ ಹಿಂದೂ ದೇವಾಲಯವಾಗಿದೆ. ಇದನ್ನು ಜಗದ್ಗುರು ಕೃಪಾಲು ಪರಿಷತ್, ಅಂತಾರಾಷ್ಟ್ರೀಯ \ಶೈಕ್ಷಣಿಕ, ಆಧ್ಯಾತ್ಮಿಕ ಮತ್ತು ಲಾಭರಹಿತ ಚಾರಿಟಬಲ್ ಟ್ರಸ್ಟ್ ನಿರ್ವಹಿಸುತ್ತದೆ. ದೇವಾಲಯವು ಫೆಬ್ರವರಿ 17, 2012 ರಂದು ಸಾರ್ವಜನಿಕರ ಪ್ರವೇಶಕ್ಕೆ ತೆರೆದಿತ್ತು.

ಇದನ್ನೂ ಓದಿ:  Gorakhpur: ಮುಸ್ಲಿಂ ವ್ಯಕ್ತಿಯ ಮನೆ ಅಗೆದಾಗ ಶಂಖ-ತ್ರಿಶೂಲ, ಮೂಳೆ ಪತ್ತೆ: ಮೌಲ್ವಿ ಆಜ್ಞೆ ಪಾಲಿಸಿದವರಿಗೆ ಶಾಕ್!

ಏಕತೆಯ ಪ್ರತಿಮೆ ಗುಜರಾತ್
ಏಕತೆಯ ಪ್ರತಿಮೆಯು ಗುಜರಾತ್ ರಾಜ್ಯದಲ್ಲಿ ನೆಲೆಗೊಂಡಿರುವ ವಿಶ್ವದ ಅತಿ ಎತ್ತರದ ಪ್ರತಿಮೆಯಾಗಿದೆ. 2013 ರಲ್ಲಿ ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ರಾಜ್ಯದ ಸಿಎಂ ಆಗಿ ಹತ್ತನೇ ವರ್ಷದ ಆರಂಭವನ್ನು ಗುರುತಿಸಲು ನಿರ್ಮಾಣವನ್ನು ಘೋಷಿಸಿದರು. ಇದನ್ನು ಅಕ್ಟೋಬರ್ 2018 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಾರ್ವಜನಿಕರಿಗೆ ಅರ್ಪಿಸಿದರು. ಇದು ಗುಜರಾತ್‌ನ ಅತ್ಯಂತ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ.

ಸ್ವಾತಂತ್ರ್ಯೋತ್ತರ ಭಾರತದಲ್ಲಿನ ಅದ್ಭುತ ವಾಸ್ತುಶಿಲ್ಪದ ವಿನ್ಯಾಸಗಳ ಬಗ್ಗೆ ಕಾರ್ಲ್‌ಸನ್ ಹಾಗೂ ಧುಮೆಗೆ ಅರಿವು ಮೂಡಿಸಲು ಅನಿರೀಕ್ಷಿತ ಭಾಗಗಳಿಂದ ಕೂಡ ಜನರು ಅದ್ಭುತ ಕಟ್ಟಡಗಳು ಹಾಗೂ ದೇವಾಲಯಗಳ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಚೆನಾಬ್ ಬ್ರಿಡ್ಜ್, ಅಟಲ್ ಟ್ಯೂನಲ್, ಸೀ ಲಿಂಕ್ ಇನ್ನಿತರ ಕಲಾಕೃತಿಗಳ, ಸ್ಮಾರಕಗಳ ಚಿತ್ರಗಳನ್ನು ಕೆಲವು ನೆಟ್ಟಿಗರು ಹಂಚಿಕೊಂಡಿದ್ದಾರೆ.

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್, ಅಹಮದಾಬಾದ್
ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್, ಅಹಮದಾಬಾದ್ ಅನ್ನು 1961 ರಲ್ಲಿ ಸ್ಥಾಪಿಸಲಾಯಿತು ಮತ್ತು ಕ್ಯಾಂಪಸ್, ನಿಸ್ಸಂಶಯವಾಗಿ ಅದರ ನಂತರ ನಿರ್ಮಾಣಗೊಂಡಿತು ಇದು ಎಲ್ಲಾ ಭಾರತೀಯರಿಗೆ ಒಂದು ಸಾಂಪ್ರದಾಯಿಕ ರಚನೆಯ ಮತ್ತು ಹೆಮ್ಮೆಯ ವಿಷಯವಾಗಿದೆ.

ಬ್ರಿಟಿಷರು ಮಾಡಿದ ವಿಧ್ವಂಸಕ ಕೃತ್ಯಗಳು
ಧುಮೆಯವರ ಹೇಳಿಕೆಯನ್ನು ತಪ್ಪೆಂದೇ ವಾದಿಸಿರುವ ನೆಟ್ಟಿಗರು, ಬಂಗಾಳಕ್ಕೆ ಕ್ಷಾಮವನ್ನು ಕೊಡುಗೆ ನೀಡಿದ ಬ್ರಿಟಿಷ್ ಸಾಮ್ರಾಜ್ಯದ ಬಗೆಗೆ ಮಾತನಾಡಿದ್ದಾರೆ. ಜಲಿಯನ್ ವಾಲಾಬಾಗ್‌ನ ದುರಂತವನ್ನು ನೆನಪಿಸಿದರು. ಧುಮೆಯವರ ನಿಮ್ಮ ಪ್ರಶ್ನೆಗೆ ದಕ್ಷಿಣ ಭಾರತದ ಪ್ರಾಚೀನ ಹಾಗೂ ಪಾರಂಪರಿಕ ದೇವಾಲಯಗಳನ್ನು ಬ್ರಿಟೀಷರು ನಿರ್ಮಿಸಲಿಲ್ಲ ಅಥವಾ ಹವಾ ಮಹಲ್, ವಿಧಾನ ಸೌಧ, IIMA ಅವರ ಕಾಲದಲ್ಲಿರಲಿಲ್ಲ ಎಂಬುದನ್ನು ನೆನಪಿಸಿದ್ದಾರೆ.

ಇದನ್ನೂ ಓದಿ:  Arun Yogiraj: ಇಂಡಿಯಾ ಗೇಟ್‌ ಬಳಿ ಸುಭಾಷ್ ಚಂದ್ರ ಬೋಸ್ ಪ್ರತಿಮೆ, ಇದರ ಹಿಂದಿದೆ ಕನ್ನಡಿಗನ ಕೈಚಳಕ

ಕಾರ್ಲ್ಸನ್ ಮತ್ತು ಧುಮೆಯವರು ಬ್ರಿಟಿಷರು ಭಾರತದಲ್ಲಿ ಬಿಟ್ಟುಹೋಗಿರುವ ಪರಂಪರೆಯ ಕುರಿತು ಮಾತನಾಡುವಾಗ, ಅನಾಗರಿಕರ ಆಕ್ರಮಣಕ್ಕೆ ಒಳಗಾದ ಭಾರತದ ಶ್ರೀಮಂತ ಸಂಸ್ಕೃತಿ ಹಾಗೂ ಪರಂಪರೆಯ ಕುರಿತು ಇಬ್ಬರೂ ಮರೆತಿದ್ದಾರೆ. ದಾಳಿಕೋರರು ಭಾರತವನ್ನು ಆಕ್ರಮಣ ಮಾಡಿದ್ದೇ ಇಲ್ಲಿನ ಕಲಾ ಶ್ರೀಮಂತಿಕೆಯನ್ನು ನೋಡಿ. ಇಲ್ಲಿನ ಜನರ ಜೀವನ ಶೈಲಿಯನ್ನು ನೋಡಿ. ಇಲ್ಲಿನ ಸಂಪತ್ತು, ಪಾರಂಪರಿಕ ಹಿನ್ನಲೆಯೇ ದಾಳಿಕೋರರನ್ನು ಭಾರತದ ಕಡೆಗೆ ಆಕರ್ಷಿಸಿತು ಹಾಗೆಯೇ ಭಾರತದ ಸಂಸ್ಕೃತಿ ಪರಂಪರೆ ಬ್ರಿಟೀಷರು ಸೇರಿದಂತೆ ಇನ್ನಿತರ ದಾಳಿಕೋರರ ಕಣ್ಣುಕೋರೈಸಿತು ಎಂಬುದನ್ನು ನೆಟ್ಟಿಗರು ಮನವರಿಕೆ ಮಾಡಿದರು.

ಕೇಂದ್ರ ಸಚಿವರಾದ ಹರ್ದೀಪ್ ಸಿಂಗ್ ಪುರಿ ಮಾಡಿದ ಟ್ವೀಟ್
ಇನ್ನು ಕೇಂದ್ರ ಸಚಿವರಾದ ಹರ್ದೀಪ್ ಸಿಂಗ್ ಪುರಿ ಅವರು ಭಾರತದ ಭವ್ಯವಾದ ದೇವಾಲಯಗಳ ಚಿತ್ರಗಳನ್ನು ಟ್ವೀಟ್ ಮಾಡಿದ್ದು ಅವುಗಳಲ್ಲಿ ಕೆಲವು ಬ್ರಿಟಿಷರು ಭಾರತಕ್ಕೆ ಬರುವ ಶತಮಾನಗಳ ಮೊದಲು ನಿರ್ಮಿಸಲಾಗಿದೆ ಎಂಬ ಅಂಶಕ್ಕೆ ಪ್ರಾಧಾನ್ಯತೆ ನೀಡಿದ್ದಾರೆ. ಅವರು ಏನನ್ನು ನಿರ್ಮಿಸಿದ್ದಾರೆ ಎಂಬುದನ್ನು ಹೇಳುವ ಮೊದಲು, ಅವರು ಏನು ನಿರ್ಮಾಣ ಮಾಡಿದ್ದರೂ ಅದಕ್ಕೆ ಬಳಸಿಕೊಂಡಿದ್ದು ಭಾರತದ ಸಂಪನ್ಮೂಲಗಳನ್ನು ಎಂದು ಸಚಿವರು ಟ್ವೀಟ್‌ನಲ್ಲಿ ಮನವರಿಕೆ ಮಾಡಿದ್ದಾರೆ. ದೇಶದ ಹಣ ಹಾಗೂ ನುರಿತ ಕಲಾಕಾರರನ್ನೇ ಬಳಸಿಕೊಂಡು ಬ್ರಿಟಿಷರು ಪ್ರತಿಯೊಂದನ್ನು ನಿರ್ಮಿಸಿದ್ದಾರೆ. ಇಲ್ಲಿ ಹಂಚಿಕೊಂಡಿರುವ ಫೋಟೋಗಳು ವಸಾಹತುಶಾಹಿ ಶಕ್ತಿಗಳು ಮತ್ತು ಅವರ ಸಂಬಂಧವನ್ನು ಭಾರತಕ್ಕೆ ಏಕೆ ಆಕರ್ಷಿತಗೊಳಿಸಿದವು ಎಂಬುದನ್ನು ತಿಳಿಹೇಳುತ್ತವೆ ಎಂದು ಸಚಿವರು ಟ್ವೀಟ್ ಮಾಡಿದ್ದಾರೆ.ಇದನ್ನೂ ಓದಿ:  10th Board Examination: ಮನಸ್ಸಿದ್ದರೆ ಮಾರ್ಗ ಅನ್ನೋದಕ್ಕೆ ಇವರೇ ಸಾಕ್ಷಿ, ಮೂರು ಮಕ್ಕಳಿದ್ರೂ SSLC ಪಾಸಾದ ಮಹಾತಾಯಿ!

ಅನೇಕ ಜಾಲತಾಣ ಬಳಕೆದಾರರು ಶತಮಾನಗಳ ಹಿಂದಿನ ಶ್ರೀಮಂತ ಹಾಗೂ ವೈಭವೋಪೇತ ದೇವಾಲಯಗಳ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಸೌಂದರ್ಯ ಎಂಬುದು ವ್ಯಕ್ತಿನಿಷ್ಟವಾಗಿದೆ ಹಾಗೂ ವಿಕ್ಟೋರಿಯಾ ಟರ್ಮಿನಸ್ ಅತ್ಯದ್ಭುತವಾದ ವಾಸ್ತುಶಿಲ್ಪವಾಗಿದೆ. ಅದಾಗ್ಯೂ ಭಾರತದವನ್ನು ನಿರ್ಮಿಸಿದವರು ಬ್ರಿಟಿಷರು ಹಾಗೂ ನಾಗರಿಕತೆಯನ್ನು ದೇಶದಲ್ಲಿ ಬಿಟ್ಟುಹೋದರು ಎಂಬುದು ಆಂಗ್ಲ ಮನಸ್ಥಿತಿಯೊಂದಿಗೆ ವಸಾಹತು ಶಾಹಿ ಅಂಶವನ್ನು ಪ್ರತಿನಿಧಿಸುವ ಭಾರತೀಯ ಸಿಪಾಯಿಗಳವರೆಗೆ ವಿಸ್ತರಿಸುತ್ತದೆ.
Published by:Ashwini Prabhu
First published: