• Home
  • »
  • News
  • »
  • national-international
  • »
  • Reservation: ಚುನಾವಣೆಯಲ್ಲಿ ಬಿಜೆಪಿಗೆ ಕಂಟಕವಾಗುತ್ತಾ ಮೀಸಲಾತಿ ಸಮಸ್ಯೆ?

Reservation: ಚುನಾವಣೆಯಲ್ಲಿ ಬಿಜೆಪಿಗೆ ಕಂಟಕವಾಗುತ್ತಾ ಮೀಸಲಾತಿ ಸಮಸ್ಯೆ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕರ್ನಾಟಕ ಸರ್ಕಾರವು ಎಸ್‌ಸಿ/ಎಸ್‌ಟಿ ಕೋಟಾವನ್ನು ಹೆಚ್ಚಿಸುವ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸಿತು. ಈ ಮಸೂದೆಯು ಕಾಯಿದೆಯಾದ ನಂತರ, ಇದು ಎಸ್‌ಸಿ ಗಳಿಗೆ 15% ರಿಂದ 17% ಕ್ಕೆ ಮತ್ತು ಎಸ್‌ಟಿ ಗಳಿಗೆ 3% ರಿಂದ 7% ಕ್ಕೆ ಮೀಸಲಾತಿಯನ್ನು ಹೆಚ್ಚಿಸಿತು.

  • Trending Desk
  • 4-MIN READ
  • Last Updated :
  • Share this:

ಇತ್ತೀಚೆಗೆ ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿಯನ್ನು (Reservation in Govt Jobs) ಹೆಚ್ಚಿಸಲು ಮೂರು ರಾಜ್ಯಗಳ ಅಸೆಂಬ್ಲಿಗಳು ಕಾಯ್ದೆಯನ್ನು ಅಂಗೀಕರಿಸಿವೆ. ಈ ಎಲ್ಲಾ ಶಾಸನಗಳು 1993 ರಲ್ಲಿ ಸುಪ್ರೀಂ ಕೋರ್ಟ್‌ನ (Supreme Court) ಇಂದಿರಾ ಸಾಹ್ನಿ ತೀರ್ಪಿನ ನಂತರ ಒಮ್ಮೆ ಸಂರಕ್ಷಿತವೆಂದು ಪರಿಗಣಿಸಲಾದ 50% ದಷ್ಟು ಕೋಟಾ ಮಿತಿಯನ್ನು ಉಲ್ಲಂಘಿಸುತ್ತದೆ.  ಆದರೆ ಸುಪ್ರೀಂ ಕೋರ್ಟ್‌ನ EWS ತೀರ್ಪಿನ ನಂತರ (ಸಂವಿಧಾನದ 103 ನೇ ತಿದ್ದುಪಡಿಯನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ಇದು ಆರ್ಥಿಕವಾಗಿ ದುರ್ಬಲ ವರ್ಗಗಳ (Economic Backward Class) ಜನರಿಗೆ 10% ಮೀಸಲಾತಿಗೆ ಅವಕಾಶವನ್ನೊದಗಿಸಿತು) ಇದೀಗ ಸಾಕಷ್ಟು ಅನಿಶ್ಚಿತ ಮತ್ತು ಅಸ್ಥಿರವಾಗಿದೆ.


ಕರ್ನಾಟಕವು ಕೇಂದ್ರಕ್ಕೆ ಹೇಗೆ ಕಂಟಕವಾಗಲಿದೆ?


ಇಂತಹ ಶಾಸನವನ್ನು ಅಂಗೀಕರಿಸಿದ ಮೂರು ರಾಜ್ಯಗಳಲ್ಲಿ ಒಂದು ಕರ್ನಾಟಕ ಮತ್ತು ರಾಜ್ಯದಲ್ಲಿ ಬಿಜೆಪಿಯು ಅಧಿಕಾರದ ಚುಕ್ಕಾಣಿ ಹಿಡಿದಿರುವುದರಿಂದ ಇದು ಕೇಂದ್ರ ಸರ್ಕಾರಕ್ಕೆ ತೊಂದರೆಯನ್ನುಂಟು ಮಾಡಬಹುದು.


ರಾಜ್ಯದಲ್ಲಿ ಮುಂದಿನ ವರ್ಷದ ಮಧ್ಯಭಾಗದಲ್ಲಿ ಲೋಕಸಭಾ ಚುನಾವಣೆ ನಡೆಯಲಿದ್ದು, ಎಸ್‌ಸಿ ಮತ್ತು ಎಸ್‌ಟಿ ಮತಗಳನ್ನು ಪಡೆದುಕೊಳ್ಳಲು ಬಿಜೆಪಿ ಈ ಮಸೂದೆಯ ಮೇಲೆ ಹೆಚ್ಚಿನ ಭರವಸೆ ಇರಿಸಿಕೊಂಡಿದೆ.


ಬಿಜೆಪಿಯ ಮುಂದಿದೆ ಮಹತ್ತರ ರಾಜಕೀಯ ಪರಿಣಾಮ


ನರೇಂದ್ರ ಮೋದಿ ಸರ್ಕಾರ ಮತ್ತು ಬಿಜೆಪಿ ನಾಯಕತ್ವವು ವಿಶೇಷವಾಗಿ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಕೋಟಾದ ವಿಷಯದಲ್ಲಿ 50% ದಷ್ಟು ಮಿತಿಯನ್ನು ಮೀರಲು ಅನುಮತಿಸಬೇಕೇ ಎಂಬುದನ್ನು ಕುರಿತು ಹೆಚ್ಚು ಕಾಳಜಿಯನ್ನು ತೆಗೆದುಕೊಳ್ಳಬೇಕಾಗಿದೆ.


ಕೇಂದ್ರವು ಈಗಾಗಲೇ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಅಲ್ಲದವರಿಗೆ 10% ದಷ್ಟು EWS ಕೋಟಾವನ್ನು ಜಾರಿಗೊಳಿಸಿದೆ, ಹೀಗಾಗಿ ಕೇಂದ್ರ ಸರ್ಕಾರಿ ಉದ್ಯೋಗಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಕೋಟಾ ಪ್ರಮಾಣವು 59% ವಾಗಿದೆ. ಹಲವು ರಾಜ್ಯಗಳು ಇದನ್ನು ಅನುಸರಿಸಿವೆ.


ಬಿಜೆಪಿ ಯಾವುದೇ ನಿರ್ಧಾರವನ್ನು ತೆಗೆದುಕೊಂಡರೂ ಈ ನಿರ್ಧಾರಗಳನ್ನು ನಿಭಾಯಿಸಲು ತುಂಬಾ ಮಹತ್ತರವಾದ ರಾಜಕೀಯ ಪರಿಣಾಮಗಳನ್ನು ಹೊಂದಿರುತ್ತದೆ.


ಏನಿದು ಕೋಟಾ ಗೊಂದಲ?


ಕರ್ನಾಟಕ ಸರ್ಕಾರವು ಎಸ್‌ಸಿ/ಎಸ್‌ಟಿ ಕೋಟಾವನ್ನು ಹೆಚ್ಚಿಸುವ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸಿತು. ಈ ಮಸೂದೆಯು ಕಾಯಿದೆಯಾದ ನಂತರ, ಇದು ಎಸ್‌ಸಿ ಗಳಿಗೆ 15% ರಿಂದ 17% ಕ್ಕೆ ಮತ್ತು ಎಸ್‌ಟಿ ಗಳಿಗೆ 3% ರಿಂದ 7% ಕ್ಕೆ ಮೀಸಲಾತಿಯನ್ನು ಹೆಚ್ಚಿಸಿತು.


ಕರ್ನಾಟಕ ರಾಜ್ಯಪಾಲರು ಸುಗ್ರೀವಾಜ್ಞೆಗೆ ಒಪ್ಪಿಗೆ ನೀಡಿದರು ಮತ್ತು ಸಂಬಂಧಿತ ಅಧಿಸೂಚನೆಯನ್ನು 1 ನವೆಂಬರ್ 2022 ರಂದು ಹೊರಡಿಸಲಾಯಿತು. ಎಸ್‌ಸಿ, ಎಸ್‌ಟಿ ಪ್ರಾತಿನಿಧಿಕ ಸಂಘಟನೆಗಳ ದೀರ್ಘಾವಧಿಯ ಬೇಡಿಕೆಗಳನ್ನು ಈಡೇರಿಸಲು ಈ ಸುಗ್ರೀವಾಜ್ಞೆಯನ್ನು ತರಲಾಗಿದೆ.


ಸುಗ್ರೀವಾಜ್ಞೆಯನ್ನು ಪ್ರಕಟಿಸುವ ಮೊದಲು, ಕರ್ನಾಟಕವು ಒಬಿಸಿಗಳಿಗೆ 32%, ಎಸ್‌ಸಿಗಳಿಗೆ ಶೇಕಡಾ 15 ಮತ್ತು ಎಸ್‌ಟಿಗಳಿಗೆ ಶೇಕಡಾ 3 ರಷ್ಟು ಮೀಸಲಾತಿಯನ್ನು ಒದಗಿಸುತ್ತಿತ್ತು ಇದೀಗ, ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗಳಿಗೆ ಒಟ್ಟು ಮೀಸಲಾತಿ ಶೇಕಡಾ 56 ಕ್ಕೆ ತಲುಪಿದೆ.


ಛತ್ತೀಸ್‌ಗಢ ಸರ್ಕಾರವೂ ರಾಜ್ಯದಲ್ಲಿ ಮೀಸಲಾತಿ ಅಂಕಿಅಂಶವನ್ನು ಪರಿಷ್ಕರಿಸಲು ಪ್ರಯತ್ನಿಸಿದೆ. ಒಟ್ಟು ಮೀಸಲಾತಿಯನ್ನು 76% ಕ್ಕೆ ತೆಗೆದುಕೊಳ್ಳಲು ರಾಜ್ಯ ವಿಧಾನಸಭೆಯು ಎರಡು ಮಸೂದೆಗಳನ್ನು ಸರ್ವಾನುಮತದಿಂದ ಅಂಗೀಕರಿಸಿತು.


ಈ ತಿದ್ದುಪಡಿಗಳ ಪ್ರಕಾರ ಎಸ್‌ಟಿಗಳಿಗೆ ಶೇ.32, ಎಸ್‌ಸಿಗಳಿಗೆ ಶೇ.13, ಒಬಿಸಿಗಳಿಗೆ ಶೇ.27 ಮತ್ತು ಇಡಬ್ಲ್ಯೂಎಸ್ ವಿಭಾಗಕ್ಕೆ ಶೇ.4ರಷ್ಟು ಮೀಸಲಾತಿ ಇದೆ.


58% ಹೆಚ್ಚಳಕ್ಕೆ ಕಾರಣವಾದ ಮೀಸಲಾತಿ


2021 ರ ಸೆಪ್ಟೆಂಬರ್‌ನಲ್ಲಿ ಛತ್ತೀಸ್‌ಗಢ ಹೈಕೋರ್ಟ್ ಎಸ್‌ಟಿ ಕೋಟಾವನ್ನು 20 ಪ್ರತಿಶತದಿಂದ 32 ಪ್ರತಿಶತಕ್ಕೆ ಹೆಚ್ಚಿಸುವ ಹಿಂದಿನ ರಮಣ್ ಸಿಂಗ್ ಸರಕಾರದ 2012 ರ ಆದೇಶವನ್ನು ರದ್ದುಗೊಳಿಸಿದ ನಂತರ ಈ ಮಸೂದೆಗಳು ರಾಜಕೀಯ ಬೆಂಬಲವನ್ನು ಪಡೆಯಿತು, ಹೀಗಾಗಿ ಒಟ್ಟು ಮೀಸಲಾತಿಯು 58% ಹೆಚ್ಚಳಕ್ಕೆ ಕಾರಣವಾಯಿತು.


ಛತ್ತೀಸ್‌ಗಢದ ಒಬಿಸಿಗಳು ತಮಗೆ ನೀಡಿರುವ ಮೀಸಲಾತಿ 14% ವಾಗಿದ್ದು ಇದು ತುಂಬಾ ಕಡಿಮೆ ಎಂದು ಆಪಾದಿಸಿದವು. ಭೂಪೇಶ್ ಬಘೇಲ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ವಿಧಾನಸಭೆಯಲ್ಲಿ ಎರಡು ಮಸೂದೆಗಳನ್ನು ಅಂಗೀಕರಿಸುವ ಮೂಲಕ ಈ ಎರಡು ವಿಷಯಗಳ ಬಗ್ಗೆ ಕಾಳಜಿ ವಹಿಸಿದೆ.


ಜಾರ್ಖಂಡ್ ವಿಧಾಸಭೆಯಲ್ಲಿ ಮೀಸಲಾತಿ ಹೆಚ್ಚಳ ಮಸೂದೆ


ಜಾರ್ಖಂಡ್ ವಿಧಾನಸಭೆಯು ಇತ್ತೀಚೆಗೆ ವರ್ಗಗಳಾದ್ಯಂತ ಮೀಸಲಾತಿಯನ್ನು 77 ಪ್ರತಿಶತಕ್ಕೆ ಹೆಚ್ಚಿಸುವ ಮಸೂದೆಯನ್ನು ಸರ್ವಾನುಮತದಿಂದ ಅಂಗೀಕರಿಸಿತು. ಈ ಮಸೂದೆಯ ಪ್ರಕಾರ, ಎಸ್‌ಟಿಗಳಿಗೆ ಮೀಸಲಾತಿಯು ಶೇಕಡಾ 28 ಕ್ಕೆ (ಶೇ. 26 ರಿಂದ), ಒಬಿಸಿಗಳಿಗೆ ಶೇಕಡಾ 27 ರಷ್ಟು (ಶೇ. 14 ರಿಂದ), ಶೇಕಡಾ 12 ಎಸ್‌ಸಿಗಳಿಗೆ (ಶೇ. 10 ರಿಂದ ಹೆಚ್ಚಾಗಿರುತ್ತದೆ. ), ಮತ್ತು EWS ಗೆ 10 ಶೇ ಏರಿಕೆಯಾಗಿದೆ.


ಜಾರ್ಖಂಡ್ ಸರ್ಕಾರವು ಕೇಂದ್ರ ಸರ್ಕಾರವು ನ್ಯಾಯಾಂಗ ಪರಿಶೀಲನೆಯಿಂದ ರಕ್ಷಿಸಲು ಸಂವಿಧಾನದ 9 ನೇ ಶೆಡ್ಯೂಲ್ ಅಡಿಯಲ್ಲಿ ಮಸೂದೆಯನ್ನು ತರಲು ಬಯಸುತ್ತದೆ.


ಜಾರ್ಖಂಡ್ ಗವರ್ನರ್ ರಮೇಶ್ ಬೈಸ್ ಅವರು ಕಾನೂನು ಅಭಿಪ್ರಾಯಕ್ಕಾಗಿ ಭಾರತದ ಅಟಾರ್ನಿ ಜನರಲ್ ಅವರಿಗೆ ಕಳುಹಿಸಿದ್ದರಿಂದ ಈ ಮಸೂದೆಯ ನಿರ್ಧಾರ ಇನ್ನೂ ಬಗೆಹರಿದಿಲ್ಲ.


ಮೀಸಲಾತಿ ಮಸೂದೆಗಳ ಅಂಗೀಕಾರ


ಈ ಎಲ್ಲಾ ರಾಜ್ಯಗಳಲ್ಲಿನ ಆಡಳಿತ ಪಕ್ಷಗಳು ಆಯಾ ರಾಜ್ಯಪಾಲರು ಮತ್ತು ಕೇಂದ್ರ ಸರ್ಕಾರವು ಎಸ್‌ಸಿ, ಎಸ್‌ಟಿ, ಒಬಿಸಿ ಮೀಸಲಾತಿಯನ್ನು 50% ದಷ್ಟು ಮಿತಿಯನ್ನು ಮೀರಿ ತೆಗೆದುಕೊಳ್ಳಲು ಉದ್ದೇಶಿಸಿರುವ ಮೀಸಲಾತಿ ಮಸೂದೆಗಳಿಗೆ ಅಂಗೀಕಾರವನ್ನು ಬಯಸುತ್ತವೆ.


50 ಪ್ರತಿಶತ ಮಿತಿ, ನ್ಯಾಯಾಲಯಗಳು ಮತ್ತು ಸಂವಿಧಾನ


ಸಂವಿಧಾನದಲ್ಲಿ ಮೀಸಲಾತಿಗೆ ಯಾವುದೇ ನಿರ್ದಿಷ್ಟ ಮಿತಿ ಅಥವಾ ಸಾಮರ್ಥ್ಯವಿಲ್ಲ. ಆಡಳಿತದಲ್ಲಿ ಉದ್ಯೋಗಗಳನ್ನು ಕಾಯ್ದಿರಿಸುವಾಗ ಸಂವಿಧಾನವು ಆಡಳಿತದ ದಕ್ಷತೆಯನ್ನು ಪರಿಗಣನೆಗೆ ತೆಗೆದುಕೊಳ್ಳುತ್ತದೆ.


ಅನುಚ್ಛೇದ 355 ರ ಪ್ರಕಾರ ಸೇವೆಗಳು ಮತ್ತು ಹುದ್ದೆಗಳಿಗೆ ನೇಮಕಾತಿಗಳನ್ನು ಮಾಡುವಲ್ಲಿ, ಆಡಳಿತದ ದಕ್ಷತೆಯ ನಿರ್ವಹಣೆಯೊಂದಿಗೆ ಅನುಸೂಚಿತ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ಸದಸ್ಯರ ಹಕ್ಕುಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ,


ಇದನ್ನೂ ಓದಿ: Explainer: ಭಾರತೀಯ ರೂಪಾಯಿಗೆ ಜಾಗತಿಕ ಮನ್ನಣೆ, ಹಲವು ದೇಶಗಳಿಂದ ಬಳಕೆಗೆ ಒಲವು

50% ಮಿತಿಯು ಒಂದು ರೂಢಿಯಲ್ಲಿರುವ ಅಂಗೀಕರಿಸುವ ಕಲ್ಪನೆಯಾಗಿ ಮಾರ್ಪಟ್ಟಿದೆ. EWS ಪ್ರಕರಣದಲ್ಲಿ ಈ ವರ್ಷ ಈ ಕಲ್ಪನೆಗೆ ಅಡ್ಡಿಯುಂಟಾಯಿತು. ಬಹುಮತದ ತೀರ್ಪನ್ನು ನೀಡುವಾಗ, ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಅವರು 50 ಪ್ರತಿಶತ ಕಾನೂನು ಬದಲಾಗದು ಎಂದು ತಿಳಿಸಿದ್ದಾರೆ.


ಈ ಆಧಾರದ ಮೇಲೆ, ಈ ಮಿತಿಯನ್ನು ಉಲ್ಲಂಘಿಸುವುದರಿಂದ ಯಾವುದೇ ರೀತಿಯಲ್ಲಿ ಭಾರತೀಯ ಸಂವಿಧಾನದ ಮೂಲ ರಚನೆಯನ್ನು ಉಲ್ಲಂಘಿಸುವುದಿಲ್ಲ ಎಂಬುದಾಗಿ ಆದೇಶಿಸಿದ್ದಾರೆ.


50% ಮಿತಿ ಎಂಬುದು ಈ ಹಿಂದೆ 1962 ರಲ್ಲಿ M.R. ಬಾಲಾಜಿ ಮತ್ತು ಇತರರ ವಿರುದ್ಧ ಮೈಸೂರು ರಾಜ್ಯ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ತೀರ್ಪಿನಲ್ಲಿ ಸಲಹೆಯಾಗಿ ಸೂಚಿತವಾಗಿದೆ. ಕಲಾ ವಿಭಾಗದಡಿಯಲ್ಲಿ ಮೀಸಲಾತಿಗಳು 15 (4) ಮತ್ತು 16 (4) ಸಮಂಸಜವಾದ ಮಿತಿಯೊಳಗೆ ಇರಬೇಕು ಎಂದಾಗಿದೆ. ಇದನ್ನು ವಿಷದೀಕರಿಸುವುದಾದರೆ ವಿಶೇಷ ನಿಬಂಧನೆಯು 50% ಕ್ಕಿಂತ ಕಡಿಮೆ ಇರಬೇಕು ಎಂದಾಗಿದೆ.


50 ಶೇಕಡಾ ಮಿತಿ ಮೀಸಲಾತಿಗೆ ಅನ್ವಯಿಸುವುದಿಲ್ಲ


50 ಪ್ರತಿಶತ ಮಿತಿಯು ಭಾರತದ ಸಂವಿಧಾನದ 15 (4), 15 (5) ಮತ್ತು 16 (4) ರ ಮೂಲಕ ಕಲ್ಪಿಸಲಾದ ಮೀಸಲಾತಿಗಳಿಗೆ ಮಾತ್ರ ಅನ್ವಯಿಸುತ್ತದೆ ಎಂದು ಅವರು ತಿಳಿಸಿದ್ದಾರೆ. ಈ ಷರತ್ತುಗಳು SC, ST ಮತ್ತು OBC ಮೀಸಲಾತಿಗಾಗಿ ಮಾತ್ರವಾಗಿದ್ದು ಸೂಚ್ಯವಾಗಿ ಹೇಳುವುದಾದರೆ, 50 ಶೇಕಡಾ ಮಿತಿಯು ಯಾವುದೇ ರೀತಿಯ ಮೀಸಲಾತಿಗೆ ಅನ್ವಯಿಸುವುದಿಲ್ಲ.


ಸಮಸ್ಯೆ ಮತ್ತು ಪರಿಣಾಮಗಳು


EWS ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ಬಹುಮತದ ತೀರ್ಪು SC, ST, OBC ಕೋಟಾದ ಮೇಲಿನ 50 ಪ್ರತಿಶತದ ಮಿತಿಯನ್ನು ಹೊಂದಿದೆ ಮತ್ತು ಆದ್ದರಿಂದ ಈ ಸಾಮಾಜಿಕ ಗುಂಪುಗಳಿಗೆ 50 ಪ್ರತಿಶತದ ಮಿತಿಯನ್ನು ಮೀರಿದ ಯಾವುದೇ ಕೋಟಾದ ಕುರಿತಾಗಿ ಕೇಂದ್ರ ಸರ್ಕಾರವು ಅದೇ ನಿಲುವನ್ನು ತೆಗೆದುಕೊಳ್ಳಬಹುದು.


ಮುಂದಿರುವ ಸಮಸ್ಯೆಗಳೇನು?


ಇದು ಎರಡು ಸನ್ನಿಹಿತ ಸಮಸ್ಯೆಗಳನ್ನು ಸೃಷ್ಟಿಸುತ್ತದೆ. ಒಂದು, SC-ST ಕೋಟಾವನ್ನು ಹೆಚ್ಚಿಸುವ ಕರ್ನಾಟಕ ಮೀಸಲಾತಿ ಮಸೂದೆಯು ವಿಫಲಗೊಳ್ಳುತ್ತದೆ. ಕರ್ನಾಟಕ ಬಿಜೆಪಿ ಈ ವಿಧೇಯಕದ ಮೇಲೆ ಹೆಚ್ಚು ಭರವಸೆ ಇರಿಸಿದೆ.


ಎಸ್‌ಸಿ, ಎಸ್‌ಟಿ, ಒಬಿಸಿಗಳಿಗೆ ಹೆಚ್ಚಿನ ಮೀಸಲಾತಿ ಪಡೆಯಲು ಅವಕಾಶ ನೀಡುವುದಿಲ್ಲ ಎಂದು ಬಿಜೆಪಿ ಹೇಳುವುದು ರಾಜಕೀಯವಾಗಿ ತಪ್ಪಾಗಿರಬಹುದು ಮತ್ತು ಚುನಾವಣಾ ವಿನಾಶಕಾರಿಯಾಗಿದೆ, ವಿಶೇಷವಾಗಿ ಜಾರ್ಖಂಡ್ ಮತ್ತು ಛತ್ತೀಸ್‌ಗಢದಂತಹ ರಾಜ್ಯಗಳಲ್ಲಿ ಒಬಿಸಿಗಳು ಪ್ರಸ್ತುತ ಕೇವಲ 14 ಪ್ರತಿಶತದಷ್ಟು ಮೀಸಲಾತಿಯನ್ನು ಪಡೆಯುತ್ತಿವೆ.


50 ರಷ್ಟು ಮಿತಿಯನ್ನು ಉಲ್ಲಂಘಿಸಬಹುದು ಎಂಬ ನಿಲುವನ್ನು ಕೇಂದ್ರ ಸರ್ಕಾರ ತೆಗೆದುಕೊಂಡರೆ, ಇದು ಬಿಜೆಪಿಯ ಮೇಲ್ವರ್ಗದ ಮತದಾರರನ್ನು ದೂರವಿಡಬಹುದು. ಇದು EWS ಕೋಟಾದ ಚುನಾವಣಾ ಲಾಭಗಳನ್ನು ಸಹ ರದ್ದುಗೊಳಿಸಬಹುದು.


Published by:Mahmadrafik K
First published: