• Home
  • »
  • News
  • »
  • national-international
  • »
  • Raghuram Rajan: ರಘುರಾಮ್ ರಾಜನ್ ಕಾಂಗ್ರೆಸ್ ಪಕ್ಷದ ಮುಂದಿನ ಮನಮೋಹನ್ ಸಿಂಗ್ ಆಗ್ತಾರಾ?

Raghuram Rajan: ರಘುರಾಮ್ ರಾಜನ್ ಕಾಂಗ್ರೆಸ್ ಪಕ್ಷದ ಮುಂದಿನ ಮನಮೋಹನ್ ಸಿಂಗ್ ಆಗ್ತಾರಾ?

ರಾಹುಲ್ ಗಾಂಧಿ ಮತ್ತು ರಘುರಾಮ್ ರಾಜನ್

ರಾಹುಲ್ ಗಾಂಧಿ ಮತ್ತು ರಘುರಾಮ್ ರಾಜನ್

ಪ್ರಸ್ತುತ ರಘುರಾಮ್ ರಾಜನ್ ಶಿಕಾಗೋ ವಿಶ್ವವಿದ್ಯಾನಿಲಯದ ಬೂತ್ ಸ್ಕೂಲ್ ಆಫ್ ಬ್ಯುಸಿನೆಸ್‌ನಲ್ಲಿ ಹಣಕಾಸು ಪ್ರಾಧ್ಯಾಪಕರಾಗಿದ್ದಾರೆ. 

  • Share this:

ಭಾರತೀಯ ರಿಸರ್ವ್ ಬ್ಯಾಂಕ್ ಮಾಜಿ ಗವರ್ನರ್, ಅರ್ಥಶಾಸ್ತ್ರಜ್ಞ ರಘುರಾಮ್ ರಾಜನ್ (Raghuram Rajan) ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರೊಂದಿಗೆ (Rahul Gandhi) ಭಾರತ್ ಜೋಡೋ ಯಾತ್ರೆಗೆ (Bharat Jodo Yatra) ಕೈಜೋಡಿಸಿದ್ದಾರೆ. ರಾಜನ್ ಭಾಗವಹಿಸುವಿಕೆ ತ್ವರಿತ ರಾಜಕೀಯ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿರುವುದು ನಿಜವಾಗಿದೆ. ಅಧಿಕಾರಾವಧಿಯಲ್ಲಿ ತಮ್ಮ ಮೊಂಡು ವಾಗ್ವಾದಗಳು, ಸರಹದ್ದು ಮೀರಿದ ಟೀಕೆಗಳಿಗೆ ಹೆಸರುವಾಸಿಯಾಗಿದ್ದ ರಘುರಾಮ್ ಇದೀಗ ಯಾತ್ರೆಯಲ್ಲಿ ತಮ್ಮ ಉಪಸ್ಥಿತಿಯಿಂದ ಹಲವರ ಹುಬ್ಬೇರುವಂತೆ ಮಾಡಿದ್ದಾರೆ.


ಬಿಜೆಪಿ ವಕ್ತಾರ ಅಮಿತ್ ಮಾಳವೀಯ, ರಾಜನ್ ಕಾಂಗ್ರೆಸ್ ನೇಮಕಗೊಳಿಸಿದ ವ್ಯಕ್ತಿ ಎಂದು ಟ್ವೀಟ್ ಮಾಡಿದ್ದು ಮಾಜಿ ಪ್ರಧಾನಿ ಹಾಗೂ ಆರ್‌ಬಿಐ ಗವರ್ನರ್ ಮನಮೋಹನ್ ಸಿಂಗ್‌ಗೆ ಹೋಲಿಸಿ ಮುಂದಿನ ಸಿಂಗ್ ರಾಜನ್ ಎಂದು ವ್ಯಂಗ್ಯ ಮಾಡಿದ್ದಾರೆ.  ಭಾರತದ ಆರ್ಥಿಕತೆಯ ಕುರಿತು ರಾಜನ್ ಮಾಡಿರುವ ಹೇಳಿಕೆಗಳು ಬರೇ ಅವಕಾಶದ ಸದುಪಯೋಗ ಪಡೆಯಲು ಎಂದು ಟೀಕಿಸಿದ್ದಾರೆ.


ಭಾರತ್ ಜೋಡೋ ಯಾತ್ರೆಯಲ್ಲಿ ರಾಜನ್ ಭಾಗವಹಿಸುವಿಕೆಯು ರಾಹುಲ್ ಗಾಂಧಿ ರಾಜಕೀಯ ವಿರೋಧಿಗಳ ಗಮನ ಸೆಳೆದಿದೆ. 2024 ರ ಸಂಸತ್ತಿನ ಚುನಾವಣೆಗೆ ಮುಂಚೆಯೇ ಪ್ರತಿಸ್ಪರ್ಧಿಗಳು ರಾಜನ್ ಅವರನ್ನು ಕಠಿಣ ಸ್ಪರ್ಧೆಯೊಡ್ಡುವ ಅಭ್ಯರ್ಥಿಯಾಗಿ ಕಾಣುತ್ತಿರುವುದಂತೂ ನಿಜ.


ಮುಂದಿನ ಮನಮೋಹನ್ ಸಿಂಗ್?
2008ರ ಆರ್ಥಿಕ ಬಿಕ್ಕಟ್ಟನ್ನು ಊಹಿಸಿದ ಕೀರ್ತಿಗೆ ಭಾಜನರಾಗಿರುವ ರಾಜನ್ ಮುಂದಿನ ಮನಮೋಹನ್ ಸಿಂಗ್ ಆಗಲಿದ್ದಾರೆಯೇ ಎಂಬ ಸುದ್ದಿಗಳು ಕೇಳಿಬರುತ್ತಿವೆ. ಅವರ ಮನದಲ್ಲೂ ಈ ಆಸೆ ಇದೆಯೇ ಎಂಬ ಪ್ರಶ್ನೆಗಳು ಪ್ರತಿಸ್ಪರ್ಧಿಗಳ ಮನದಲ್ಲಿ ಬೆದರಿಕೆಯನ್ನು ಹುಟ್ಟುಹಾಕುತ್ತಿವೆ.


ಭಾರತ್ ಜೋಡೋ ಯಾತ್ರೆ ಹಾಗೂ ಕಾಂಗ್ರೆಸ್ ಪಕ್ಷದಲ್ಲಿ ಅವರ ಉಪಸ್ಥಿತಿಯ ಕುರಿತು ರಾಜನ್ ಇದುವರೆಗೆ ಯಾವುದೇ ಪ್ರತಿಕ್ರಿಯೆಗಳನ್ನು ನೀಡಿಲ್ಲ ಎಂಬುದು ಇಲ್ಲಿ ಗಮನಾರ್ಹವಾದ ಸಂಗತಿಯಾಗಿದೆ. ಹಾಗಾಗಿ ಅವರು ಯಾವ ರೀತಿಯಲ್ಲಿ ದಾಳ ಉರುಳಿಸುತ್ತಾರೆ ಎಂಬುದು ಕುತೂಹಲಕಾರಿಯಾಗಿದೆ.


ಪಕ್ಷ ಹಾಗೂ ಆರ್ಥಿಕತೆಗೆ ಲಾಭ
ರಾಜನ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುವುದರಿಂದ ಪಕ್ಷ ಹಾಗೂ ಆರ್ಥಿಕತೆ ಎರಡಕ್ಕೂ ಲಾಭವಿದೆ ಎಂಬ ಅಭಿಪ್ರಾಯವಿದೆ. ದೇಶದ ಆರ್ಥಿಕ ನೆಲೆಗಟ್ಟು ಕುಸಿದಿದ್ದು ನಿರುದ್ಯೋಗ ಹೆಚ್ಚುತ್ತಿದೆ. ಈ ದಿಸೆಯಲ್ಲಿ ರಾಜನ್ ಅವರಿಂದ ಮತ್ತಷ್ಟು ಉತ್ತಮ ಕೆಲಸಗಳಾಗಬಹುದು ಎಂಬ ನಂಬಿಕೆ ಇದೆ.


ಇದನ್ನೂ ಓದಿ: Bengaluru News: ವಿಮಾನ ಟಿಕೆಟ್ ಬುಕ್ ಮಾಡುವ ಮುನ್ನ ಎಚ್ಚರ! ಶಾಕಿಂಗ್ ಘಟನೆ ಬಹಿರಂಗ


ರಾಜನ್ ಹಾಗೂ ಮನಮೋಹನ್ ಸಿಂಗ್ ಇಬ್ಬರ ತುಲನೆಯನ್ನು ಮಾಡುವುದಿದ್ದರೆ ರಾಜನ್ ಅವರು ಇನ್ನೂ ಭಾರತದ ಕೇಂದ್ರ ಸಚಿವಾಲಯದಲ್ಲಿ ತಮ್ಮ ಸ್ಥಾನವನ್ನು ಹೊಂದಿಲ್ಲ. ಈ ಅಂಶವನ್ನು ಹೊರತುಪಡಿಸಿ ಮನಮೋಹನ್ ಸಿಂಗ್ ಅವರಿಗಿಂತ ಸ್ವಲ್ಪ ಮುಂದೆ ನಿಲ್ಲುತ್ತಾರೆ ಏಕೆಂದರೆ ರಾಜನ್ ಅವರ ಸ್ಟಾರ್ ಇಮೇಜ್ ಇದಕ್ಕೆ ಕಾರಣವಾಗಿದೆ.


ರಾಜನ್ ಸ್ಟಾರ್ ಇಮೇಜ್
ಪ್ರಸ್ತುತ ರಘುರಾಮ್ ರಾಜನ್ ಶಿಕಾಗೋ ವಿಶ್ವವಿದ್ಯಾನಿಲಯದ ಬೂತ್ ಸ್ಕೂಲ್ ಆಫ್ ಬ್ಯುಸಿನೆಸ್‌ನಲ್ಲಿ ಹಣಕಾಸು ಪ್ರಾಧ್ಯಾಪಕರಾಗಿದ್ದಾರೆ.  ಸ್ಥಳೀಯ ಮಾಧ್ಯಮಗಳು ಮತ್ತು ರಾಜಕೀಯ ವಲಯಗಳಲ್ಲಿ ತಮ್ಮ ವರ್ಚಸ್ಸನ್ನು ಮುಂದುವರಿಸಿದ್ದಾರೆ.


ಬ್ಲ್ಯಾಕ್ ಮನಿ ಹಾಗೂ ನಿರುದ್ಯೋಗದ ಕುರಿತು ಅವರು ಮಾಡಿರುವ ಚರ್ಚೆಗಳಲ್ಲಿ ಯಾವುದೇ ರಾಜಕೀಯ ನಾಯಕರಿಗಿಂತ ಹೆಚ್ಚಿನ ತೂಕ ಅವರ ವಿಶ್ಲೇಷಣೆ ಹೊಂದಿದೆ ಎಂಬುದೇ ರಾಜಕೀಯ ಪರಿಣಿತರ ಮಾತಾಗಿದೆ.


ರಾಜನ್ ಪ್ರವೇಶ ಕಾಂಗ್ರೆಸ್​ಗೆ ಸ್ಥಿರತೆಯನ್ನೊದಗಿಸಲಿದೆ ಹೇಗೆ?
2004 ಹಾಗೂ 2009 ರಲ್ಲಿ ಮನಮೋಹನ್ ಸಿಂಗ್ ಕಾಂಗ್ರೆಸ್ ಪ್ರಧಾನಮಂತ್ರಿಯಾಗಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದರು ಈ ಸಮಯದಲ್ಲಿ ಅವರಿಗೆ ಹೊಗಳಿಕೆ ಟೀಕೆ ಎರಡೂ ದೊರೆತಿದ್ದವು ಒಂದು ದಶಕದ ಅಧಿಕಾರಾವಧಿಯಲ್ಲಿ ಪಕ್ಷಕ್ಕೆ ಹೆಚ್ಚು ಅಗತ್ಯವಾದ ಸ್ಥಿರತೆಯನ್ನು ಸಿಂಗ್ ಒದಗಿಸಿದ್ದರು. ಇದೀಗ ರಾಜನ್ ಅವರ ಪ್ರವೇಶವು ಪಕ್ಷಕ್ಕೆ ಹಿಂದಿನ ಸಾಮರ್ಥ್ಯವನ್ನು ಒದಗಿಸುವುದಲ್ಲದೆ ಅದರ ವರ್ಚಸ್ಸನ್ನು ಪುನಃ ಪಡೆದುಕೊಳ್ಳುವಲ್ಲಿ ಸಹಕಾರಿಯಾಗಬಹುದು.


ಇದನ್ನೂ ಓದಿ: Elon Musk: 'ವಿಶ್ವ ಕುಬೇರನ' ಪಟ್ಟ ಕೈ ಜಾರುತ್ತಿದ್ದಂತೆಯೇ ಕೊಟ್ಟ ಮಾತು ತಪ್ಪಿದ್ರಾ ಮಸ್ಕ್? ಎಲಾನ್​ಜೆಟ್​ಗೆ ಶಾಕ್!


ಕಾಂಗ್ರೆಸ್ ಪಕ್ಷವು ಹೇಳಿಕೊಳ್ಳುವಂತಹ ಪ್ರಬಲ ರಾಷ್ಟ್ರ ನಾಯಕರನ್ನು ಹೊಂದಿಲ್ಲ ಹಾಗೂ 2024 ರ ಚುನಾವಣೆಗೆ ಮುಂಚಿತವಾಗಿ ಪಕ್ಷದಲ್ಲಿ ಪ್ರಭಾವ ಬೀರುವ ವ್ಯಕ್ತಿಗಳಿಲ್ಲ. ಈ ಸಮಯದಲ್ಲಿ ರಾಜನ್ ಆಗಮನ ಇದೆಲ್ಲದಕ್ಕೂ ತಕ್ಕ ಉತ್ತರವಾಗಬಹುದೇನೋ ಎಂಬ ನಿರೀಕ್ಷೆ ಹುಟ್ಟಿಕೊಂಡಿದೆ.

Published by:ಗುರುಗಣೇಶ ಡಬ್ಗುಳಿ
First published: