ನಿಮಗೆ ಬೇಕಾದಾಗ ರಾಷ್ಟ್ರಪತಿ ಆಳ್ವಿಕೆ ಹೇರಲು ರಾಮನಾಥ್​​ ಕೋವಿಂದ್​ ನಿಮ್ಮ ಜೇಬಿನಲ್ಲಿದ್ದಾರೆಯೇ?: ಬಿಜೆಪಿಗೆ ಶಿವಸೇನೆ ಪ್ರಶ್ನೆ

ಬಿಜೆಪಿ ನಾಯಕರು ಹೀಗೆ ಹೇಳಿಕೆ ನೀಡಿದ ಬೆನ್ನಲ್ಲೇ ಶಿವಸೇನೆ ಸಂಸದ ಸಂಜಯ್​​ ರಾವತ್​ ಪ್ರತಿಕ್ರಿಯಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯಾಗದೆ ಹೋದರೆ ರಾಷ್ಟ್ರಪತಿ ಆಳ್ವಿಕೆ ಹೇರಬೇಕಾಗಬಹುದು ಎಂದು ಬಿಜೆಪಿ ನಾಯಕರು ಬೆದರಿಕೆ ಹಾಕುತ್ತಿದ್ದಾರೆ ಎಂದಿದ್ದಾರೆ.

news18-kannada
Updated:November 2, 2019, 6:41 PM IST
ನಿಮಗೆ ಬೇಕಾದಾಗ ರಾಷ್ಟ್ರಪತಿ ಆಳ್ವಿಕೆ ಹೇರಲು ರಾಮನಾಥ್​​ ಕೋವಿಂದ್​ ನಿಮ್ಮ ಜೇಬಿನಲ್ಲಿದ್ದಾರೆಯೇ?: ಬಿಜೆಪಿಗೆ ಶಿವಸೇನೆ ಪ್ರಶ್ನೆ
ಶಿವಸೇನಾ ಪಕ್ಷದ ಅಧ್ಯಕ್ಷ ಉದ್ಧವ್ ಠಾಕ್ರೆ
  • Share this:
ಮುಂಬೈ(ನ.02): ಮುಂದಿನ ಐದು ದಿನಗಳಲ್ಲಿ ಸರ್ಕಾರ ರಚನೆ ಮಾಡದಿದ್ದರೆ ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತ ಹೇರುತ್ತೇವೆ ಎಂದ ಬಿಜೆಪಿ ನಾಯಕರಿಗೆ ಶಿವಸೇನೆ ತಿರುಗೇಟು ನೀಡಿದೆ. "ನಿಮಗೆ ಬೇಕಾದಾಗ ರಾಷ್ಟ್ರಪತಿ ಆಳ್ವಿಕೆ ಹೇರಲು ರಾಮನಾಥ್​​ ಕೋವಿಂದ್ ಅವರೇನು ನಿಮ್ಮ ಜೇಬಿನಲ್ಲಿದ್ದಾರೆಯೇ? ಎಂದು ಶಿವಸೇನೆ ಬಿಜೆಪಿಗೆ ತಪಾರಕಿ ಬಾರಿಸಿದ್ದಾರೆ.

ಶುಕ್ರವಾರ(ನಿನ್ನೆ) ಮಹಾರಾಷ್ಟ್ರದಲ್ಲಿ ನ.7ರೊಳಗೆ ಹೊಸ ಸರ್ಕಾರ ಜಾರಿಗೆ ಬರದೇ ಹೋದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕಾಗಬಹುದು ಎಂದು ಬಿಜೆಪಿ ನಾಯಕ ಸುಧೀರ್‌ ಮುನಗಂತಿವಾರ್‌ ಹೇಳಿಕೆ ನೀಡಿದ್ದರು. ಈ ಹೇಳಿಕೆ ಮೂಲಕ ಸುಧೀರ್​​​​ ಮುನಗಂತಿವಾರ್​​​ ಶಿವಸೇನೆ ಕೆಗಂಣ್ಣಿಗೆ ಗುರಿಯಾಗಿದ್ದಾರೆ.

ಬಿಜೆಪಿ ನಾಯಕರು ಹೀಗೆ ಹೇಳಿಕೆ ನೀಡಿದ ಬೆನ್ನಲ್ಲೇ ಶಿವಸೇನೆ ಸಂಸದ ಸಂಜಯ್​​ ರಾವತ್​ ಪ್ರತಿಕ್ರಿಯಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯಾಗದೆ ಹೋದರೆ ರಾಷ್ಟ್ರಪತಿ ಆಳ್ವಿಕೆ ಹೇರಬೇಕಾಗಬಹುದು ಎಂದು ಬಿಜೆಪಿ ನಾಯಕರು ಬೆದರಿಕೆ ಹಾಕುತ್ತಿದ್ದಾರೆ. ಸುಧೀರ್​​​​ ಮುನಗಂತಿವಾರ್ ಹೇಳಿಕೆ ಬೆದರಿಕೆಯೊಡ್ಡುವ ತಂತ್ರ. ಇದು ಪ್ರಜಾಫ್ರಭುತ್ವಕ್ಕೆ ಧಕ್ಕೆ ತರುವಂತ ಹೇಳಿಕೆ. ಇವರಿಗೆ ಬೇಕಾದಾಗ ರಾಷ್ಟ್ರಪತಿ ಆಳ್ವಿಕೆ ಹೇರಲು ರಾಮನಾಥ್​​ ಕೋವಿಂದ್​​ ಅವರೇನು ಬಿಜೆಪಿಯವರ ಜೇಬಿನಲ್ಲಿದ್ದಾರೆಯೇ? ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ದೆಹಲಿ ಕೋರ್ಟ್​ ಆವರಣದಲ್ಲೇ ಪೊಲೀಸ್​​​-ವಕೀಲರ ನಡುವೆ ಘರ್ಷಣೆ: ಓರ್ವ ಲಾಯರ್​​ಗೆ​ ತೀವ್ರ ಗಾಯ

ಮಹಾರಾಷ್ಟ್ರದಲ್ಲಿ ಸುಲಭವಾಗಿ ಸರ್ಕಾರ ರಚಿಸಬಹುದು ಎಂಬ ಬಿಜೆಪಿ ನಿರೀಕ್ಷೆ ಸುಳ್ಳಾಗಿದೆ. ಇತ್ತ 50:50 ಸೂತ್ರಕ್ಕೆ ಒಪ್ಪಿಗೆ ಸೂಚಿಸಿದರೆ ಮಾತ್ರ ಸರ್ಕಾರ ರಚನೆ ಮಾಡಲು ಬೆಂಬಲ ನೀಡುವುದಾಗಿ ಶಿವಸೇನೆ ಹೊಸ ದಾಳ ಉರುಳಿಸಿದೆ. ಈ ಸೂತ್ರದ ಪ್ರಕಾರ 5 ವರ್ಷಗಳ ಆಡಳಿತಾವಧಿಯಲ್ಲಿ ಬಿಜೆಪಿ-ಶಿವಸೇನೆ ಸಮ್ಮಿಶ್ರ ಸರ್ಕಾರ ಇಬ್ಬರು ಉಖ್ಯಮಂತ್ರಿಗಳನ್ನು ಮಾಡಬೇಕಾಗುತ್ತದೆ. ಅಂತೆಯೇ ಎರಡೂವರೆ ವರ್ಷ ಶಿವಸೇನೆ ಅಭ್ಯರ್ಥಿ ಸಿಎಂ ಆದರೆ, ಇನ್ನುಳಿದ ಅವಧಿಗೆ ಬಿಜೆಪಿ ಅಭ್ಯರ್ಥಿ ಮುಖ್ಯಮಂತ್ರಿ ಆಗಬಹುದಾಗಿದೆ.

ಆರಂಭದಿಂದಲೂ ಸಿಎಂ ಹುದ್ದೆ ಮೇಲೆ ಹದ್ದಿನ ಕಣ್ಣಿಟ್ಟಿದ್ದ ಶಿವಸೇನೆಯೀಗ, ಇಂತಹ ಬೇಡಿಕೆಯಿಟ್ಟಿದೆ. ಶಿವಸೇನಯಿಂದ ಆದಿತ್ಯ ಠಾಕ್ರೆ ಸಿಎಂ ಸ್ಥಾನಕ್ಕೆ ಯತ್ನಿಸುತ್ತಿದ್ದರೆ, ಅತ್ತ ಬಿಜೆಪಿಯಿಂದಹಾಲಿ ಸಿಎಂ ದೇವೇಂದ್ರ ಫಡ್ನವಿಸ್ ಮತ್ತೆ ತಮ್ಮ ಸ್ಥಾನದಲ್ಲೇ ಮುಂದುವರೆಯಲು ಸಜ್ಜಾಗಿದ್ದಾರೆ. ಆದರೀಗ ಶಿವಸೇನೆ ಆಗ್ರಹದಿಂದ ಬಿಜೆಪಿಗೆ ಸರ್ಕಾರ ರಚಿಸುವುದು ಕಷ್ಟವಾಗಿದೆ.

ಇದನ್ನೂ ಓದಿ: ಅವಕಾಶ ಸಿಕ್ಕರೆ ಉದ್ಧವ್ ಠಾಕ್ರೆ ಸಿಎಂ ಆಗಲಿ, ಆದಿತ್ಯ ಯಾಕೆ? ಅನುಭವವೇ ಇಲ್ಲದವರು ಸಿಎಂ ಆದರೆ ರಾಜ್ಯದ ಗತಿ ಏನು?: ಅಥಾವಳೆ ಆತಂಕಈ ಮಧ್ಯೆ ಚುನಾವಣಾಪೂರ್ವ ಮೈತ್ರಿ ಮಾಡಿಕೊಂಡಾಗ 2.5 ವರ್ಷ ಸಿಎಂ ಹುದ್ದೆ ನೀಡುತ್ತೇವೆಂದು ಶಿವಸೇನೆಗೆ ಮಾತು ಕೊಟ್ಟಿರಲಿಲ್ಲ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್​ ಹೇಳಿದ್ದಾರೆ. ಅಲ್ಲದೇ ಶಿವಸೇನೆ ದೇವೇಂದ್ರ ಫಡ್ನವೀಸ್​ ಹೇಳಿಕೆ ತಿರುಗೇಟು ನೀಡಿದೆ. ಲೋಕಸಭಾ ಚುನಾವಣೆಗೆ ಮುನ್ನ 50:50 ಸೂತ್ರ ಅನುಸರಿಸೋಣ ಎಂದು ಖುದ್ದು ಸಿಎಂ ಫಡ್ನವೀಸ್ ಮಾತು ಕೊಟ್ಟಿದ್ದರು ಎಂದು ಶಿವಸೇನೆ ಮುಖ್ಯಸ್ಥ ಉದ್ಧವ್​​ ಠಾಕ್ರೆ ತಪರಾಕಿ ಬಾರಿಸಿದ್ದಾರೆ.
------------
First published:November 2, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ