Monkeypox: ಮನುಷ್ಯರಿಂದ ಪ್ರಾಣಿಗಳಿಗೆ ಹರಡುತ್ತಿದ್ಯಾ ಮಂಕಿಪಾಕ್ಸ್‌ ರೋಗ? ಇದರ ಲಕ್ಷಣಗಳೇನು?

ಮಂಕಿಪಾಕ್ಸ್ ವೈರಸ್ ಸೋಂಕು ವಿಶ್ವಾದ್ಯಂತ ಹಲವು ದೇಶಗಳಲ್ಲಿ ಹರಡುತ್ತಿದೆ. ಇಷ್ಟು ದಿನ ಮನುಷ್ಯರಿಗೆ ಹರಡುತ್ತಿದ್ದ ಈ ಮಂಕಿಪಾಕ್ಸ್‌ ರೋಗ, ಈಗ ಪ್ರಾಣಿಗಳಲ್ಲಿಯೂ ಕಾಣಿಸಿಕೊಳ್ಳುತ್ತಿರುವುದು ಆತಂಕದ ವಿಷಯ ಆಗಿದೆ. ನಾಯಿಗಳಿಗೆ ಮಂಕಿಪಾಕ್ಸ್‌ ರೋಗ ಇರುವುದು ಇದೀಗ ಪತ್ತೆ ಆಗಿರುವುದು ಬೆಳಕಿಗೆ ಬಂದಿದೆ. 

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಕೋವಿಡ್-19 ರೋಗದ ದಾಳಿಯ ಹೊಡೆತದಿಂದ ಇನ್ನೂ ಚೇತರಿಸಿಕೊಳ್ಳದ ಮನುಕುಲಕ್ಕೆ ಈಗ ಮಂಕಿಪಾಕ್ಸ್ (Monkypox) ಎಂಬ ಮತ್ತೊಂದು ಕಾಯಿಲೆ ಗಾಬರಿ ಹುಟ್ಟಿಸುತ್ತಿದೆ. ಮಂಕಿಪಾಕ್ಸ್ ವೈರಸ್ ಸೋಂಕು ವಿಶ್ವಾದ್ಯಂತ ಹಲವು ದೇಶಗಳಲ್ಲಿ ಹರಡುತ್ತಿದೆ. ಇಷ್ಟು ದಿನ ಮನುಷ್ಯರಿಗೆ ಹರಡುತ್ತಿದ್ದ ಈ ಮಂಕಿಪಾಕ್ಸ್‌ ರೋಗ, ಈಗ ಪ್ರಾಣಿಗಳಲ್ಲಿಯೂ (Animals) ಕಾಣಿಸಿಕೊಳ್ಳುತ್ತಿರುವುದು ಆತಂಕದ ವಿಷಯ ಆಗಿದೆ. ನಾಯಿಗಳಿಗೆ (Dogs) ಮಂಕಿಪಾಕ್ಸ್‌ ರೋಗ ಇರುವುದು ಇದೀಗ ಪತ್ತೆ ಆಗಿರುವುದು ಬೆಳಕಿಗೆ ಬಂದಿದೆ. ಪ್ರಾಣಿಗಳಿಗೆ ಅದರಲ್ಲೂ ನಾಯಿಗೆ ಮಂಕಿಪಾಕ್ಸ್‌ ರೋಗ ದೃಡಪಟ್ಟಿರುವುದು ಫ್ರೆಂಚ್‌ ದೇಶದಲ್ಲಿ (French country).  ಈ ಬಗ್ಗೆ ಫ್ರೆಂಚ್ ಸಂಶೋಧಕರು ದೃಡಪಡಿಸಿದ್ದು ಮಂಕಿಪಾಕ್ಸ್ ವೈರಸ್ ಸೋಂಕನ್ನು ಹೊಂದಿರುವ ನಾಯಿಯ ಮೊದಲ ಪ್ರಕರಣವನ್ನು (Case) ದಾಖಲಿಸಿದ್ದಾರೆ. 

ಈ ಮೊದಲ ಪ್ರಕರಣ ದಾಖಲಾಗಿದ್ದು ಎಲ್ಲಿ?
ಪ್ಯಾರಿಸ್‌ನ ಸೊರ್ಬೊನ್ ವಿಶ್ವವಿದ್ಯಾಲಯದ ತಂಡವು ಮಂಕಿಪಾಕ್ಸ್‌ ವೈರಸ್ ಪ್ರಕರಣವನ್ನು ದಾಖಲಿಸಿದೆ. ಈ ಫ್ರೆಂಚ್‌ ನಗರದಲ್ಲಿ ವಾಸವಾಗಿರುವ ಇಬ್ಬರು ಪುರುಷರ ಪೈಕಿ ಎಚ್‌ಐವಿ-ಪಾಸಿಟಿವ್ ಹೊಂದಿರುವ 44 ವರ್ಷ ವಯಸ್ಸಿನ ಲ್ಯಾಟಿನೋ ಎಂಬ ವ್ಯಕ್ತಿ ಅನೇಕ ರೋಗಗಳನ್ನು ಹೊಂದಿದ್ದಾರೆ. ಇವರ ಜೊತೆ ಸಂಭೋಗ ನಡೆಸಿರುವ 27 ವರ್ಷ ವಯಸ್ಸಿನ ಹೆಚ್‌ಐವಿ-ನೆಗೆಟಿವ್‌ ಇರುವ ಮತ್ತೊಬ್ಬ ವ್ಯಕ್ತಿಯಾಗಿದ್ದಾನೆ. ಇವರಿಬ್ಬರು ಸಂಭೋಗ ನಡೆಸಿದ ಹನ್ನೆರಡು ದಿನಗಳ ನಂತರ ಇವರಲ್ಲಿ ಮಂಕಿಪಾಕ್ಸ್ ರೋಗಲಕ್ಷಣಗಳು ಕಂಡುಬಂದಿದ್ದು, ಆ ಬಗ್ಗೆ ರೋಗ ಪರೀಕ್ಷೆ ಮಾಡಿಸಿದಾಗ ಪಾಸಿಟಿವ್‌ ಆಗಿರುವುದು ದೃಡ ಪಟ್ಟಿದೆ. ಇವರಿಬ್ಬರೂ ಒಂದೇ ಮನೆಯಲ್ಲಿ ವಾಸಿಸುತ್ತಿದ್ದು ಈ ಇಬ್ಬರೂ ಪುರುಷರಿಗೆ ಅವರು ನಡೆಸಿದ ಲೈಂಗಿಕತೆಯ 6 ದಿನಗಳ ನಂತರ ಗುದದ ಚರ್ಮದಲ್ಲಿ ಹುಣ್ಣು ಕಾಣಿಸಿಕೊಂಡಿದೆ.

ಇದನ್ನೂ ಓದಿ:  Viral Photos: ಕಾಡಿನ ರಾಜನ ಪರಿಸ್ಥಿತಿ ಹೇಗಿದೆ ನೋಡಿ, ಈ ಸಿಂಹಗಳ ಸ್ಥಿತಿ ನೋಡಿದ್ರೆ ಅಯ್ಯೋ ಅನಿಸುತ್ತೆ!

ಈ ಲ್ಯಾಟಿನ್‌ ವ್ಯಕ್ತಿಯಲ್ಲಿ ಗುದ ಚರ್ಮದ ಹುಣ್ಣು ಅಷ್ಟೆ ಅಲ್ಲದೇ, ಅದರ ನಂತರ ಮುಖ, ಕಿವಿ ಮತ್ತು ಕಾಲುಗಳ ಮೇಲೆ ದದ್ದುಗಳು ಕಾಣಿಸಿಕೊಂಡವು. ಆದರೆ ಇನ್ನೊಬ್ಬ ವ್ಯಕ್ತಿಗೆ ಕಾಲುಗಳು ಮತ್ತು ಬೆನ್ನಿನ ಮೇಲೆ ದದ್ದುಗಳು ಕಾಣಿಸಿಕೊಂಡಿವೆ. ಈ ಇಬ್ಬರ ಪ್ರಕರಣ ಗಮನಿಸಿದರೆ, ಇಬ್ಬರಿಗೂ ದೇಹದಲ್ಲಿ ಸುಸ್ತು ಮತ್ತು ತುರಿಕೆ, ತಲೆನೋವು ಮತ್ತು 4 ದಿನಗಳ ನಂತರ ಈ ಲಕ್ಷಣಗಳು ಜ್ವರಕ್ಕೆ ತಿರುಗಿವೆ. ಈ ಇಬ್ಬರೂ ಪುರುಷರೊಂದಿಗೆ ಸಂಪರ್ಕದಲ್ಲಿದ್ದ ನಾಯಿಗೂ ಚರ್ಮ ಮತ್ತು ಲೋಳೆಯ ಪೊರೆಗಳ ಮೂಲಕ ಗಾಯಗಳು ಕಾಣಿಸಿಕೊಂಡಿವೆ. ಇದರಲ್ಲಿ ಕೆಂಪು, ಉಬ್ಬಿದ ಹೊಟ್ಟೆ ಮತ್ತು ಹೊಟ್ಟೆಯ ಮೇಲೆ ಬಿಳಿ ಕೀವು ಮತ್ತು ಗುದದ ಚರ್ಮದ ಹುಣ್ಣು ಕಾಣಿಸಿಕೊಂಡಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಸಂಶೋಧನಾ ತಂಡ ಏನ್‌ ಹೇಳ್ತಿದೆ?
ಈ ಪ್ರಕರಣ ದಾಖಲಾದ ನಂತರ ಫ್ರೆಂಚ್‌ ಸಂಶೋಧಕರ ತಂಡವು, ನಾಯಿ ಮತ್ತು ಲ್ಯಾಟಿನೋ ಮನುಷ್ಯನ ಮಂಕಿಪಾಕ್ಸ್ ವೈರಸ್ ಡಿಎನ್‌ಎಯನ್ನು ಪರಿಶೀಲಿಸಿದೆ. ಅದರ ಫಲಿತಾಂಶದಲ್ಲಿ ಎರಡೂ ಮಾದರಿಗಳಲ್ಲಿ ಎಚ್‌ಎಂಪಿಎಕ್ಸ್‌ವಿ-1 ಕ್ಲಾಡ್, ವಂಶಾವಳಿ ಬಿ.1 ನ ವೈರಸ್ ಇದೆ ಎಂದು ಕಂಡು ಬಂದಿದೆ. ಈ ಮಂಕಿಪಾಕ್ಸ್‌ ಜಗತ್ತಿನಾದ್ಯಂತ ಎಪ್ರಿಲ್‌ ತಿಂಗಳಿನಿಂದ ಕಾಣಿಸಿಕೊಂಡಿದೆ.

ಈ ಫ್ರೆಂಚ್‌ ಸಂಶೋಧನಾ ತಂಡವು "ನಮ್ಮ ಜ್ಞಾನದ ಪ್ರಕಾರ, ರೋಗಿಗಳಲ್ಲಿ ರೋಗಲಕ್ಷಣದ ಪ್ರಾರಂಭದ ಚಲನಶಾಸ್ತ್ರ ಮತ್ತು ನಂತರ ಅವರ ನಾಯಿಯಲ್ಲಿ ಮಂಕಿಪಾಕ್ಸ್ ವೈರಸ್ ಮಾನವನಿಂದ ನಾಯಿಗೆ ಹರಡಿದೆ ಎಂದು ಸೂಚಿಸುತ್ತದೆ" ಎಂದು ಪತ್ರಿಕೆಯಲ್ಲಿ ಬರೆದಿದೆ. “ನಾಯಿಯ ಚರ್ಮ ಮತ್ತು ಲೋಳೆಪೊರೆಯ ಗಾಯಗಳು ಮತ್ತು ಗುದ ಮತ್ತು ಮೌಖಿಕ ಚಲನೆಗಳಿಂದ ಪಾಸಿಟಿವ್‌ ಮಂಕಿಪಾಕ್ಸ್ ವೈರಸ್ ಪಿಸಿಆರ್ ಫಲಿತಾಂಶಗಳನ್ನು ಗಮನಿಸಿದರೆ, ಇದು ಮಂಕಿಪಾಕ್ಸ್‌ ರೋಗವೆಂದು ಹೇಳಬಹುದು. ಇದು ಮನುಷ್ಯರೊಂದಿಗಿನ ನಿಕಟ ಸಂಪರ್ಕದಿಂದ ಅಥವಾ ವಾಯುಗಾಮಿ ಪ್ರಸರಣದಿಂದ ಈ ವೈರಸ್‌ ಪ್ರಾಣಿಗಳಿಗೆ ಹರಡುತ್ತದೆ “ ಎಂದು ಮಾಹಿತಿಯನ್ನು ವರದಿಯಲ್ಲಿ ಸೇರಿಸಲಾಗಿದೆ.

ಇದನ್ನೂ ಓದಿ: Langya HenipaVirus: ಏನಿದು ಚೀನಾದಲ್ಲಿ ಪತ್ತೆಯಾದ ಹೊಸ ವೈರಸ್? ಮನುಕುಲಕ್ಕೆ ವಿನಾಶಕಾರಿಯೇ 'ಲಾಂಗ್ಯಾ'?

ಅದರ ಜೊತೆಗೆ ಹುಲ್ಲುಗಾವಲು ನಾಯಿಗಳಲ್ಲಿ ಮಂಕಿಪಾಕ್ಸ್ ವೈರಸ್ ಹರಡುವುದನ್ನು US ನಲ್ಲಿ ವಿವರಿಸಲಾಗಿದೆ. ಆದರೆ ಸಾಕುಪ್ರಾಣಿಗಳಾದ ನಾಯಿಗಳು ಮತ್ತು ಬೆಕ್ಕುಗಳಲ್ಲಿ ಸೋಂಕು ಹಿಂದೆಂದೂ ವರದಿಯಾಗಿಲ್ಲ ಎಂದು ಸಂಶೋಧಕರು ಹೇಳಿದ್ದಾರೆ. ಆದರೆ ಈಗ ಈ ಪ್ರಕರಣದಿಂದಾಗಿ ಸೋಂಕಿತ ರೋಗಿಗಳಿಂದ ಸಾಕು ಪ್ರಾಣಿಗಳನ್ನು ದೂರವಿಡುವ ಅಗತ್ಯವನ್ನು ಇದು ಸೂಚಿಸುತ್ತದೆ ಎನ್ನಬಹುದಾಗಿದೆ.
Published by:Ashwini Prabhu
First published: