ಪ್ರಧಾನಿ ಮೋದಿ ನಿಜಕ್ಕೂ ಆರ್ಥಿಕ ಸುಧಾರಕರೇ?; ಈ ಪ್ರಶ್ನೆಗೆ ಇಲ್ಲಿದೆ ಉತ್ತರ

ಆದರೆ, ಮೋದಿ ಆಡಳಿತಕ್ಕೆ ಬಂದ ಐದೇ ವರ್ಷಗಳಲ್ಲಿ, ಜಿಎಸ್​ಟಿ ಜಾರಿಗೆ ತಂದರು. ಪಾರದರ್ಶಕ ಆಡಳಿತಕ್ಕೆ ಆದ್ಯತೆ ನೀಡಿದರು. ಹಲವು ವಿದೇಶ ವ್ಯಾಪಾರ ಸುಧಾರಣೆ ಮಾಡಿದ್ದಾರೆ. ಈ ವಿಚಾರ ಟೀಕಾಕಾರಿಗೂ ಅರಿವಾಗಿದೆ.

news18-kannada
Updated:June 9, 2020, 10:12 AM IST
ಪ್ರಧಾನಿ ಮೋದಿ ನಿಜಕ್ಕೂ ಆರ್ಥಿಕ ಸುಧಾರಕರೇ?; ಈ ಪ್ರಶ್ನೆಗೆ ಇಲ್ಲಿದೆ ಉತ್ತರ
ಪ್ರಧಾನಿ ನರೇಂದ್ರ ಮೋದಿ.
  • Share this:
ನರೇಂದ್ರ ಮೋದಿ ಆರ್ಥಿಕ ಸುಧಾರಕರೇ? ಭಾರತದ ಆರ್ಥಿಕ ಸುಧಾರಕರ ಸಾಲಿನಲ್ಲಿ ಮೋದಿಗೆಷ್ಟನೇ ಸ್ಥಾನ? ಈ ರೀತಿಯ ಪ್ರಶ್ನೆಗಳು ಆಗಾಗ ಏಳುತ್ತಲೇ ಇರುತ್ತವೆ. ಇದಕ್ಕೆ ಕಾರಣವೂ ಇದೆ. ನರೇಂದ್ರ ಮೋದಿ 6 ವರ್ಷ ಅಧಿಕಾರ ಪೂರೈಸಿದ್ದಾರೆ. ಟೀಕಾಕಾರರಿಗೆ ಮೋದಿ ವಿರದ್ಧ ಧ್ವನಿ ಎತ್ತಲು ಯಾವುದೇ ವಿಚಾರವೂ ಸಿಗುತ್ತಿಲ್ಲ. ಮೋದಿ ಸರ್ಕಾರ ಸಂಪೂರ್ಣ ಭ್ರಷ್ಟ ಮುಕ್ತವಾಗಿದೆ. ಕುಟುಂಬ ರಾಜಕಾರಣ ಮಾಡಿದ ಉದಾಹರಣೆ ಇಲ್ಲ. ಹೀಗಿದ್ದರೂ ಮೋದಿ ಸುಧಾರಣಕಾರರೇ ಎನ್ನುವ ಪ್ರಶ್ನೆ ಎಳುತ್ತಲೇ ಇರುತ್ತದೆ. ಅದಕ್ಕೆ ಇಲ್ಲಿದೆ ಉತ್ತರ.

ಮೊದಲ ಐದು ವರ್ಷ ಪೂರೈಸಿದ ನಂತರ ಮೋದಿ ಯಾವುದೆ ಬದಲಾವಣೆ ಮಾಡಿಲ್ಲ ಎನ್ನುವ ಆರೋಪಕ್ಕೆ ಸೂಕ್ತ ಸಾಕ್ಷ್ಯಗಳು ಸಿಗುವುದಿಲ್ಲ.  ಮನಮೋಹನ್​ ಸಿಂಗ್​ ಪ್ರಧಾನಿಯಾಗಿದ್ದ 10 ವರ್ಷಗಳಲ್ಲಿ ಯಾವುದೇ ಹಣಕಾಸು ವಲಯದಲ್ಲಿ ದೊಡ್ಡ ಮಟ್ಟದ ಸುಧಾರಣೆ ಆಗಿರಲಿಲ್ಲ ಎನ್ನುತ್ತಾರೆ ಆರ್ಥಿಕ ತಜ್ಞರು. ಈ ಬಗ್ಗೆ ಸಾಕಷ್ಟು ವರದಿಗಳು ಕೂಡ ಪ್ರಕಟಗೊಂಡಿವೆ.

ಆದರೆ, ಮೋದಿ ಆಡಳಿತಕ್ಕೆ ಬಂದ ಐದೇ ವರ್ಷಗಳಲ್ಲಿ, ಜಿಎಸ್​ಟಿ ಜಾರಿಗೆ ತಂದರು. ಪಾರದರ್ಶಕ ಆಡಳಿತಕ್ಕೆ ಆದ್ಯತೆ ನೀಡಿದರು. ಹಲವು ವಿದೇಶ ವ್ಯಾಪಾರ ಸುಧಾರಣೆ ಮಾಡಿದ್ದಾರೆ. ಈ ವಿಚಾರ ಟೀಕಾಕಾರಿಗೂ ಅರಿವಾಗಿದೆ.

ಹೀಗಾಗಿ, ಸುಧಾರಣೆಗಳು ಎಲ್ಲಿ ಆಗುತ್ತಿವೆ ಎನ್ನುವ ಪ್ರಶ್ನೆ ಬಹಳ ದಿನ ಕಾಲ ನಿಲ್ಲದು ಎನ್ನುವ ವಿಚಾರ ಟೀಕಾಕಾರಿಗೂ  ಗೊತ್ತಾಗಿದೆ. ಹೀಗಾಗಿ,  ದೊಡ್ಡ ದೊಡ್ಡ ಸುಧಾರಣೆಗಳೆಲ್ಲಿ ಎನ್ನುವ ಪ್ರಶ್ನೆಯನ್ನು ಈಗ ಮೋದಿ ಮುಂದೆ ಇಡುತಿದ್ದಾರೆ. ಮೋದಿ ಅವರ ಆತ್ಮ ನಿರ್ಭರ ಭಾರತ ಭಾಷಣದ ನಂತರದಲ್ಲಿ ಅನೇಕ ಟೀಕಾಕಾಕಾರರು ತೆಪ್ಪಗಾಗಿದ್ದಾರೆ. ಮೋದಿ ಘೋಷಣೆ ಮಾಡಿದ ಪ್ಯಾಕೇಜ್​ ನೋಡಿ ಎಲ್ಲರೂ ಅಚ್ಚರಿ ಹೊರ ಹಾಕಿದ್ದಾರೆ.

ನರೇಂದ್ರ ಮೋದಿ ಅವರು ಆಡಳಿತಕ್ಕೆ ಬಂದ ನಂತರ ಕೃಷಿ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆ ಮಾಡಿದ್ದಾರೆ. ಈ ಮೊದಲಿನಿಂದಲೂ ರೈತ ದೇಶದ ಬೆನ್ನೆಲುಬುದು ಎಂದು ಹೇಳಲಾಗುತ್ತಿತ್ತೇ ವಿನಃ ಅವರಿಗೆ ಸರ್ಕಾರದಿಂದ ಸೂಕ್ತ ನೆರವು ಸಿಗುತ್ತಿರಲಿಲ್ಲ. ಹೀಗಾಗಿ, ಮೋದಿ ನೇತೃತ್ವದ ಕೇಂದ್ರ ಸರ್ಕಾರ ರೈತರ ನೆರವಿಗೆ ಧಾವಿಸಿತ್ತು.

ಮೋದಿ ಮಾಡಿದ ದೊಡ್ಡ ದೊಡ್ಡ ಸುಧಾರಣೆ ಟೀಕಾಕಾರರ ಕಣ್ಣು ತೆರೆದಿದೆ. ಹೀಗಾಗಿ, ಮೋದಿ ಉತ್ತಮ ಐಡಿಯಾಗಳನ್ನು ಹೊಂದಿದ್ದಾರೆ. ಆದರೆ, ಅದನ್ನು ಸರಿಯಾಗಿ ಜಾರಿ ಮಾಡುವಲ್ಲಿ ವಿಫಲವಾಗುತ್ತಿದ್ದಾರೆ ಎನ್ನುತ್ತಿದ್ದಾರೆ.ಈ ಮೂಲಕ ಟೀಕೆ ಮುಂದುವರಿಸಿದ್ದಾರೆ.  ಮೇ 2019ರ ಲೋಕಸಭಾ ಚುನಾವಣೆಯಲ್ಲಿ ಮೋದಿ ಅಭೂತಪೂರ್ವ ಗೆಲುವು ಸಾಧಿಸಿದ್ದರು. ಈ ಮೂಲಕ ಮೋದಿ ಅತ್ಯುತ್ತಮ ಆರ್ಥಿಕ ಸುಧಾರಕರು ಹೌದೋ ಅಲ್ಲವೋ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಇದಕ್ಕೆ ಮತ್ತೆ ಉತ್ತರ ಹೇಳುವ ಅವಶ್ಯಕತೆ ಇಲ್ಲ ಎನ್ನುತ್ತಾರೆ ತಜ್ಞರು.

  

 

 
First published: June 9, 2020, 9:27 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading