ಚೀನಾದ ಡಿಜಿಟಲ್ ಸಿಲ್ಕ್ ರೂಟ್ ಕನಸಿಗೆ ಭಾರತ ತಣ್ಣೀರು ಹಾಕುತ್ತಿದೆಯಾ?

ವಿದೇಶಗಳಲ್ಲಿ ತನ್ನದೇ ಆಪ್ಟಿಕಲ್ ಕೇಬಲ್ ಲೈನ್​ಗಳನ್ನ ಹಾಕುವುದು; ಡಾಟಾ ಹಬ್ ರಚಿಸುವುದು ಸೇರಿದಂತೆ ಹಲವು ಡಿಜಿಟಲ್ ಸೌಕರ್ಯ ಯೋಜನೆಗಳನ್ನ ಹಮ್ಮಿಕೊಂಡಿರುವ ಚೀನಾ ಆ ಮೂಲಕ ವಿಶ್ವದ ಡಿಜಿಟಲ್ ವ್ಯವಸ್ಥೆಯನ್ನ ತನ್ನ ಹತೋಟಿಗೆ ತೆಗೆದುಕೊಳ್ಳುವ ಪ್ರಯತ್ನದಲ್ಲಿದೆ.

news18
Updated:June 29, 2020, 11:19 PM IST
ಚೀನಾದ ಡಿಜಿಟಲ್ ಸಿಲ್ಕ್ ರೂಟ್ ಕನಸಿಗೆ ಭಾರತ ತಣ್ಣೀರು ಹಾಕುತ್ತಿದೆಯಾ?
ಚೀನಾ ನಿಷೇಧಿಸಿ ಅಭಿಯಾನ
  • News18
  • Last Updated: June 29, 2020, 11:19 PM IST
  • Share this:
ಚೀನಾ ವಿಶ್ವದ ಶಕ್ತಿಕೇಂದ್ರ ಮತ್ತು ದೊಡ್ಡಣ್ಣನಾಗಲು ಹೊರಟಿರುವುದು ಎಲ್ಲರಿಗೂ ಗೊತ್ತಿರುವಂಥದ್ದೇ. ಮೂಲಸೌಕರ್ಯ, ತಂತ್ರಜ್ಞಾನ ಸೇರಿದಂತೆ ಪ್ರತಿಯೊಂದು ವಿಚಾರದಲ್ಲೂ ಅಮೆರಿಕವನ್ನ ಮೀರಿಸುವ ಹಪಾಹಪಿ ಚೀನಾದ್ದು. ತನ್ನ ಅಗ್ಗದ ದರದ ವಸ್ತುಗಳನ್ನ ಹೇರಳವಾಗಿ ರಫ್ತು ವಿಶ್ವದ ಅನೇಕ ರಾಷ್ಟ್ರಗಳ ಮಾರುಕಟ್ಟೆಯನ್ನ ಹಿಡಿದಿಟ್ಟುಕೊಂಡಿದೆ. ಬೆಲ್ಟ್ ಅಂಡ್ ರೋಡ್ ಇನಿಷಿಯೇಟಿವ್ ಅಥವಾ BRI ಪ್ರಾಜೆಕ್ಟ್ ಚೀನಾದ ಬಹುದೊಡ್ಡ ಕನಸು. ಏಷ್ಯಾ, ಆಫ್ರಿಕಾ ಮತ್ತು ಯೂರೋಪ್ ಖಂಡಗಳನ್ನ ನೆಲ ಹಾಗೂ ಸಾಗರ ಮುಖಾಂತರ ಕೊಂಡಿ ಕಲ್ಪಿಸಿ ಆ ಮೂಲಕ ಚೀನಾದಿಂದ ಎಲ್ಲೆಡೆ ಸರಕು ಸಾಗಣೆ ಮಾಡುವುದು ಈ ಯೋಜನೆಯ ಉದ್ದೇಶವಾಗಿದೆ. ಆರು ಕಾರಿಡಾರ್​ಗಳನ್ನ ಒಳಗೊಂಡಿರುವ ಈ ಯೋಜನೆಯ ಭಾಗವಾಗಲು ಭಾರತ ನಿರಾಕರಿಸಿದೆ.

ಈಗ ಈ ಬೆಲ್ಟ್ ಅಂಡ್ ರೋಡ್​ನಷ್ಟೇ ಪ್ರಮುಖವಾದ ಚೀನೀ ಮಹತ್ವಾಕಾಂಕ್ಷೆ ಎಂದರೆ ಅದು ಡಿಜಿಟಲ್ ಸಿಲ್ಕ್ ರೂಟ್. ವಿದೇಶಗಳಲ್ಲಿ ಡಿಜಿಟಲ್ ಫ್ರೇಮ್ ವರ್ಕ್ ರೂಪಿಸುತ್ತಿದೆ ಚೀನಾ. ತನ್ನದೇ ಆಪ್ಟಿಕಲ್ ಕೇಬಲ್ ಲೈನ್​ಗಳನ್ನ ಹಾಕುವುದು; ಡಾಟಾ ಹಬ್ ರಚಿಸುವುದು ಸೇರಿದಂತೆ ಹಲವು ಡಿಜಿಟಲ್ ಸೌಕರ್ಯ ಯೋಜನೆಗಳನ್ನ ಹಮ್ಮಿಕೊಂಡಿರುವ ಚೀನಾ ಆ ಮೂಲಕ ವಿಶ್ವದ ಡಿಜಿಟಲ್ ವ್ಯವಸ್ಥೆಯನ್ನ ತನ್ನ ಹತೋಟಿಗೆ ತೆಗೆದುಕೊಳ್ಳುವ ಪ್ರಯತ್ನದಲ್ಲಿದೆ. ಚೀನಾ ಹುವಾವೇ ಸಂಸ್ಥೆ ಬಹಳ ಅಗ್ಗದ ದರದಲ್ಲಿ 5ಜಿ ತಂತ್ರಜ್ಞಾನ ವ್ಯವಸ್ಥೆ ಮಾಡಲು ಅಣಿಯಾಗಿದೆ. ವಿಶ್ವದ ಎಲ್ಲಾ ದೇಶಗಳಲ್ಲೂ ಹುವಾವೇ ಅನ್ನು ಚೀನಾ ಬಹಳ ಅಗ್ರೆಸಿವ್ ಆಗಿ ಮಾರ್ಕೆಟಿಂಗ್ ಮಾಡುತ್ತಿದೆ. ಭಾರತದಲ್ಲಿ 5ಜಿಗೆ ಸಲ್ಲಿಸುವ ಬಿಡ್​​ನಲ್ಲಿ ಹುವಾವೇ ಅನ್ನು ಒಳಗೊಳ್ಳಲೇಬೇಕು ಎಂದು ಚೀನಾ ಮೊದಲಿಂದಲೂ ಪಟ್ಟುಹಿಡಿದುಕೊಂಡು ಬಂದಿದೆ. ಒಮ್ಮೆ ಬಿಡ್ ಆದರೆ ಬಹಳ ಕಡಿಮೆ ಕೋಟ್ ಮಾಡುವ ಹುವಾವೇಗೆ ಪ್ರಾಜೆಕ್ಟ್ ದಕ್ಕುವುದು ನಿಶ್ಚಿತ. ಹಾಗಾದಲ್ಲಿ ಒಂದು ದೇಶದ ಇಡೀ ಡಿಜಿಟಲ್ ನೆಟ್​ವರ್ಕ್ ಚೀನಾದ ನಿಯಂತ್ರಣಕ್ಕೆ ಸಿಗುತ್ತದೆ ಎಂಬುದು ತಜ್ಞರ ಅಭಿಪ್ರಾಯ.

ಇದನ್ನೂ ಓದಿ: ಚೀನೀ ಆ್ಯಪ್​ಗಳ ನಿಷೇಧ ಕ್ರಮ ಹೇಗೆ ಜಾರಿಯಾಗುತ್ತದೆ? ಪ್ಲೇಸ್ಟೋರ್​ನಲ್ಲಿ ಇರುತ್ತವಾ ಈ ಆ್ಯಪ್​ಗಳು?ಭಾರತ ಈಗ 59 ಚೀನೀ ಆ್ಯಪ್​ಗಳನ್ನ ನಿಷೇಧಿಸಿರುವುದು ಚೀನಾಗೆ ಒಟ್ಟಾರೆಯಾಗಿ ಹಿನ್ನಡೆಯಾಗಬಹುದು. ಅದರಲ್ಲೂ ಚೀನಾದ ಟಿಕ್ ಟಾಕ್​ಗೆ ಭಾರತದಲ್ಲಿ 10 ಕೋಟಿಯಷ್ಟು ಬಳಕೆದಾರರಿದ್ದಾರೆ. ದೊಡ್ಡ ಭಾಗವೇ ಕಳಚಿಬಿದ್ದಂತಾಗುತ್ತದೆ. ಈಗ ಆ್ಯಪ್​ಗಳನ್ನ ನಿಷೇಧಿಸಿದ ಭಾರತ ಮುಂದೆ ಹುವಾವೇ ಸಂಸ್ಥೆಯನ್ನು 5ಜಿ ಬಿಡ್ಡಿಂಗ್​ಗೆ ಒಳಗೊಳ್ಳದೇ ಹೋಗುವ ಗಟ್ಟಿ ನಿರ್ಧಾರ ಕೈಗೊಳ್ಳಬಹುದು. ಚೀನಾದ ಆಕ್ರಮಣಕಾರಿ ಧೋರಣೆ ಬಗ್ಗೆ ಬೇಸತ್ತ ಹಲವು ದೇಶಗಳಿವೆ. ಇವು ಭಾರತದ ನಿಷೇಧದ ಹಾದಿಯನ್ನ ಅನುಸರಿಸಲೂ ಬಹುದು.
First published:June 29, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading