ಇತ್ತೀಚೆಗೆ ನಡೆದ ಸಾವಂತಾ ಚುನಾವಣಾ (Savanta Electoral ) ಸಮೀಕ್ಷೆಯ ಫಲಿತಾಂಶವು ರಿಷಿ ಸುನಕ್ ಅವರು ತಮ್ಮ ಸಂಸದ ಸ್ಥಾನವನ್ನು ಕಳೆದುಕೊಳ್ಳುವ ಬಗ್ಗೆ ಫಲಿತಾಂಶ (Result) ಹೊರಹಾಕಿದ್ದು ಈ ಮೂಲಕ ಕನ್ಸರ್ವೇಟಿವ್ ಪಕ್ಷ (Party) ನೆಲಕಚ್ಚಿ ಲೇಬರ್ ಪಕ್ಷವು ಬಹುಮತ ಪಡೆಯಲಿದೆ ಎಂಬುದನ್ನು ಸೂಚಿಸಿದೆ. ಪ್ರಸ್ತುತ ಯುಕೆನಲ್ಲಿ ಮುಂದೆ ನಡೆಯುವ ಜನರಲ್ ಇಲೆಕ್ಷನ್ನಲ್ಲಿ (General Election) ರಿಷಿ ಸುನಕ್ (Rishi Sunak)ಅವರು ತಮ್ಮ ಸಂಸದ ಸ್ಥಾನವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಸವಂತಾ ಪೋಲಿಂಗ್ ಸಮೀಕ್ಷೆ ಭವಿಷ್ಯ ನುಡಿದಿದೆ. ಈ ಸಂದರ್ಭದಲ್ಲಿ ಅದು ಪ್ರತಿಪಕ್ಷವಾದ ಲೇಬರ್ ಪಾರ್ಟಿಯನ್ನು 20 ಅಂಕಗಳಷ್ಟು ಮುಂದಿರಿಸಿದೆ.
ಈ ಬಗ್ಗೆ ಇನ್ನಷ್ಟು ವಿವರಿಸಿರುವ ಸಾವಂತಾ ಸಮೀಕ್ಷೆ, ನಾಳೆಯೇ ಒಂದು ವೇಳೆ ಚುನಾವಣೆ ನಡೆದರೆ, ಲೇಬರ್ ಪಕ್ಷವು ಬಹುತೇಕ ಮೆಜಾರಿಟಿ ಎನ್ನಬಹುದಾದ 314 ಸೀಟುಗಳನ್ನು ಗೆಲ್ಲಬಹುದಾಗಿದ್ದು ಕನ್ಸರ್ವೇಟಿವ್ ಪಕ್ಷವು ತನ್ನ ಬಹುತೇಕ ಎಲ್ಲ ಸೀಟುಗಳನ್ನು ಕಳೆದುಕೊಳ್ಳಬಹುದೆಂದು ಮಂಗಳವಾರದ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಇಷ್ಟೇ ಅಲ್ಲದೆ, ಸುನಕ್ ಅವರ ಯಾರ್ಕ್ಶೈರ್ ಕ್ಷೇತ್ರದಿಂದ ಹಿಡಿದು ಉತ್ತರದ ಲಿಂಕನ್ಶೈರ್ ವರೆಗಿರುವ ಎಲ್ಲ ಕ್ಷೇತ್ರಗಳು ಕನ್ಸರ್ವೇಟಿವ್ ಪಕ್ಷ ಕಳೆದುಕೊಳ್ಳಲಿದೆ ಎಂದಿರುವ ಸಾವಂತಾ ಈ ಕುರಿತು ತನ್ನದೆ ಆದ ಸಮೀಕ್ಷೆ ನಡೆಸಿದೆ. ಸಾವಂತಾ ಇದಕ್ಕಾಗಿ ಡಿಸೆಂಬರ್ 2 ರಿಂದ 5ರ ವರೆಗೆ 6,237 ಬ್ರಿಟಿಷ್ ವಯಸ್ಕರ ಸಂದರ್ಶನ ನಡೆಸಿತ್ತು.
ಚುನಾವಣಾ ಸಮೀಕ್ಷೆಗಳು ನಡೆದಿದೆ
ಈಗಾಗಲೇ ಹಲವು ಚುನಾವಣಾ ಸಮೀಕ್ಷೆಗಳು ನಡೆದಿದ್ದು ಅವುಗಳ ಪೈಕಿ ಈ ಸಮೀಕ್ಷೆಯು ತೀರ ಇತೀಚಿನದ್ದಾಗಿದೆ. ಈ ಎಲ್ಲ ವಿದ್ಯಮಾನಗಳಲ್ಲಿ ಬಹುತೇಕ ಎಲ್ಲ ಸಮೀಕ್ಷೆಗಳು ಲೇಬರ್ ಪಕ್ಷವೇ ಅಧಿಪತ್ಯ ಹೊಂದಲಿದೆ ಎಂಬ ಸುಳಿವು ನೀಡುವಂತಿದ್ದು ಸುನಕ್ ಅವರಿಗೆ ಇದು ಅಗ್ನಿಪರೀಕ್ಷೆಯ ಸಂದರ್ಭವಾಗಲಿದೆ. ಅಷ್ಟಕ್ಕೂ ಯುಕೆನಲ್ಲಿ ಜನವರಿ 2025 ರಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದೆ.
ಪ್ರಸ್ತುತ ಯುಕೆನಲ್ಲಿ ಟೋರಿ ಬ್ರ್ಯಾಂಡಿಗೆ ಸಾಕಷ್ಟು ಧಕ್ಕೆಯಾಗಿರುವುದು ಕಂಡುಬಂದಿದೆ. ಇತ್ತೀಚಿನ ಇತಿಹಾಸದಲ್ಲೇ ಪ್ರಥಮ ಎನ್ನುವಂತಹ ಒಂದೇ ವರ್ಷದಲ್ಲಿ ಎರಡು ಬಾರಿ ಪ್ರಧಾನಿ ಬದಲಾವಣೆಯಾಗಿದ್ದು ಸಾಕಷ್ಟು ಹಾನಿ ಉಂಟು ಮಾಡಿದೆ.
ಸುನಕ್ ಅವರ ಹಿಂದೆ ಪ್ರಧಾನಿಯಾಗಿದ್ದ ಟ್ರಸ್ ಅವರು ತಮ್ಮ ಏಳು ವಾರಗಳ ಆಡಳಿತಾವಧಿಯಲ್ಲಿ ತಂದಿದ್ದ ನೀತಿಗಳು ಪೌಂಡ್ ಅನ್ನು ಮತ್ತಷ್ಟು ಕುಸಿಯುವಂತೆ ಮಾಡಿದ್ದಲ್ಲದೆ ರಾಷ್ಟ್ರವು ಹೀನಾಯ ಆರ್ಥಿಕ ಸ್ಥಿತಿ ತಲುಪಿತ್ತು ಎಂಬುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.
ಸಮೀಕ್ಷೆಯಲ್ಲಿ ಒಟ್ಟು 1088 ಜನರು ಭಾಗವಹಿಸಿದ್ದರು
ಈ ಮಧ್ಯೆ ಡೆಲ್ಟಾಪೋಲ್ ವತಿಯಿಂದ ಕೈಗೊಳ್ಳಲಾಗಿದ್ದು ಇನ್ನೊಂದು ಚುನಾವಣಾ ಸಮೀಕ್ಷೆಯ ಫಲಿತಾಂಶವು ಮಂಗಳವಾರ ಹೊರಬಂದಿದ್ದು ಅದು ಸಹ ಲೇಬರ್ ಪಕ್ಷಕ್ಕೆ 45% ಫಲಿತಾಂಶ ನೀಡಿದ್ದರೆ ಟೋರಿಗಳಿಗೆ 32% ರಷ್ಟು ಫಲಿತಾಂಶ ನೀಡಿತ್ತು. ಈ ಸಮೀಕ್ಷೆಯಲ್ಲಿ ಒಟ್ಟು 1088 ಜನರು ಭಾಗವಹಿಸಿದ್ದರು.
ಸಾವಂತಾದ ಮುಖ್ಯ ರಾಜಕೀಯ ಸಂಶೋಧನಾ ವಿಭಾಗದ ನಿರ್ದೇಶಕರಾದ ಕ್ರಿಸ್ ಹಾಪ್ಕಿನ್ಸ್ ಅವರು ಈ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತ, "ಈ ಸಮೀಕ್ಷೆ ಎರಡೂ ಪಕ್ಷಗಳು ವಿಭಿನ್ನವಾದ ರೀತಿಯ ಫಲಿತಾಂಶಗಳನ್ನು ಬಿಂಬಿಸುತ್ತದೆ ಎಂದಿದ್ದಾರೆ.
ಇದನ್ನೂ ಓದಿ: Siddaramaiah: ಡಿಕೆಶಿ ಟೆರರಿಸಂ ಸಪೋರ್ಟ್ ಮಾಡ್ತೀನಿ ಅಂತ ಹೇಳಿದ್ರಾ? ಬಿಜೆಪಿಗೆ ಸಿದ್ದರಾಮಯ್ಯ ಪ್ರಶ್ನೆ
ಮುಂದುವರೆಯುತ್ತ ಅವರು, ಸುನಕ್ ಅವರು ಲೇಬರ್ ಪಕ್ಷದ ಮುನ್ನಡೆಯನ್ನು ಸಮರ್ಥವಾಗಿ ಅಂಕಗಳ ಆಧಾರದ ಮೇಲೆ ಎದುರಿಸುತ್ತಾ ಬಂದರೆ 2024 ರಲ್ಲಿ ನಡೆಯುವ ಫಲಿತಾಂಶ ಇನಷ್ಟು ವಿಭಿನ್ನವಾಗಿರಬಹುದೆಂದೂ ಹೇಳಿದ್ದಾರೆ.
356 ಸ್ಥಾನಗಳನ್ನಷ್ಟೇ ಉಳಿಸಿಕೊಂಡಿದೆ
2019 ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಟೋರಿಗಳು ಒಟ್ಟು 365 ಸ್ಥಾನಗಳನ್ನು ಗೆದ್ದಿದ್ದರು. ತದನಂತರ ಚುನಾವಣಾ ಸೋಲು ಹಾಗೂ ಅಮಾನತ್ತುಗಳ ಪರಿಣಾಮವಾಗಿ ಇಂದು ಪಕ್ಷವು 356 ಸ್ಥಾನಗಳನ್ನಷ್ಟೇ ಉಳಿಸಿಕೊಂಡಿದೆ.
ಆದರೆ, ಇತ್ತೀಚಿನ ಸಮೀಕ್ಷೆಯ ಆಧಾರದಲ್ಲಿ ಹೇಳುವುದಾದರೆ ಟೋರಿ ಕೇವಲ 69 ಸ್ಥಾನಗಳಲ್ಲಿ ಜಯಪಡೆದರೆ ಲೇಬರ್ ಪಕ್ಷ 482 ಸ್ಥಾನಗಳಲ್ಲಿ ವಿಜಯ ಪತಾಕೆ ಹಾರಿಸುತ್ತದೆ ಎಂಬುದನ್ನು ಸೂಚಿಸುತ್ತಿದೆ.
ಇದಲ್ಲದೆ, ಸಾವಂತಾ ಪ್ರಕಾರ, ಸ್ಕಾಟಿಶ್ ನ್ಯಾಷನಲ್ ಪಾರ್ಟಿಯು 55 ಸ್ಥಾನಗಳನ್ನು ಗೆದ್ದರೆ ಲಿಬರಲ್ ಡೆಮೋಕ್ರಾಟ್ಸ್ 21 ಸ್ಥಾನಗಳಲ್ಲಿ ಗೆಲ್ಲಲಿದೆ ಎಂದಾಗಿದೆ. ಆದರೆ, ಸಾವಂತಾ ಸಮೀಕ್ಷೆಯು ಚುನಾವಣಾ ಗಣೀತ ಲೆಕ್ಕಾಚಾರದ ಮಲ್ಟಿ-ರಿಗ್ರೆಶನ್ ಹಾಗೂ ತದನಂತರದ ಶ್ರೇಣೀಕರಣದ (ಎಂಆರ್ಪಿ)ಮೇಲೆ ಅವಲಂಬಿತವಾದುದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ