Rishi Sunak: ಇನ್ಫೋಸಿಸ್ ನಾರಾಯಣ ಮೂರ್ತಿ ಅಳಿಯ  ರಿಷಿ ಸುನಕ್​​ಗೆ ಸಿಗುತ್ತಾ ಬ್ರಿಟನ್ ಪ್ರಧಾನಿ ಪಟ್ಟ?

Boris Johnson: ಬ್ರಿಟನ್ ಪ್ರಿನ್ಸ್ ಫಿಲಿಪ್ ಅಂತ್ಯಕ್ರಿಯೆ ನಡೆದ ಕಳೆದ ವರ್ಷ ಏಪ್ರಿಲ್ 17 ರ ಮುನ್ನಾ ದಿನ ಡೌನಿಂಗ್ ಸ್ಟ್ರೀಟ್ ನಲ್ಲಿ ಬೋರಿಸ್ ಜಾನ್ಸನ್​ ಜೊತೆ  30 ಮಂದಿ ಡ್ರಗ್ಸ್ ಹಾಗೂ ಮದ್ಯದ ಪಾರ್ಟಿ ನಡೆಸಿದ್ದರು ಎಂಬ ಆರೋಪವಿದೆ.

ರಿಷಿ ಸುನಕ್

ರಿಷಿ ಸುನಕ್

  • Share this:
ಇತಿಹಾಸ ಸೃಷ್ಟಿಸಲು ಸಜ್ಜಾಗಿದ್ದಾಎರೆ ಇನ್ಫೋಸಿಸ್ ನಾರಾಯಣ ಮೂರ್ತಿ ಅಳಿಯ ರಿಷಿ ಸುನಕ್.  ಬ್ರಿಟನ್ ಪ್ರಧಾನ ಮಂತ್ರಿ ಹುದ್ದೆ ಭಾರತೀಯ ಮೂಲದ ವ್ಯಕ್ತಿಗೆ ಲಭಿಸಲಿದೆಯೇ? ಬ್ರಿಟನ್ ನಲ್ಲಿ ಕೇಳಿ ಬರ್ತಿದೆ ರಿಷಿ ಸುನಕ್ ಹೆಸರು.   ಬ್ರಿಟನ್ ನಲ್ಲಿ ಕೊರೊನಾ ವೈರಸ್ ಹೆಚ್ಚಾಗಿದ್ದ ವೇಳೆ ಲಾಕ್ ಡೌನ್(Lockdown) ಜಾರಿಯಲ್ಲಿದ್ದಾಗ 2020 ಮೇನಲ್ಲಿ ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್(Boris Johnson) ನೀಡಿದ್ದ ಮದ್ಯದ ಪಾರ್ಟಿ ವಿವಾದ ಸೃಷ್ಟಿಸಿತ್ತು. ಕೋವಿಡ್ ನಿಯಮ ಉಲ್ಲಂಘಿಸಿ, ಬೋರಿಸ್ ಜಾನ್ಸನ್ ನೀಡಿದ್ದ ಮದ್ಯ ಪಾರ್ಟಿ ವಿಡಿಯೋವೊಂದು ಇತ್ತೀಚಿಗೆ ವೈರಲ್ ಕೂಡ ಆಗಿತ್ತು. ವಿರೋಧ ಪಕ್ಷ ಲೇಬರ್ ಪಾರ್ಟಿ, ಸ್ವಂತ ಪಕ್ಷ ಕನ್ಸರ್ವೇಟಿವ್ಸ್ ನಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಹೀಗಾಗಿ ಪ್ರಧಾನಿ ಬೋರಿಸ್ ಜಾನ್ಸನ್ ಅಧಿಕಾರದಿಂದ ಕೆಳಗಿಳಿಯಬೇಕು ಎನ್ನುವ ಕೂಗು ಕೇಳಿ ಬರ್ತಿದೆ. ಬೋರಿಸ್ ಜಾನ್ಸನ್ ರಾಜೀನಾಮೆ ನೀಡಿದರೆ ಭಾರತೀಯ ಮೂಲದ ಹಾಲಿ ಬ್ರಿಟನ್ ನ ಹಣಕಾಸು ಸಚಿವರಾಗಿರೋ ರಿಷಿ ಸುನಾಕ್ (Rishi Sunak) ಪ್ರಧಾನಿಯಾಗೋ ಸಾಧ್ಯತೆ ಇದೆ.

ಬ್ರಿಟನ್ ನಲ್ಲಿ ರಿಷಿ ಹವಾ!
2015ರಲ್ಲಿ ರಿಷಿ ಬ್ರಿಟನ್ ಸಂಸತ್ತನ್ನು ಪ್ರವೇಶಿಸಿದರು. 2020ರಲ್ಲಿ ಬ್ರಿಟನ್ ಸಚಿವ ಸಂಪುಟದ ಪ್ರಮುಖ ಹುದ್ದೆಗಳಲ್ಲಿ ಒಂದಾದ ಹಣಕಾಸು ಸಚಿವ ಹುದ್ದೆಗೇರಿದ್ರು. ಈ ಹುದ್ದೆಗೇರಿದ ಭಾರತ ಮೂಲದ ಪ್ರಥಮ ವ್ಯಕ್ತಿ ರಿಷಿ ಸುನಕ್ ಆಗಿದ್ದಾರೆ. ಕೋವಿಡ್ 19 ಸಾಂಕ್ರಾಮಿಕದಿಂದ ಬ್ರಿಟನ್ ತತ್ತರಿಸುತ್ತಿದ್ದ ವೇಳೆ ಆರ್ಥಿಕತೆಯನ್ನು ನಿಭಾಯಿಸುವಲ್ಲಿ ರಿಷಿ ಯಶಸ್ವಿಯಾಗಿದ್ದರು. ಕೊರೊನಾ ವೇಳೆ ನಷ್ಟದಿಂದ ತತ್ತರಿಸಿದ್ದ ಉದ್ಯಮಗಳಿಗೆ ಅನುಕೂಲಕರವಾದ ಯೋಜನೆಗಳನ್ನು ಜಾರಿಗೆ ತಂದ್ರು. ಈ ಎಲ್ಲಾ ಕೆಲಸಗಳು ಇದೀಗ ರಿಷಿ ಅವರನ್ನ ಪ್ರಧಾನಿ ಹುದ್ದೆ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿರಿಸಿದೆ.

ನಾರಾಣಮೂರ್ತಿ ಅಳಿಯ ರಿಷಿ
41 ವರ್ಷದ ರಿಷಿ ಸುನಾಕ್ ಇನ್ಫೋಸಿಸ್ ಸಂಸ್ಥಾಪಕ ಎನ್. ಆರ್ ನಾರಾಯಣ ಮೂರ್ತಿ ಮತ್ತು ಸುಧಾಮೂರ್ತಿ ದಂಪತಿಯ ಅಳಿಯನಾಗಿದ್ದಾರೆ. ನಾರಾಯಣ ಮೂರ್ತಿ ಮಗಳು ಅಕ್ಷತಾರನ್ನು ವಿವಾಹವಾಗಿ ಬ್ರಿಟನ್ ನಲ್ಲಿ ನೆಲೆಸಿದ್ದಾರೆ. ಇವರಿಗೆ ಕೃಷ್ಣ ಮತ್ತು ಅನುಷ್ಕಾ ಎಂಬ ಇಬ್ಬರು ಮಕ್ಕಳಿದ್ದಾರೆ.

ಇದನ್ನೂ ಓದಿ: ಹಬ್ಬದ ದಿನವೇ ದೆಹಲಿಯ ಹೂವಿನ ಮಾರ್ಕೆಟ್​ನಲ್ಲಿ ಬಾಂಬ್ ಪತ್ತೆ.. ಬೆಚ್ಚಿಬಿತ್ತು ರಾಷ್ಟ್ರ ರಾಜಧಾನಿ!

ಬೋರಿಸ್ಗೆ ಕಂಟಕವಾಯ್ತು ಪಾರ್ಟಿ!

ಬ್ರಿಟನ್ ಪ್ರಿನ್ಸ್ ಫಿಲಿಪ್ ಅಂತ್ಯಕ್ರಿಯೆ ನಡೆದ ಕಳೆದ ವರ್ಷ ಏಪ್ರಿಲ್ 17 ರ ಮುನ್ನಾ ದಿನ ಡೌನಿಂಗ್ ಸ್ಟ್ರೀಟ್ ನಲ್ಲಿ ಬೋರಿಸ್ ಜಾನ್ಸನ್​ ಜೊತೆ  30 ಮಂದಿ ಡ್ರಗ್ಸ್ ಹಾಗೂ ಮದ್ಯದ ಪಾರ್ಟಿ ನಡೆಸಿದ್ದರು ಎಂಬ ಆರೋಪವಿದೆ. ಫಿಲಿಪ್ ಅವರ ಪಾರ್ಥಿವ ಶರೀರ ಇನ್ನೂ ಇರುವಾಗಲೇ ಮೋಜಿನ ಪಾರ್ಟಿ ನಡೆಸಿರುವ ಬಗ್ಗೆ ತೀವ್ರ ಆಕ್ಷೇಪಣೆಗಳು ವ್ಯಕ್ತವಾಗಿವೆ.

ಪಾರ್ಟಿ ಗೇಟ್​ ವಿವಾದದ ಬಗ್ಗೆ ಬೋರಿಸ್ ಬ್ರಿಟಿಷ್ ಸಂಸತ್ತಿನಲ್ಲಿ ಕ್ಷಮೆಯಾಚಿಸಿದ ಹೊರತಾಗಿಯೂ ಪ್ರಧಾನ ಮಂತ್ರಿ ಹುದ್ದೆಯಿಂದ ಕೆಳಗಿಳಿಯಬೇಕು ಎಂಬ ಬೇಡಿಕೆಗಳು ಹೆಚ್ಚುತ್ತಿವೆ. ಬೋರಿಸ್ ಜಾನ್ಸನ್ ರಾಜೀನಾಮೆ ನೀಡುವ ಪರಿಸ್ಥಿತಿ ಬಂದರೆ ಅವರ ಸ್ಥಾನಕ್ಕೆ ಭಾರತೀಯ ಮೂಲದ ರಿಷಿ ಪ್ರಧಾನಿಯಾಗುವ ಸಾಧ್ಯತೆ ಇದೆ ಎಂದು ಬ್ರಿಟಿಷ್ ಮಾಧ್ಯಮ ವರದಿ ಮಾಡಿದೆ.

ಇದನ್ನೂ ಓದಿ: ಗುಜರಾತ್‌ನಲ್ಲಿ ಹೊಸ ಇಂಧನ ಯೋಜನೆಗಳಲ್ಲಿ 6 ಟ್ರಿಲಿಯನ್ ರೂ. ಹೂಡಿಕೆ ಮಾಡಲಿದೆ ರಿಲಯನ್ಸ್‌

ಹಣಕಾಸು ಸಚಿವರಾದಾಗಿನಿಂದ ರಿಷಿ ಪ್ರಧಾನಿ ಹುದ್ದೆ ಬಗ್ಗೆ ತೀವ್ರ ಉತ್ಸುಕರಾಗಿದ್ದಾರೆ. ಹಾಗಾಗಿ ಪಾರ್ಟಿಗೇಟ್ ವಿವಾದದಿಂದ ದೂರ ಇರಬೇಕೆಂಬ ಉದ್ದೇಶದಿಂದ ಹೌಸ್ ಗೆ ಹಾಜರಾಗಲಿಲ್ಲ ಎಂದು ಬೋರಿಸ್ ಆಪ್ತರು ಹೇಳುತ್ತಾರೆ. ಈ ಹೇಳಿಕೆಯನ್ನು ತಳ್ಳಿ ಹಾಕಿರುವ ರಿಷಿ, ತಮ್ಮ ಇಲಾಖೆಗೆ ಸಂಬಂಧಿಸಿದ ಕೆಲಸದಲ್ಲಿ ನಿರತರಾಗಿರುವ ಕಾರಣ ಹೌಸ್ ಗೆ ಹಾಜರಾಗಲು ಸಾಧ್ಯವಾಗಲಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.
Published by:Sandhya M
First published: