ನವದೆಹಲಿ(ನ. 20): ಕಳೆದ ವರ್ಷ ನಡೆದ ವಿಶ್ವಸಂಸ್ಥೆಯ ಹವಾಮಾನ ವೈಪರೀತ್ಯ ಶೃಂಗಸಭೆಯಲ್ಲಿ 15 ವರ್ಷದ ಗ್ರೆಟಾ ಥನ್ಬರ್ಗ್ ಭಾಷಣ ಬಹಳಷ್ಟು ಮಂದಿಯನ್ನು ಸ್ತಂಭೀಭೂತಗೊಳಿಸಿತ್ತು. ಹವಾಮಾನ ವೈಪರೀತ್ಯದಿಂದ ಇಡೀ ಜಗತ್ತು ವಿನಾಶದಂಚಿನತ್ತ ಸಾಗುತ್ತಿದೆ. ಎಲ್ಲರೂ ಯಾಕೆ ಎಚ್ಚೆತ್ತುಕೊಳ್ಳುತ್ತಿಲ್ಲ ಎಂದ ಈ ಹುಡುಗಿ ನೇರಾನೇರ ಮೊನಚು ಮಾತುಗಳನ್ನು ವಿಶ್ವನಾಯಕರನ್ನು ತಿವಿದಿದ್ದರು. ಸ್ವೀಡನ್ ದೇಶದ ಈ ಬಾಲಕಿ ಅಂದು ಮಾಡಿದ ಭಾಷಣ ಇವತ್ತು ವಿಶ್ವಾದ್ಯಂತ ಶಾಲಾ ಮಕ್ಕಳನ್ನು ಬಡಿದೆಬ್ಬಿಸಿದೆ. ಈಗ ಇದೇ ಗ್ರೆಟಾ ಥನ್ಬರ್ಗ್ ಇನ್ನೊಂದು ಕಾರಣಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಅಚ್ಚರಿ ಮೂಡಿಸಿದ್ಧಾಳೆ. 121 ವರ್ಷದ ಹಳೆಯ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ಬಹಳ ವೈರಲ್ ಆಗಿದೆ.
1898ರಲ್ಲಿ ತೆಗೆದಿದ್ದ ಈ ಫೋಟೋ ವೈರಲ್ ಆಗಲು ಕಾರಣವಾಗಿದ್ದೇ ಗ್ರೆಟಾ ಥನ್ಬರ್ಗ್. ಕೆನಡಾದ ಯುಕೋನ್ ಪ್ರಾಂತ್ಯದ ಡೋಮಿನಿಯನ್ ಕ್ರೀಕ್ ಎಂಬಲ್ಲಿನ ಚಿನ್ನದ ಗಣಿಯಲ್ಲಿ ತೆಗೆದ ಫೋಟೋ ಇದು. ಇದರಲ್ಲಿರುವ ಮೂರು ಮಕ್ಕಳು ಬಾವಿಯಿಂದ ನೀರು ತೆಗೆಯುತ್ತಿದ್ದಾರೆ. ವಾಷಿಂಗ್ಟನ್ ವಿಶ್ವವಿದ್ಯಾಲಯದ ಆರ್ಚೈವ್ಸ್ನಲ್ಲಿ ಈ ಫೋಟೋ ಸಿಕ್ಕಿದೆ. ಈ ಫೋಟೋದಲ್ಲಿರುವ ಒಂದು ಹುಡುಗಿ ಥೇಟ್ ಗ್ರೆಟಾ ಥನ್ಬರ್ಗ್ಳಂತೆಯೇ ಇದ್ದಾಳೆ. ಅದೇ ಮುಖಚಹರೆ, ಅದೇ ಕಳೆ, ಅದೇ ನೋಟ. 121 ವರ್ಷದ ಹಿಂದಿನ ಫೋಟೋದಲ್ಲಿರುವ ಅದೇ ಹುಡುಗಿಯೇ ಈಗಿನ ಗ್ರೆಟಾ ಥನ್ಬರ್ಗ್ ಎಂದು ಸೋಷಿಯಲ್ ಮೀಡಿಯಾದಲ್ಲಿ ವಾದ ಶುರುವಾಗಿದೆ.
ಇದನ್ನೂ ಓದಿ: ಸಂಸ್ಕೃತ ವಿಭಾಗಕ್ಕೆ ಮುಸ್ಲಿಂ ಪ್ರೊಫೆಸರ್; ಬನಾರಸ್ ಹಿಂದು ವಿಶ್ವವಿದ್ಯಾಲಯ ವಿದ್ಯಾರ್ಥಿಗಳ ಪ್ರತಿಭಟನೆ
ಹಾಲಿವುಡ್ ಫ್ಯಾಂಟಸಿ ಸಿನಿಮಾ ಮಾದರಿಯಲ್ಲಿ ಗ್ರೆಟಾ ಥನ್ಬರ್ಗ್ ಒಬ್ಬ ಟೈಮ್ ಟ್ರಾವೆಲರ್ ಆಗಿರಬಹುದು ಎಂದು ಹಲವರು ಬಣ್ಣಿಸಿದ್ದಾರೆ. ತಮಾಷೆಗೆ ಇಂಥ ಊಹಾಪೋಹಗಳು ಸೃಷ್ಟಿಯಾಗುತ್ತಿವೆಯಾ ಎಂಬುದು ಬೇರೆ ಮಾತು. ಆದರೆ, ಆ ಫೋಟೋದಲ್ಲಿರುವ ಮುದ್ದು ಪೋರಿ ಮುಖ ಥೇಟ್ ಈಗಿನ ಗ್ರೆಟಾ ಥನ್ಬರ್ಗ್ನಂತೆಯೇ ಇರುವುದು ಅಚ್ಚರಿ ಮೂಡಿಸಿದೆ.
Three children operating rocker at a gold mine on Dominion Creek, Yukon Territory, ca. 1898 pic.twitter.com/NA1yRrWRSP
— Cool History (@history2cool) November 19, 2019
She is a time traveller 😆@GretaThunberg
1898 - 2019 pic.twitter.com/FP7N3BgM2y
— bobby ross (@mertens_tiff) November 19, 2019
In other news, Greta Thunberg is a time traveller.
(Three children operating rocker at a gold mine on Dominion Creek, Yukon Territory, ca. 1898).https://t.co/dshFRD8hI2 pic.twitter.com/19tkXkLH9e
— Paul Joseph Watson (@PrisonPlanet) November 19, 2019
So, ‘Greta Thunberg’ is in a photo from 120 years ago, and it’s my new favourite conspiracy. Greta’s a time traveller, from the future, and she’s here to save us. pic.twitter.com/5ObTjPFXvk
— Jack - J.S. Strange (@JackSamStrange) November 18, 2019
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ