Video: ಸಿಎಂ ಕುಮಾರಸ್ವಾಮಿ ಮಗ ನಿಖಿಲ್​ ಆಗಲಿದ್ದಾರಾ ಆಂಧ್ರದ ಅಳಿಮಯ್ಯ: ಏನಂದ್ರು ದೊಡ್ಡ ಗೌಡರು?

news18
Updated:August 31, 2018, 5:53 PM IST
Video: ಸಿಎಂ ಕುಮಾರಸ್ವಾಮಿ ಮಗ ನಿಖಿಲ್​ ಆಗಲಿದ್ದಾರಾ ಆಂಧ್ರದ ಅಳಿಮಯ್ಯ: ಏನಂದ್ರು ದೊಡ್ಡ ಗೌಡರು?
news18
Updated: August 31, 2018, 5:53 PM IST
ಜನಾರ್ಧನ್​ ಹೆಬ್ಬಾರ್​

(ಬೆಂಗಳೂರು): ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಅನಿತಾ ಕುಮಾರಸ್ವಾಮಿ ಇಂದು ವಿಜಯವಾಡಕ್ಕೆ ತೆರೆಳಿದ್ದು, ಅಲ್ಲಿ ಉದ್ಯಮಯೊಬ್ಬರ ಮಗಳೊಂದಿಗೆ ತಮ್ಮ ಮಗ ನಿಖಿಲ್​​ ವಿವಾಹದ ಮಾತುಕತೆ ನಡೆಸಿದ್ದಾರೆ.

ಇಂದು ಬೆಳಿಗ್ಗೆ ದೆಹಲಿಯಿಂದ ನೇರವಾಗಿ ವಿಜಯವಾಡಕ್ಕೆ ತೆರೆಳಿದ್ದ ಕುಮಾರಸ್ವಾಮಿ ಅವರನ್ನು ಬೆಂಗಳೂರಿನಿಂದ ಹೋಗಿದ್ದ ಅನಿತಾ ಅಲ್ಲಿ ಭೇಟಿ ಮಾಡಿದ್ದಾರೆ. ಇದಾದ ನಂತರ ಈ ದಂಪತಿ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರನ್ನು ಭೇಟಿ ಮಾಡಿದ್ದು, ನಂತರ ಅಲ್ಲಿನ ದುರ್ಗಾದೇವಿ ದೇವಾಲಯಕ್ಕೆ ತೆರಳಿ ಪೂಜೆ ಮಾಡಿದ್ದಾರೆ.

ವಿಜಯವಾದ ಉದ್ಯಮಿ ಪ್ರಾಫಿಟ್​ ಶೂ ಕಂಪೆನಿ ಮಾಲೀಕ ಕೋಟೇಶ್ವರ ರಾವ್​ ಅವರ ಮಗಳು ಸಹಜ ಜತೆ ನಿಕಿಲ್​ ವಿವಾಹ ಸಂಬಂಧದ ಮಾತುಕತೆ ನಡೆಸಲಾಗಿದೆಯಂತೆ. ಈ ಸಂಬಂಧ ಕುದುರಿಸಲು ರೂವಾರಿಯಾಗಿದ್ದು ಮಾತ್ರ ಆಂಧ್ರದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಎನ್ನಲಾಗುತ್ತಿದೆ.

ಈ ಹಿಂದೆ ಕುಮಾರಸ್ವಾಮಿ ಅವರು ಚಂದ್ರಬಾಬು ನಾಯ್ಡು ಅವರನ್ನು ಯಾವುದೋ ಕೆಲಸದ ನಿಮಿತ್ತ ಭೇಟಿಯಾಗಿದ್ದಾಗ, ಚಂದ್ರಬಾಬು ಈ ಸಂಬಂಧದ ಕುರಿತು ಪ್ರಸ್ತಾಪಿಸಿದ್ದರಂತೆ. ಇದರಿಂದಾಗಿ ಇಂದು ಮಗನ ಸಂಬಂಧದ ಕುರಿತು ಮಾತನಾಡಲು ಕುಮಾರಸ್ವಾಮಿ ಹಾಗೂ ಅನಿತಾ ಕುಮಾರಸ್ವಾಮಿ ವಿಜಯವಾಡಕ್ಕೆ ಹೋಗಿದ್ದಾರೆ ಎಂದು ತಿಳಿದುಬಂದಿದೆ.


ಆದರೆ ಕುಮಾರಸ್ವಾಮಿ ದಂಪತಿ ಮಾತ್ರ ಈ ವಿಷಯವನ್ನು ಈಗಲೇ ಬಹಿರಂಗಪಡಿಸಲು ಹಿಂದೇಟು ಹಾಕುತ್ತಿದ್ದು, ಈ ಹಿಂದೆ ಸಹ ನಿಖಿಲ್​ಗೆ ನಿಶ್ಚಿತಾರ್ಥವಾಗಿ, ಅದು ಕಾರಣಗಳಿಂದ ಮುರಿದು ಬಿದ್ದಿತ್ತು.
Loading...

ಆದರೆ  ದೊಡ್ಡ ಗೌಡರಾದ ದೇವೇಗೌಡರು ಮಾತ್ರ ಈ ವಿಷಯವನ್ನು ನಿರಾಕರಿಸಲಿಲ್ಲ. ಇದು ಖಾಸಗಿ ವಿಚಾರ. ಒಪ್ಪಿಗೆಯಾದರೆ ಮದುವೆಯೇ ಮಾಡೋಣ ಎಂದು ನಗುತ್ತಾ ವಿಷಯವನ್ನು ತೇಲಿಸಿಬಿಟ್ಟಿದ್ದಾರೆ.


ಆದರೆ ನಿಖಿಲ್​ ಈಗಾಗಲೇ ಚಿತ್ರ ರಂಗಕ್ಕೆ ಎಂಟ್ರಿ ಕೊಟ್ಟಿದ್ದು, ಅವರು ಅಭಿನಯಿಸಿದ ಮೊದಲನೇ ಸಿನಿಮಾ 'ಜಾಗ್ವರ್​' ಕನ್ನಡ ಹಾಗೂ ತೆಲುಗಿನಲ್ಲಿ ತೆರೆ ಕಂಡಿತ್ತು. ಇನ್ನೂ ಟಾಲಿವುಡ್​ನಲ್ಲಿ ನೆಲೆ ಕಂಡುಕೊಳ್ಳುವ ಬರದಲ್ಲಿರುವ ನಿಖಿಲ್​ಗೆ ಈ ವಿವಾಹ ಸಂಬಂಧ ಒಂದು ರೀತಿಯಲ್ಲಿ ಅನುಕೂಲ ಮಾಡಿಕೊಡಲಿದೆ ಎನ್ನಬಹುದು.
First published:August 31, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ