News18 India World Cup 2019

ಬಿಜೆಪಿ ಜೊತೆ ಮೈತ್ರಿಯ ಮಾತೇ ಇಲ್ಲ, ಅದು ನಮ್ಮ ಪಕ್ಷದ ಆರೋಗ್ಯಕ್ಕೂ ಒಳ್ಳೆಯದಲ್ಲ; ಸ್ಟಾಲಿನ್​ ಸ್ಪಷ್ಟನೆ

ಬಿಜೆಪಿ ಕಾರ್ಯಕರ್ತರೊಂದಿಗೆ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಕೇಸರಿ ಪಕ್ಷ ಮುಂದಿನ ಚುನಾವಣೆಯಲ್ಲಿ ವಿಜಯ ಸಾಧಿಸಬೇಕು ಎಂದಾದರೆ ಹೊಸ ಮೈತ್ರಿಯತ್ತ ಹೆಜ್ಜೆಯಿಡಬೇಕು. ಹಾಗೇ, ಈಗಿರುವ ಮೈತ್ರಿ ಪಕ್ಷಗಳ ಜೊತೆಗೆ ಉತ್ತಮ ಸಂಬಂಧವಿಟ್ಟುಕೊಳ್ಳಬೇಕು ಎಂದಿದ್ದರು.

sushma chakre | news18
Updated:January 11, 2019, 4:31 PM IST
ಬಿಜೆಪಿ ಜೊತೆ ಮೈತ್ರಿಯ ಮಾತೇ ಇಲ್ಲ, ಅದು ನಮ್ಮ ಪಕ್ಷದ ಆರೋಗ್ಯಕ್ಕೂ ಒಳ್ಳೆಯದಲ್ಲ; ಸ್ಟಾಲಿನ್​ ಸ್ಪಷ್ಟನೆ
ಮೋದಿ- ಸ್ಟಾಲಿನ್
sushma chakre | news18
Updated: January 11, 2019, 4:31 PM IST
ಚೆನ್ನೈ (ಜ. 11): ಲೋಕಸಭಾ ಚುನಾವಣೆ ಸಮೀಪಿಸುತ್ತಿರುವುದರಿಂದ ಬಿಜೆಪಿ ಪ್ರಾದೇಶಿಕ ಪಕ್ಷಗಳ ಜೊತೆಗೆ ಮೈತ್ರಿ ಮಾಡಿಕೊಳ್ಳುವ ಸುಳಿವನ್ನು ಇತ್ತೀಚೆಗೆ ನೀಡಿತ್ತು. ಅದರಲ್ಲೂ ದಕ್ಷಿಣ ಭಾರತದಲ್ಲಿ ಪ್ರಾದೇಶಿಕ ಪಕ್ಷಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಡಿಎಂಕೆ ಪಕ್ಷವನ್ನು ಕೂಡ ಮೈತ್ರಿಗೆ ಬಿಜೆಪಿ ಆಹ್ವಾನಿಸುವ ಸಾಧ್ಯತೆಯಿದೆ ಎನ್ನಲಾಗಿತ್ತು.

ಆದರೆ, ಲೋಕಸಭಾ ಚುನಾವಣೆಯ ಮೈತ್ರಿಯ ಬಗ್ಗೆ ಸ್ಪಷ್ಟನೆ ನೀಡಿರುವ ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್, ಡಿಎಂಕೆ ಪಕ್ಷ ಎಂದಿಗೂ ಬಿಜೆಪಿಯೊಂದಿಗೆ ಕೈಜೋಡಿಸುವುದು ಸಾಧ್ಯವಿಲ್ಲ. ಕೇಂದ್ರ ಸರ್ಕಾರದ ಆಡಳಿತ ಪಕ್ಷವಾಗಿ ರಾಜ್ಯಗಳ ಹಕ್ಕು ಮತ್ತು ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ. ಅವರ ಆಳ್ವಿಕೆಯಲ್ಲಿ ನಮಗೆ ಉಸಿರು ಕಟ್ಟಿದಂತಾಗಿದೆ. ಹೀಗಾಗಿ, ಬಿಜೆಪಿಯೊಂದಿಗಿನ ಮೈತ್ರಿಯ ಬಗ್ಗೆ ಯಾವುದೇ ಹೆಜ್ಜೆ ಮುಂದಿಡುವುದಿಲ್ಲ ಎಂದಿದ್ದಾರೆ.

ಇದನ್ನೂ ಓದಿ: CBI vs CBI | ಅಲೋಕ್ ವರ್ಮಾ ರಾಜೀನಾಮೆ; ರಾಕೇಶ್ ಅಸ್ತನಾ ವಿರುದ್ಧದ ತನಿಖೆಗೆ ತಡೆ ಇಲ್ಲ

ಪ್ರಧಾನಮಂತ್ರಿ ನರೇಂದ್ರ ಮೋದಿ ತಮ್ಮನ್ನು ಅಟಲ್​ ಬಿಹಾರಿ ವಾಜಪೇಯಿ ಅವರೊಂದಿಗೆ ಹೋಲಿಕೆ ಮಾಡಿಕೊಳ್ಳುತ್ತಾರೆ. ಆದರೆ, ಅವರಿಗೂ ಇವರಿಗೂ ಅಜಗಜಾಂತರ ವ್ಯತ್ಯಾಸವಿದೆ. ಹಿಂದೆ ವಾಜಪೇಯಿ ಪ್ರಧಾನಿಯಾಗಿದ್ದಾಗ ಡಿಎಂಕೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿತ್ತು. ಆದರೀಗ ಬಿಜೆಪಿಯ ಪರಿಸ್ಥಿತಿ ಮೊದಲಿನಂತಿಲ್ಲ. ಆದ್ದರಿಂದ ಮೋದಿ ನೇತೃತ್ವದ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಳ್ಳುವುದು ನಮ್ಮ ಪಕ್ಷದ ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದಲ್ಲ ಎಂದು ಸ್ಟಾಲಿನ್ ಹೇಳಿದ್ದಾರೆ.

ಇದನ್ನೂ ಓದಿ: ಗಣಿ ದುರಂತದಲ್ಲಿ ಸಿಲುಕಿರುವವರು ಪವಾಡದಿಂದ ಬದುಕಿಬರಬಹುದು, ಹುಡುಕಾಟ ನಿಲ್ಲಿಸಬೇಡಿ; ಸುಪ್ರೀಂಕೋರ್ಟ್​

ಇತ್ತೀಚೆಗೆ ಬಿಜೆಪಿ ಕಾರ್ಯಕರ್ತರೊಂದಿಗೆ ಮಾತನಾಡುವಾಗ ಪ್ರಧಾನಿ ನರೇಂದ್ರ ಮೋದಿ, ಕೇಸರಿ ಪಕ್ಷ ಮುಂದಿನ ಚುನಾವಣೆಯಲ್ಲಿ ವಿಜಯ ಸಾಧಿಸಬೇಕು ಎಂದಾದರೆ ಹೊಸ ಮೈತ್ರಿಯತ್ತ ಹೆಜ್ಜೆಯಿಡಬೇಕು. ಹಾಗೇ, ಈಗಿರುವ ಮೈತ್ರಿ ಪಕ್ಷಗಳ ಜೊತೆಗೆ ಉತ್ತಮ ಸಂಬಂಧವಿಟ್ಟುಕೊಳ್ಳಬೇಕು ಎಂದಿದ್ದರು.
Loading...

ಬಿಜೆಪಿ ತನ್ನ ಸ್ವಸಾಮರ್ಥ್ಯದಿಂದ ಚುನಾವಣೆಯಲ್ಲಿ ಬಹುಮತ ಪಡೆದರೂ ನಮ್ಮ ಮಿತ್ರಪಕ್ಷಗಳನ್ನು ನಾವು ನಿರ್ಲಕ್ಷ್ಯಿಸುವುದಿಲ್ಲ. ಮಿತ್ರ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಸರ್ಕಾರ ನಡೆಸುತ್ತೇವೆ. ನಾವು ಸದಾ ನಮ್ಮ ಹಳೆಯ ಸ್ನೇಹಿತರೊಂದಿಗೆ ಉತ್ತಮ ಬಾಂಧವ್ಯ ಕಾಯ್ದುಕೊಳ್ಳಲು ಬಯಸುತ್ತೇವೆ. ಎಲ್ಲ ಪಕ್ಷಗಳಿಗೂ ಬಿಜೆಪಿಯ ಬಾಗಿಲು ಸದಾ ತೆರೆದಿರುತ್ತದೆ ಎಂದು ಮೋದಿ ಹೇಳಿದ್ದರು.

First published:January 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...