IRCTC Ticket Booking: ನಾಳೆಯಿಂದ ರೈಲು ಸಂಚಾರ ಆರಂಭ; ಟಿಕೆಟ್ ಬುಕಿಂಗ್​ ಸಾಧ್ಯವಾಗದೆ ಪ್ರಯಾಣಿಕರ ಪರದಾಟ

Indian Railways: ನಾಳೆಯಿಂದ 15 ಜೋಡಿ ವಿಶೇಷ ರೈಲುಗಳ ಸಂಚಾರ ಶುರುವಾಗಲಿದೆ. ಅದಕ್ಕಾಗಿ ಇಂದು ಸಂಜೆ 4 ಗಂಟೆಯಿಂದ ಐಆರ್​ಸಿಟಿಸಿ ವೆಬ್​ಸೈಟ್​ನಲ್ಲಿ ಟಿಕೆಟ್ ಬುಕಿಂಗ್​ಗೆ ಅವಕಾಶ ನೀಡಲಾಗಿತ್ತು. ಆದರೆ, ತಾಂತ್ರಿಕ ಸಮಸ್ಯೆಯಿಂದಾಗಿ ಟಿಕೆಟ್ ಬುಕಿಂಗ್ ಸಾಧ್ಯವಾಗುತ್ತಿಲ್ಲ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನವದೆಹಲಿ (ಮೇ 11): ನಾಳೆಯಿಂದ ದೇಶದೆಲ್ಲೆಡೆ ರೈಲು ಸಂಚಾರವನ್ನು ಪುನರಾರಂಭಿಸುವುದಾಗಿ ಘೋಷಿಸಿದ್ದ ರೈಲ್ವೆ ಸಚಿವಾಲಯ ಇಂದು ಸಂಜೆಯಿಂದ ಟಿಕೆಟ್ ಬುಕಿಂಗ್​ಗೆ ಅವಕಾಶ ಕಲ್ಪಿಸಿತ್ತು. ಆದರೆ, ತಾಂತ್ರಿಕ ಕಾರಣದಿಂದಾಗಿ ಟಿಕೆಟ್ ಬುಕಿಂಗ್ ಸಾಧ್ಯವಾಗುತ್ತಿಲ್ಲ. ಲಾಕ್​ಡೌನ್​ನಿಂದಾಗಿ ಒಂದೂವರೆ ತಿಂಗಳಿಗೂ ಹೆಚ್ಚು ಸಮಯದಿಂದ ದೇಶದಲ್ಲಿ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಇದರಿಂದಾಗಿ ಲಕ್ಷಾಂತರ ಜನರು ಪರದಾಡಬೇಕಾದ ಪರಿಸ್ಥಿತಿ ಎದುರಾಗಿತ್ತು.

ಈ ಹಿನ್ನೆಲೆಯಲ್ಲಿ ನಾಳೆಯಿಂದ ಅಂದರೆ ಮೇ 12ರಿಂದ ರೈಲು ಸಂಚಾರವನ್ನು ಆರಂಭಿಸಲು ರೈಲ್ವೆ ಸಚಿವಾಲಯ ನಿರ್ಧರಿಸಿತ್ತು. ಅದಕ್ಕಾಗಿ ಇಂದು ಸಂಜೆ 4 ಗಂಟೆಯಿಂದ ಐಆರ್​ಸಿಟಿಸಿ ವೆಬ್​ಸೈಟ್​ನಲ್ಲಿ ಟಿಕೆಟ್ ಬುಕಿಂಗ್​ಗೆ ಅವಕಾಶ ನೀಡುವುದಾಗಿ ಘೋಷಿಸಲಾಗಿತ್ತು. ಆದರೆ, ತಾಂತ್ರಿಕ ಸಮಸ್ಯೆಯಿಂದಾಗಿ ಟಿಕೆಟ್ ಬುಕಿಂಗ್ ಸಾಧ್ಯವಾಗುತ್ತಿಲ್ಲ.ಮೇ 12ರಿಂದ 15 ಜೋಡಿ ವಿಶೇಷ ರೈಲುಗಳು ಸಂಚರಿಸುವುದಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿತ್ತು. ದಿಬ್ರುಘರ್, ಅಗರ್ತಲ, ಹೌರಾ, ಪಾಟ್ನಾ, ಬಿಲಾಸ್ ಪುರ್, ರಾಂಚಿ, ಭುವನೇಶ್ವರ್, ಸಿಕಂದರಾಬಾದ್, ಬೆಂಗಳೂರು, ಚೆನ್ನೈ, ತಿರುವನಂತಪುರ, ಮಡಗಾಂವ್, ಮುಂಬೈ, ಅಹಮದಾಬಾದ್ ಮತ್ತು ಜಮ್ಮುವಿನ ನಡುವೆ ರೈಲುಗಳು ಸಂಚರಿಸುವುದಾಗಿ ತಿಳಿಸಲಾಗಿತ್ತು. ಉಳಿದಂತೆ ವಲಸೆ ಕಾರ್ಮಿಕರಿಗಾಗಿ ವಿಶೇಷ ಶ್ರಮಿಕ್ ರೈಲುಗಳ ಸಂಚಾರ ಮಾಮೂಲಿನಂತೆ ನಡೆಯಲಿದೆ.

ಇದನ್ನೂ ಓದಿ: ಶ್ರಮಿಕ್ ರೈಲಿನಲ್ಲಿನ್ನು 1,700 ಪ್ರಯಾಣಿಕರು, 3 ಕಡೆ ಸ್ಟಾಪ್; ಕಾರ್ಮಿಕರಿಗೆ ಅನುಕೂಲ ಕಲ್ಪಿಸಿದ ರೈಲ್ವೆ ಇಲಾಖೆ

ವಿಶೇಷ ರೈಲುಗಳಿಗೆ ಆನ್‌ಲೈನ್ ಬುಕ್ಕಿಂಗ್ ಸೋಮವಾರ 4 ಗಂಟೆಯಿಂದಲೇ ಆರಂಭಿಸಲಾಗುವುದು. ಈ ಬುಕ್ಕಿಂಗ್ ಐಆರ್‌ಸಿಟಿಸಿ ವೆಬ್‌ಸೈಟ್ ಮೂಲಕ ಮಾತ್ರ ಲಭ್ಯವಿರುತ್ತದೆ. ರೈಲು ನಿಲ್ದಾಣಗಳಲ್ಲಿ ಯಾವುದೇ ಟಿಕೆಟ್ ಕೌಂಟರ್ ಇರುವುದಿಲ್ಲ. ಕೇವಲ ಅಧಿಕೃತ ಟಿಕೆಟ್ ಹೊಂದಿರುವ ಪ್ರಯಾಣಿಕರನ್ನು ಮಾತ್ರ ರೈಲು ನಿಲ್ದಾಣದ ಒಳಪ್ರವೇಶಿಸಲು ಅವಕಾಶ ನೀಡಲಾಗುವುದು. ರೈಲು ನಿಲ್ದಾಣಗಳನ್ನು ಪ್ರವೇಶಿಸುವ ಪ್ರಯಾಣಿಕರು ಮಾಸ್ಕ್ ಧರಿಸುವುದು ಕಡ್ಡಾಯ. ನಿಲ್ದಾಣದಲ್ಲಿ ಪ್ರತಿಯೊಬ್ಬರಿಗೂ ಥರ್ಮಲ್ ಸ್ಕ್ರೀನಿಂಗ್ ನಡೆಸಲಾಗುತ್ತದೆ. ಅಲ್ಲಿ ಕೊರೋನಾ ಸೋಂಕಿನ ಲಕ್ಷಣಗಳು ಕಂಡು ಬಂದರೆ ಅವರಿಗೆ ಪ್ರಯಾಣಕ್ಕೆ ಅವಕಾಶವಿಲ್ಲ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿತ್ತು.

ಇದನ್ನೂ ಓದಿ: ದೆಹಲಿಯಿಂದ ಬೆಂಗಳೂರಿಗೆ ವಲಸೆ ಕಾರ್ಮಿಕರು, ವಿದ್ಯಾರ್ಥಿಗಳಿಗೆ ರೈಲಿನ ವ್ಯವಸ್ಥೆ

ಆದರೆ, ಇದೀಗ ತಾಂತ್ರಿಕ ತೊಂದರೆಯಿಂದ ಟಿಕೆಟ್ ಬುಕಿಂಗ್ ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಪ್ರಯಾಣಿಕರಿಗೆ ಮತ್ತೊಂದು ಸಮಸ್ಯೆ ಎದುರಾದಂತಾಗಿದೆ. ಐಆರ್​ಸಿಟಿಸಿ ವೆಬ್​ಸೈಟ್​ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿರುವುದರಿಂದ ಸಂಜೆ 4ಕ್ಕೆ ಆರಂಭವಾಗಬೇಕಿದ್ದ ರೈಲ್ವೆ ಟಿಕೆಟ್ ಬುಕಿಂಗ್ ಇನ್ನೂ ಶುರುವಾಗಿಲ್ಲ. ಸ್ವಲ್ಪ ಸಮಯದಲ್ಲಿ ಈ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ರೈಲ್ವೆ ಸಚಿವಾಲಯ ತನ್ನ ಟ್ವಿಟ್ಟರ್​ ಖಾತೆಯಲ್ಲಿ ತಿಳಿಸಿದೆ.
First published: