IRCTC Refund: ಲಾಕ್​ಡೌನ್ ವೇಳೆ ಟಿಕೆಟ್ ಬುಕ್ ಮಾಡಿ ರೈಲಿನಲ್ಲಿ ಪ್ರಯಾಣಿಸಲು ಆಗದಿದ್ದರೆ ನಿಮಗೆ ರೀಫಂಡ ಆಗೋದೆಷ್ಟು ಗೊತ್ತಾ?

IRCTC Refund rules 2020: ಪ್ರತಿ ಪ್ರಯಾಣಿಕರನ್ನು ರೈಲು ಹತ್ತುವ ಮುನ್ನ ಪರಿಶೀಲಿಸಿಯೇ ರೈಲಿನ ಒಳಗೆ ಬಿಡಲಾಗುತ್ತಿದೆ. ಇನ್ನು, ಕೊರೋನಾ ಲಕ್ಷಣಗಳು ಕಂಡು ಬಂದರೆ ಅಂಥ ಪ್ರಯಾಣಿಕರಿಗೆ ರೈಲನ್ನು ಹತ್ತಲು ಇಲಾಖೆ ಅವಕಾಶ ನೀಡುತ್ತಿಲ್ಲ. ಇದನ್ನು, ಇಲಾಕೆ ಕಟ್ಟು ನಿಟ್ಟಾಗಿ ಜಾರಿಗೆ ಪಾಲಿಸುತ್ತಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಬೇರೆ ಬೇರೆ ರಾಜ್ಯಗಳಲ್ಲಿ ಸಿಲುಕಿರುವವರನ್ನು ಮನೆಗೆ ತಲುಪಿಸವ ಕಾರ್ಯವನ್ನು ರೈಲ್ವೆ ಇಲಾಖೆ ಮಾಡುತ್ತಿದೆ. ಈಗಾಗಲೇ ದೆಹಲಿ ಸೇರಿದಂತೆ ಬೇರೆ ಬೇರೆ ಕಡೆಗಳಿಂದ ವಿಶೇಷ ರೈಲುಗಳನ್ನು ಮನೆಗೆ ಬಿಡುವ ಕೆಲಸವನ್ನು ಇಲಾಖೆ ಮಾಡುತ್ತಿದೆ.

    ಪ್ರತಿ ಪ್ರಯಾಣಿಕರನ್ನು ರೈಲು ಹತ್ತುವ ಮುನ್ನ ಪರಿಶೀಲಿಸಿಯೇ ರೈಲಿನ ಒಳಗೆ ಬಿಡಲಾಗುತ್ತಿದೆ. ಇನ್ನು, ಕೊರೋನಾ ಲಕ್ಷಣಗಳು ಕಂಡು ಬಂದರೆ ಅಂಥ ಪ್ರಯಾಣಿಕರಿಗೆ ರೈಲನ್ನು ಹತ್ತಲು ಇಲಾಖೆ ಅವಕಾಶ ನೀಡುತ್ತಿಲ್ಲ. ಇದನ್ನು, ಇಲಾಕೆ ಕಟ್ಟು ನಿಟ್ಟಾಗಿ ಜಾರಿಗೆ ಪಾಲಿಸುತ್ತಿದೆ.

    ಹಾಗಾದರೆ, ಇಂಥ ಪ್ರಯಾಣಿಕರಿಗ ಹಣ ವಾಪಾಸು ನೀಡಲಾಗುತ್ತದೆಯೇ? ಇದಕ್ಕೆ ರೈಲ್ವೆ ಇಲಾಖೆ ಉತ್ತರ ನೀಡಿದೆ. ಒಂದೊಮ್ಮೆ ಸ್ಕ್ರೀನಿಂಗ್​ ವೇಳೆ ಕೊರೋನಾ ಲಕ್ಷಣ ಕಂಡು ಬಂದರೆ, ಅಂಥ ವ್ಯಕ್ತಿಗೆ ರೈಲಿನಲ್ಲಿ ಪ್ರಯಾಣಿಸಲು ಅವಕಾಶವಿಲ್ಲ. ಹೀಗಾಗಿ, ಸಂಪೂರ್ಣ ಹಣವನ್ನು ಇಲಾಖೆ ಹಿಂದಿರುಗಿಸಲಿದೆ.

    ಇದನ್ನೂ ಓದಿ: ಅಧಿಕಾರಿಗಳು ಕ್ವಾರಂಟೈನ್​ ಮಾಡ್ತಿಲ್ಲ, ಊರಿನವರೂ ಸೇರಿಸಿಕೊಳ್ತಿಲ್ಲ; ಇದು ನೆರೆಯ ರಾಜ್ಯದಿಂದ ಬಂದವರ ಕಣ್ಣೀರ ಕಥೆ

    ಒಂದೇ ಪಿಎನ್​ಆರ್​ ನಂಬರ್​ ಅಡಿಯಲ್ಲಿ ಹಲವು ಟಿಕೆಟ್​ಗಳು ಬುಕ್​ ಆಗಿವೆ ಎಂದುಕೊಳ್ಳೋಣ. ಒಂದು ಪ್ರಯಾಣಿಕ ರೈಲಿನಲ್ಲಿ ಪ್ರಯಾಣಿಸಲು ಅನರ್ಹ ಎನ್ನುವ ರಿಪೋರ್ಟ್ ಬಂದಿತೆಂದಿಟ್ಟುಕೊಳ್ಳಿ. ಈ ವೇಳೆ ಆತನ ಜೊತಿಗಿದ್ದ ಎಲ್ಲ ಪ್ರಯಾಣಿಕರು ಪ್ರಯಾಣ ಮಾಡಲು ಇಚ್ಛಿಸದಿದ್ದರೆ ಈ ವೇಳೆ ಎಲ್ಲ ಹಣವನ್ನು ರೀಫಂಡ್​ ಮಾಡಲಾಗುತ್ತದೆ.
    First published: