News18 India World Cup 2019

IRCTC Offer: ಭಾರತೀಯ ರೈಲ್ವೆ ವಿಶೇಷ ಕೊಡುಗೆ: ಕಾಶ್ಮೀರಕ್ಕೆ ಕಡಿಮೆ ವೆಚ್ಚದಲ್ಲಿ 6 ದಿನಗಳ ಪ್ರವಾಸ

ಭಾರತೀಯ ರೈಲ್ವೆ ಇಲಾಖೆ ಇದೇ ಮೊದಲ ಬಾರಿ 'ಕಾಶ್ಮೀರ ಟೂರ್​ ಪ್ಯಾಕೇಜ್​' ನೀಡಲು ಮುಂದಾಗಿದೆ. ಆರು ದಿನಗಳ ಕಾಲ ಕಣಿವೆ ರಾಜ್ಯದ ಸೊಬಗು ಕಣ್ತುಂಬಿಕೊಳ್ಳಬಹುದಾಗಿದೆ. ಕೇವಲ 22.840 ರೂ  ಐಆರ್​ಸಿಟಿಸಿ ಈ ಸೇವೆ ಒದಗಿಸಲು ಮುಂದಾಗಿದೆ.

Seema.R | news18
Updated:June 10, 2019, 6:07 PM IST
IRCTC Offer: ಭಾರತೀಯ ರೈಲ್ವೆ ವಿಶೇಷ ಕೊಡುಗೆ: ಕಾಶ್ಮೀರಕ್ಕೆ ಕಡಿಮೆ ವೆಚ್ಚದಲ್ಲಿ 6 ದಿನಗಳ ಪ್ರವಾಸ
ಕಾಶ್ಮೀರ ಚಿತ್ರಣ
Seema.R | news18
Updated: June 10, 2019, 6:07 PM IST
ಕಣಿವೆ ನಾಡು ಕಾಶ್ಮೀರ ಪ್ರವಾಸಿಗರ ಪಾಲಿನ ಸ್ವರ್ಗದಂತೆ. ಬಿಳಿಯ ಮಂಜು ಹೊಂದಿಕೊಂಡಿರುವ ಬೆಟ್ಟಗಳು, ಚುಮು ಚುಮು ಚಳಿಯ ಅನುಭೂತಿ ಪಡೆಯಬೇಕೆಂಬ ನಿಮ್ಮ ಆಸೆ ಪೂರೈಸಲು ಈಗ ಭಾರತೀಯ ರೈಲ್ವೆ ಇಲಾಖೆ ಮುಂದಾಗಿದೆ.

ಭಾರತೀಯ ರೈಲ್ವೆ ಇಲಾಖೆ ಇದೇ ಮೊದಲ ಬಾರಿ 'ಕಾಶ್ಮೀರ ಟೂರ್​ ಪ್ಯಾಕೇಜ್​' ನೀಡಲು ಮುಂದಾಗಿದೆ. ಆರು ದಿನಗಳ ಕಾಲ ಕಣಿವೆ ರಾಜ್ಯದ ಸೊಬಗು ಕಣ್ತುಂಬಿಕೊಳ್ಳಬಹುದಾಗಿದೆ. ಕೇವಲ 22.840 ರೂ  ಐಆರ್​ಸಿಟಿಸಿ ಈ ಸೇವೆ ಒದಗಿಸಲು ಮುಂದಾಗಿದೆ.

ಇದನ್ನು ಓದಿ: ಶತಕದ ಸಂಭ್ರಮದಲ್ಲಿ ಕರ್ನಾಟಕ ಜೈನ್​ ಅಸೋಸಿಯೇಷನ್

ಐದು ರಾತ್ರಿ ಆರು ದಿನಗಳ ಈ ಪ್ರವಾಸ ಹೈದ್ರಾಬಾದ್​ನಿಂದ ಶುರುವಾಗಲಿದೆ. ಹೈದ್ರಾಬಾದ್​ನಿಂದ ದೆಹಲಿಗೆ ಸ್ಪೈಸ್​ ಜೆಟ್​ ವಿಮಾನದ ಮೂಲಕ ಕರೆದುಕೊಂಡು ಹೋಗಿ ಅಲ್ಲಿಂದ ಶ್ರೀನಗರಕ್ಕೆ ವಿಮಾನ ಪ್ರವಾಸ. ಬಳಿಕ ಅಲ್ಲಿ ಐಷಾರಾಮಿ ಹೋಟೆಲ್​ನಲ್ಲಿ ತಂಗಲಿದ್ದು, ಮಾರನೇ ದಿನದಿಂದ ನಿಮ್ಮ ಪ್ರವಾಸ ಶುರುವಾಗಲಿದೆ.



ವಿಶೇಷವೆಂದರೆ ಈ ಪ್ಯಾಕೇಜ್​ನಲ್ಲಿ ಬೋಟ್​ ಹೌಸ್​ಟೂರ್​​ ಕೂಡ ಇರಲಿದೆ. ಭೂಮಿ ಮೇಲಿನ ಸ್ವರ್ಗ ಕ್ಕೆ ಪ್ರವಾಸ ಎಂಬ ವ್ಯಾಖ್ಯಾನದಲ್ಲಿ ಈ ವಿಶೇಷ ಟೂರ್​ ಪ್ಯಾಕೇಜಿನ ಕುರಿತು ಐಆರ್​ಸಿಟಿಸಿ ಕೂಡ ಟ್ವೀಟ್​ ಮಾಡಿದೆ. ಈ ಕುರಿತ ವಿವರ ಇಲ್ಲಿದೆ.



First published:June 10, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...