ಉತ್ತರ ರೈಲ್ವೆಯು ಶತಾಬ್ಧಿ ಸ್ಪೆಶಲ್ ರೈಲು / ಎಕ್ಸ್ಪ್ರೆಸ್ ಸ್ಪೆಶಲ್ ರೈಲುಗಳು ಮತ್ತು ರೈಲು ಮೋಟಾರ್ ಕಾರು ಸೇವೆಗಳನ್ನು ಮತ್ತೆ ಆರಂಭಿಸಲು ನಿರ್ಧರಿಸಿದೆ. ಕೊರೋನಾ ವೈರಸ್ ಸಾಂಕ್ರಾಮಿಕ ರೋಗದ ಕಾರಣದಿಂದ ಈ ರೈಲು ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು. ಜೂನ್ 21ರಿಂದ 50ಕ್ಕೂ ಹೆಚ್ಚು ವಿಶೇಷ ರೈಲುಗಳ ಸೇವೆಗಳನ್ನು ಪುನರ್ ಆರಂಭಿಸಲು ಭಾರತೀಯ ರೈಲ್ವೆ ಯೋಜಿಸಿದೆ ಎಂದು ಕೇಂದ್ರ ರೈಲ್ವೆ ಸಚಿವ ಪಿಯೂಶ್ ಗೋಯಲ್ ಟ್ವಿಟ್ಟರ್ ಖಾತೆಯಲ್ಲಿ ಘೋಷಿಸಿದ್ದಾರೆ. ಮುಂಬರುವ ಕೆಲವೇ ದಿನಗಳಲ್ಲಿ ಭಾರತೀಯ ರೈಲ್ವೆಯು ಹಲವಾರು ರೈಲು ಸೇವೆಗಳನ್ನು ಪುನರ್ ಆರಂಭಿಸಲಿದೆ ಎಂದು ಅವರು ಟ್ವಿಟ್ಟರ್ನಲ್ಲಿ ಪ್ರಕಟಿಸಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಜೂನ್ 25ರಿಂದ ಗೋರಖ್ಪುರದಿಂದ ಬಾಂದ್ರಾ ಟರ್ಮಿನಸ್ಗೆ ಬೇಸಿಗೆ ವಿಶೇಷ ರೈಲು ಸೇವೆ ಪುನರಾರಂಭಗೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ. ತಮ್ಮ ಟ್ವೀಟ್ ಜೊತೆಯಲ್ಲಿಯೇ ಸಚಿವರು , ಜೂನ್ 21ರಿಂದ ಚಲಿಸಲಿರುವ ರೈಲುಗಳ ಪಟ್ಟಿಯನ್ನು ಕೂಡ ಬಿಡುಗಡೆ ಮಾಡಿದ್ದಾರೆ.
ರಾಜ್ಯಗಳಲ್ಲಿ ಲಾಕ್ಡೌನ್ ಸಡಿಲಗೊಂಡಿರುವುದರಿಂದ , ಉತ್ತರ ರೈಲ್ವೆಯು ಶತಾಬ್ಧಿ ಸ್ಪೆಶಲ್ ರೈಲು / ಎಕ್ಸ್ಪ್ರೆಸ್ ಸ್ಪೆಶಲ್ ರೈಲುಗಳು ಮತ್ತು ರೈಲು ಮೋಟಾರ್ ಕಾರು ಸೇವೆಗಳನ್ನು ಮತ್ತೆ ಆರಂಭಿಸಲು ನಿರ್ಧರಿಸಿದೆ. ಕೊರೋನಾ ವೈರಸ್ ಸಾಂಕ್ರಾಮಿಕ ರೋಗದ ಕಾರಣದಿಂದ ಈ ರೈಲು ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು.
ರೈಲು ಸೇವೆಗಳ ಪುನರ್ ಆರಂಭದ ಕುರಿತು ಹೆಚ್ಚಿನ ಮಾಹಿತಿಗಾಗಿ , ಪ್ರಯಾಣಿಕರು ಸಹಾಯವಾಣಿ ಸಂಖ್ಯೆ 139ನ್ನು ಸಂಪರ್ಕಿಸಬಹುದು ಅಥವಾ ಭಾರತೀಯ ರೈಲ್ವೆಯ ವೆಬ್ಸೈಟ್ https://enquiry.indianrail.gov.in/mntes/ಅಥವಾ ಎನ್ಟಿಇಎಸ್ ಆ್ಯಪ್ಗೆ ಭೇಟಿ ನೀಡಬಹುದು ಎಂದು ಭಾರತೀಯ ರೈಲ್ವೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಪ್ರಯಾಣದ ಸಂದರ್ಭದಲ್ಲಿ ಕೋವಿಡ್ -19ಗೆ ಸಂಬಂಧಿಸಿದ ಎಲ್ಲಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಉತ್ತರ ರೈಲ್ವೆಯು ಪ್ರಯಾಣಿಕರಿಗೆ ಸೂಚಿಸಿದೆ.
ಶತಾಬ್ಧಿ, ಡುರೊಂಟೋ ಎಕ್ಸ್ಪ್ರೆಸ್ ಮತ್ತು ಹಲವಾರು ವಿಶೇಷ ರೈಲುಗಳ ಸೇವೆಗಳು ಪುನರ್ ಆರಂಭಗೊಳ್ಳಲಿವೆ. ಹೊಸದೆಹಲಿ- ಕಾಲ್ಕಾ ಶತಾಬ್ಧಿ, ಹೊಸದೆಹಲಿ-ಡೆಹರಾಡೂನ್ ಶತಾಬ್ಧಿ, ಹೊಸದೆಹಲಿ-ಅಮೃತ್ಸರ್ ಶತಾಬ್ಧಿ, ದೆಹಲಿ ಸರಾಯ್ ರೊಹಿಲ್ಲಾ- ಜಮ್ಮು ತವಿ ಡುರೊಂಟೋ, ಮಾತಾ ವೈಷ್ಣೋದೇವಿ ಕತ್ರಾ-ಹೊಸ ದೆಹಲಿ ಶ್ರೀ ಶಕ್ತಿ ಎಕ್ಸ್ಪ್ರೆಸ್, ಲಕ್ನೋ-ಪ್ರಯಾಗ್ ರಾಜ್ ಸಂಗಮ್ ಎಕ್ಸ್ಪ್ರೆಸ್, ಹೊಸ ದೆಹಲಿ-ಚಂಡಿಘಡ ಶತಾಭ್ಧಿ ಎಕ್ಸ್ಪ್ರೆಸ್, ಶಿಮ್ಲಾ –ಕಾಲ್ಕಾ ಎಕ್ಸ್ಪ್ರೆಸ್ ಸ್ಪೆಶಲ್, ಜಮ್ಮು ತವಿ- ಯೋಗನಗರಿ ರಿಶಿಕೇಷ್ ಎಕ್ಸ್ಪ್ರೆಸ್ ಸ್ಪೆಶಲ್,
ಪ್ರಯಾಗ್ ರಾಜ್ ಸಂಗಮ್ –ಮಂಕಾಪುರ್ ಜಂಕ್ಷನ್ ಎಕ್ಸ್ಪ್ರೆಸ್ ಸ್ಪೆಶಲ್, ಚಾಪ್ರಾ-ಫರೂಖಾಬಾದ್ ಎಕ್ಸ್ಪ್ರೆಸ್ ಸ್ಪೆಶಲ್, ಗೋರಖ್ಪುರ್ –ಆನಂದ್ ವಿಹಾರ್ ಎಕ್ಸ್ಪ್ರೆಸ್ ಸ್ಪೆಶಲ್, ಜೋಧ್ಪುರ್-ದೆಹಲಿ ಸರಾಯ್ ರೊಹಿಲ್ಲಾ ಸೂಪರ್ ಫಾಸ್ಟ್ ಸ್ಪೆಶಲ್, ಗೋಮತಿ ನಗರ್-ಚಾಪ್ರಾ ಕಚೇಹರಿ ಎಕ್ಸ್ಪ್ರೆಸ್ ಸ್ಪೆಶಲ್, ಬಿಲಾಸ್ಪುರ್-ಹೊಸ ದೆಹಲಿ ಎಕ್ಸ್ಪ್ರೆಸ್ ಸ್ಪೆಶಲ್, ಶ್ರೀ ಗಂಗಾನಗರ್-ದೆಹಲಿ ಜಂಕ್ಷನ್ ಎಕ್ಸ್ಪ್ರೆಸ್ ಸ್ಪೆಶಲ್ ಸೇರಿದಂತೆ ಹಲವಾರು ರೈಲು ಸೇವೆಗಳನ್ನು ರೈಲ್ವೆ ಇಲಾಖೆ ಬಿಡುಗಡೆ ಮಾಡಿದ ಪಟ್ಟಿ ಒಳಗೊಂಡಿದೆ.
ಈ ಪಟ್ಟಿಯಲ್ಲಿ ಇರುವ ಹೆಚ್ಚಿನ ರೈಲುಗಳು ನಿತ್ಯವೂ ಚಲಿಸಲಿವೆ. ಕೊರೋನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತೀಯ ರೈಲ್ವೇ ಇಲಾಖೆಯು, ಹಬ್ಬಗಳನ್ನು ಗಮನದಲ್ಲಿ ಇಟ್ಟುಕೊಂಡು ಹಲವಾರು ವಿಶೇಷ ರೈಲುಗಳನ್ನು ಓಡಿಸುತ್ತಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ