50 ರೈಲ್ವೆ ನಿಲ್ದಾಣ ಮತ್ತು 150 ರೈಲುಗಳ ಖಾಸಗಿಕರಣಕ್ಕೆ ಕೇಂದ್ರದಿಂದ ಸಮಿತಿ ರಚನೆ ಸಾಧ್ಯತೆ

ರೈಲ್ವೆ ಇಲಾಖೆಯನ್ನು ಒಂದು ಮಟ್ಟದವರೆಗೆ ಖಾಸಗಿಕರಣ ಮಾಡುವ ಪ್ರಸ್ತಾವ ಕೆಲವು ವರ್ಷಗಳಿಂದ ಇದೆ. ಸುಮಾರು 400 ರೈಲ್ವೆ ನಿಲ್ದಾಣಗಳನ್ನು ವಿಶ್ವ ದರ್ಜೆಯ ಗುಣಮಟ್ಟಕ್ಕೆ ಅಭಿವೃದ್ಧಿಪಡಿಸುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ. ಆದರೆ, ಈವರೆಗೆ ಬೆರಳೆಣಿಕೆಯಷ್ಟು ನಿಲ್ದಾಣಗಳನ್ನು ಮಾತ್ರ ಆಧುನೀಕರಣಗೊಳಿಸಲಾಗಿದೆ.

Vijayasarthy SN | news18
Updated:October 10, 2019, 10:20 PM IST
50 ರೈಲ್ವೆ ನಿಲ್ದಾಣ ಮತ್ತು 150 ರೈಲುಗಳ ಖಾಸಗಿಕರಣಕ್ಕೆ ಕೇಂದ್ರದಿಂದ ಸಮಿತಿ ರಚನೆ ಸಾಧ್ಯತೆ
ಸಾಂದರ್ಭಿಕ ಚಿತ್ರ
  • News18
  • Last Updated: October 10, 2019, 10:20 PM IST
  • Share this:
ನವದೆಹಲಿ(ಅ. 10): ರೈಲ್ವೆ ಇಲಾಖೆಯನ್ನು ಪಾಕ್ಷಿಕವಾಗಿ ಖಾಸಗಿಕರಣ ಮಾಡಲು ಉದ್ದೇಶಿಸಿರುವ ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಪ್ರಾರಂಭಿಕ ಹಂತದಲ್ಲಿ 150 ಟ್ರೈನುಗಳು ಹಾಗೂ 50 ರೈಲ್ವೆ ನಿಲ್ದಾಣಗಳನ್ನು ಖಾಸಗಿಯವರಿಗೆ ವಹಿಸಲು ಯೋಜಿಸಿದೆ. ನಿಗದಿತ ಅವಧಿಯಲ್ಲಿ ಈ ಕಾರ್ಯ ನೆರವೇರಿಸಲು ನೀಲನಕ್ಷೆ ತಯಾರಿಸುವ ಸಲುವಾಗಿ ಸಮಿತಿಯೊಂದನ್ನು ರಚಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಶೀಘ್ರದಲ್ಲೇ ಈ ಸಮಿತಿ ರಚನೆಯಾಗುವ ಸಾಧ್ಯತೆ ಇದೆ.

ನಿಗದಿತ ಸಮಯದೊಳಗೆ 150 ಟ್ರೈನು ಮತ್ತು 50 ರೈಲ್ವೆ ನಿಲ್ದಾಣಗಳ ನಿರ್ವಹಣೆಯನ್ನು ಖಾಸಗಿಯವರಿಗೆ ವಹಿಸುವ ಪ್ರಕ್ರಿಯೆಯನ್ನು ಈ ಸಮಿತಿ ರೂಪಿಸಲಿದೆ. ಈ ಸಂಬಂಧ, ನೀತಿ ಆಯೋಗ್ ಸಿಇಓ ಅಮಿತಾಭ್ ಕಾಂತ್ ಅವರು ರೈಲ್ವೆ ಮಂಡಳಿ ಅಧ್ಯಕ್ಷ ವಿ.ಕೆ. ಯಾದವ್ ಅವರಿಗೆ ಪತ್ರ ಬರೆದು ತಿಳಿಸಿದ್ದಾರೆ. ಈ ಸಶಕ್ತ ಸಮಿತಿಯಲ್ಲಿ ಅಮಿತಾಭ್ ಕಾಂತ್, ವಿ.ಕೆ. ಯಾದವ್ ಅವರಿಬ್ಬರೂ ಇರಲಿದ್ದಾರೆ. ಜೊತೆಗೆ, ಆರ್ಥಿಕ ವ್ಯವಹಾರ ಮತ್ತು ವಸತಿ ಇಲಾಖೆಯ ಕಾರ್ಯದರ್ಶಿಗಳೂ ಕೂಡ ಈ ಸಮಿತಿಯ ಭಾಗವಾಗಿರಲಿದ್ದಾರೆ.

ಇದನ್ನೂ ಓದಿ: ನಾವು ಕಾಶ್ಮೀರ ಗಮನಿಸುತ್ತಿದ್ದೇವೆ ಎಂದು ಚೀನಾ ಹೇಳಿದಾಗ ನಾವೂ ಹಾಂಕಾಂಗ್ ನೋಡುತ್ತಿದ್ದೇವೆ ಎಂದು ಮೋದಿ ಏಕೆ ಹೇಳಲಿಲ್ಲ; ಮನೀಶ್ ತಿವಾರಿ ಪ್ರಶ್ನೆ

ರೈಲ್ವೆ ಇಲಾಖೆಯನ್ನು ಒಂದು ಮಟ್ಟದವರೆಗೆ ಖಾಸಗಿಕರಣ ಮಾಡುವ ಪ್ರಸ್ತಾವ ಕೆಲವು ವರ್ಷಗಳಿಂದ ಇದೆ. ಸುಮಾರು 400 ರೈಲ್ವೆ ನಿಲ್ದಾಣಗಳನ್ನು ವಿಶ್ವ ದರ್ಜೆಯ ಗುಣಮಟ್ಟಕ್ಕೆ ಅಭಿವೃದ್ಧಿಪಡಿಸುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ. ಆದರೆ, ಈವರೆಗೆ ಬೆರಳೆಣಿಕೆಯಷ್ಟು ನಿಲ್ದಾಣಗಳನ್ನು ಮಾತ್ರ ಆಧುನೀಕರಣಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕನಿಷ್ಠ ಐವತ್ತಾದರೂ ರೈಲ್ವೆ ನಿಲ್ದಾಣಗಳನ್ನು ತ್ವರಿತವಾಗಿ ಅಭಿವೃದ್ಧಿಗೊಳಿಸಲು ಖಾಸಗಿಯವರಿಗೆ ವಹಿಸಲು ಆದ್ಯತೆ ಕೊಡಬೇಕಿದೆ. ರೈಲ್ವೆ ಸಚಿವರೊಂದಿಗೆ ತಾನು ವಿವರವಾಗಿ ಮಾತನಾಡಿದ್ದೇನೆ ಎಂದು ನೀತಿ ಆಯೋಗ್ ಮುಖ್ಯ ಕಾರ್ಯವಾಹಕ ಅಧಿಕಾರಿ ಅಮಿತಾಭ್ ಕಾಂತ್ ತಿಳಿಸಿದ್ದಾರೆ.

ರೈಲ್ವೆ ಇಲಾಖೆ ಕೂಡ ತನ್ನ ಕೆಲ ಪ್ಯಾಸೆಂಜರ್ ರೈಲುಗಳ ನಿರ್ವಹಣೆಯನ್ನು ಖಾಸಗೀಕರಣಗೊಳಿಸುವ ಉದ್ದೇಶ ಹೊಂದಿದೆ. ಮೊದಲ ಹಂತವಾಗಿ 150 ರೈಲುಗಳ ನಿರ್ವಹಣೆಯನ್ನು ಖಾಸಗಿಯವರಿಗೆ ವಹಿಸುವ ಸಾಧ್ಯತೆ ಇದೆ ಎಂದು ಅಮಿತಾಭ್ ಕಾಂತ್ ಹೇಳಿದ್ದಾರೆ.

ಇದೇ ರೀತಿಯಾಗಿ ಇತ್ತೀಚೆಗೆ ಆರು ವಿಮಾನ ನಿಲ್ದಾಣಗಳ ನಿರ್ವಹಣೆಯನ್ನು ಖಾಸಗಿಯವರಿಗೆ ವಹಿಸಲು ಎಂಪವರ್ಡ್ ಗ್ರೂಪ್ ರಚಿಸಿ ಯಶಸ್ವಿಯಾಗಿ ಕಾರ್ಯ ಮುಗಿಸಲಾಗಿತ್ತು. ಇದೇ ಅನುಭವದ ಆಧಾರದ ಮೇಲೆ ರೈಲ್ವೆ ನಿಲ್ದಾಣಗಳನ್ನು ಮೇಲ್ದರ್ಜೆಗೆ ಏರಿಸಲು ಯೋಜಿಸಲಾಗಿದೆ. ಈಗಾಗಲೇ ಲಕ್ನೋ-ಡೆಲ್ಲಿ ಮಾರ್ಗದ ತೇಜಸ್ ಎಕ್ಸ್​ಪ್ರೆಸ್ ರೈಲಿನ ನಿರ್ವಹಣೆಯನ್ನು ಖಾಸಗಿಯವರಿಗೆ ವಹಿಸಲಾಗಿದೆ. ಈ ರೈಲು ಅಕ್ಟೋಬರ್ 4ರಿಂದ ಚಾಲನೆಯಲ್ಲಿದೆ.

(ಪಿಟಿಐ ವರದಿ)ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published:October 10, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading