ರೈಲು ಪ್ರಯಾಣಿಕರ ಗಮನಕ್ಕೆ: ಜನರಲ್ ಟಿಕೆಟ್​ನಿಂದ AC ಕೋಚ್​ನಲ್ಲಿ ಪ್ರಯಾಣಿಸಬಹುದು

news18
Updated:October 25, 2018, 3:41 PM IST
ರೈಲು ಪ್ರಯಾಣಿಕರ ಗಮನಕ್ಕೆ: ಜನರಲ್ ಟಿಕೆಟ್​ನಿಂದ AC ಕೋಚ್​ನಲ್ಲಿ ಪ್ರಯಾಣಿಸಬಹುದು
  • News18
  • Last Updated: October 25, 2018, 3:41 PM IST
  • Share this:
-ನ್ಯೂಸ್ 18 ಕನ್ನಡ

ರೈಲು ಪ್ರಯಾಣಿಕರಿಗೆ ಶುಭಸುದ್ದಿ. ಈ ಬಾರಿಯ ಹಬ್ಬದ ಋತುವಿನಲ್ಲಿ ನೀವು ರೈಲಿನಲ್ಲಿ ಪ್ರಯಾಣಿಸಬೇಕು ಅಂದ್ಕೊಂಡಿದ್ದಿರಾ? ಹಾಗಿದ್ದರೆ ನೀವು ಜನರಲ್ ಟಿಕೆಟ್​​ನಿಂದ ಎಸಿ ಕೋಚ್​ನಲ್ಲಿ ಪ್ರಯಾಣಿಸಬಹುದು. ಹೌದು, IRCTC ಸಂಸ್ಥೆ ಪ್ರಯಾಣಿಕರಿಗೆ ತಮ್ಮ ಟಿಕೆಟ್​ಗಳನ್ನು ಅಪ್ಡೇಟ್​​ ಮಾಡುವ ಅವಕಾಶವನ್ನು ಒದಗಿಸುತ್ತಿದೆ.

ಆನ್​ಲೈನ್ ಮೂಲಕ ನೀವು ಟಿಕೇಟ್​ ಬುಕ್​ ಮಾಡುವಾಗ IRCTC ಕ್ಲಾಸ್​ ಅಪ್​ಗ್ರೇಡೇಶನ್ ಆಯ್ಕೆಯನ್ನು ನೀಡುತ್ತದೆ. ಇಲ್ಲಿ ವೈಟಿಂಗ್​ ಲೀಸ್ಟ್​ನಲ್ಲಿರುವ ಟಿಕೆಟ್​ನ್ನು ಆಟೋ ಅಪ್​ಗ್ರೇಡೇಶನ್ ಅಡಿಯಲ್ಲಿ   ಖಾಲಿಯಿರುವ ಉನ್ನತ ಶ್ರೇಣಿಯ ಸೀಟುಗಳಿಗೆ ಅಪ್​ಗ್ರೇಡ್​ ಮಾಡಲಾಗುತ್ತದೆ. ಅಂದರೆ ನೀವು ಜನರಲ್ ಟಿಕೆಟ್ ಬುಕ್ ಮಾಡಿ ವೈಟಿಂಗ್​ನಲ್ಲಿದ್ದರೆ, ಎಸಿ ಕೋಚ್​ನಲ್ಲಿ ಸೀಟುಗಳಿದ್ದರೆ ಅದು ನಿಮಗೆ ಸಿಗುತ್ತದೆ.

ಒಂದು ವೇಳೆ ನೀವು ಟಿಕೆಟ್​ ಬುಕ್ಕಿಂಗ್ ಮಾಡುವಾಗ ಅಪ್​ಗ್ರೇಡ್​ ಆಯ್ಕೆಯನ್ನು ಆರಿಸಿಕೊಳ್ಳದಿದ್ದರೆ , ನಿಮ್ಮ ಟಿಕೆಟ್​​ ಪಿಎನ್​ಆರ್ ಅಪ್​​ಗ್ರೇಡ್​ ಪಟ್ಟಿಯಲ್ಲಿ ಇರುವುದಿಲ್ಲ. IRCTC ಪ್ರಕಾರ, ರಿಯಾಯಿತಿ ಮೇಲಿನ ಟಿಕೆಟ್, ಉಚಿತ ಪಾಸ್ ಹೊಂದಿರುವವರು ಮತ್ತು ಹಿರಿಯ ನಾಗರೀಕರ ಟಿಕೇಟ್​ಗಳ ಮೇಲೆ ಈ ಅಪ್​ಗ್ರೇಡ್​ ಆಯ್ಕೆ ನೀಡಲಾಗುವುದಿಲ್ಲ.

ಟಿಕೆಟ್​ ಪಟ್ಟಿ​ ರೂಪಗೊಳ್ಳುವಾಗ ಪ್ಯಾಸೆಂಜರ್ ರಿಸರ್ವೇಶನ್ ಸಿಸ್ಟಂ ಮೂಲಕ ಇಲ್ಲಿ ಟಿಕೆಟ್​ಗಳು ಸ್ವಯಂ ಅಪ್​ಗ್ರೇಡ್​ ಆಗುತ್ತದೆ. ಈ ಯೋಜನೆಯಲ್ಲಿ ಟಿಕೇಟ್ ನಿರೀಕ್ಷಕರು ಪ್ರಯಾಣಿಕರನ್ನು ಆಯ್ಕೆ ಮಾಡುವ ಯಾವುದೇ ವ್ಯವಸ್ಥೆ ಇರುವುದಿಲ್ಲ.

ಇದನ್ನೂ ಓದಿಶೀಘ್ರದಲ್ಲೇ ಭಾರತದಲ್ಲಿ BS-4 ವಾಹನಗಳ ಮೇಲೆ ನಿಷೇಧ..!

ಈ ಹೊಸ ಯೋಜನೆಯ ಮೂಲಕ ವೈಟಿಂಗ್ ಲೀಸ್ಟ್​ನಲ್ಲಿರುವ ಟಿಕೆಟ್​ದಾರರು ಸೀಟ್ ದೃಢಪಡಿಸಿಕೊಳ್ಳಬಹುದು. ಇಲ್ಲಿ ವೈಟಿಂಗ್ ಲೀಸ್ಟ್​ ಇರದಿದ್ದರೆ ಯಾವುದೇ ಟಿಕೇಟ್​ನ ನವೀಕರಣ ಇರುವುದಿಲ್ಲ. ​ಟಿಕೆಟ್ ಅಪ್​ಗ್ರೇಡ್​ ನಂತರ ಕೂಡ ನಿಮ್ಮ ಪಿಎನ್​ಆರ್​ ಸಂಖ್ಯೆ ಒಂದೇ ಆಗಿರುತ್ತದೆ. ಅಲ್ಲದೆ ಈ ಪಿಎನ್​ಆರ್ ಮೂಲಕ ಪಿಆರ್​ಎಸ್​ನ ಪೂರ್ಣ ಮಾಹಿತಿಯನ್ನು ಪಡೆಯಬಹುದು ಎಂದು ಭಾರತೀಯ ರೈಲ್ವೇ ಇಲಾಖೆ ತಿಳಿಸಿದೆ.
First published:October 25, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading