Video: ಹಿಜಾಬ್ ಹಾಕದ್ದಕ್ಕೆ ಹಿಗ್ಗಾಮುಗ್ಗಾ ಥಳಿಸಿ ಯುವತಿಯ ಕೊಲೆ

ಹಿಜಾಬ್ ಅನ್ನುಧರಿಸದೇ ಇರುವುದು ಇರಾನ್‌ನಲ್ಲಿ ಶಿಕ್ಷಾರ್ಹ ಅಪರಾಧವಾಗಿದೆ. ಈ ನಿಯಮದ ವಿರುದ್ಧ ಒಗ್ಗಟ್ಟು ಪ್ರದರ್ಶಿಸಲು ನಾವು ಪ್ರಪಂಚದಾದ್ಯಂತದ ಮಹಿಳೆಯರು ಮತ್ತು ಪುರುಷರಿಗೆ ಕರೆ ನೀಡುತ್ತೇವೆ ಎಂದು ಇರಾನ್ ಪತ್ರಕರ್ತರೊಬ್ಬರು ತಿಳಿಸಿದ್ದಾರೆ.

ಮೃತಪಟ್ಟ ಮಹ್ನಾ ಅಮಿನಿ

ಮೃತಪಟ್ಟ ಮಹ್ನಾ ಅಮಿನಿ

  • Share this:
ಇರಾನ್ ಮಹಿಳೆಯರು ತಮ್ಮ ಹಿಜಾಬ್‌ಗಳನ್ನು (Hijab Protest) ಕಿತ್ತು ಬೀದಿಗಿಳಿದು ಪ್ರತಿಭಟನೆ ಮಾಡಿದ್ದಾರೆ.  ನೈತಿಕ ಪೊಲೀಸ್​ಗಿರಿಯಿಂದ (Morality Police) ಸಾವನ್ನಪ್ಪಿದ ಮಹ್ಸಾ ಅಮಿನಿ ಎಂಬ ಯುವತಿಯ ಪರವಾಗಿ ಸಾವಿರಾರು ಮಹಿಳೆಯರು ಹಿಜಾಬ್ ಕಿತ್ತು ಬಿಸಾಕಿ ಪ್ರತಿಭಟನೆಗೆ ಇಳಿದಿದ್ದಾರೆ. 22 ವರ್ಷದ ಮಹ್ನಾ ಅಮಿನಿ ಎಂಬ ಯುವತಿಯನ್ನು ಕಡ್ಡಾಯವಾಗಿ ಹಿಜಾಬ್ ಧರಿಸುವ ಮಾರ್ಗಸೂಚಿಯನ್ನು ಉಲ್ಲಂಘಿಸಿದ ಕಾರಣಕ್ಕೆ ಬಂಧಿಸಲಾಗಿತ್ತು. ಅಲ್ಲದೇ ಹಿಜಾಬ್ ಧರಿಸದ್ದಕ್ಕೆ ಆಕೆಗೆ ಹಿಗ್ಗಾಮುಗ್ಗಾ ಥಳಿಸಿ ಕೊಲೆ ಮಾಡಲಾಗಿದೆ ಎಂಬ ಆರೋಪವೂ ಕೇಳಿಬಂದಿತ್ತು. ಆಕೆಯ ಅಂತ್ಯಕ್ರಿಯೆಯ ವೇಳೆ ರೊಚ್ಚಿಗೆದ್ದ ಸಾವಿರಾರು ಮಹಿಳೆಯರು ತಾವು ಧರಿಸಿದ್ದ ಹಿಜಾಬ್​ಅನ್ನು ಕಿತ್ತು ಪಶ್ಚಿಮ ಇರಾನ್​ನಲ್ಲಿ (Iran Hijab Protest Video) ಪ್ರತಿಭಟನೆ ನಡೆಸಿದ್ದಾರೆ.

ಪ್ರತಿಭಟನಾಕಾರ ಮಹಿಳೆಯರನ್ನು ಚದುರಿಸಲು ಭದ್ರತಾ ಪಡೆಗಳು ಅಶ್ರುವಾಯು ಪ್ರಯೋಗಿಸಿದಾಗ ಮಹಿಳೆಯರು ಸರ್ವಾಧಿಕಾರದ ಆಡಳಿತಕ್ಕೆ ಅಂತ್ಯ ಬೇಗನೇ ಬರಲಿದೆ ಎಂದು ಘೋಷಣೆ ಕೂಗುತ್ತಾ ಆಕ್ರೋಶ ಹೊರಹಾಕಿದ್ದಾರೆ. ಹಲವರು ಸಾಮಾಜಿಕ ಜಾಲತಾಣಗಳಲ್ಲೂ ತಮ್ಮ ಪ್ರತಿಭಟನೆ ನಡೆಸುತ್ತಿದ್ದಾರೆ.

ಇರಾನ್​ನಲ್ಲಿ ಹಿಜಾಬ್ ಧರಿಸಿದ್ದರೆ ಶಿಕ್ಷೆ
ಮಹಿಳೆಯ ಹಿಜಾಬ್ ವಿರುದ್ಧದ ಈ ಪ್ರತಿಭಟನೆ ಕುರಿತು ಇರಾನ್ ಪತ್ರಕರ್ತರೊಬ್ಬರು ಟ್ವೀಟ್ ಮಾಡಿದ್ದು, “ಹಿಜಾಬ್ ಅನ್ನುಧರಿಸದೇ ಇರುವುದು ಇರಾನ್‌ನಲ್ಲಿ ಶಿಕ್ಷಾರ್ಹ ಅಪರಾಧವಾಗಿದೆ. ಈ ನಿಯಮದ ವಿರುದ್ಧ ಒಗ್ಗಟ್ಟು ಪ್ರದರ್ಶಿಸಲು ನಾವು ಪ್ರಪಂಚದಾದ್ಯಂತದ ಮಹಿಳೆಯರು ಮತ್ತು ಪುರುಷರಿಗೆ ಕರೆ ನೀಡುತ್ತೇವೆ” ಎಂದು ವಿನಂತಿ ಮಾಡಿದ್ದಾರೆ.

ಪೊಲೀಸ್ ವ್ಯಾನ್​ನಲ್ಲೇ ಥಳಿತದ ಆರೋಪ
ಪೊಲೀಸ್ ವ್ಯಾನ್‌ನಲ್ಲಿ ಅಮಿನಿ ಅವರನ್ನು ಥಳಿಸಲಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ವರದಿ ಮಾಡಿದ್ದಾರೆ. ಆದರೆ ಪೊಲೀಸರು ಈ ಆರೋಪವನ್ನು ನಿರಾಕರಿಸಿದ್ದಾರೆ. ಆದರೆ ಅಮಿನಿ ಹೃದಯಾಘಾತಕ್ಕೆ ಒಳಗಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ  ಅಮಿನಿ ಅವರ ಕುಟುಂಬ ಇದನ್ನು ನಿರಾಕರಿಸಿದೆ. ಅಮಿನಿ ಆರೋಗ್ಯವಾಗಿದ್ದರು. ಅವರಿಗೆ ಯಾವುದೇ ಆರೋಗ್ಯ ಸಮಸ್ಯೆ ಇರಲಿಲ್ಲ ಎಂದು ಪೊಲೀಸರ ವಿರುದ್ಧ ದೂರಿದ್ದಾರೆ.

ಇರಾನ್​ನಲ್ಲಿ ಕಡ್ಡಾಯ ಡ್ರೆಸ್​ ಕೋಡ್
ಇರಾನ್‌ನ ಅಧ್ಯಕ್ಷ ಇಬ್ರಾಹಿಂ ರೈಸಿ ಇತ್ತೀಚಿಗಷ್ಟೇ ದೇಶದಲ್ಲಿ ಕಡ್ಡಾಯ ಡ್ರೆಸ್ ಕೋಡ್ ಅನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಕರೆ ನೀಡಿದ್ದರು. ಈ ಘೋಷಣೆಯ ಒಂದೇ ವಾರಕ್ಕೆ ಹಿಜಾಬ್ ಧರಿಸದ ಯುವತಿಯ ಮೃತಪಟ್ಟ ಘಟನೆ ವರದಿಯಾಗಿದೆ. ಇರಾನ್​ನಲ್ಲಿ 1979 ರಲ್ಲಿ ನಡೆದ ಇಸ್ಲಾಮಿಕ್ ಕ್ರಾಂತಿಯ ನಂತರ ಎಲ್ಲಾ ಮಹಿಳೆಯರು ಹಿಜಾಬ್​ನಿಂದ ತಲೆಯನ್ನು ಮುಚ್ಚಿಕೊಳ್ಳಲು ಆದೇಶಿಸಲಾಗಿದೆ.
Published by:ಗುರುಗಣೇಶ ಡಬ್ಗುಳಿ
First published: