ದೆಹಲಿ: ಚೀನಾಕ್ಕೆ ಹೊರಟಿದ್ದ ಇರಾನ್ ವಿಮಾನದಲ್ಲಿ ಬಾಂಬ್ ಬೆದರಿಕೆ ಕೇಳಿಬಂದಿದ್ದು ಜೋಧ್ಪುರ ಮತ್ತು ಪಂಜಾಬ್ನಲ್ಲಿ (Punjab) ಭಾರತೀಯ ವಾಯುಪಡೆಯ ಫೈಟರ್ ಜೆಟ್ಗಳನ್ನು (Fighter Jet) ಅಪಾಯವನ್ನು ಎದುರಿಸಲು ಸನ್ನದ್ಧಗೊಳಿದ ಘಟನೆ ನಡೆದಿದೆ. ಚೀನಾಕ್ಕೆ ತೆರಳುತ್ತಿದ್ದ ವಿಮಾನ ಸೋಮವಾರ ಭಾರತೀಯ ವಾಯುಪ್ರದೇಶವನ್ನು (Indian Airspace) ಪ್ರವೇಶಿಸಿದ ಸಂದರ್ಭದಲ್ಲೇ ಬಾಂಬ್ ಬೆದರಿಕೆ ಬಂದಿತ್ತು. IAF ಹೇಳಿಕೆಯ ಪ್ರಕಾರ, ಇರಾನ್ ಏಜೆನ್ಸಿಗಳು ಬೆದರಿಕೆಯನ್ನು ನಿರ್ಲಕ್ಷಿಸುವಂತೆ ಅಧಿಕಾರಿಗಳನ್ನು ಕೇಳಿದ ನಂತರ ವಿಮಾನವನ್ನು ಚೀನಾದ (China) ಕಡೆಗೆ ಹಾರಲು ಅನುಮತಿ ನೀಡಲಾಗಿದೆ.
A Mahan Air flight, Tehran -> Guangzhou, received a bomb threat when flying over India. According to @ANI "Delhi ATC suggested the aircraft to go to Jaipur but the aircraft pilot refused & left Indian airspace"
Currently about 2h away from Guangzhou https://t.co/mk6FioNbBe pic.twitter.com/D3nUinv1Mu
— Flightradar24 (@flightradar24) October 3, 2022
ಹುಟ್ಟಿಕೊಂಡಿದೆ ಹಲವು ಅನುಮಾನ
ಪಾಕಿಸ್ತಾನದ ವಾಯುಗಡಿಯನ್ನು ಹಾದು ವಿಮಾನ ಭಾರತವನ್ನು ಪ್ರವೇಶಿಸಿದೆ. ಆದರೂ ಸಹ ಬಾಂಬ್ ಬೆದರಿಕೆ ಇರುವ ವಿಮಾನವನ್ನು ಏಕೆ ಭಾರತದ ರಾಜಧಾನಿ ದೆಹಲಿಯಲ್ಲಿಯೇ ಇಳಿಸಲು ಏಕೆ ಪ್ಲಾನ್ ಮಾಡಲಾಯಿತು? ಪಾಕಿಸ್ತಾನದಲ್ಲಿ ಏಕೆ ವಿಮಾನ ಲ್ಯಾಂಡ್ ಮಾಡಲು ಯೋಜಿಸಲಿಲ್ಲ? ಎಂಬ ಪ್ರಶ್ನೆಗಳು ಉದ್ಭವಿಸಿದೆ.
ಭಾರತೀಯ ವಾಯುಪಡೆಯ ಸ್ವದೇಶಿ ಬಲ: 'ಮೇಡ್ ಇನ್ ಇಂಡಿಯಾ' ಹೆಲಿಕಾಪ್ಟರ್ಗಳ ಸೇರ್ಪಡೆ!
ಭಾರತೀಯ ಸೇನೆಯಲ್ಲಿ ಸ್ವದೇಶಿ ಶಸ್ತ್ರಾಸ್ತ್ರಗಳು ಮತ್ತು ಸರಕುಗಳನ್ನು ನಿರಂತರವಾಗಿ ಸೇರಿಸಲಾಗುತ್ತಿದೆ. ಇತ್ತೀಚೆಗೆ, ಮೊದಲ ಸ್ವದೇಶಿ ವಿಮಾನವಾಹಕ ನೌಕೆ INS ವಿಕ್ರಾಂತ್ ಭಾರತೀಯ ನೌಕಾಪಡೆಗೆ ಸೇರ್ಪಡೆಗೊಂಡಿತು. ಮೇಡ್ ಇನ್ ಇಂಡಿಯಾವನ್ನು ಉತ್ತೇಜಿಸುವ ಮೂಲಕ, ಈಗ ಭಾರತೀಯ ವಾಯುಪಡೆಯನ್ನು (Indian Air Force) ಹೆಚ್ಚು ಸುಧಾರಿತ ಮತ್ತು ಶಕ್ತಿಯುತವಾಗಿಸಲು ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಲಘು ಯುದ್ಧ ಹೆಲಿಕಾಪ್ಟರ್ (LCH) ನ ಮೊದಲ ಬ್ಯಾಚ್ ಅನ್ನು ಸೋಮವಾರ ರಾಜಸ್ಥಾನದ ಜೋಧ್ಪುರದಲ್ಲಿ ಪ್ರಾರಂಭಿಸಲಾಗಿದೆ. ಸಮಾರಂಭದಲ್ಲಿ IAF ದಾಸ್ತಾನು ಸೇರಿಸಲಾಗುತ್ತಿದೆ. ಭಾರತದಲ್ಲಿ ತಯಾರಿಸಿದ ಲಘು ಯುದ್ಧ ಹೆಲಿಕಾಪ್ಟರ್ಗಳನ್ನು (Light Combat Helicopter) ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಸಮ್ಮುಖದಲ್ಲಿ ಭಾರತೀಯ ವಾಯುಪಡೆಗೆ ಹಸ್ತಾಂತರಿಸಲಾಗುತ್ತದೆ.
ಇದನ್ನೂ ಓದಿ: Video: ಹುಟ್ಟೋ ಮಗು ಗಂಡೋ ಹೆಣ್ಣೋ ತಿಳ್ಕೊಳೋಕೆ ಇಡೀ ಜಲಪಾತವನ್ನೇ ಹಾಳುಮಾಡಿಬಿಟ್ರು!
ಸಚಿವ ರಾಜನಾಥ್ ಸಿಂಗ್ ಹೇಳಿದ್ದೇನು?
ಈ ಹೆಲಿಕಾಪ್ಟರ್ಗಳ ಸೇರ್ಪಡೆಯು ಭಾರತೀಯ ವಾಯುಪಡೆಯ ಯುದ್ಧ ಸಾಮರ್ಥ್ಯಕ್ಕೆ ಹೆಚ್ಚಿನ ಉತ್ತೇಜನವನ್ನು ನೀಡುತ್ತದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಟ್ವೀಟ್ ಮಾಡಿದ್ದಾರೆ. ವಾಯುಪಡೆಗೆ (IAF) ಸೇರಲಿರುವ ಹೊಸ ಹೆಲಿಕಾಪ್ಟರ್ ವೈಮಾನಿಕ ಯುದ್ಧದ ಸಾಮರ್ಥ್ಯವನ್ನು ಹೊಂದಿದೆ ಮತ್ತು ಸಂಘರ್ಷದ ಸಮಯದಲ್ಲಿ ನಿಧಾನವಾಗಿ ಚಲಿಸುವ ವಿಮಾನಗಳು, ಡ್ರೋನ್ಗಳು ಮತ್ತು ಶಸ್ತ್ರಸಜ್ಜಿತ ವಾಹನಗಳೊಂದಿಗೆ ವ್ಯವಹರಿಸುವಲ್ಲಿ ಪರಿಣತಿ ಹೊಂದಿದೆ ಎಂದೂ ಅವರು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ