Iran Train Accident: ಇರಾನ್​ನಲ್ಲಿ ಭೀಕರ ರೈಲು ಅಪಘಾತ; ಕನಿಷ್ಠ 17 ಜನರ ಸಾವು, 50ಕ್ಕೂ ಹೆಚ್ಚು ಜನರಿಗೆ ಗಾಯ

ರೈಲು ಅಪಘಾತದ ದೃಶ್ಯ

ರೈಲು ಅಪಘಾತದ ದೃಶ್ಯ

ಮೂರು ಹೆಲಿಕಾಪ್ಟರ್‌ಗಳು ಮತ್ತು 10 ಆಂಬ್ಯುಲೆನ್ಸ್‌ಗಳನ್ನು ಘಟನಾ ಸ್ಥಳಕ್ಕೆ ರವಾನಿಸಲಾಗಿದೆ ಎಂದು ರಾಷ್ಟ್ರೀಯ ರಕ್ಷಣಾ ಸೇವೆಯ ವಕ್ತಾರ ಮೊಜ್ತಾಬಾ ಖಲೀದ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

  • Share this:

    ಟೆಹ್ರಾನ್:  ಪೂರ್ವ ಇರಾನ್‌ನಲ್ಲಿ ಬುಧವಾರ ಮುಂಜಾನೆ ಪ್ರಯಾಣಿಕರ ರೈಲು ಭಾಗಶಃ ಹಳಿತಪ್ಪಿ ಅಪಘಾತ ಸಂಭವಿಸಿದ್ದು, ಕನಿಷ್ಠ 17 ಜನರು ಸಾವನ್ನಪ್ಪಿದ್ದಾರೆ. ಈ ಭೀಕರ ಅಪಘಾತದಲ್ಲಿ 50 ಮಂದಿ ಗಾಯಗೊಂಡಿದ್ದಾರೆ. ಕೆಲವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಇರಾನ್​ನ (Iran) ಅಧಿಕಾರಿಗಳು ತಿಳಿಸಿದ್ದಾರೆ. ಸುಮಾರು 350 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ರೈಲಿನಲ್ಲಿ ಸಂಭವಿಸಿದ ದುರಂತದ ಬಗ್ಗೆ (Iran Train Accident) ಎಲ್ಲ ವಿವರಗಳು ಸ್ಪಷ್ಟವಾಗಿಲ್ಲ. ಆದರೆ ಸಾವುನೋವುಗಳ ಸಂಖ್ಯೆ ಹೆಚ್ಚಾಗಬಹುದು ಎಂಬ ಆತಂಕವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಜಧಾನಿ ಟೆಹ್ರಾನ್‌ನ ಆಗ್ನೇಯಕ್ಕೆ ಸುಮಾರು 340 ಮೈಲು ಅಥವಾ 550 ಕಿಲೋಮೀಟರ್ ದೂರದಲ್ಲಿರುವ ಮರುಭೂಮಿ ನಗರವಾದ ತಬಾಸ್ ಬಳಿ ಮುಂಜಾನೆ ಕತ್ತಲೆಯಲ್ಲಿ ಈ ಭೀಕರ ದುರ್ಘಟನೆ ನಡೆದಿದೆ ಎಂದು ಇರಾನ್ ರಾಜ್ಯ ದೂರದರ್ಶನ ವರದಿ ಮಾಡಿದೆ.


    ಆಂಬ್ಯುಲೆನ್ಸ್‌ಗಳು ಮತ್ತು ಹೆಲಿಕಾಪ್ಟರ್‌ಗಳೊಂದಿಗೆ ರಕ್ಷಣಾ ತಂಡಗಳು ಆಗಮಿಸಿದರೂ ಸಂವಹನ ಸೌಲಭ್ಯದ ಕೊರತೆಯಿಂದಾಗಿ ರಕ್ಷಣಾ ಕಾರ್ಯಾಚರಣೆ ವಿಳಂಬಗೊಂಡಿತ್ತು ಎಂದು ಹೇಳಲಾಗಿದೆ.


    10 ಹೆಲಿಕ್ಯಾಪ್ಟರ್ ಮತ್ತು 10 ಆ್ಯಂಬುಲೆನ್ಸ್ ರವಾನೆ
    ದೊಡ್ಡ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಮೂರು ಹೆಲಿಕಾಪ್ಟರ್‌ಗಳು ಮತ್ತು 10 ಆಂಬ್ಯುಲೆನ್ಸ್‌ಗಳನ್ನು ಘಟನಾ ಸ್ಥಳಕ್ಕೆ ರವಾನಿಸಲಾಗಿದೆ ಎಂದು ರಾಷ್ಟ್ರೀಯ ರಕ್ಷಣಾ ಸೇವೆಯ ವಕ್ತಾರ ಮೊಜ್ತಾಬಾ ಖಲೀದ್ ಸುದ್ದಿಗಾರರಿಗೆ ತಿಳಿಸಿದ್ದಾರೆ.


    ಹಳಿ ತಪ್ಪಲು ಏನು ಕಾರಣ?
    ಗಾಯಗೊಂಡವರು ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಯ ದೃಶ್ಯಗಳನ್ನು ಇರಾನ್​ನ ಸರ್ಕಾರಿ ಟಿವಿ ಪ್ರಸಾರ ಮಾಡಿದೆ. ಹಳಿತಪ್ಪುವ ಮುನ್ನ ರೈಲು ಹಠಾತ್ತನೆ ಬ್ರೇಕ್‌ ಹಾಕಲಾಗಿದ್ದು ನಂತರ ಸಂಚಾರ ನಿಧಾನವಾಗಿತ್ತು ಎಂದು  ಸ್ಥಳೀಯ ಅಧಿಕಾರಿಗಳಲ್ಲಿ ಒಬ್ಬರು ವರದಿಗಾರರಿಗೆ ತಿಳಿಸಿದರು.


    ಇದನ್ನೂ ಓದಿ: PepsiCo Fined: ಲೇಸ್ ಪ್ಯಾಕೆಟ್​ನಲ್ಲಿ ಗಾಳಿ, ದೂರು ಕೊಟ್ಟ ಗ್ರಾಹಕ! ಕಂಪನಿಗೆ ಬಿತ್ತು ದುಬಾರಿ ದಂಡ


    ಹಿಂದೆ ಇದೇ ರೀತಿಯ ಅಪಘಾತ ನಡೆದಿತ್ತು
    2004 ರಲ್ಲಿ ಇರಾನ್ ಸರ್ಕಾರ ಇದೇ ರಈತಿಯ ಭೀಕರ ರೈಲು ದುರಂತ ನಡೆದಿತ್ತು. ಪೆಟ್ರೋಲ್, ರಸಗೊಬ್ಬರ ಮತ್ತು ಹತ್ತಿ ತುಂಬಿದ ರೈಲೊಂದು ಈಶಾನ್ಯ ನಗರವಾದ ನೇಶಾಬುರ್ ಬಳಿ ಅಪಘಾತಕ್ಕೀಡಾಗಿ ಸುಮಾರು 320 ಜನರು ಮೃತಪಟ್ಟಿದ್ದರು.


    ಇದನ್ನೂ ಓದಿ: Lion Eye: ಮುಖದ ಹತ್ತಿರ ಬಂದ್ರೂ ಏನೂ ಮಾಡಲ್ಲ ಈ ಸಿಂಹ! ಆಫೀಸರ್ ಮಾಡಿದ್ದೇನು ಗೊತ್ತಾ?


    2016ರಲ್ಲೂ ನಡೆದಿತ್ತು ಇಂತಹುದೇ ಭೀಕರ ರೈಲು ಅವಘಡ
    2016 ರಲ್ಲಿ, ಉತ್ತರ ಪ್ರಾಂತ್ಯದ ಸೆಮ್ನಾನ್‌ನಲ್ಲಿ ಕೆಟ್ಟುಹೋದ ರೈಲು ಮತ್ತೊಂದು ರೈಲಿಗೆ ಡಿಕ್ಕಿ ಹೊಡೆದು 49 ಜನರು ಸಾವನ್ನಪ್ಪಿದರು. ಈ ಘಟನೆಯ ನಂತರ ಇರಾನ್​ನಲ್ಲಿ ಮತ್ತೊಮ್ಮೆ ಮತ್ತೆ ಭೀಕರ ರೈಲು ದುರಂತ ಸಂಭವಿಸಿದಂತಾಗಿದೆ.


    ಇರಾನ್ ದೇಶದ ರೈಲು ವ್ಯವಸ್ಥೆ ಹೇಗಿದೆ?
    ಇರಾನ್ ದೇಶದಾದ್ಯಂತ ಸುಮಾರು 14,000 ಕಿಲೋಮೀಟರ್ ರೈಲು ಮಾರ್ಗವಿದೆ. ಇದು ಒಂದು ಮಟ್ಟಿಗೆ ಟೆಕ್ಸಾಸ್‌ಗಿಂತ ಎರಡೂವರೆ ಪಟ್ಟು ದೊಡ್ಡದು ಎಂದೂ ಹೇಳಬಹುದು. ಇರಾನ್ ರೈಲು ವ್ಯವಸ್ಥೆಯು ದೇಶಾದ್ಯಂತ ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಜನರು ಮತ್ತು ಸರಕುಗಳನ್ನು ಸಾಗಣೆ ಮಾಡಲು ಅತ್ಯುತ್ತಮ ಸೌಲಭ್ಯವನ್ನು ಕಲ್ಪಿಸುತ್ತದೆ.


    ಇರಾನ್ ಹೆದ್ದಾರಿಗಳಲ್ಲಿ ಅತಿ ಹೆಚ್ಚು ದುರಂತ
    ಇರಾನ್ ತನ್ನ ಭೂಮಾರ್ಗದ ರಸ್ತೆ ಹೆದ್ದಾರಿಗಳಲ್ಲಿ ಸುಮಾರು 17,000 ವಾರ್ಷಿಕ ಸಾವುಗಳನ್ನು ದಾಖಲಿಸುತ್ತದೆ.  ಇದು ವಿಶ್ವದ ಅತ್ಯಂತ ಕೆಟ್ಟ ಸಂಚಾರ ಸುರಕ್ಷತೆಗೆ ದಾಖಲೆಗಳಲ್ಲಿ ಒಂದಾಗಿದೆ.


    ತನ್ನ ಕುಸಿದ ಪರಮಾಣು ಒಪ್ಪಂದದ ಬಗ್ಗೆ ಈಗಾಗಲೇ ಅಮೆರಿಕಾ ವಿಧಿಸಿರುವ ನಿರ್ಬಂಧಗಳ ಅಡಿಯಲ್ಲಿದೆ ಇರಾನ್. ಅಲ್ಲದೇ ಇತ್ತೀಚಿಗೆ ಇರಾನ್​ ದೇಶದ ನೈಋತ್ಯ ಭಾಗದಲ್ಲಿ ಕಟ್ಟಡ ಕುಸಿತದಲ್ಲಿ ಕನಿಷ್ಠ 41 ಜನರು ಮೃತಪಟ್ಟಿದ್ದರು.

    Published by:guruganesh bhat
    First published: