ಖಾಸಿಂ ಸುಲೇಮಾನಿ ಹತ್ಯೆ ವಿಚಾರ; ಟ್ರಂಪ್ ವಿರುದ್ಧ ಅರೆಸ್ಟ್ ವಾರೆಂಟ್ ಹೊರಡಿಸಿದ ಇರಾನ್!

ಟ್ರಂಪ್​ ಅವರನ್ನು ನಾವು ಬಂಧಿಸದೇ ಬಿಡುವುದಿಲ್ಲ. ಒಂದೊಮ್ಮೆ ಅಧ್ಯಕ್ಷೀಯ ಅವಧಿ ಮುಗಿದರೂ ಅವರನ್ನು ಬಂಧಿಸಿಯೇ ತೀರುತ್ತೇವೆ ಎಂದು ಇರಾನ್​ ಹೇಳಿದೆ.

ಡೊನಾಲ್ಡ್ ಟ್ರಂಪ್

ಡೊನಾಲ್ಡ್ ಟ್ರಂಪ್

 • Share this:
  ವಾಷಿಂಗ್ಟನ್​ (ಜೂ.30): ಬಾಗ್ದಾದ್​​ನಲ್ಲಿ ರಾಕೆಟ್​ ದಾಳಿ ನಡೆಸುವ ಮೂಲಕ ಇರಾನ್​ ಮೇಜರ್​ ಜನರಲ್​ ಖಾಸಿಂ ಸುಲೇಮಾನಿಯನ್ನು ಅಮೆರಿಕ ಹತ್ಯೆ ಮಾಡಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಇರಾನ್​ ಅಪಸ್ವರ ಎತ್ತುತ್ತಲೇ ಬರುತ್ತಿದೆ. ವಿಚಿತ್ರ ಎಂದರೆ ಈಗ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಫ್​ ವಿರುದ್ಧ ಇರಾನ್​ ಅರೆಸ್ಟ್​ ವಾರೆಂಟ್​ ಹೊರಡಿಸಿದೆ!

  ಜನವರಿ 3ರಂದು ಬಾಗ್ದಾದ್​​ ವಿಮಾನ ನಿಲ್ದಾಣದಲ್ಲಿ ಅಮೆರಿಕ ರಾಕೆಟ್​ ದಾಳಿ ನಡೆಸಿತ್ತು. ಈ ವೇಳೆ ಖಾಸಿಂ ಸುಲೇಮಾನಿ ಮೃತಪಟ್ಟಿದ್ದ. ಖಾಸಿಂನನ್ನು ಅಮೆರಿಕ ತನ್ನ ವೈರಿ ಎಂದೇ ಪರಿಗಣಿಸಿತ್ತು. ಈತ ಇರಾನ್​ ಸಶಸ್ತ್ರ ಹೋರಾಟ ನಿಯಂತ್ರಿಸುತ್ತಿದ್ದ. ಅಲ್ಲದೆ, ಇರಾನ್​ ಗುಪ್ತಚರ ಇಲಾಖೆಯ ಮುಖ್ಯಸ್ಥ ಕೂಡ ಹೌದು. ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಇರಾನ್​ ಕತ್ತಿ ಮಸೆಯಲು ಆರಂಭಿಸಿತ್ತು. ಈಗ ಇರಾನ್​ ಟ್ರಂಪ್​ ಬಂಧನಕ್ಕೆ ಮುಂದಾಗಿದೆ.

  ಇದನ್ನೂ ಓದಿ: ನಮ್ಮ ಮೇಲೆ ಪ್ರತಿ ದಾಳಿ ನಡೆದರೆ ಇರಾನ್​ನ 52 ಸ್ಥಳಗಳು ಕ್ಷಣಮಾತ್ರದಲ್ಲಿ ಧ್ವಂಸ; ಡೊನಾಲ್ಡ್ ಟ್ರಂಪ್ ಎಚ್ಚರಿಕೆ

  ಈ ಬಗ್ಗೆ ಮಾತನಾಡಿರುವ ಇರಾನ್​ ಅಧಿಕಾರಿಗಳು, 3 ರಾಕೆಟ್​ ದಾಳಿ ನಡೆಸಿ ಸುಲೇಮಾನಿಯನ್ನು ಹತ್ಯೆ ಮಾಡಲಾಗಿದೆ. ಟ್ರಂಪ್​ ಸೇರಿ 30 ಅಧಿಕಾರಿಗಳು ಈ ಕೃತ್ಯದಲ್ಲಿ ಶಾಮೀಲಾಗಿದ್ದಾರೆ. ಹೀಗಾಗಿ ಅವರ ವಿರುದ್ಧ ಕೊಲೆ ಮತ್ತು ಭಯೋತ್ಪಾದನೆ ಆರೋಪ ಹೊರಿಸಲಾಗಿದೆ. ಅವರ ಬಂಧನಕ್ಕೆ ಇಂಟರ್ಪೋಲ್ ಅಧಿಕಾರಿಗಳ ಸಹಾಯ ಕೋರಲಾಗಿದೆ ಎಂದು ತಿಳಿಸಿದ್ದಾರೆ.

  ಟ್ರಂಪ್​ ಅವರನ್ನು ನಾವು ಬಂಧಿಸದೇ ಬಿಡುವುದಿಲ್ಲ. ಒಂದೊಮ್ಮೆ ಅಧ್ಯಕ್ಷೀಯ ಅವಧಿ ಮುಗಿದರೂ ಅವರನ್ನು ಬಂಧಿಸಿಯೇ ತೀರುತ್ತೇವೆ ಎಂದು ಇರಾನ್​ ಹೇಳಿದೆ. ಈ ಬಗ್ಗೆ ಇಂಟರ್​ಪೋಲ್​ ಅಧಿಕಾರಿಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
  First published: