Iran Hijab Protest: ಮಹಿಳೆಯರೇ ಹಿಜಾಬ್‌ ಸುಟ್ರು; ಧಗಧಗನೇ ಉರಿಯುತ್ತಿದೆ ಇರಾನ್

ಈ ಹಿಂದೆ ಭಾರತದಲ್ಲಿ ಜೋರಾಗಿ ನಡೆದಿದ್ದ ಹಿಜಾಬ್ ಗಲಾಟೆ ಈಗ ಇರಾನ್ ನಲ್ಲಿ ಉಲ್ಬಣವಾಗುತ್ತಿದೆ.

ಪ್ರತಿಭಟನೆಯ ದೃಶ್ಯ

ಪ್ರತಿಭಟನೆಯ ದೃಶ್ಯ

  • Share this:
ಹಿಜಾಬ್‌ ವಿರೋಧಿಸಿ ಇರಾನ್‌ನಲ್ಲಿ (Hijab Protest In Iran) ಪ್ರತಿಭಟನೆ ಭುಗಿಲೆದ್ದಿದೆ. ಮಹ್ಸಾ ಅಮಿನಿಯ ಹಿಜಾಬ್ ಧರಿಸದೆ ಬಂಧನಕ್ಕೊಳಗಾಗಿ ಸಾವನ್ನಪ್ಪಿದ ಬಳಿಕ ಇರಾನ್‌ನಲ್ಲಿ ಪ್ರತಿಭಟನೆಗಳು ಮತ್ತಷ್ಟು ಹಿಂಸಾಚಾರಕ್ಕೆ ತಿರುಗಿವೆ. ಟೆಹ್ರಾನ್‌ ನಗರದ ಉತ್ತರದ ಸಾರಿಯಲ್ಲಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಮಹಿಳೆಯರು ತಮ್ಮ ಹಿಜಾಬ್‌ಗಳನ್ನು (Protest Against Hijab) ಸುಟ್ಟುಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಇರಾನಿನ ಪತ್ರಕರ್ತೆ ಮತ್ತು ಕಾರ್ಯಕರ್ತೆ ಮಸಿಹ್ ಅಲಿನೆಜಾದ್, ಮಹಿಳೆಯರು ತಮ್ಮ ಕೂದಲನ್ನು ಹಿಜಾಬ್​ನಿಂದ ಮತ್ತು ಅವರ ತೋಳುಗಳನ್ನು ಸಡಿಲವಾದ ಬಟ್ಟೆಯಿಂದ ಮುಚ್ಚಿಕೊಳ್ಳಬೇಕೆಂಬ ಕಾನೂನನ್ನು ಉಲ್ಲಂಘಿಸಿದ ಆರೋಪದಲ್ಲಿ ಇರಾನ್‌ನ ನೈತಿಕತೆಯ ಪೊಲೀಸರು ಕಳೆದ ವಾರ ರಾಜಧಾನಿಯಲ್ಲಿ ಎಂಎಸ್ ಅಮಿನಿ ಅವರನ್ನು ಬಂಧಿಸಿದ್ದರು. ತೆಹ್ರಾನ್‌ನಲ್ಲಿ ಬಂಧಿಸಲ್ಪಟ್ಟ ನಂತರ ಕೋಮಾಕ್ಕೆ ಜಾರಿದ್ದ ಇರಾನ್ ನ ಮಹ್ಸಾ ಅಮಿನಿ ಕಳೆದ ಶುಕ್ರವಾರ ಸಾವನ್ನಪ್ಪಿದ್ದಾಳೆ.

ಪೊಲೀಸರ ವಿರುದ್ಧ ಕೊಲೆ ಆರೋಪ
ಪೊಲೀಸರು ಅಮಿನಿಯ ತಲೆಗೆ ಬಲವಾಗಿ ಲಾಠಿಯಿಂದ ಹೊಡೆದು ಪ್ರಾಣಾಪಾಯವನ್ನು ಉಂಟುಮಾಡಿದ್ದಾರೆ ಎಂದು ಎಂದು ವರದಿಗಳಿವೆ ಎಂದು ಮಾನವ ಹಕ್ಕುಗಳ ಹಂಗಾಮಿ UN ಹೈ ಕಮಿಷನರ್ ನಡಾ ಅಲ್-ನಾಶಿಫ್ ಹೇಳಿದ್ದಾರೆ.

ಆದರೆ ಪೋಲೀಸರು ಈ ಎಲ್ಲಾ ಆರೋಪಗಳನ್ನು ತಳ್ಳಿ ಹಾಕಿದ್ದು, ಹಠಾತ್ ಹೃದಯ ವೈಫಲ್ಯದಿಂದ ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ. ಆದರೆ ಆರೋಗ್ಯವಾಗಿದ್ದ ಅಮಿನಿ ಹೇಗೆ ಸಾವನ್ನಪ್ಪಿದಳು ಎಂದು ಕುಟುಂಬಸ್ಥರು ಕೊಲೆ ಆರೋಪ ಮಾಡಿದ್ದಾರೆ.

ಕಟ್ಟುನಿಟ್ಟಾದ ಡ್ರೆಸ್ ಕೋಡ್
22 ವರ್ಷ ವಯಸ್ಸಿನ ಅಮಿನಿ ಪಶ್ಚಿಮ ಇರಾನ್‌ನ ಕುರ್ದಿಸ್ತಾನ್ ಪ್ರಾಂತ್ಯದವರಾಗಿದ್ದು, ಕುಟುಂಬದೊಂದಿಗೆ ಇರಾನ್ ರಾಜಧಾನಿಗೆ ಭೇಟಿ ನೀಡಿದ್ದ ಅಮಿನಿಯನ್ನು ಇಸ್ಲಾಮಿಕ್ ಗಣರಾಜ್ಯದ ಮಹಿಳೆಯರಿಗೆ ಕಟ್ಟುನಿಟ್ಟಾದ ಡ್ರೆಸ್ ಕೋಡ್ ಅನ್ನು ಜಾರಿಗೊಳಿಸುವ ನೈತಿಕ ಪೊಲೀಸ್ ಘಟಕವು ಮಂಗಳವಾರ ಬಂಧಿಸಿತು. ಇನ್ನು ಇರಾನ್ ನಲ್ಲಿ ಸಾರ್ವಜನಿಕವಾಗಿ ಹಿಜಾಬ್ ಧರಿಸುವುದು ಕಡ್ಡಾಯವಾಗಿದೆ.

ಅಯತೊಲ್ಲಾ ಅಲಿ ಖಮೇನಿ ಸಾಂತ್ವನ
ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಸಹಾಯಕರು ಸೋಮವಾರ ಅಮಿನಿ ಅವರ ಕುಟುಂಬಕ್ಕೆ ಭೇಟಿ ನೀಡಿ ಸಾಂತ್ವಾನ ತಿಳಿಸಿದ್ದಾರೆ ಎಂದು ರಾಜ್ಯ ಮಾಧ್ಯಮ ವರದಿ ಮಾಡಿದೆ.

ಇರಾನ್‌ನ ಹಿಜಾಬ್ ಕಾನೂನುಗಳು ಯಾವುವು?
1979ರ ಇಸ್ಲಾಮಿಕ್ ಕ್ರಾಂತಿಯ ನಂತರ, ಇರಾನ್‌ನಲ್ಲಿ ಅಧಿಕಾರಿಗಳು ಕಡ್ಡಾಯವಾದ ಡ್ರೆಸ್ ಕೋಡ್ ಅನ್ನು ಹೇರಿದರು. ಇದರಂತೆ ಎಲ್ಲಾ ಮಹಿಳೆಯರು ಸಾರ್ವಜನಿಕವಾಗಿ ಹಿಜಾಬ್‌ ಮತ್ತು ಸಡಿಲ ಬಟ್ಟೆಗಳನ್ನು ಧರಿಸಬೇಕು ಎಂಬ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಂಡಿತು.

ಇದನ್ನೂಓದಿ: Ganeshotsav: 183 ರಸ್ತೆಗುಂಡಿ ಸೃಷ್ಟಿಸಿದ ಆರೋಪ; ಗಣೇಶನಿಗೆ 3.66 ಲಕ್ಷ ದಂಡ!

ಇಲ್ಲಿ ಮಹಿಳೆಯರ ಮೇಕಪ್‌, ಬಟ್ಟೆ, ಕೂದಲು ಎಲ್ಲವನ್ನೂ ಗಮನಿಸುತ್ತಾರೆ. ಇವುಗಳಿಗೆ ಸಂಬಂಧಿಸಿದ ಯಾವುದೇ ನಿಯಮಗಳನ್ನು ಉಲ್ಲಂಘಿಸಿದರೂ ಸಹ ದಂಡ ಅಥವಾ ಶಿಕ್ಷೆ ನೀಡಲಾಗುತ್ತದೆ.

2014 ರಲ್ಲಿ, ಇರಾನ್ ಮಹಿಳೆಯರು "ಮೈ ಸ್ಟೆಲ್ತಿ ಫ್ರೀಡಮ್" ಎಂಬ ಆನ್‌ಲೈನ್ ಪ್ರತಿಭಟನಾ ಅಭಿಯಾನದ ಭಾಗವಾಗಿ ಹಿಜಾಬ್ ಕಾನೂನುಗಳನ್ನು ಸಾರ್ವಜನಿಕವಾಗಿ ಉಲ್ಲಂಘಿಸುವ ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳಲು ಪ್ರಾರಂಭಿಸಿದರು. ಇದು "ವೈಟ್ ಬುಧವಾರಗಳು" ಮತ್ತು "ಗರ್ಲ್ಸ್ ಆಫ್ ರೆವಲ್ಯೂಷನ್ ಸ್ಟ್ರೀಟ್" ಸೇರಿದಂತೆ ಇತರ ಚಳುವಳಿಗಳಿಗೆ ಸ್ಫೂರ್ತಿ ನೀಡಿದೆ.

ಇದನ್ನೂ ಓದಿ: Shocking News: ಗರ್ಭಿಣಿ ಹೆಂಡತಿಗೆ ಮೋಸ ಮಾಡಿದ ಪ್ರಖ್ಯಾತ ಗಾಯಕ? ಯೋಗ ಟೀಚರ್ ಜೊತೆ ಬೆತ್ತಲೆ ಇರೋ ಆಸೆಯಂತೆ!

ಒಟ್ಟಿನಲ್ಲಿ ಈ ಹಿಂದೆ ಭಾರತದಲ್ಲಿ ಜೋರಾಗಿ ನಡೆದಿದ್ದ ಹಿಜಾಬ್ ಗಲಾಟೆ ಈಗ ಇರಾನ್ ನಲ್ಲಿ ಉಲ್ಬಣವಾಗುತ್ತಿದೆ. ಈಗಾಗಲೇ ಇಲ್ಲಿ ಮತ್ತೆ ಅಲ್ಲಲ್ಲಿ ಈ ಬಗ್ಗೆ ಚರ್ಚೆಗಳು ಟಿವಿ ಮಾಧ್ಯಮಗಳಲ್ಲಿಯೂ ಪ್ರಸಾರವಾಗುತ್ತಿದ್ದು ಮುಂದಿನ ದಿನಗಳಲ್ಲಿ ಇದು ಯಾವ ಸ್ವರೂಪ ಪಡೆಯಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ. ಸದ್ಯ, ಇರಾನಿನಲ್ಲಿ ಈಗ ಮಹಿಳೆಯರು ಮತ್ತೆ ತಮ್ಮ ಸ್ವಾತಂತ್ರ್ಯಕ್ಕಾಗಿ ಹೋರಾಡಲು ಸಜ್ಜಾಗಿರುವಂತೆ ತೋರುತ್ತಿದೆ ಎನ್ನಬಹುದು. ಅಲ್ಲದೆ, ಈ ಪ್ರಕರಣದ ಸುದ್ದಿಗೆ ಅಂತಾರಾಷ್ಟ್ರೀಯ ಮಾಧ್ಯಮಗಳೂ ಸಹ ಹೆಚ್ಚಿನ ಗಮನ ನೀಡುತ್ತಿವೆ ಎನ್ನಬಹುದು.
Published by:ಗುರುಗಣೇಶ ಡಬ್ಗುಳಿ
First published: