Iran Gas Explosion: ಇರಾನ್​ನ ತೆಹ್ರಾನ್​ನಲ್ಲಿ ಗ್ಯಾಸ್​ ಸೋರಿಕೆಯಿಂದ ಭಾರೀ ಸ್ಫೋಟ; 19 ಜನ ಸಾವು

Tehran Blast: ನಿನ್ನೆ ರಾತ್ರಿ 9 ಗಂಟೆಗೆ ಇರಾನ್​ನ ರಾಜಧಾನಿ ತೆಹ್ರಾನ್​ನಲ್ಲಿ ಸ್ಫೋಟ ಸಂಭವಿಸಿದೆ. ಆ ಕಟ್ಟಡದ ಬೇಸ್​ಮೆಂಟ್​ನಲ್ಲಿ ಆಕ್ಸಿಜನ್ ಟ್ಯಾಂಕ್ ಸ್ಫೋಟಗೊಂಡ ಕಾರಣಕ್ಕೆ ಈ ದುರಂತ ಸಂಭವಿಸಿದೆ ಎನ್ನಲಾಗಿದೆ.

Sushma Chakre | news18-kannada
Updated:July 1, 2020, 10:34 AM IST
Iran Gas Explosion: ಇರಾನ್​ನ ತೆಹ್ರಾನ್​ನಲ್ಲಿ ಗ್ಯಾಸ್​ ಸೋರಿಕೆಯಿಂದ ಭಾರೀ ಸ್ಫೋಟ; 19 ಜನ ಸಾವು
ಸ್ಫೋಟಗೊಂಡ ಇರಾನ್​ ತೆಹ್ರಾನ್​ನಲ್ಲಿರುವ ಮೆಡಿಕಲ್ ಕ್ಲಿನಿಕ್
  • Share this:
ನವದೆಹಲಿ (ಜು. 1): ಇರಾನ್​ನ ತೆಹ್ರಾನ್​ನಲ್ಲಿರುವ ಮೆಡಿಕಲ್ ಕ್ಲಿನಿಕ್​ನಲ್ಲಿ ಮಂಗಳವಾರ ರಾತ್ರಿ ಭಾರೀ ಸ್ಫೋಟ ಸಂಭವಿಸಿದೆ. ಸ್ಫೋಟದಿಂದಾಗಿ ಇಡೀ ಕಟ್ಟಡವೇ ಹೊತ್ತಿ ಉರಿದಿದ್ದು, 19 ಜನರು ಸಾವನ್ನಪ್ಪಿದ್ದಾರೆ. ಬಹುಮಹಡಿಯ ಕಟ್ಟಡ ಹೊತ್ತಿ ಉರಿಯುತ್ತಿರುವ ವಿಡಿಯೋ ಟ್ವಿಟ್ಟರ್​ನಲ್ಲಿ ವೈರಲ್ ಆಗಿದೆ. ತೆಹ್ರಾನ್​ನ ಮೆಡಿಕಲ್ ಕ್ಲಿನಿಕ್​ನಲ್ಲಿ ಉಂಟಾದ ಸ್ಫೋಟಕ್ಕೆ ಗ್ಯಾಸ್ ಸೋರಿಕೆಯೇ ಕಾರಣ ಎಂದು ಅಂದಾಜಿಸಲಾಗಿದೆ. ಇಂದು ಬೆಳಗಿನ ಜಾವದವರೆಗೂ ಬೆಂಕಿ ಆರಿಸುವ ಕಾರ್ಯಾಚರಣೆ ನಡೆದಿದೆ. ಘಟನೆಯಲ್ಲಿ 19 ಜನರು ಸಾವನ್ನಪ್ಪಿದ್ದು, ಹತ್ತಾರು ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಎಎನ್​ಐ ವರದಿ ಮಾಡಿದೆ.

ಇದನ್ನೂ ಓದಿ: ಜಮ್ಮು ಕಾಶ್ಮೀರದ ಸೋಪೋರ್​ನಲ್ಲಿ ಇಂದು ಮುಂಜಾನೆ ಉಗ್ರರ ದಾಳಿ; ಓರ್ವ ಸಿಆರ್​ಪಿಎಫ್ ಯೋಧ, ನಾಗರಿಕ ಸಾವು

ತೆಹ್ರಾನ್​ನ ಸಿನಾ ಅಟ್ಟರ್ ಮೆಡಿಕಲ್ ಕೇಂದ್ರದಲ್ಲಿ ಈ ಪ್ರಬಲ ಸ್ಫೋಟ ಸಂಭವಿಸಿದ್ದು, ಅಕ್ಕಪಕ್ಕದ ಕಟ್ಟಡಗಳಿಗೂ ಹಾನಿಯಾಗಿದೆ. ನಿನ್ನೆ ರಾತ್ರಿ 9 ಗಂಟೆಗೆ ಸಿನಾ ಅಟ್ಟರ್ ಕ್ಲಿನಿಕ್ ನಲ್ಲಿ ಸ್ಫೋಟ ಸಂಭವಿಸಿತ್ತು. ಆ ಕಟ್ಟಡದ ಬೇಸ್​ಮೆಂಟ್​ನಲ್ಲಿ ಆಕ್ಸಿಜನ್ ಟ್ಯಾಂಕ್ ಸ್ಫೋಟಗೊಂಡ ಕಾರಣಕ್ಕೆ ಈ ದುರಂತ ಸಂಭವಿಸಿದೆ ಎನ್ನಲಾಗಿದೆ. ತಕ್ಷಣ ಅಲ್ಲಿದ್ದ ವೈದ್ಯಕೀಯ ಉಪಕರಣಗಳನ್ನು ಹೊರಹಾಕಲಾಗಿದೆ.



ಸಾವನ್ನಪ್ಪಿರುವ 19 ಜನರಲ್ಲಿ 15 ಜನ ಪುರುಷರು ಮತ್ತು 4 ಮಹಿಳೆಯರಿದ್ದಾರೆ. ಆರಂಭದಲ್ಲಿ 13 ಜನರು ಸಾವನ್ನಪ್ಪಿದ್ದರು. ಆದರೆ, ಅಗ್ನಿ ಶಾಮಕ ಸಿಬ್ಬಂದಿ ಮತ್ತೆ 6 ಮಂದಿಯ ಶವಗಳನ್ನು ಹೊರತೆಗೆದಿದ್ದು, ಸಾವನ್ನಪ್ಪಿದವರ ಸಂಖ್ಯೆ 19ಕ್ಕೆ ಏರಿಕೆಯಾಗಿದೆ.

First published:July 1, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading