ದೆಹಲಿಯ ಹಿಂಸಾಚಾರ ನಿಗ್ರಹಿಸಲು ವಿಶೇಷ ಪೊಲೀಸ್ ಆಯುಕ್ತರಾಗಿ ಎಸ್.ಎನ್. ಶ್ರೀವಾಸ್ತವ ನೇಮಕ

ಸಿಆರ್​ಪಿಎಫ್ ಸೇರುವ ಮುನ್ನ ಶ್ರೀವಾಸ್ತವ ಅವರು ದೆಹಲಿ ಪೊಲೀಸ್ ವಿಭಾಗದಲ್ಲಿ ವಿವಿಧ ಸ್ತರಗಳಲ್ಲಿ ಕೆಲಸ ಮಾಡಿದ ಅನುಭವಿ ಎನಿಸಿದ್ಧಾರೆ. ಹೀಗಾಗಿ, ಅವರಿಗೆ ನೂತನ ಹೊಣೆಗಾರಿಕೆ ನಿಭಾಹಿಸುವುದು ಕಷ್ಟವಲ್ಲ ಎನ್ನುತ್ತವೆ ದೆಹಲಿ ಪೊಲೀಸ್ ಮೂಲಗಳು.

Vijayasarthy SN | news18
Updated:February 26, 2020, 8:39 AM IST
ದೆಹಲಿಯ ಹಿಂಸಾಚಾರ ನಿಗ್ರಹಿಸಲು ವಿಶೇಷ ಪೊಲೀಸ್ ಆಯುಕ್ತರಾಗಿ ಎಸ್.ಎನ್. ಶ್ರೀವಾಸ್ತವ ನೇಮಕ
ದೆಹಲಿಯ ಭದ್ರತಾ ಪಡೆಗಳು
  • News18
  • Last Updated: February 26, 2020, 8:39 AM IST
  • Share this:
ನವದೆಹಲಿ(ಫೆ. 26): ದೇಶದ ರಾಜಧಾನಿಯಲ್ಲಿ ಹಿಂಸಾಚಾರ ಭುಗಿಲೆದ್ದಿರುವ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಕೇಂದ್ರ ಸರ್ಕಾರ ಹರಸಾಹಸ ನಡೆಸಿದೆ. ಕೇಂದ್ರ ಮೀಸಲು ಪೊಲೀಸ್ ಪಡೆಯ(ಸಿಆರ್​ಪಿಎಫ್) ವಿಶೇಷ ಮಹಾ ನಿರ್ದೇಶಕರಾಗಿದ್ದ ಎಸ್.ಎನ್. ಶ್ರೀವಾಸ್ತವ ಅವರನ್ನು ನವ ದೆಹಲಿಯ ವಿಶೇಷ ಪೊಲೀಸ್ ಆಯುಕ್ತರಾಗಿ (ಕಾನೂನು ಮತ್ತು ಸುವ್ಯವಸ್ಥೆ) ನೇಮಕ ಮಾಡಲಾಗಿದೆ. ಕೇಂದ್ರ ಗೃಹ ಸಚಿವಾಲಯ ನಿನ್ನೆ ಮಂಗಳವಾರ ಈ ನಿರ್ಧಾರ ಕೈಗೊಂಡಿದೆ ಎಂದು ಮೂಲಗಳು ತಿಳಿಸಿವೆ.

ಶ್ರೀವಾಸ್ತವ ಅವರು 1985ರ ಬ್ಯಾಚ್​ನ ಎಜಿಎಂಯುಟಿ ಕೆಡರ್​ನ ಐಪಿಎಸ್ ಅಧಿಕಾರಿಯಾಗಿದ್ದಾರೆ. (ಎಜಿಎಂಯುಟಿ ಅಂದರೆ ಅರುಣಾಚಲಪ್ರದೇಶ, ಗೋವಾ, ಮಿಜೋರಾಮ್ ಮತ್ತು ಕೇಂದ್ರಾಡಳಿತ ಪ್ರದೇಶಗಳು. ಇವು ಯುಪಿಎಸ್​ಸಿ ಪರೀಕ್ಷೆ ವೇಳೆ ನೀಡಲಾಗುವ ಆದ್ಯತೆಯ ಅವಕಾಶಗಳಲ್ಲೊಂದಾಗಿವೆ). ಶ್ರೀವಾಸ್ತವ ಅವರು ಸಿಆರ್​ಪಿಎಫ್​ನ ತರಬೇತಿ ವಿಭಾಗದಲ್ಲಿ ವಿಶೇಷ ಡಿಜಿಯಾಗಿ ಸೇವೆ ಸಲ್ಲಿಸುತ್ತಿದ್ದರು. ನಿನ್ನೆ ರಾತ್ರಿ ಅಮಿತ್ ಶಾ ಅವರು ತುರ್ತು ಭದ್ರತಾ ಪರಿಶೀಲನಾ ಸಭೆ ನಡೆಸಿದ್ದರು. ಈ ವೇಳೆ ಶ್ರೀವಾಸ್ತವ ಅವರನ್ನೂ ಕರೆಸಿದ್ದರು. ಕೂಡಲೇ ಅವರನ್ನು ಸಿಆರ್​ಪಿಎಫ್​ ಸೇವೆಯಿಂದ ವಿಮುಕ್ತಿಗೊಳಿಸಿ ದೆಹಲಿ ಪೊಲೀಸ್ ವಿಭಾಗಕ್ಕೆ ಕರೆತಂದು ಆದೇಶ ಹೊರಡಿಸಿದೆ. ಸಿಆರ್​ಪಿಎಫ್ ಕೂಡ ಶ್ರೀವಾಸ್ತವ ಅವರನ್ನು ರಿಲೀವ್ ಮಾಡಿ ಕಳುಹಿಸಿದೆ.

ಇದನ್ನೂ ಓದಿ: ದೆಹಲಿಯಲ್ಲಿ ಮುಂದುವರಿದ ಹಿಂಸಾಚಾರ: ಸಾವಿನ ಸಂಖ್ಯೆ 16ಕ್ಕೇರಿಕೆ; ಉದ್ವಿಘ್ನ ಪರಿಸ್ಥಿತಿ

ಶ್ರೀವಾಸ್ತವ ಅವರು ನ್ಯೂ ಡೆಲ್ಲಿಯ ವಿಶೇಷ ಪೊಲೀಸ್ ಆಯುಕ್ತರಾಗಿ ನಿನ್ನೆಯಿಂದಲೇ ಅಧಿಕಾರ ಪಡೆದಿದ್ದಾರೆ. ಫೆ. 29ರವರೆಗೂ ಅವರು ಇದೇ ಸ್ಥಾನದಲ್ಲಿ ಕರ್ತವ್ಯ ನಿಭಾಯಿಸಲಿದ್ಧಾರೆ. ನವದೆಹಲಿಯ ಹಾಲಿ ಪೊಲೀಸ್ ಆಯುಕ್ತರಾದ ಅಮೂಲ್ಯ ಪಾಟ್ನಾಯಕ್ ಅವರ ಅಧಿಕಾರಾವಧಿ ಫೆ. 29ಕ್ಕೆ ಕೊನೆಯಾಗಲಿದೆ. ಅದಾದ ಬಳಿಕ ಆ ಸ್ಥಾನವನ್ನು ಶ್ರೀವಾಸ್ತವ ಅವರಿಗೇ ವಹಿಸಲಾಗುತ್ತದೆ.

ಸಿಆರ್​ಪಿಎಫ್ ಸೇರುವ ಮುನ್ನ ಶ್ರೀವಾಸ್ತವ ಅವರು ದೆಹಲಿ ಪೊಲೀಸ್ ವಿಭಾಗದಲ್ಲಿ ವಿವಿಧ ಸ್ತರಗಳಲ್ಲಿ ಕೆಲಸ ಮಾಡಿದ ಅನುಭವಿ ಎನಿಸಿದ್ಧಾರೆ. ಹೀಗಾಗಿ, ಅವರಿಗೆ ನೂತನ ಹೊಣೆಗಾರಿಕೆ ನಿಭಾಹಿಸುವುದು ಕಷ್ಟವಲ್ಲ ಎನ್ನುತ್ತವೆ ದೆಹಲಿ ಪೊಲೀಸ್ ಮೂಲಗಳು. ಎಸ್.ಎನ್. ಶ್ರೀವಾಸ್ತವ ಅವರು ಈಗಾಗಲೇ ದೆಹಲಿಯ ವಿವಿಧ ಪೊಲೀಸ್ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲು ಪ್ರಾರಂಭಿಸಿದ್ಧಾರೆ. ದೆಹಲಿಯಲ್ಲಿ, ಅದರಲ್ಲೂ ಈಶಾನ್ಯ ಭಾಗದ ದೆಹಲಿಯಲ್ಲಿ ಹೆಚ್ಚುತ್ತಿರುವ ಹಿಂಸಾಚಾರವನ್ನು ನಿಗ್ರಹಿಸಲು ಸೂಕ್ತ ಕ್ರಮಗಳನ್ನು ಅವರು ಅವಲೋಕಿಸಿದ್ದಾರೆನ್ನಲಾಗಿದೆ.

ಇದೇ ವೇಳೆ, ದೆಹಲಿಯಲ್ಲಿ ಮೂರು ದಿನಗಳಿಂದ ನಡೆಯುತ್ತಿರುವ ಹಿಂಸಾಚಾರಕ್ಕೆ ಬಲಿಯಾದವರ ಸಂಖ್ಯೆ 16ಕ್ಕೆ ಏರಿದೆ. ಇವತ್ತು ಬುಧವಾರ ಮೂವರು ಗಾಯಾಳುಗಳು ನಿಧನ ಹೊಂದಿದ್ಧಾರೆ.

(ವರದಿ: ಪಿಟಿಐ ಸುದ್ದಿ ಸಂಸ್ಥೆ)ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published: February 26, 2020, 8:39 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading