• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • ಸ್ವಾಮಿ ಅಗ್ನಿವೇಶ್ ಸಾವನ್ನು ಸಂಭ್ರಮಿಸಿದ ಐಪಿಎಸ್‌ ಅಧಿಕಾರಿ ನಾಗೇಶ್ವರ್ ರಾವ್; ನೆಟ್ಟಿಗರಿಂದ ತೀವ್ರ ತರಾಟೆ

ಸ್ವಾಮಿ ಅಗ್ನಿವೇಶ್ ಸಾವನ್ನು ಸಂಭ್ರಮಿಸಿದ ಐಪಿಎಸ್‌ ಅಧಿಕಾರಿ ನಾಗೇಶ್ವರ್ ರಾವ್; ನೆಟ್ಟಿಗರಿಂದ ತೀವ್ರ ತರಾಟೆ

ಐಪಿಎಸ್ ಅಧಿಕಾರಿ ನಾಗೇಶ್ವರ್‌ ರಾವ್.

ಐಪಿಎಸ್ ಅಧಿಕಾರಿ ನಾಗೇಶ್ವರ್‌ ರಾವ್.

ಈ ಐಪಿಎಸ್ ಅಧಿಕಾರಿಯ ಟ್ವೀಟ್ ಧರ್ಮ ಮತ್ತು ಮೂಲಭೂತ ಮಾನವೀಯ ಸಿದ್ಧಾಂತಗಳಿಗೆ ವಿರುದ್ಧವಾಗಿದೆ. ಇವರು ಸರ್ಕಾರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಮತ್ತು ಇಂತಹದ್ದೇಮನಸ್ಥಿತಿ ಆಲೋಚನೆಯ ಜೊತೆಗೆ ಅವರು ಇಷ್ಟು ದಿನ ಅವರು ಸಾರ್ವಜನಿಕರೊಂದಿಗೆ ವ್ಯವಹರಿಸಿದ್ದಾರೆ ಎಂದು ಯೋಚಿಸುವುದೇ ದುರಾದೃಷ್ಟಕರ ಎಂದು ಓರ್ವ ನೆಟ್ಟಿಗ ಅಸಮಾಧಾನ ಹೊರಹಾಕಿದ್ದಾರೆ.

ಮುಂದೆ ಓದಿ ...
  • Share this:

ಪಿತ್ತ ಜನಕಾಂಗಕ್ಕೆ ಸಂಬಂಧಿಸಿದ ಖಾಯಿಲೆಯಿಂದ ಬಳಲುತ್ತಿದ್ದ ಹರಿಯಾಣ ರಾಜ್ಯದ ಮಾಜಿ ಶಾಸಕ ಸಾಮಾಜಿಕ ಹೋರಾಟಗಾರ ಮತ್ತು ಆರ್ಯ ಸಮಾಜದ ನಾಯಕ ಸ್ವಾಮಿ ಅಗ್ನಿವೇಶ್ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಸಂಜೆ ವೇಳೆಗೆ ದೆಹಲಿಯ ಇನ್ಸ್ಟಿಟ್ಯೂಟ್ ಆಫ್ ಲಿವರ್ ಅಂಡ್ ಬಿಲಿಯರಿ ಸೈನ್ಸಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಸ್ವಾಮಿ ಅಗ್ನಿವೇಶ್ ಅವರ ಅಗಲಿಕೆಗೆ ದೇಶದಾದ್ಯಂತ ಹಲವರು ಸಂತಾಪ ಸೂಚಿಸುತ್ತಿದ್ದಾರೆ. ಸಮಾಜದ ಕುರಿತ ಅವರ ಹೋರಾಟ ಮತ್ತು ಬದ್ಧತೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆದರೆ, ಇದೇ ಸಂದರ್ಭದಲ್ಲಿ ಮಾಜಿ ಸಿಬಿಐ ನಿರ್ದೆಶಕ ಮತ್ತು ಹಿರಿಯ ಐಪಿಎಸ್ ಅಧಿಕಾರಿ ನಾಗೇಶ್ವರ ರಾವ್ ಸ್ವಾಮಿ ಅಗ್ನಿವೇಶ್ ಅವರ ಸಾವನ್ನು ಟ್ವೀಟ್ ಮೂಲಕ ಸಂಭ್ರಮಿಸುತ್ತಿದ್ದು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ವಿರೋಧಕ್ಕೆ ಒಳಗಾಗುತ್ತಿದ್ದಾರೆ.ಸ್ವಾಮಿ ಅಗ್ನಿವೇಶ್ ಸಾವಿನ ಕುರಿತು ಟ್ವೀಟ್ ಮಾಡಿರುವ ಐಪಿಎಸ್ ಅಧಿಕಾರಿ ನಾಗೇಶ್ವರ್ ರಾವ್, “ಸ್ವಾಮಿ ಅಗ್ನಿವೇಶ್ ಮೃತಪಟ್ಟಿರುವುದು ಒಳ್ಳೆಯದೇ ಆಯಿತು. ನೀವು ಕೇಸರಿ ವಸ್ತ್ರವನ್ನು ತೊಟ್ಟಿದ್ದರೂ ಹಿಂದೂ ವಿರೋಧಿಯಾಗಿದ್ದರು. ನೀವು ಧರ್ಮಕ್ಕೆ ಸಾಕಷ್ಟು ಹಾನಿ ಎಸಗಿದ್ದೀರಿ. ನೀವು ತೆಲುಗು ಬ್ರಾಹ್ಮಣರಾಗಿ ಹುಟ್ಟಿರುವುದಕ್ಕೆ ನನಗೆ ನಾಚಿಕೆಯಾಗುತ್ತದೆ. ನೀವು ಕುರಿಯ ವೇಷದಲ್ಲಿ ತೋಳದಂತೆ. ಯಮರಾಜನ ವಿರುದ್ಧ ನನ್ನ ಆಕ್ಷೇಪೆಂದರೆ ನಿಮ್ಮನ್ನು ಕರೆದುಕೊಂಡು ಹೋಗಲು ಆತನಿಗೆ ಇಷ್ಟು ದಿನ ಬೇಕಾಯಿತೇ?” ಎಂದು ಅಭಿಪ್ರಾಯಪಟ್ಟಿದ್ದರು.

ಆದರೆ, ಅಧಿಕಾರಿ ನಾಗೇಶ್ವರ್ ರಾವ್ ಅವರು ಟ್ವೀಟ್ ಇದೀಗ ಸಾಮಾಜಿ ಜಾಲತಾಣದಲ್ಲಿ ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ಹಲವು ನೆಟ್ಟಿಗರು ನಾಗೇಶ್ವರ್ ರಾವ್ ಅವರ ಮನಸ್ಥಿತಿ ಎಂತಾದ್ದು ಎಂದು ಪ್ರಶ್ನಿಸುತ್ತಿದ್ದಾರೆ. ಅಲ್ಲದೆ, ಅವರ ಟ್ವೀಟ್‌ ಬಗ್ಗೆ ಅಸಮಾಧಾನವನ್ನು ಹೊರಹಾಕುತ್ತಿದ್ದಾರೆ.


ಈ ಕುರಿತು ಆಕ್ಷೇಪ ಎತ್ತಿರುವ ಓರ್ವ ನೆಟ್ಟಿಗರು, “ಇದು ತೀರಾ ನಾಚಿಕೆಗೇಡು. ಇಂತಹ ಸಂದರ್ಭದಲ್ಲಿ ನೀವು ಓರ್ವ ಪೊಲೀಸ್ ಅಧಿಕಾರಿ ಹೇಗೆ ಸ್ಪಂದಿಸಿರಬೇಕು?. ಆದರೆ, ಸತ್ತವರನ್ನು ನಿಂದಿಸುತ್ತಿದ್ದೀರಾ. ಸತ್ತವರನ್ನು ನಿಂದಿಸುವುದು ನಿಮ್ಮ ಹಿಂದುತ್ವವಾಗಿರಬಹುದು. ಆದರೆ. ಖಂಡಿತಯೂ ಅದು ಹಿಂದೂ ಧರ್ಮವಲ್ಲ” ಎಂದು ಕಿಡಿಕಾರಿದ್ದಾರೆ.


ಮತ್ತೋರ್ವ ನೆಟ್ಟಿಗ, “ಈ ಐಪಿಎಸ್ ಅಧಿಕಾರಿಯ ಟ್ವೀಟ್ ಧರ್ಮ ಮತ್ತು ಮೂಲಭೂತ ಮಾನವೀಯ ಸಿದ್ಧಾಂತಗಳಿಗೆ ವಿರುದ್ಧವಾಗಿದೆ. ಇವರು ಸರ್ಕಾರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಮತ್ತು ಇಂತಹದ್ದೇಮನಸ್ಥಿತಿ ಆಲೋಚನೆಯ ಜೊತೆಗೆ ಅವರು ಇಷ್ಟು ದಿನ ಅವರು ಸಾರ್ವಜನಿಕರೊಂದಿಗೆ ವ್ಯವಹರಿಸಿದ್ದಾರೆ ಎಂದು ಯೋಚಿಸುವುದೇ ದುರಾದೃಷ್ಟಕರ” ಎಂದು ಅಸಮಾಧಾನ ಹೊರಹಾಕಿದ್ದಾರೆ.


ಆದರೆ, ನೆಟ್ಟಿಗರ ಈ ವಿರೋಧಕ್ಕೂ ಪ್ರತಿಕ್ರಿಯೆ ನೀಡಿರುವ ನಾಗೇಶ್ವರ್ ರಾವ್, “ದುಷ್ಟರು ಸತ್ತ ದಿನವನ್ನು ನಾವು ಹಬ್ಬಗಳೆಂದು ಏಕೆ ಆಚರಿಸುತ್ತೇವೆ? ಏಕೆಂದರೆ ಅವರು ಸಮಾಜವನ್ನು ನಾಶಗೈಯ್ಯುತ್ತಿರುವ ಕ್ರಿಮಿಗಳಂತೆ ಹಾಗೂ ಅವರ ಸಾವು ಸಂಭ್ರಮಾಚರಣೆಗೆ ಒಂದು ಕಾರಂ. ಹಿಂದುತ್ವವೆಂದರೆ ನಂಬಿಕೆಯಲ್ಲ. ಅದು ಧರ್ಮ. ಹಿಂದೂ ಧರ್ಮ ಅಂಧಶ್ರದ್ಧೆಯ ವಿರುದ್ಧವಾಗಿದೆ. ಅಧರ್ಮೀಯರನ್ನು ಸಂಹರಿಸಲು ವಿಷ್ಣು ಒಂಬತ್ತು ಅವತಾರಗಳನ್ನು ಎತ್ತಿದ್ದ. ಇದನ್ನು ನಾವು ಹಬ್ಬಗಳೆಂದು ಆಚರಿಸುತ್ತೇವೆ. ಹಾಗಾದರೆ ಈ ಹಬ್ಬಗಳು ಹೇಟ್ ವೈರಸ್‌ಗಳೇ?” ಎಂದು ಸಮಜಾಯಿಷಿ ನೀಡಿದ್ದಾರೆ.

top videos
    First published: