ಎಷ್ಟೋ ಜನ ಐಪಿಎಸ್ (IPS) ಅಧಿಕಾರಿಗಳು ಮತ್ತು ಐಎಎಸ್ ಅಧಿಕಾರಿಗಳಿಂದ, ಸ್ಥಳೀಯ ರಾಜಕಾರಿಣಿಗಳು ಯಾವುದೋ ಒಂದು ವಿಷಯಕ್ಕೆ ತುಂಬಾನೇ ಕಿರಿಕಿರಿ ಮಾಡುತ್ತಿದ್ದಾರೆ ಮತ್ತು ತಮ್ಮ ಕೆಲಸವನ್ನು (Work) ಮಾಡಲು ಬಿಡುತ್ತಿಲ್ಲ ಅಂತ ಅನೇಕ ರೀತಿಯ ದೂರುಗಳು (Complaint) ಆಗಾಗ್ಗೆ ಕೇಳಿ ಬರುತ್ತಲೇ ಇರುತ್ತವೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಈ ಹಿಂದೆಯೂ ಸಹ ನಾವು ಕೆಲವು ಅಧಿಕಾರಿಗಳು ಅತಿಯಾದ ಒತ್ತಡಕ್ಕೆ ಮಣಿದು, ತಮ್ಮ ಪ್ರಾಣವನ್ನೇ ಕಳೆದುಕೊಂಡಿರುವ ಘಟನೆಗಳನ್ನು (Insident) ಸಹ ನೋಡಿದ್ದೇವೆ.
ಸ್ಥಳೀಯ ಶಾಸಕ ಬಲರಾಜ್ ಕುಂಡು ವಿರುದ್ದ ದೂರು ದಾಖಲಿಸಿದ ಐಪಿಎಸ್ ಅಧಿಕಾರಿ
ಐಪಿಎಸ್ ಅಧಿಕಾರಿ ಹೇಮೇಂದ್ರ ಕುಮಾರ್ ಮೀನಾ ಅವರು ಈಗ ಮೆಹಮ್ ನ ಹೆಚ್ಚುವರಿ ಪೊಲೀಸ್ ಅಧೀಕ್ಷಕ (ಎಎಸ್ಪಿ) ಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಸ್ಥಳೀಯ ಶಾಸಕ ಬಲರಾಜ್ ಕುಂಡು ಅವರ ವಿರುದ್ಧ ದೂರು ದಾಖಲಿಸಿದ್ದಾರೆ. ಸ್ಥಳೀಯ ಶಾಸಕ ಕುಂಡು ಅವರು "ಅನುಚಿತ ರೀತಿಯಲ್ಲಿ" ವರ್ತಿಸಿದ್ದಾರೆ ಮತ್ತು ಯುವಕನೊಬ್ಬನ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ಮಹಿಳೆಯನ್ನು ಕೂಡಲೇ ಬಂಧಿಸಲು ಅವರ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಮೀನಾ ಅವರು ಆರೋಪಿಸಿದ್ದಾರೆ.
ಮೀನಾ ಅವರು ರೋಹ್ತಕ್ ರೇಂಜ್ ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ (ಐಜಿಪಿ) ಮಮತಾ ಸಿಂಗ್ ಅವರಿಗೆ ದೂರು ನೀಡಿದ್ದು, ಅವರು ರೋಹ್ತಕ್ ಪೊಲೀಸ್ ವರಿಷ್ಠಾಧಿಕಾರಿ ಉದಯ್ ಸಿಂಗ್ ಮೀನಾ ಅವರಿಗೆ ಈ ವಿಷಯವನ್ನು ಪರಿಶೀಲಿಸಲು ಮತ್ತು ಪ್ರಕರಣದ ತನಿಖೆ ನಡೆಸುವಂತೆ ಕೇಳಿಕೊಂಡಿದ್ದಾರೆ.
ಮೀನಾ ಅವರು ನೀಡಿದ ದೂರಿನಲ್ಲಿ ಏನಿದೆ?
ಮೆಹಮ್ ನ ಶಾಸಕ ಕುಂಡು ತನ್ನೊಂದಿಗೆ "ಅನುಚಿತ ರೀತಿಯಲ್ಲಿ ವರ್ತಿಸಿದ್ದಾರೆ ಮತ್ತು ಮೆಹಮ್ ಯುವಕನ ಆತ್ಮಹತ್ಯೆಗೆ ಸಂಬಂಧಿಸಿದಂತೆ ಮಹಿಳೆಯೊಬ್ಬರನ್ನು ಬಂಧಿಸಲು ಅವರ ಮೇಲೆ ಒತ್ತಡ ಹೇರಲು ಪ್ರಯತ್ನಿಸಿದ್ದಾರೆ" ಎಂದು ಎಎಸ್ಪಿ ಮೀನಾ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ. ಅಷ್ಟೇ ಅಲ್ಲದೆ ಆಡಿಯೊ ರೆಕಾರ್ಡಿಂಗ್ ಕೂಡ ಈ ದೂರಿನ ಭಾಗವಾಗಿದೆ ಎಂದು ಹೇಳಲಾಗುತ್ತಿದೆ.
ಮೀನಾ ನೀಡಿರುವ ದೂರಿನ ಬಗ್ಗೆ ಕುಂಡು ಅವರು ಹೇಳಿದ್ದೇನು?
ಈ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಿದ ಕುಂಡು ಅವರು ಈ ದೂರಿನ ಹಿಂದೆ ಕೆಲವು ಬೇರೆ ಪಕ್ಷಗಳ ಸ್ಥಳೀಯ ನಾಯಕರ ಕೈವಾಡವಿದೆ ಮತ್ತು ತಮ್ಮ ವರ್ಚಸ್ಸಿಗೆ ಮಸಿ ಬಳಿಯಲು ಈ ರೀತಿಯಾದ ಸುಳ್ಳು ಆರೋಪಗಳನ್ನು ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ. "ಸ್ಥಳೀಯ ನಿವಾಸಿಗಳ ಬಗ್ಗೆ ಕಾಳಜಿ ತೋರಿಸುವುದು ಮತ್ತು ಅವರ ಪರ ಧ್ವನಿಯನ್ನು ಎತ್ತುವುದು ಚುನಾಯಿತ ಪ್ರತಿನಿಧಿಯಾಗಿ ನನ್ನ ಜವಾಬ್ದಾರಿಯಾಗಿದೆ. ನಾನು ನನ್ನ ಕೆಲಸವನ್ನು ಮಾತ್ರ ಮಾಡಿರುವುದರಿಂದ ನಾನು ಇದನ್ನೆಲ್ಲಾ ಯಾರ ಮುಂದೆಯೂ ವಿವರಿಸುವ ಅಗತ್ಯವಿಲ್ಲ.
ನಾನು ಮುಖ್ಯಮಂತ್ರಿ ಮತ್ತು ಗೃಹ ಸಚಿವರನ್ನು ಭೇಟಿ ಮಾಡಿ ಈ ವಿಷಯವನ್ನು ಅವರಿಗೆ ತಿಳಿಸುತ್ತೇನೆ. ನಾನು ಮೆಹಮ್ ಎಎಸ್ಪಿ ವಿರುದ್ಧ ಕಠಿಣವಾದ ಕ್ರಮ ತೆಗೆದುಕೊಳ್ಳುವಂತೆ ಕೋರುತ್ತೇನೆ” ಎಂದು ಕುಂಡು ಅವರು ಸುದ್ದಿ ಮಾಧ್ಯಮಕ್ಕೆ ತಿಳಿಸಿದರು.
ದೂರನ್ನು ಪರಿಶೀಲಿಸುತ್ತಿದ್ದಾರಂತೆ ರೋಹ್ತಕ್ ಎಸ್ಪಿ ಉದಯ್ ಸಿಂಗ್
ಈಗಾಗಲೇ ರೋಹ್ತಕ್ ಎಸ್ಪಿ ಉದಯ್ ಸಿಂಗ್ ಅವರು ಮೆಹಮ್ ಶಾಸಕರ ವಿರುದ್ಧ ಅನುಚಿತ ವರ್ತನೆಗೆ ಸಂಬಂಧಿಸಿದ ದೂರು ದಾಖಲಿಸಿದ್ದಾರೆ ಮತ್ತು ಅವರು ಈ ವಿಷಯವನ್ನು ಪರಿಶೀಲಿಸುತ್ತಿದ್ದಾರೆ ಎಂದು ದೃಢಪಡಿಸಿದ್ದಾರೆ. ದೂರಿನ ಸ್ವರೂಪದ ಬಗ್ಗೆ ಹೆಚ್ಚಿನ ವಿವರಗಳನ್ನು ಹಂಚಿಕೊಳ್ಳಲು ಅವರು ನಿರಾಕರಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ