• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • ದೆಹಲಿ, ಪಂಜಾಬ್ ರೀತಿ ಕರ್ನಾಟಕದಲ್ಲೂ ಬದಲಾವಣೆ ಆಗಬೇಕಿದೆ: AAP ಸೇರ್ಪಡೆ ಬಳಿಕ ಭಾಸ್ಕರ್ ರಾವ್ ಹೇಳಿಕೆ

ದೆಹಲಿ, ಪಂಜಾಬ್ ರೀತಿ ಕರ್ನಾಟಕದಲ್ಲೂ ಬದಲಾವಣೆ ಆಗಬೇಕಿದೆ: AAP ಸೇರ್ಪಡೆ ಬಳಿಕ ಭಾಸ್ಕರ್ ರಾವ್ ಹೇಳಿಕೆ

ಎಎಪಿ ಸೇರಿದ ಭಾಸ್ಕರ್​ ರಾವ್​​

ಎಎಪಿ ಸೇರಿದ ಭಾಸ್ಕರ್​ ರಾವ್​​

ಕರ್ನಾಟಕದಲ್ಲಿ ಎಲ್ಲಾ ರೀತಿಯ ಸಂಪನ್ಮೂಲ ಇದೆ. ಆದರೆ ಸ್ವಚ್ಚ ನಾಯಕತ್ವದ ಕೊರತೆ ಇದೆ. ಈ ಹಿನ್ನೆಲೆಯಲ್ಲಿ ನಾನು ಆಮ್ ಆದ್ಮಿ ಪಕ್ಷವನ್ನು ಸೇರಿದ್ದೇನೆ. ಅರವಿಂದ ಕೇಜ್ರಿವಾಲ್ ಅವರ ನಾಯಕತ್ವವನ್ನು ಮೆಚ್ಚಿ ಆಪ್ ಸೇರ್ಪಡೆ ಆಗಿದ್ದೇನೆ.

  • Share this:

ನವದೆಹಲಿ, ಏ. 4: ದೆಹಲಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ (Chief Minister Of Delhi And Aam Admi Party National Convener Aravind Kejriwal) ನೇತೃತ್ವದಲ್ಲಿ ಇಂದು ಕರ್ನಾಟಕದ ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ (Bhaskar Rao)  ಆಮ್ ಆದ್ಮಿ ಪಕ್ಷ ಸೇರ್ಪಡೆಯಾದರು. ಬಳಿಕ ಮಾತನಾಡಿದ ಅವರು ದೆಹಲಿ ಮತ್ತು ಪಂಜಾಬ್ ರೀತಿ ಕರ್ನಾಟಕದಲ್ಲೂ ಬದಲಾವಣೆ ಆಗಬೇಕಿದೆ. ಕರ್ನಾಟಕದ ಜನ ಬದಲಾವಣೆಯನ್ನು ಎದುರು ನೋಡುತ್ತಿದ್ದಾರೆ ಎಂದು ಹೇಳಿದರು.


ಕೇಜ್ರಿವಾಲ್ ಅವರ ಬಗ್ಗೆ ವಿದೇಶಗಳಲ್ಲೂ ಮೆಚ್ಚುಗೆ
ಭಾಸ್ಕರ್ ರಾವ್ ಅವರು ಬೆಳಿಗ್ಗೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ, ಆಮ್ ಆದ್ಮಿ ಪಕ್ಷದ ಕರ್ನಾಟಕದ ಉಸ್ತುವಾರಿ ದಿಲೀಪ್ ಪಾಂಡೆ, ಸಂಚಾಲಕ ಪೃಥ್ವಿ ರೆಡ್ಡಿ ಸಮ್ಮುಖದಲ್ಲಿ ಆಮ್ ಆದ್ಮಿ ಪಕ್ಷ ಸೇರ್ಪಡೆಯಾದರು. ಬಳಿಕ ಮನೀಷ್ ಸಿಸೋಡಿಯಾ ಮತ್ತಿತರ ಜೊತೆ‌ ಸುದ್ದಿಗೋಷ್ಠಿ ನಡೆಸಿ ತಾವು ಆಮ್ ಆದ್ಮಿ ಪಕ್ಷ ಸೇರಿದ್ದು ಏಕೆ ಎಂದು ವಿವರಿಸಿದರು. ಆಮ್ ಆದ್ಮಿ ಪಕ್ಷದ ಸಾಧನೆಗೆ ದೇಶದೆಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ. ಅರವಿಂದ ಕೇಜ್ರಿವಾಲ್ ಅವರ ಬಗ್ಗೆ ವಿದೇಶಗಳಲ್ಲೂ ಮೆಚ್ಚುಗೆ ವ್ಯಕ್ತವಾಗಿದೆ. ಕರ್ನಾಟಕದ ಆಡಳಿತದ ಬಗ್ಗೆಯೂ ಇಂಥದೇ ಮೆಚ್ಚುಗೆ ವ್ಯಕ್ತವಂತಾಗಬೇಕು ಎಂದು ಹೇಳಿದರು.


ರಾಜ್ಯದಲ್ಲಿ 3 ಪಕ್ಷಗಳ ಬಗ್ಗೆ ಜನಬೇಸರ ಗೊಂಡಿದ್ದಾರೆ
ಕರ್ನಾಟಕದಲ್ಲಿ ಎಲ್ಲಾ ರೀತಿಯ ಸಂಪನ್ಮೂಲ ಇದೆ. ಆದರೆ ಸ್ವಚ್ಚ ನಾಯಕತ್ವದ ಕೊರತೆ ಇದೆ. ಈ ಹಿನ್ನೆಲೆಯಲ್ಲಿ ನಾನು ಆಮ್ ಆದ್ಮಿ ಪಕ್ಷವನ್ನು ಸೇರಿದ್ದೇನೆ. ಅರವಿಂದ ಕೇಜ್ರಿವಾಲ್ ಅವರ ನಾಯಕತ್ವವನ್ನು ಮೆಚ್ಚಿ ಆಪ್ ಸೇರ್ಪಡೆ ಆಗಿದ್ದೇನೆ.‌ ಕರ್ನಾಟಕದಲ್ಲಿ 3 ಪಕ್ಷಗಳ ಬಗ್ಗೆ ಜನಬೇಸರ ಗೊಂಡಿದ್ದಾರೆ. ರಾಜ್ಯದಲ್ಲಿ ಭ್ರಷ್ಟಾಚಾರ ಬಹಳ ಹೆಚ್ಚಾಗಿದೆ. ಇದನ್ನು ನೋಡಿ ರಾಜ್ಯದ ಜನ 3 ಪಕ್ಷಗಳ ಬಗ್ಗೆ ಬೇಸರ ಮಾಡಿಕೊಂಡಿದ್ದಾರೆ. ರಾಜ್ಯದಲ್ಲಿ 3 ಪಕ್ಷಗಳು ಅಂದರ್ ಬಾಹರ್ ಆಡುತ್ತಿವೆ.‌ ನಿಜಕ್ಕೂ ಈಗ ಕರ್ನಾಟಕದಲ್ಲಿ ಬದಲಾವಣೆ ಆಗಬೇಕಿದೆ.  ಜನರಿಗೆ ಬದಲಾವಣೆ ಬೇಕಾಗಿದೆ ಎಂದು ಹೇಳಿದರು.\


ಇದನ್ನು ಓದಿ: 1994ರ ಇತಿಹಾಸ ಮರಳುತ್ತೆ; ಕಾಂಗ್ರೆಸ್​​-ಬಿಜೆಪಿ ವಿರುದ್ಧ HD Kumarswamy ಕಿಡಿ


ಬೆಂಗಳೂರು ಅಂತಾರಾಷ್ಟ್ರೀಯ ಮಟ್ಟದ ನಗರ
ಬೆಂಗಳೂರು ಅಂತಾರಾಷ್ಟ್ರೀಯ ಮಟ್ಟದ ನಗರ. ಆದರೆ ಅಲ್ಲಿನ‌ ದುರಾಡಳಿತದಿಂದ ಬೆಳವಣಿಗೆ ಆಗುತ್ತಿಲ್ಲ. ನಾನು ಇದಕ್ಕಾಗಿ ಅಧಿಕಾರಿಗಳ ವರ್ಗವನ್ನು ದೂರುವುದಿಲ್ಲ‌. ರಾಜಕೀಯ ನಾಯಕತ್ವ ಸರಿಯಾಗಿಲ್ಲದ ಕಾರಣಕ್ಕೆ ಹೀಗಾಗುತ್ತಿದೆ. ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಸುಧಾರಣೆ ಆಗಬೇಕು ಎಂಬ ಹಿನ್ನೆಲೆಯಲ್ಲಿ ನಾನು ಆಮ್ ಆದ್ಮಿ ಪಕ್ಷವನ್ನು ಸೇರಿದ್ದೇನೆ. ನನಗೆ ಅವಕಾಶ ಮಾಡಿಕೊಟ್ಟ ಅರವಿಂದ ಕೇಜ್ರಿವಾಲ್ ಗೆ ಧನ್ಯವಾದ ತಿಳಿಸುತ್ತೇನೆ ಎಂದರು.


ಇದನ್ನು ಓದಿ: 2020-21 ಸಾಲಿನ ರಾಜ್ಯ ಕ್ರೀಡಾ ಪ್ರಶಸ್ತಿ ಘೋಷಣೆ; ಇಲ್ಲಿದೆ ಪ್ರಶಸ್ತಿಯ ಸಂಪೂರ್ಣ ವಿವರ


ದೆಹಲಿ ಡಿಸಿಎಂ ಮನಿಶ್ ಸಿಸೋಡಿಯಾ ಅವರು ಮಾತನಾಡಿ ಆಮ್ ಆದ್ಮಿ ಪಕ್ಷದ ಬಗ್ಗೆ ದಕ್ಷಿಣದ ರಾಜ್ಯಗಳಲ್ಲಿ ಚರ್ಚೆ ಆಗುತ್ತಿದೆ. ಭಾಸ್ಕರ್ ರಾವ್ ಅವರು ಐಪಿಎಸ್ ಹುದ್ದೆ ತೊರೆದು ಆಮ್ ಆದ್ಮಿ ಪಕ್ಷ ಸೇರಿದ್ದಾರೆ. ದೆಹಲಿಯಲ್ಲಿ ನಮ್ಮ ಪಕ್ಷದ ಸರಕಾರ ಮಾಡಿರುವ ಕೆಲಸಗಳನ್ನು ನೋಡಿ ಪಕ್ಷ ಸೇರಿದ್ದಾರೆ. ದೆಹಲಿಯ ಶಾಲೆಗಳಲ್ಲಿ ಆಗಿರುವ ಬದಲಾವಣೆ ನೋಡಿ ಪಕ್ಷ ಸೇರಿದ್ದಾರೆ. ಭಾಸ್ಕರ್ ರಾವ್ ಪೋಲಿಸ್ ಕಮಿಷನರ್ ಆಗಿರಲಿಲ್ಲ, ಪೀಪಲ್ಸ್ ಕಮೀಷನ್ ಆಗಿದ್ದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

top videos


    1990ನೇ ಕರ್ನಾಟಕ ಕೇಡರ್‌ ಐಪಿಎಸ್‌ ಅಧಿಕಾರಿ ಆಗಿರುವ ಭಾಸ್ಕರ್​​ ರಾವ್​ ಸೇವಾ ನಿವೃತ್ತಿಗೆ ಇನ್ನೂ ಮೂರು ವರ್ಷ ಇರುವಂತೆಯೇ ಸ್ವಯಂ ನಿವೃತ್ತಿ ಘೋಷಿಸಿ, ರಾಜಕೀಯ ಪ್ರವೇಶಕ್ಕೆ ಮುಂದಾಗಿದ್ದಾರೆ. ರೈಲ್ವೆ ಪೊಲೀಸ್‌ ವಿಭಾಗದ ಎಡಿಜಿಪಿ ಹಾಗೂ ಬೆಂಗಳೂರು ಪೊಲೀಸ್‌ ಕಮಿಷನರ್‌ ಆಗಿಯೂ ಅವರು ಸೇವೆ ಸಲ್ಲಿಸಿದ್ದಾರೆ

    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು