• ಹೋಂ
 • »
 • ನ್ಯೂಸ್
 • »
 • ದೇಶ-ವಿದೇಶ
 • »
 • Lalit Modi: ಲಲಿತ್ ಮೋದಿಗೆ ಓಡಾಡಲು ಮರ್ಸಿಡಿಸ್ ಕಾರುಗಳೇ ಬೇಕಿತ್ತಂತೆ: ದುಬಾರಿ ಜೀವನದ ಬಗ್ಗೆ ಬಿಚ್ಚಿಟ್ಟ ಪುಸ್ತಕದಲ್ಲೇನಿದೆ ನೋಡಿ

Lalit Modi: ಲಲಿತ್ ಮೋದಿಗೆ ಓಡಾಡಲು ಮರ್ಸಿಡಿಸ್ ಕಾರುಗಳೇ ಬೇಕಿತ್ತಂತೆ: ದುಬಾರಿ ಜೀವನದ ಬಗ್ಗೆ ಬಿಚ್ಚಿಟ್ಟ ಪುಸ್ತಕದಲ್ಲೇನಿದೆ ನೋಡಿ

ಲಲಿತ್ ಮೋದಿ

ಲಲಿತ್ ಮೋದಿ

ಐಪಿಎಲ್ ಸಂಸ್ಥಾಪಕ ಮತ್ತು ಉದ್ಯಮಿ ಲಲಿತ್ ಮೋದಿ ಕೆಲವು ದಿನಗಳಿಂದ ಹಲವಾರು ಕಾರಣಗಳಿಗಾಗಿ ಭಾರಿ ಚರ್ಚೆಯಲ್ಲಿದ್ದಾರೆ. ಮಾಜಿ ವಿಶ್ವ ಸುಂದರಿ ಸುಶ್ಮಿತಾ ಸೇನ್ ಜೊತೆಗಿನ ರಹಸ್ಯ ಮದುವೆ ಸೇರಿ ಹಲವಾರು ಕಾರಣಗಳಿಗೆ ಲಲಿತ್ ಮೋದಿ ಹೆಸರು ಪದೇ ಪದೇ ಕೇಳಿಬರುತ್ತಿದೆ. ಇತ್ತೀಚೆಗೆ ಇವರ ಬಗ್ಗೆ ಮತ್ತೊಂದು ವಿಚಾರವೊಂದನ್ನು ಪುಸ್ತಕವೊಂದರಲ್ಲಿ ಲೇಖಕರು ಬಹಿರಂಗ ಪಡಿಸಿದ್ದಾರೆ.

ಮುಂದೆ ಓದಿ ...
 • Share this:

ಐಪಿಎಲ್ ಸಂಸ್ಥಾಪಕ (Founder of IPL) ಮತ್ತು ಉದ್ಯಮಿ ಲಲಿತ್ ಮೋದಿ (Lalit Modi) ಕೆಲವು ದಿನಗಳಿಂದ ಹಲವಾರು ಕಾರಣಗಳಿಗಾಗಿ ಭಾರಿ ಚರ್ಚೆಯಲ್ಲಿದ್ದಾರೆ. ಮಾಜಿ ವಿಶ್ವ ಸುಂದರಿ ಸುಶ್ಮಿತಾ ಸೇನ್ (Sushmita Sen) ಜೊತೆಗಿನ ರಹಸ್ಯ ಮದುವೆ ಸೇರಿ ಹಲವಾರು ಕಾರಣಗಳಿಗೆ ಲಲಿತ್ ಮೋದಿ ಹೆಸರು ಪದೇ ಪದೇ ಕೇಳಿಬರುತ್ತಿದೆ. ಇತ್ತೀಚೆಗೆ ಇವರ ಬಗ್ಗೆ ಮತ್ತೊಂದು ವಿಚಾರವೊಂದನ್ನು ಪುಸ್ತಕವೊಂದರಲ್ಲಿ ಲೇಖಕರು ಬಹಿರಂಗ ಪಡಿಸಿದ್ದಾರೆ. ವಿಶ್ವದ ಕ್ರಿಕೆಟ್ (Cricket) ಆಟದ ದಿಕ್ಕನ್ನೇ ಬದಲಾಯಿಸಿದ ಐಪಿಎಲ್ ಲೀಗ್ ನ ಮಾಜಿ ಅಧ್ಯಕ್ಷರಾಗಿದ್ದ ಲಲಿತ್ ಮೋದಿ ಮೊದಲಿನಿಂದಲೂ ತಮಗೆ ಬೇಕಾದಂತೆ ತಮ್ಮ ಐಶಾರಾಮದ ಜೀವನ ಶೈಲಿಯನ್ನು (Lifestyle) ನಡೆಸುತ್ತಿದ್ದವರು ಮತ್ತು ಅತ್ಯಂತ ದುಬಾರಿ ಜೀವನ ಅವರದಾಗಿತ್ತು.


ಮೇವರಿಕ್ ಕಮಿಷನರ್: ದಿ ಐಪಿಎಲ್-ಲಲಿತ್ ಮೋದಿ ಸಾಗಾ
ಇದಕ್ಕೆ ನಿದರ್ಶನ ಎನ್ನುವಂತೆ "ಮೇವರಿಕ್ ಕಮಿಷನರ್: ದಿ ಐಪಿಎಲ್-ಲಲಿತ್ ಮೋದಿ ಸಾಗಾ" ದಲ್ಲಿ ಬೋರಿಯಾ ಮಜುಂದಾರ್ ಎಂಬ ಲೇಖಕರು ಲಲಿತ್ ಮೋದಿ ಬಗ್ಗೆ ಒಂದಷ್ಟು ಮಾಹಿತಿಗಳನ್ನು ಬರೆದಿದ್ದಾರೆ.


ಎಸ್- ಕ್ಲಾಸ್ ಮರ್ಸಿಡಿಸ್ ಕಾರುಗಳಲ್ಲೇ ಪ್ರಯಾಣಿಸುತ್ತಿದ್ದ ಲಲಿತ್ ಮೋದಿ
ಐಪಿಎಲ್ ಕಮಿಷನರ್ ಆಗಿದ್ದ ವೇಳೆ ಧರ್ಮಶಾಲಾ ಮತ್ತು ನಾಗ್ಪುರಗಳಿಗೆ ತೆರಳಿದಾಗ ಲಲಿತ್ ಮೋದಿ ಬೇರೆ ಸಾಧಾರಣ ಕಾರುಗಳಲ್ಲಿ ಓಡಾಡುತ್ತಿರಲಿಲ್ಲ. ಇಲ್ಲಿಗೆ ಬಂದಾಗ ಅವರಿಗೆ ಎಸ್-ಕ್ಲಾಸ್ ಮರ್ಸಿಡಿಸ್ ಕಾರುಗಳು ಇರಬೇಕಿತ್ತು ಎಂದು ಬರೆದಿದ್ದಾರೆ. ಧರ್ಮಶಾಲಾದಲ್ಲಿ ನಡೆದ ಪಂದ್ಯ ಒಂದಕ್ಕೆ ಲಲಿತ್ ಆಗಮಿಸಿದ್ದ ವೇಳೆ ದೆಹಲಿಯಿಂದ ಎರಡು ಎಸ್-ಕ್ಲಾಸ್ ಮರ್ಸಿಡಿಸ್ ಕಾರುಗಳನ್ನು ಬುಕ್ ಮಾಡಲಾಗಿತ್ತು.


ಲಿಲಿತ್ ಹಿಮಾಚಲಕ್ಕೆ ಬಂದಿಳಿಯುವ ಮುನ್ನ ಆ ದುಬಾರಿ ಕಾರುಗಳು ಇವರಿಗಾಗಿ ಕಾಯುತ್ತಿದ್ದವು ಎಂದು ಮಜುಂದಾರ್ ಬರೆದಿದ್ದಾರೆ. ದುಂದುಗಾರಿಕೆಯು ಲಲಿತ್ ಅವರಿಗೆ ವಾಡಿಕೆಯಾಗಿತ್ತು. ಇಂತಹ ಹಲವಾರು ಉದಾಹರಣೆಗಳು ಇವೆ ಎಂದಿದ್ದಾರೆ. “ಯಶಸ್ಸಿನ ಮೇಲೆ ಸವಾರಿ ಮಾಡುತ್ತಿದ್ದ ಲಲಿತ್ ಕಾಲಕಳೆದಂತೆ ತಮ್ಮದೇ ಯಶಸ್ಸಿಗೆ ಬಲಿಯಾದರು. ಗ್ಲಾಮರ್ ಮತ್ತು ಹಣವು ಐಪಿಎಲ್ ನ ತಿರುಳಾಗಿತ್ತು ಮತ್ತು ಲಲಿತ್‌ ಅವರ ಜೀವನ ಶೈಲಿಯು ಐಪಿಎಲ್ ಮೂಲಕ ಸಾಕಷ್ಟು ಹೊರಹೊಮ್ಮಿತು” ಎಂದು ಪುಸ್ತಕವು ವಿವರಿಸುತ್ತದೆ.


ಈ ಪುಸ್ತಕದಲ್ಲಿ ದುಬಾರಿ ಜೀವನ ಶೈಲಿಯ ಬಗ್ಗೆ ಏನೇನಿದೆ
“ಇನ್ನೊಂದು ಸಂದರ್ಭದಲ್ಲಿ ಲಲಿತ್ ಮೋದಿ (ಶಶಾಂಕ್ ವೆಂಕಟೇಶ್) ಮನೋಹರ್ ಅವರನ್ನು ಭೇಟಿ ಮಾಡಲು ಮತ್ತು ಐಪಿಎಲ್ ಪಂದ್ಯವನ್ನು ವೀಕ್ಷಿಸಲು ನಾಗ್ಪುರಕ್ಕೆ ತೆರಳಿದಾಗ, ಅವರ ಕಚೇರಿಯು ಎಸ್-ಕ್ಲಾಸ್ ಮರ್ಸಿಡಿಸ್ ಅನ್ನು ವ್ಯವಸ್ಥೆ ಮಾಡಲು ಕರೆ ನೀಡಿತ್ತು. ನಾಗ್ಪುರದಲ್ಲಿ ಕಾರಿನ ಆ ಮಾಡೆಲ್ ಲಭ್ಯವಿಲ್ಲ ಎಂದು ತಿಳಿಸಿದಾಗ ಅವರು ಹೈದರಾಬಾದ್‌ನಿಂದ ಕಾರನ್ನು ಬುಕ್ ಮಾಡಿದ್ದರಂತೆ.


ಇದನ್ನೂ ಓದಿ:  Lalith Modi: ಸುಶ್ಮಿತಾ ಸೇನ್ ಹೃದಯ ಕದ್ದ ಲಲಿತ್ ಮೋದಿ ಯಾರು? ಇವರು ಲಂಡನ್​ಗೆ ಪರಾರಿಯಾಗಿದ್ದೇಕೆ?


ಹೋಟೆಲ್‌ನಲ್ಲಿ ಉಳಿಯುವ ಸಂದರ್ಭದಲ್ಲೂ ಸಹ ಪಂಚತಾರಾ ಹೋಟೆಲ್ ಅನ್ನು ಸಂಪೂರ್ಣವಾಗಿ ತಮಗಾಗಿ ಕಾಯ್ದಿರಿಸುತ್ತಿದ್ದರಂತೆ. ಇದು ಕೂಡ ಲಲಿತ್ ದುಬಾರಿ ಜೀವನ ಶೈಲಿಗೆ ಹಿಡಿದ ಕನ್ನಡಿ ಎನ್ನುತ್ತಾರೆ ಮಜುಂದಾರ್. ಮತ್ತು ಬಿಸಿಸಿಐನಲ್ಲಿ ಯಾರೂ ಇದನ್ನು ಕೇಳುವ ಧೈರ್ಯವನ್ನು ಹೊಂದಿರಲಿಲ್ಲ ಎಂದು ಸೈಮನ್ ಮತ್ತು ಶುಸ್ಟರ್ ಪ್ರಕಟಿಸಿದ ಪುಸ್ತಕವು ಹೇಳುತ್ತದೆ.


ಲಲಿತ್ ಮೋದಿ ಬಗ್ಗೆ ಮಜುಂದಾರ್ ಹೇಳಿದ್ದು ಹೀಗೆ
ಲಲಿತ್ ಮೋದಿ ತಮ್ಮ ಸ್ವಂತ ಹಣದಿಂದ ಹೋಟೆಲ್‌ಗೆ ಪಾವತಿಸುತ್ತಿದ್ದಾರೋ ಅಥವಾ ಬಿಸಿಸಿಐ ವೆಚ್ಚದಲ್ಲಿಯೇ ಎಂಬ ಪ್ರಶ್ನೆಯನ್ನು ಸಹ ಯಾರು ಮಾಡುತ್ತಿರಲಿಲ್ಲ. ಒಂದೊಮ್ಮೆ ಕೇಳಿದರೆ ಲಲಿತ್ ಸಿಟ್ಟಾಗುತ್ತಿದ್ದರು ಎಂದು ಮಜುಂದಾರ್ ಬರೆದಿದ್ದಾರೆ.


ಬಹುಶಃ ಲಲಿತ್ ಮೋದಿಯವರ ಜೀವನದ ಅತ್ಯಂತ ದೊಡ್ಡ ತಿರುವಾದ ಐಪಿಎಲ್, ಜಾಗತಿಕ ಕ್ರೀಡೆಯಲ್ಲಿ ಅವರನ್ನು ಬಹಳ ಉನ್ನತ ಮಟ್ಟಕ್ಕೆ ಕರೆದೊಯ್ಯಿತು ಎಂದೂ ಸಹ ಪುಸ್ತಕವು ವಿವರಿಸುತ್ತದೆ. "ಐಪಿಎಲ್ ಅನ್ನು ರಚಿಸುವಲ್ಲಿ, ಮೋದಿ ಅವರು ಭಾರತದಲ್ಲಿ ಮತ್ತು ಅದರಾಚೆಗಿನ ಕ್ರಿಕೆಟ್‌ಗೆ ಹೊಸ ಜೀವನವನ್ನು ನೀಡಿದರು. ಕ್ರಿಕೆಟಿಗರು ಹೊಸ ಆಟ ಕಂಡುಕೊಂಡರು ಮತ್ತು ಮಾರಾಟಗಾರರು ಹೊಸ ಹೂಡಿಕೆಯ ಅವಕಾಶವನ್ನು ಪಡೆದುಕೊಂಡರು. ಮತ್ತು ಪ್ರಸಾರ ಮಾಧ್ಯಮ ಸೇರಿ ಬಿಸಿಸಿಐ ಸಹ ಈ ವೇಳೆ ದುಪ್ಪಟ್ಟು ಲಾಭ ಮಾಡಿಕೊಂಡಿತು.


ಈಗ ಎಲ್ಲಿದ್ದಾರೆ ಲಲಿತ್ ಮೋದಿ?
2010ರಲ್ಲಿ ನಡೆದ ಐಪಿಎಲ್ ನಂತರ, ಲಲಿತ್ ಮೋದಿ ಹರಾಜು ಮತ್ತು ಟೆಂಡರ್ನಲ್ಲಿ ಅವ್ಯವಹಾರದ ಆರೋಪ ಎದುರಿಸಿದ್ದರು. ಇದಾದ ಬಳಿಕ ಬಿಸಿಸಿಐ ಆಂತರಿಕ ತನಿಖೆಯ ಬಳಿಕ ಅವರನ್ನು ಅಮಾನತು ಮಾಡಿದ್ದು, ನಿಷೇಧವನ್ನೂ ಹೇರಿತ್ತು. ಇಂಡಿಯನ್ ಪ್ರೀಮಿಯರ್ ಲೀಗಿನಲ್ಲಿ ವಿವಾದದ ನಂತರ ಲಲಿತ್ ಮೋದಿ ಭಾರತವನ್ನು ತೊರೆದು ಲಂಡನ್ನಿನ್ನಲ್ಲಿ ವಾಸಿಸುತ್ತಿದ್ದಾರೆ.


ಇದನ್ನೂ ಓದಿ:  Errol Musk: ಮಗಳ ಜೊತೆಯೇ ಮಕ್ಕಳನ್ನು ಪಡೆದ ಎಲೋನ್ ಮಸ್ಕ್ ತಂದೆ!

top videos


  ಮಜುಂದಾರ್ ಅವರ ಪುಸ್ತಕದಲ್ಲಿ ಲಲಿತ್ ಮೋದಿಯ ಸುತ್ತಲಿನ ಅನೇಕ ಪ್ರಶ್ನೆಗಳಿಗೆ ಮತ್ತು ಅವರ ಜೀವನದ ಪ್ರಮುಖ ಘಟ್ಟಗಳಲ್ಲಿ ಬಗೆಹರಿಯದ ರಹಸ್ಯಗಳಿಗೆ ನೇರವಾದ ಉತ್ತರಗಳಿಲ್ಲದಿದ್ದರೂ, ಆಳವಾದ ಕೆಲವು ಉತ್ತರಗಳನ್ನು ನೀಡಿದ್ದಾರೆ. "ಮೇವರಿಕ್ ಕಮಿಷನರ್" ಅನ್ನು ಶೀಘ್ರದಲ್ಲೇ ವಿಬ್ರಿ ಮೋಷನ್ ಪಿಕ್ಚರ್ಸ್ ಸಿನಿಮಾವಾಗಿ ಹೊರತರಲು ಪ್ಲ್ಯಾನ್ ಕೂಡ ಮಾಡುತ್ತಿದೆ.

  First published: