• Home
 • »
 • News
 • »
 • national-international
 • »
 • Lalith Modi: ಅನಾರೋಗ್ಯದ ಬೆನ್ನಲ್ಲೇ ಕೋಟ್ಯಂತರ ಮೌಲ್ಯದ ಆಸ್ತಿಯನ್ನು ಪುತ್ರನಿಗೆ ವರ್ಗಾಯಿಸಿದ ಲಲಿತ್ ಮೋದಿ!

Lalith Modi: ಅನಾರೋಗ್ಯದ ಬೆನ್ನಲ್ಲೇ ಕೋಟ್ಯಂತರ ಮೌಲ್ಯದ ಆಸ್ತಿಯನ್ನು ಪುತ್ರನಿಗೆ ವರ್ಗಾಯಿಸಿದ ಲಲಿತ್ ಮೋದಿ!

ಲಲಿತ್ ಕುಮಾರ್ ಮೋದಿ

ಲಲಿತ್ ಕುಮಾರ್ ಮೋದಿ

ಐಪಿಎಲ್‌ನ ಮಾಜಿ ಅಧ್ಯಕ್ಷ ಲಲಿತ್ ಮೋದಿ ಅವರು ಕಳೆದ ಎರಡು ವಾರಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಕೋವಿಡ್‌ಗೆ ತುತ್ತಾಗಿರುವ ಅವರು ಕೃತಕ ಉಸಿರಾಟ ಪಡೆಯುತ್ತಿದ್ದು, ಈ ಮಧ್ಯೆ ಅವರು ತಮ್ಮ ಫ್ಯಾಮಿಲಿ ಟ್ರಸ್ಟ್‌ನ ಅಧಿಕಾರವನ್ನು ತಮ್ಮ ಮಗ ರುಚಿರ್‌ ಮೋದಿಗೆ ಹಸ್ತಾಂತರಿಸುವ ಮೂಲಕ ಸುದ್ದಿಯಾಗಿದ್ದಾರೆ.

ಮುಂದೆ ಓದಿ ...
 • News18 Kannada
 • 3-MIN READ
 • Last Updated :
 • Delhi, India
 • Share this:

ಹೊಸದಿಲ್ಲಿ: ಐಪಿಎಲ್‌ನ (IPL) ಮಾಜಿ ಅಧ್ಯಕ್ಷ ಲಲಿತ್ ಮೋದಿ (Lalith Kumar Modi) ಅವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಕಳೆದ ಎರಡು ವಾರಗಳಲ್ಲಿ ಸತತ ಎರಡನೇ ಬಾರಿ ಕೋವಿಡ್‌ಗೆ (Covid 19) ತುತ್ತಾಗಿರುವ ಲಲಿತ್ ಮೋದಿ ಸದ್ಯ ಆಕ್ಸಿಜನ್ ಸಪೋರ್ಟ್‌ನಿಂದ (Oxygen Support ) ಉಸಿರಾಡುತ್ತಿದ್ದಾರೆ. ಲಂಡನ್‌ನ ಪ್ರಸಿದ್ಧ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಲಲಿತ್ ಮೋದಿ , ತಮ್ಮ ಕುಟುಂಬದ ಕೆಕೆ ಮೋದಿ ಫ್ಯಾಮಿಲಿ ಟ್ರಸ್ಟ್‌ನ ಅಧಿಕಾರವನ್ನು ತಮ್ಮ ಪುತ್ರ ರುಚಿರ್ ಮೋದಿ ಅವರಿಗೆ ಹಸ್ತಾಂತರಿಸಿರುವ ವಿಚಾರವನ್ನು ಟ್ವೀಟ್ ಮೂಲಕ ಬಹಿರಂಗಪಡಿಸಿದ್ದಾರೆ.


ಕೆಕೆ ಮೋದಿ ಟ್ರಸ್ಟ್‌ಗೆ ಸಂಪೂರ್ಣವಾಗಿ ರಾಜೀನಾಮೆ ಘೋಷಿಸಿರುವ ಲಲಿತ್ ಮೋದಿ, ಟ್ರಸ್ಟ್‌ನ ಎಲ್‌ಕೆಎಂ ವಿಭಾಗವನ್ನು ತಮ್ಮ ಮಗ ರುಚಿರ್‌ ಮೋದಿಗೆ ಹಸ್ತಾಂತರಿಸಿ ‘ನಾನು ನಡೆದು ಬಂದ ದಾರಿಯಲ್ಲಿ ಕಲಿತ ಪಾಠವೇನೆಂದರೆ ಇದು ನಿವೃತ್ತಿ ಮತ್ತು ಮುಂದುವರಿಯುವ ಸಮಯ. ಸದ್ಯ ಇದು ಮಕ್ಕಳನ್ನು ಬೆಳೆಸುವ ಸಮಯ. ಹೀಗಾಗಿ ನಾನು ಪಡೆದ ಎಲ್ಲವನ್ನೂ ಅವರಿಗೆ ಹಸ್ತಾಂತರಿಸುತ್ತಿದ್ದೇನೆ’ ಎಂದು ಟ್ವೀಟ್ ಮೂಲಕ ಹೇಳಿದ್ದಾರೆ.


ಇದನ್ನೂ ಓದಿ: Lalit Modi- Sushmita Sen: ವಿಶ್ವ ಸುಂದರಿ ಸುಶ್ಮಿತಾ ಸೇನ್ ಜೊತೆ ಲಲಿತ್ ಮೋದಿ ಡೇಟಿಂಗ್!


ತಾಯಿ ಮತ್ತು ಸಹೋದರಿ ನಡುವೆ ತಿಕ್ಕಾಟ


ಕೆಕೆ ಮೋದಿ ಫ್ಯಾಮಿಲಿ ಟ್ರಸ್ಟ್‌ಗೆ ಸಂಬಂಧಪಟ್ಟಂತೆ ಲಲಿತ್ ಮೋದಿ ತಾಯಿ ಬೀನಾ ಮೋದಿ ಮತ್ತು ಸಹೋದರಿ ನಡುವೆ ಉಂಟಾಗಿರುವ ಕಾನೂನು ತಿಕ್ಕಾಟದ ಬಗ್ಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಲು ಬೀನಾ ನಿರಾಕರಿಸಿದ್ದಾರೆ. ಲಲಿತ್ ಮೋದಿ ಅವರು ಎರಡ್ಮೂರು ದಿನಗಳ ಹಿಂದೆ ಮೆಕ್ಸಿಕೋನಿಂದ ಏರ್‌ಲಿಫ್ಟ್‌ ಮೂಲಕ ಲಂಡನ್‌ನ ಖ್ಯಾತ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸದ್ಯ ಅನಾರೋಗ್ಯದ ಹಿನ್ನೆಲೆ ಆಸ್ಪತ್ರೆಯಿಂದಲೇ ತಮ್ಮ ಫ್ಯಾಮಿಲಿ ಟ್ರಸ್ಟ್‌ನ ಎಲ್ಲಾ ಜವಾಬ್ದಾರಿಯನ್ನು ಮಗ ರುಚಿರ್ ಮೋದಿಗೆ ಹಸ್ತಾಂತರಿಸಿದ್ದಾರೆ.


ತಾವು ಸಾಮಾಜಿಕ ಜಾಲತಾಣದಲ್ಲಿ ಬರೆದು ಪೋಸ್ಟ್‌ ಮಾಡಿರುವ ಪತ್ರದಲ್ಲಿ ಭಾವುಕರಾಗಿರುವ ಲಲಿತ್ ಮೋದಿ, ತನ್ನ ತಂದೆ ಮಾಡಿರುವ ತಪ್ಪನ್ನು ಪುನರಾವರ್ತಿಸಲು ನಾನು ಬಯಸುವುದಿಲ್ಲ ಎಂದಿರುವುದಲ್ಲದೇ, ‘ನನ್ನ 59ನೇ ವಯಸ್ಸಿನಲ್ಲಿ ಈ ಪ್ರಮುಖ ನಿರ್ಧಾರ ತೆಗೆದುಕೊಳ್ಳುವುದಕ್ಕೆ ನನಗೆ ತುಂಬಾ ಸಂತೋಷವಾಗುತ್ತಿದೆ. ನಮ್ಮ ಮುಂದಿನ ಪೀಳಿಗೆಯ ಜನರಿಗೆ ನಮ್ಮ ವ್ಯವಹಾರಗಳನ್ನು ಸರಿಯಾಗಿ ಹಂಚಿಕೆ ಮಾಡಿಬಿಡಬೇಕು ಅನ್ನುವ ನಿರ್ಧಾರವನ್ನು ನನ್ನ ತಂದೆ ಸರಿಯಾಗಿ ನಿಭಾಯಿಸಲಿಲ್ಲ. ಹೀಗಾಗಿ ನನ್ನ ವಿಚಾರದಲ್ಲಿ ಇದು ಸರಿಯಾದ ಸಮಯ. ಆ ದೊಡ್ಡ ತಪ್ಪನ್ನು ಮತ್ತೆ ಮರುಕಳಿಸಲು ನಾನು ಬಿಡೋದಿಲ್ಲ ಎಂದು ಹೇಳಿದ್ದಾರೆ.
ಮಾತುಕತೆ ನಡೆಸಿದರೂ ಪ್ರಯೋಜನವಾಗಿಲ್ಲ


ಅಲ್ಲದೇ, 'ಮತ್ತೊಂದು ವಿಷಯ ಹೇಳಬೇಕೆಂದರೆ, ನನ್ನ ಮಕ್ಕಳಿಬ್ಬರೂ ಈ ವಿಷಯದಲ್ಲಿ ಸಮಾನ ಫಲಾನುಭವಿಗಳು. ಆದರೆ ಲೀಡರ್ ಒಬ್ಬನೇ ಆಗಿರಬೇಕು. ನನ್ನ ಮಗಳು ತುಂಬಾ ಸ್ಮಾರ್ಟ್ ಇದ್ದಾಳೆ. ನನ್ನ ತಂದೆ ತೀರಿಕೊಂಡ ನಂತರ ಉಂಟಾದ ಕಲಹವನ್ನು ನಿಭಾಯಿಸಲು ಅವಳಿಗೆ ಸಾಧ್ಯವಿಲ್ಲ. ನನ್ನ ತಾಯಿ ಮತ್ತು ಸಹೋದರಿ ನಡುವೆ ಉಂಟಾಗಿರುವ ಕಲಹದ ಇತ್ಯರ್ಥಕ್ಕೆ ಹಲವು ಸಲ ಮಾತುಕತೆ ನಡೆಸಿದರೂ ಪರಿಹಾರ ಸಿಕ್ಕಿಲ್ಲ. ಹೀಗಾಗಿ ಮಗಳ ಜೊತೆ ಚರ್ಚಿಸಿಯೇ ಈ ನಿರ್ಧಾರ ಕೈಗೊಂಡಿದ್ದೇನೆ' ಎಂದು ಲಲಿತ್ ಮೋದಿ ತಿಳಿಸಿದ್ದಾರೆ.


ಇದನ್ನೂ ಓದಿ: Lalit Modi: ಐಪಿಎಲ್‌ ಮಾಜಿ ಮುಖ್ಯಸ್ಥ ಲಲಿತ್ ಮೋದಿ ಸ್ಥಿತಿ ಗಂಭೀರ, ಆಸ್ಪತ್ರೆಯಲ್ಲಿ ಮುಂದುವರೆದ ಚಿಕಿತ್ಸೆ


ನ್ಯಾಯಾಲಯವೂ ಮಧ್ಯಪ್ರವೇಶಿಸಿತ್ತು


ಕಳೆದ ಕೆಲ ವರ್ಷಗಳಿಂದ ಐಪಿಎಲ್ ಮಾಜಿ ಅಧ್ಯಕ್ಷ ಲಲಿತ್ ಮೋದಿ ಕುಟುಂಬದಲ್ಲಿ ಆಸ್ತಿ ಕಲಹ ನಡೆಯುತ್ತಿದ್ದು, 2019ರಲ್ಲಿ ಲಲಿತ್ ಮೋದಿ ಅವರ ತಂದೆ ಕೆಕೆ ಮೋದಿ ಅವರು ಮರಣಗೊಂಡ ನಂತರ ಕುಟುಂಬದಲ್ಲಿ ಗಲಾಟೆ ಹೆಚ್ಚಾಗಿತ್ತು. ಈ ಹಿಂದೆ ನ್ಯಾಯಾಲಯವೇ ಎರಡು ಕುಟುಂಬಗಳ ನಡುವಿನ ಕಲಹವನ್ನು ಸಂಧಾನಗೊಳಿಸಲು ವಿಫಲ ಯತ್ನ ನಡೆಸಿತ್ತು. ಜೊತೆಗೆ ಲಲಿತ್ ಮೋದಿ ಪರ ಪ್ರಸಿದ್ಧ ವಕೀಲರಾದ ಹರೀಶ್ ಸಾಳ್ವೆ ಮತ್ತು ಬೀನಾ ಮೋದಿ ಪರ ಕಿಪಿಲ್ ಸಿಬಲ್ ಪ್ರಕರಣದ ಪರಸ್ಪರ ಇತ್ಯರ್ಥಕ್ಕೆ ಪ್ರಯತ್ನಿಸಿದ್ದರೂ, ಯಾವುದೇ ರೀತಿಯಲ್ಲಿ ಯಶಸ್ವಿಯಾಗಿರಲಿಲ್ಲ.


ಇದೀಗ ಲಲಿತ್ ಮೋದಿ ಅವರು ತಮ್ಮ ಅನಾರೋಗ್ಯದ ಸಮಯದಲ್ಲಿ ಆಸ್ತಿಯ ಎಲ್ಲಾ ಜವಾಬ್ದಾರಿಯನ್ನು ತಮ್ಮ ಪುತ್ರ ರುಚಿರ್ ಮೋದಿಗೆ ಹಸ್ತಾಂತರ ಮಾಡಿರುವುದರಿಂದ ಇನ್ಯಾವ ರೀತಿಯಲ್ಲಿ ಈ ಪ್ರಕರಣ ಉಲ್ಬಣಗೊಳ್ಳುತ್ತೋ ಕಾದು ನೋಡಬೇಕಿದೆ.

Published by:Avinash K
First published: