HOME » NEWS » National-international » IPHONE LEAK STUDENTS NUDE PHOTOS IN SOCIAL MEDIA SESR

iPhone ಸರ್ವಿಸ್​ಗೆ ಕೊಟ್ಟ ಯುವತಿಯ ಬೆತ್ತಲೆ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಲೀಕ್​ ಮಾಡಿದ ​ಆ್ಯಪಲ್​ ಕಂಪನಿ ಸಿಬ್ಬಂದಿ

ಈ ಹಿನ್ನಲೆ ಆ್ಯಪಲ್​ ಕಂಪನಿ ವಿದ್ಯಾರ್ಥಿನಿಗೆ ಹಲವು ಮಿಲಿಯನ್​ ಡಾಲರ್​ ಹಣ ನೀಡಿ ಈ ಪ್ರಕರಣವನ್ನು ಇತ್ಯರ್ಥ ಪಡಿಸಿದೆ.


Updated:June 7, 2021, 6:54 PM IST
iPhone ಸರ್ವಿಸ್​ಗೆ ಕೊಟ್ಟ ಯುವತಿಯ ಬೆತ್ತಲೆ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಲೀಕ್​ ಮಾಡಿದ  ​ಆ್ಯಪಲ್​ ಕಂಪನಿ ಸಿಬ್ಬಂದಿ
Iphone
  • Share this:
ಆ್ಯಪಲ್​ ಫೋನ್​ ಎಂದರೆ ಬ್ರಾಂಡ್​ ಜೊತೆಗೆ ಗ್ರಾಹಕರಲ್ಲಿ ಒಂದು ನಂಬಿಕೆ. ತಮ್ಮ ಫೋನ್​ ಯಾವುದೇ ಮಾಹಿತಿಗಳು ಸುರಕ್ಷಿತವಾಗಿರಬಲ್ಲದು, ಇವುಗಳನ್ನು ಕದಿಯುವುದು ಅಷ್ಟು ಸುಲಭ ಅಲ್ಲ ಎಂಬುದು. ಜೊತೆಗೆ ತಂತ್ರಜ್ಞಾನದಲ್ಲಿ ಇದಕ್ಕೆ ಸರಿಸಾಟಿ ಇಲ್ಲ ಎಂಬ ಮಾತುಗಳಿವೆ. ಆದರೆ, ಇಲ್ಲೊಬ್ಬ ಯುವತಿಯ ಖಾಸಗಿ ಫೋಟೋಗಳನ್ನು ಆ್ಯಪಲ್​ ತಂತ್ರಜ್ಞರೇ ಕದ್ದಿರುವ ಘಟನಡೆ ನಡೆದಿದೆ.  ಐಫೋನ್​​ನಲ್ಲಿ ವಿದ್ಯಾರ್ಥಿ ಯೊಬ್ಬಳು ಸರ್ವಿಸ್​ಗೆ ಎಂದು ಆ್ಯಪಲ್​ ಸರ್ವಿಸ್​ ಸೆಂಟರ್​ಗೆ ನೀಡಿದ್ದಅಳೆ. ಆದರೆ, ಈ ವೇಳೆ ಆಕೆಯ ಕೆಲವು ಖಾಸಗಿ ಫೋಟೋಗಳನ್ನು ಆ್ಯಪಲ್​ ಸರ್ವಿಸ್​​ ಸಂಸ್ಥೆಯ ತಂತ್ರಜ್ಞರು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವ ಘಟನೆ ನಡೆದಿದೆ. ವಿದ್ಯಾರ್ಥಿನಿಯ ಕೆಲವ ಖಾಸಗಿ ಫೋಟೋಗಳು ವೈರಲ್​ ಆಗುತ್ತಿದ್ದಂತೆ ಅರಿತ ಸಂಸ್ಥೆ ತಕ್ಷಣಕ್ಕೆ ಎಚ್ಚೆತ್ತುಕೊಂಡಿದೆ. ಇಂತಹ ಪ್ರಮಾದ ಎಸಗಿದ ಹಿನ್ನಲೆ ಆ್ಯಪಲ್​ ಸಂಸ್ಥೆ ಆಕೆಗೆ ಮಿಲಿಯನ್​ ಗಟ್ಟಲೇ ಹಣವನ್ನು ದಂಡ ರೂಪದಲ್ಲಿ ನೀಡಿದೆ.

ಕ್ಯಾಲಿಫೋರ್ನಿಯಾದಲ್ಲಿ ಈ ಘಟನೆ ನಡೆದಿದೆ. 2016ರಲ್ಲಿ ಒರೆಗಾನ್​ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯೊಬ್ಬಳು ತಮ್ಮ ಐಫೋನ್​ ಅನ್ನು ರಿಪೇರಿಗೆ ನೀಡಿದ್ದಳು. ಈ ವೇಳೆ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದ ತಂತ್ರಜ್ಞರು ಗೌಪ್ಯತೆ ನಿಯಮ ಉಲ್ಲಂಘಿಸಿದ್ದಾರೆ. ಆಕೆಯ ಕೆಲ ಬೆತ್ತಲು ಹಾಗೂ ಸೆಕ್ಸ್​​ ವಿಡಿಯೋಗಳನ್ನು ಫೇಸ್​ಬುಕ್​ ಖಾತೆಗೆ ಫೋಸ್ಟ್​ ಮಾಡಿದ್ದಾರೆ.

ಅಷ್ಟೆ ಅಲ್ಲದೇ, ಯುವತಿಯೇ ಈ ಫೋಟೋಗಳನ್ನು ಅಪ್​ ಲೋಡ್​ ಮಾಡಿರುವ ರೀತಿಯಲ್ಲಿ ಈ ಕೃತ್ಯವನ್ನು ಎಸಗಿದ್ದಾರೆ. ಈ ಘಟನೆ ಸ್ನೇಹಿತರ ಮೂಲಕ ಯುವತಿಗೆ ತಿಳಿದು ಬಂದಿದೆ. ಬಳಿಕ ಆಕೆ ಫೋಟೋಗಳನ್ನು ತೆಗೆದು ಹಾಕಿದ್ದಳು.

ಈ ಘಟನೆ ಬಳಿಕ ಯುವತಿ ಕಂಪನಿ ವಿರುದ್ಧ ಹಲವರು ಮಿಲಿಯನ್​ ಡಾಲರ್​ ಮೊತ್ತದ ಮೊಕದ್ಧಮೆ ಹೂಡಿದ್ದಳು. ಈ ಘಟನೆಯಿಂದ ವಿದ್ಯಾರ್ಥಿನಿಯೂ ಸಾಕಷ್ಟು ಮಾನಸಿಕ, ಭಾವನಾತ್ಮಕ ಒತ್ತಡ ಅನುಭಿವಿಸಿದ್ದಾಳೆ. ಅಲ್ಲದೇ, ಇದು ವ್ಯಕ್ತಿಯೊಬ್ಬರ ಖಾಸಗಿತನದ ಉಲ್ಲಂಘನೆಯಾಗುತ್ತದೆ ಎಂದು ಯುವತಿ ಪರ ವಕೀಲರು ವಾದಿಸಿದ್ದರು.

ಇದನ್ನು ಓದಿ: ಬಡವರಿಗೆ ಪ್ರಧಾನಿ ಮಂತ್ರಿ ಗರೀಬ್​ ಕಲ್ಯಾಣ ಯೋಜನೆ ಅಡಿ ನವೆಂಬರ್​ವರೆಗೂ ಉಚಿತ ರೇಷನ್​

ಈ ಹಿನ್ನಲೆ ಆ್ಯಪಲ್​ ಕಂಪನಿ ವಿದ್ಯಾರ್ಥಿನಿಗೆ ಹಲವು ಮಿಲಿಯನ್​ ಡಾಲರ್​ ಹಣ ನೀಡಿ ಈ ಪ್ರಕರಣವನ್ನು ಇತ್ಯರ್ಥ ಪಡಿಸಿದೆ. ವಿದ್ಯಾರ್ಥಿಯ ಖಾಸಗಿತನ ರಕ್ಷಣೆ ಮಾಡುವ ಉದ್ದೇಶದಿಂದ ಆಕೆಯ ಹೆಸರು ಮತ್ತು ಇತ್ಯರ್ಥ ಪಡಿಸಿದ ಹಣದ ಕುರಿತು ಯಾವುದೇ ವಿವರಣೆ ನೀಡಿಲ್ಲ, ಅಲ್ಲದೇ, ಕಂಪನಿಯ ವ್ಯವಹಾರದ ಹನಿ ತಪ್ಪಿಸುವ ಉದ್ದೇಶ ಕೂಡ ಇದರ ಹಿಂದಿದೆ ಎಂದು ಟೆಲಿಗ್ರಾಫ್​ ವರದಿ ಮಾಡಿದೆ

ತಂತ್ರಜ್ಞದ ದೈತ್ಯ ಎಂದು ಹೆಸರು ಪಡೆದಿರುವ ಆ್ಯಪಲ್​ ಕೂಡ ವಿದ್ಯಾರ್ಥಿಯನ್ನು ಗ್ರಾಹಕ ಎಂದು ಸಂಭೋದಿಸಿದ , ಈ ಘಟನೆ ಕುರಿತು ಕ್ಷಮೆಯಾಚಿಸಿ, ವ್ಯವಹಾರ ಇತ್ಯರ್ಥಪಡಿಸಿದೆ. ಅಲ್ಲದೇ, ಘಟನೆ ಸಂಪೂರ್ಣ ತನಿಖೆ ನಡೆಸಿ, ಪೆಗಾಟ್ರಾನ್​ನಲ್ಲಿನ ಆ್ಯಪಲ್​ ಸರ್ವೀಸ್​ ಸೆಂಟರ್​ನ ಇಬ್ಬರು ತಂತ್ರಜ್ಞರನ್ನು ಕೆಲಸದಿಂದ ವಜಾ ಮಾಡಲಾಗಿ
Youtube Video

(ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.)
Published by: Seema R
First published: June 7, 2021, 6:53 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories