P Chidambaram Case: ಐಎನ್​ಎಕ್ಸ್ ಮೀಡಿಯಾ​ ಹಗರಣ; 106 ದಿನಗಳ ಬಳಿಕ ಸುಪ್ರೀಂ​ನಿಂದ ಪಿ. ಚಿದಂಬರಂಗೆ ಜಾಮೀನು ಮಂಜೂರು

INX Media Case: 2017ರ ಐಎನ್​ಎಕ್ಸ್ ಮೀಡಿಯಾ ಹಗರಣದಲ್ಲಿ ತಿಹಾರ್ ಜೈಲು ಸೇರಿದ್ದ ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ ಅವರಿಗೆ ಸುಪ್ರೀಂಕೋರ್ಟ್​ ಜಾಮೀನು ಮಂಜೂರು ಮಾಡಿದೆ. 106 ದಿನಗಳ ಸೆರೆವಾಸದಿಂದ ಇಂದು ಅವರು ಮುಕ್ತಿ ಪಡೆದಿದ್ದಾರೆ.

Sushma Chakre | news18-kannada
Updated:December 4, 2019, 1:49 PM IST
P Chidambaram Case: ಐಎನ್​ಎಕ್ಸ್ ಮೀಡಿಯಾ​ ಹಗರಣ; 106 ದಿನಗಳ ಬಳಿಕ ಸುಪ್ರೀಂ​ನಿಂದ ಪಿ. ಚಿದಂಬರಂಗೆ ಜಾಮೀನು ಮಂಜೂರು
ಪಿ. ಚಿದಂಬರಂಗೆ ಕಡೆಗೂ ರಿಲೀಫ್​
  • Share this:
ನವದೆಹಲಿ (ಡಿ. 4): ಐಎನ್‌ಎಕ್ಸ್ ಮೀಡಿಯಾ ಹಗರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂಗೆ ಇಂದು ಸುಪ್ರೀಂಕೋರ್ಟ್​ ಜಾಮೀನು ಮಂಜೂರು ಮಾಡಿದೆ. 

2 ಲಕ್ಷ ರೂ. ಬಾಂಡ್, ಇಬ್ಬರ ಶ್ಯೂರಿಟಿಯೊಂದಿಗೆ ಜಾಮೀನು ಮಂಜೂರು ಮಾಡಲಾಗಿದೆ. 106 ದಿನಗಳ ಬಳಿಕ ತಿಹಾರ್ ಜೈಲಿನಿಂದ ಹೊರಬಂದಿರುವ ಪಿ. ಚಿದಂಬರಂಗೆ ಐಎನ್​ಎಕ್ಸ್​ ಪ್ರಕರಣದ ಕುರಿತು ಯಾವುದೇ ಸಾರ್ವಜನಿಕ ಹೇಳಿಕೆ ನೀಡುವುದಾಗಲೀ ಅಥವಾ ಸುದ್ದಿಗೋಷ್ಠಿ ನಡೆಸುವುದಾಗಲಿ ಮಾಡುವಂತಿಲ್ಲ ಎಂದು ಸುಪ್ರೀಂಕೋರ್ಟ್ ಆದೇಶ ನೀಡಿದೆ. ಅನುಮತಿ ಇಲ್ಲದೆ ದೇಶ ಬಿಡುವಂತಿಲ್ಲ ಎಂಬ ಷರತ್ತನ್ನೂ ವಿಧಿಸಿದೆ.

ಐಎನ್​ಎಕ್ಸ್​​ ಮೀಡಿಯಾ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ನೀಡಲು ದೆಹಲಿ ಹೈಕೋರ್ಟ್​ ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಪಿ. ಚಿದಂಬರಂ ಸುಪ್ರೀಂಕೋರ್ಟ್​​ ಮೆಟ್ಟಿಲೇರಿದ್ದರು. ಸುಪ್ರೀಂಕೋರ್ಟ್​ ನ್ಯಾಯಮೂರ್ತಿಗಳಾದ ಆರ್. ಭಾನುಮತಿ, ಎ.ಎಸ್. ಬೋಪಣ್ಣ ಮತ್ತು ಹೃಷಿಕೇಶ್ ರಾಯ್ ಅವರ ನ್ಯಾಯಪೀಠ ಜಾಮೀನು ಅರ್ಜಿಯ ವಿಚಾರಣೆ ನಡೆಸಿ ತೀರ್ಪು ಕಾಯ್ದಿರಿಸಿತ್ತು.

ನವೆಂಬರ್ 15ರಂದು ಚಿದಂಬರಂ ಅರ್ಜಿ ವಿಚಾರಣೆ ನಡೆಸಿದ್ದ ದೆಹಲಿ ಹೈಕೋರ್ಟ್​ ಜಾಮೀನು ನಿರಾಕರಿಸಿತ್ತು. ಐಎನ್‌ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಚಿದಂಬರಂ ಪ್ರಮುಖ ಪಾತ್ರ ವಹಿಸಿದ್ದು, ಅವರಿಗೆ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ಹೇಳಿತ್ತು. ಇಂದು ಜಾಮೀನು ಅರ್ಜಿಯ ಅಂತಿಮ ತೀರ್ಪು ಹೊರಬಿದ್ದಿದ್ದು, 106 ದಿನಗಳ ಕಾಲ ಜೈಲು ವಾಸ ಅನುಭವಿಸಿರುವ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಅವರಿಗೆ ಕೊನೆಗೂ ಜಾಮೀನು ಸಿಕ್ಕಿದೆ.

ಪಿ. ಚಿದಂಬಂರಂಗೆ ಜಾಮೀನು ಸಿಕ್ಕಿದ್ದಕ್ಕೆ ಹರ್ಷ ವ್ಯಕ್ತ ಪಡಿಸಿರುವ ಮಗ ಕಾರ್ತಿ ಚಿದಂಬರಂ 106 ದಿನಗಳ ನಂತರ ಕೊನೆಗೂ ಜಾಮೀನು ಸಿಕ್ಕಿದೆ ಎಂದು ಟ್ವೀಟ್ ಮಾಡಿದ್ದಾರೆ.



ಐಎನ್​ಎಕ್ಸ್ ಮೀಡಿಯಾ​ ಹಗರಣ; ಸುಪ್ರೀಂಕೋರ್ಟ್​ನಲ್ಲಿ ಇಂದು ಪಿ. ಚಿದಂಬರಂ ಜಾಮೀನು ಅರ್ಜಿ ತೀರ್ಪು ಪ್ರಕಟ

ಏನಿದು ಪ್ರಕರಣ?:

ಐಎನ್​ಎಕ್ಸ್ ಮೀಡಿಯಾಗೆ ಸಂಬಂಧಿಸಿದ ಎರಡು ಪ್ರಕರಣಗಳಿವೆ. ಭ್ರಷ್ಟಾಚಾರ ಮತ್ತು ಹಣ ಅವ್ಯವಹಾರ ಪ್ರಕರಣಗಳು ಪಿ. ಚಿದಂಬರಂ ಮತ್ತವರ ಪುತ್ರ ಕಾರ್ತಿ ಚಿದಂಬರಂ ಅವರ ಮೈ ಸುತ್ತಿವೆ. ಚಿದಂಬರಂ 2007ರಲ್ಲಿ ಕೇಂದ್ರ ಹಣಕಾಸು ಸಚಿವರಾಗಿದ್ದಾಗ ಐಎನ್​ಎಕ್ಸ್ ಮೀಡಿಯಾ ಸಂಸ್ಥೆಗೆ 305 ಕೋಟಿ ರೂ ಮೊತ್ತದಷ್ಟು ವಿದೇಶೀ ಬಂಡವಾಳ ಹೂಡಿಕೆಗೆ ವಿದೇಶ ಬಂಡವಾಳ ಹೂಡಿಕೆ ಪ್ರೋತ್ಸಾಹಕ ಮಂಡಳಿ(ಎಫ್​ಐಪಿಬಿ)ಯ ಅನುಮೋದನೆ ಸಿಕ್ಕಿತ್ತು. ಮಗನ ಶಿಫಾರಸಿನ ಮೇಲೆ ಈ ಅನುಮೋದನೆಯನ್ನು ಚಿದಂಬರಂ ದೊರಕಿಸಿಕೊಟ್ಟಿದ್ದರೆಂಬ ಆರೋಪ ಇದೆ.

ಹನಿಟ್ರ್ಯಾಪ್​ ಪ್ರಕರಣ; ಬೆಳಗಾವಿ ಬಟ್ಟೆ ವ್ಯಾಪಾರಿಯ ನಗ್ನ ವಿಡಿಯೋ ಮಾಡಿ ಹಣಕ್ಕೆ ಬೇಡಿಕೆಯಿಟ್ಟ ಯುವತಿಯ ಗ್ಯಾಂಗ್ ಬಂಧನ

2017ರಲ್ಲಿ ಐಎನ್​ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಚಿದಂಬರಂ ಮತ್ತಿತರರ ವಿರುದ್ಧ ಸಿಬಿಐ ಎಫ್​ಐಆರ್ ದಾಖಲಿಸಿತ್ತು. 2018ರಲ್ಲಿ ಇಡಿಯವರೂ ಕೂಡ ಹಣ ಅವ್ಯವಹಾರದ ಪ್ರಕರಣ ದಾಖಲಿಸಿದ್ದರು. ಇಡಿ ದಾಖಲಿಸಿದ್ದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಪಿ. ಚಿದಂಬರಂ ತಿಹಾರ್ ಜೈಲು ಸೇರಿದ್ದರು.

 
First published:December 4, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ