ಐಎನ್​​ಎಕ್ಸ್​​ ಹಗರಣ: ಪಿ. ಚಿದಂಬರಂಗೆ ಜಾಮೀನು ನೀಡದಂತೆ ಸುಪ್ರೀಂಕೋರ್ಟ್​ಗೆ ಇಡಿ ಮನವಿ

ಈ ಹಿಂದೆಯೂ ಐಎನ್​ಎಕ್ಸ್​ ಮೀಡಿಯಾ ಖಾಸಗಿ ಲೇವಾದೇವಿ ಪ್ರಕರಣದಲ್ಲಿ ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಜಾಮೀನು ಅರ್ಜಿ ದೆಹಲಿ ಹೈಕೋರ್ಟ್​​ ತಿರಸ್ಕರಿಸಿತ್ತು. ಪ್ರಕರಣದ ಪ್ರಮುಖ ಆರೋಪಿ ಚಿದಂಬರಂಗೆ ಜಾಮೀನು ನೀಡಿದರೆ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂದು ನ್ಯಾಯಲಯ ಅಭಿಪ್ರಾಯಪಟ್ಟಿತ್ತು.

news18-kannada
Updated:November 28, 2019, 3:33 PM IST
ಐಎನ್​​ಎಕ್ಸ್​​ ಹಗರಣ: ಪಿ. ಚಿದಂಬರಂಗೆ ಜಾಮೀನು ನೀಡದಂತೆ ಸುಪ್ರೀಂಕೋರ್ಟ್​ಗೆ ಇಡಿ ಮನವಿ
ಪಿ. ಚಿದಂಬರಂ
  • Share this:
ನವದೆಹಲಿ(ನ.28): ಐಎನ್​ಎಕ್ಸ್​ ಮೀಡಿಯಾ ಹಗರಣ ಸಂಬಂಧ ಜಾರಿ ನಿರ್ದೇಶನಾಲಯ ಮತ್ತೆ ಸುಪ್ರೀಂಕೋರ್ಟ್​ ಮೆಟ್ಟಿಲೇರಿದೆ. ಈ ಪ್ರಕರಣದಲ್ಲಿ ತಿಹಾರ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಕೇಂದ್ರ ಸಚಿವ ಮತ್ತು ಕಾಂಗ್ರೆಸ್​ ಹಿರಿಯ ನಾಯಕ ಪಿ. ಚಿದಂಬರಂಗೆ ಜಾಮೀನು ನೀಡದಂತೆ ಸುಪ್ರೀಂಕೋರ್ಟ್​​ಗೆ ಇಡಿ ಅಧಿಕಾರಿಗಳು ಮನವಿ ಸಲ್ಲಿಸಿದ್ಧಾರೆ.

ಕೇಂದ್ರ ಮಾಜಿ ಸಚಿವ ಪಿ. ಚಿದಂಬರಂಗೆ ಜಾಮೀನು ನೀಡಬೇಡಿ. ಒಂದು ವೇಳೆ ಪಿ. ಚಿದಂಬರಂಗೆ ಜಾಮೀನು ಮಂಜೂರು ಆದಲ್ಲಿ ಪ್ರಕರಣದ ಸಾಕ್ಷಾಧಾರಗಳ ಮೇಲೆ ಪರಿಣಾಮ ಬೀರಬಹುದು ಎಂದು ಇಡಿ ನ್ಯಾಯಮೂರ್ತಿ ಆರ್. ಭಾನುಮತಿ ನೇತೃತ್ವದ ಪೀಠಕ್ಕೆ ಮನವಿ ಮಾಡಿದೆ.

ಸುಪ್ರೀಂಕೋರ್ಟ್​​ನಲ್ಲಿ ನ್ಯಾ. ಆರ್. ಭಾನುಮತಿ ನೇತೃತ್ವದ ಪೀಠದ ಮುಂದೆ ಇಡಿ ಪರ ಸಾಲಿಸಿಟಿರ್ ಜನರಲ್ ತುಷಾರ್ ಮೆಹ್ತಾ ಹಾಜರಾಗಿದ್ದರು. ಇವರು ಜೈಲಿನಲ್ಲಿದ್ದು ಪ್ರಕರಣ ಸಾಕ್ಷಿಗಳ ನಾಶಕ್ಕೆ ಯತ್ನಿಸುತ್ತಿದ್ದಾರೆ. ಜೈಲಿನಿಂದ ಬಿಡುಗಡೆಯಾದಲ್ಲಿ ಖಂಡಿತಾ ಸಾಕ್ಷಿನಾಶ ಮಾಡುವ ಸಾಧ್ಯತೆಯಿದೆ. ಹಾಗಾಗಿ ಆರ್ಥಿಕ ಅಪರಾಧಿಗಳಿಗೆ ಜಾಮೀನು ನೀಡಬಾರದು ಎಂದರು.

ಇದನ್ನೂ ಓದಿ: ಹೌದು, ಕಣ್ಣೀರು ನಮ್ಮ ಕುಟುಂಬದ ಪೇಟೆಂಟ್​; ವ್ಯಂಗ್ಯ ಮಾಡಿದವರಿಗೆ ಕುಮಾರಸ್ವಾಮಿ ತಿರುಗೇಟು 

ಈ ಹಿಂದೆ ಐಎನ್​ಎಕ್ಸ್​ ಮೀಡಿಯಾ ಖಾಸಗಿ ಲೇವಾದೇವಿ ಪ್ರಕರಣದಲ್ಲಿ ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಜಾಮೀನು ಅರ್ಜಿ ದೆಹಲಿ ಹೈಕೋರ್ಟ್​​ ತಿರಸ್ಕರಿಸಿತ್ತು. ಪ್ರಕರಣದ ಪ್ರಮುಖ ಆರೋಪಿ ಚಿದಂಬರಂಗೆ ಜಾಮೀನು ನೀಡಿದರೆ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂದು ನ್ಯಾಯಲಯ ಅಭಿಪ್ರಾಯಪಟ್ಟಿತ್ತು.

ಏನಿದು ಪ್ರಕರಣ?: 2017ರ ಮೇ 15ರಂದು ಐಎನ್​ಎಕ್ಸ್​ ಮಿಡಿಯಾ ಖಾಸಗಿ ಲೇವಾದೇವಿ ಪ್ರಕರಣ ಚಿದಂಬರಂ ವಿರುದ್ಧ ದಾಖಲಾಗಿತ್ತು. ಐಎನ್​ಎಕ್ಸ್​ ಮೀಡಿಯಾ ಸಂಸ್ಥೆ ವಿದೇಶಿ ಮೂಲಗಳಿಂದ ರೂ. 305 ಕೋಟಿಯನ್ನು 2007ರಲ್ಲಿ ಸ್ವೀಕರಿಸಿತ್ತು. ಈ ವೇಳೆ ಚಿದಂಬರಂ ಕೇಂದ್ರದ ಹಣಕಾಸು ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಅವರ ಪ್ರಭಾವವನ್ನು ಬಳಸಿಕೊಂಡು ಅವ್ಯವಹಾರ ನಡೆಸಲಾಗಿದೆ ಎಂಬ ಗಂಭೀರ ಆರೋಪ ಅವರ ಮೇಲಿದೆ.
First published: November 28, 2019, 3:24 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading