INX Media Case: ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ ವಶಕ್ಕೆ ಪಡೆದ ಸಿಬಿಐ ಅಧಿಕಾರಿಗಳು

ಸುದ್ದಿಗೋಷ್ಠಿ ಬಳಿಕ ಚಿದಂಬರಂ ವಕೀಲರಾದ ಕಪಿಲ್ ಸಿಬಾಲ್ ಮತ್ತು ಅಭಿಷೇಕ್​ ಸಿಂಘ್ವಿ ಜೊತೆಗೆ ಜೋರ್​ ಬಾಗ್​ನಲ್ಲಿರುವ ತಮ್ಮ ನಿವಾಸಕ್ಕೆ ತೆರಳಿದರು. ಬಳಿಕ ಇ.ಡಿ. ಮತ್ತು ಸಿಬಿಐ ಅಧಿಕಾರಿಗಳು ಕೂಡ ಚಿದಂಬರಂ ನಿವಾಸದ ಮುಂದೆ ಜಮಾಯಿಸಿದರು. ಆದರೆ, ಮನೆಗೆ ಗೇಟ್​ಗಳನ್ನು ತೆರೆಯದಿದ್ದಾಗ ಅಧಿಕಾರಿಗಳು ಕಾಂಪೌಂಡ್​ ಜಿಗಿದು ಮನೆಯೊಳಗೆ ಹೋದರು.

HR Ramesh | news18
Updated:August 22, 2019, 9:27 AM IST
INX Media Case: ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ ವಶಕ್ಕೆ ಪಡೆದ ಸಿಬಿಐ ಅಧಿಕಾರಿಗಳು
ಚಿದಂಬರಂ ಬಂಧಿಸಿ ಕರೆದೊಯ್ಯುತ್ತಿರುವ ಸಿಬಿಐ ಅಧಿಕಾರಿಗಳು
  • News18
  • Last Updated: August 22, 2019, 9:27 AM IST
  • Share this:
ನವದೆಹಲಿ: ಐಎನ್​ಎಕ್ಸ್​ ಮೀಡಿಯಾ ಪ್ರಕರಣ ಸಂಬಂಧ ಇಂದು ರಾಜಧಾನಿ ದೆಹಲಿ ಹಲವು ಹೈಡ್ರಾಮಾಗಳಿಗೆ ಸಾಕ್ಷಿಯಾಯಿತು. ಜಾಮೀನು ಅರ್ಜಿ ಹೈಕೋರ್ಟ್​ನಲ್ಲಿ ತಿರಸ್ಕೃತಗೊಂಡ ಬಳಿಕ ತಲೆಮರೆಸಿಕೊಂಡಿದ್ದ ಪಿ.ಚಿದಂಬರಂ ಬುಧವಾರ ರಾತ್ರಿ ಏಕಾಏಕಿ ಪಕ್ಷದ ಕಚೇರಿಯಲ್ಲಿ ಪ್ರತ್ಯಕ್ಷರಾಗಿ, ಸುದ್ದಿಗೋಷ್ಠಿ ನಡೆಸಿದರು. ಆನಂತರ ತಮ್ಮ ನಿವಾಸಕ್ಕೆ ತೆರಳಿದ ಬಳಿಕವೂ ಮನೆ ಬಳಿ ಹಲವು ನಾಟಿಕೀಯ ಬೆಳವಣಿಗೆಗಳ ಕಾಂಗ್ರೆಸ್​ ಹಿರಿಯ ಮುಖಂಡ ಚಿದಂಬರಂನನ್ನು ಸಿಬಿಐ ಅಧಿಕಾರಿಗಳು ಬಂಧಿಸಿದರು.

ಬಳಿಕ ಬಿಗಿ ಭದ್ರತೆಯಲ್ಲಿ ಕೇಂದ್ರದ ಮಾಜಿ ಸಚಿವರನ್ನು ಸಿಬಿಐ ಕಚೇರಿಗೆ ಕರೆದೊಯ್ಯಲಾಯಿತು. ಇಂದು ರಾತ್ರಿ ಕಚೇರಿಯಲ್ಲಿ ಚಿದಂಬರಂ ಅವರನ್ನು ವಿಚಾರಣೆ ಒಳಪಡಿಸುವ ಸಿಬಿಐ ನಾಳೆ ನ್ಯಾಯಾಲಯದ ಮುಂದೆ ಹಾಜರುಪಡಿಸಲಿದೆ.

ಇಂದು ಸುಪ್ರೀಂಕೋರ್ಟ್​ಗೆ ನಿರೀಕ್ಷಣಾ ಜಾಮೀನಿಗೆ ಚಿದಂಬರಂ ಪರ ವಕೀಲ ಕಪಿಲ್ ಸಿಬಾಲ್ ಅರ್ಜಿ ಸಲ್ಲಿಸಿದ್ದರು ವಿಚಾರಣೆಯನ್ನು ನ್ಯಾಯಾಲಯ ಶುಕ್ರವಾರಕ್ಕೆ ಮುಂದೂಡಿತು. ತಲೆಮರೆಸಿಕೊಂಡಿದ್ದ ಪಿ.ಚಿದಂಬರಂ ಬುಧವಾರ ರಾತ್ರಿ ದಿಢೀರ್​ ಎಂದು ಎಐಸಿಸಿ ಕಚೇರಿಯಲ್ಲಿ ಪ್ರತ್ಯಕ್ಷರಾಗಿ ಸುದ್ದಿಗೋಷ್ಠಿ ನಡೆಸಿದರು. ಚಿದಂಬರಂ ಬರುವ ಸುಳಿವು ತಿಳಿದಿದ್ದ ಸಿಬಿಐ ಅಧಿಕಾರಿಗಳು ಕಾಂಗ್ರೆಸ್​ ಕಚೇರಿಗೂ ಬಂದಿದ್ದರು. ಆದರೆ, ಅಲ್ಲಿ ಅವರನ್ನು ಬಂಧಿಸಲಿಲ್ಲ. ಸುದ್ದಿಗೋಷ್ಠಿ ಬಳಿಕ ಚಿದಂಬರಂ ವಕೀಲರಾದ ಕಪಿಲ್ ಸಿಬಾಲ್ ಮತ್ತು ಅಭಿಷೇಕ್​ ಸಿಂಘ್ವಿ ಜೊತೆಗೆ ಜೋರ್​ ಬಾಗ್​ನಲ್ಲಿರುವ ತಮ್ಮ ನಿವಾಸಕ್ಕೆ ತೆರಳಿದರು. ಬಳಿಕ ಇ.ಡಿ. ಮತ್ತು ಸಿಬಿಐ ಅಧಿಕಾರಿಗಳು ಕೂಡ ಚಿದಂಬರಂ ನಿವಾಸದ ಮುಂದೆ ಜಮಾಯಿಸಿದರು. ಆದರೆ, ಮನೆಗೆ ಗೇಟ್​ಗಳನ್ನು ತೆರೆಯದಿದ್ದಾಗ ಅಧಿಕಾರಿಗಳು ಕಾಂಪೌಂಡ್​ ಜಿಗಿದು ಮನೆಯೊಳಗೆ ಹೋದರು. ಆ ಬಳಿಕ ಚಿದಂಬರಂನನ್ನು ವಶಕ್ಕೆ ಪಡೆದರು.

ಚಿದಂಬರಂ ಬಂಧನದ ಬಳಿಕ ಪ್ರತಿಕ್ರಿಯೆ ನೀಡಿದ ಮಗ ಕಾರ್ತಿ ಚಿದಂಬರಂ ಅವರು, ಇದು ರಾಜಕೀಯ ಪ್ರೇರಿತ ದಾಳಿ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದು ಮಾಟದ ಬೇಟೆ, ಭಾರತದ ಇತಿಹಾಸದಲ್ಲಿ ನಾಲ್ಕು ಬಾರಿ ದಾಳಿಗೆ ಒಳಗಾದವರು ಯಾರೂ ಇಲ್ಲ. ನಾನು ನಾಲ್ಕು ಬಾರಿ ದಾಳೀಗೆ ಒಳಗಾಗಿದ್ದೇನೆ. ಅವರು ಯಾವುದೇ ಚಾರ್ಜ್​ಶೀಟ್​ ಇಲ್ಲದೆ ಬಂಧಿಸಿದ್ದಾರೆ. ನಾನು ಸಿಬಿಐ ಅತಿಥಿಯಾಗಿದ್ದಾಗ ಅವರ ಕಾರ್ಯವಿಧಾನವನ್ನು ಚೆನ್ನಾಗಿ ತಿಳಿದುಕೊಂಡಿದ್ದೇನೆ ಎಂದು ಕಾರ್ತಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸರ್ಕಾರ ಅಧಿಕಾರ ದುರ್ಬಳಕೆ ಮಾಡಿಕೊಂಡು ಚಿದಂಬರಂ ಅವರಿಗೆ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್​ ಮುಖಂಡರು ಹಾಗೂ ಕಾರ್ಯಕರ್ತರು ಪಕ್ಷದ ಕಚೇರಿ ಮುಂದೆ ರಾತ್ರಿಯಿಡೀ ಪ್ರತಿಭಟನೆ ನಡೆಸಿದರು.

ಚಿದಂಬರಂ ಬಂಧನಕ್ಕೆ ಆಕ್ರೋಶ ವ್ಯಕ್ತಪಡಿಸಿ ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲಾ ಟ್ವೀಟ್ ಮಾಡಿದ್ದಾರೆ.ಐಎನ್​ಎಕ್ಸ್​ ಮೀಡಿಯಾ ಪ್ರಕರಣ ಸಂಬಂಧ ಇ.ಡಿ.ಯಿಂದ ಪಿ.ಚಿದಂಬರಂ ಅವರಿಗೆ ಲುಕ್​​ಔಟ್​  ನೋಟಿಸ್ ಜಾರಿಯಾಗಿತ್ತು. ನೆನ್ನೆ ದೆಹಲಿ ಹೈಕೋರ್ಟ್​ಗೆ ಚಿದಂಬರಂ ಅವರು ಸಲ್ಲಿಸಿದ್ದ ಜಾಮೀನು ಅರ್ಜಿ ತಿರಸ್ಕೃತಗೊಂಡ ಬಳಿಕ ಇ.ಡಿ.ಮತ್ತು ಸಿಬಿಐ ಅಧಿಕಾರಿಗಳು ಚಿದಂಬರಂ ಮೇಲೆ ದಾಳಿ ನಡೆಸಿದರು. ಆದರೆ, ಚಿದಂಬರಂ ಈ ವೇಳೆ ತಲೆಮರೆಸಿಕೊಂಡಿದ್ದರು.

First published: August 21, 2019, 9:50 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading