Ludhiana Court Blast: ಗ್ಯಾಂಗ್​ಸ್ಟರ್ಸ್, ಜೈಲು ನೆಟ್ವರ್ಕ್ ಬಳಸಿ ದಾಳಿಗೆ ಪಾಕಿಸ್ತಾನ್ ಸಂಚು; ಹೈ ಅಲರ್ಟ್

NIA may probe Ludhiana Blast Case: ಪಂಜಾಬ್​ನ ಲೂಧಿಯಾನದ ನ್ಯಾಯಾಲಯದ ಬಳಿ ನಿನ್ನೆ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಪಾಕ್ ಕೈವಾಡ ಶಂಕೆ ಇದೆ. ಸ್ಥಳೀಯ ರೌಡಿಗಳು, ಜೈಲ್ ನೆಟ್ವರ್ಕ್, ಡ್ರೋನ್ ಇತ್ಯಾದಿ ಬಳಸಿಕೊಂಡು ಸ್ಫೋಟ ನಡೆಸಲಾಗಿದೆ ಎಂದು ತನಿಖಾಧಿಕಾರಿಗಳು ಶಂಕಿಸಿದ್ಧಾರೆ.

ಲೂಧಿಯಾನ ಸ್ಫೋಟ ಘಟನೆ

ಲೂಧಿಯಾನ ಸ್ಫೋಟ ಘಟನೆ

 • News18
 • Last Updated :
 • Share this:
  ನವದೆಹಲಿ, ಡಿ. 24: ಪಂಜಾಬ್​ನ ಲೂಧಿಯಾನಾ ನ್ಯಾಯಾಲಯದಲ್ಲಿ ಸಂಭವಿಸಿದ ಸ್ಫೋಟ ಪ್ರಕರಣದಲ್ಲಿ ಆರಂಭಿಕ ತನಿಖೆ ನಡೆಸಿದಂತೆಲ್ಲಾ ಸ್ಫೋಟಕ ಮಾಹಿತಿಗಳು ಹೊರಬರುತ್ತಿವೆ. ಪಾಕಿಸ್ತಾನದಿಂದ ಹೊಸ ಮಾದರಿಯ ದಾಳಿ ಸಂಯೋಜನೆ ಮೂಲಕ ಈ ದಾಳಿ ನಡೆದಿರುವ ಸಾಧ್ಯತೆ ಇದೆ ಎಂದು ಗುಪ್ತಚರರು ಶಂಕಿಸಿದ್ದಾರೆ. ರಾಷ್ಟ್ರೀಯ ತನಿಖಾ ಸಂಸ್ಥೆ ಎನ್​ಐಎಗೆ ಈ ಪ್ರಕರಣದ ತನಿಖೆಯನ್ನ ವಹಿಸುವ ನಿರೀಕ್ಷೆ ಇದೆ.

  ನಿನ್ನೆ ಗುರುವಾರ ಸಂಭವಿಸಿದ ಸ್ಫೋಟದಲ್ಲಿ ಒಬ್ಬ ವ್ಯಕ್ತಿ ಬಲಿಯಾಗಿದ್ದು ಹಲವು ಜನರು ಗಾಯಗೊಂಡಿದ್ಧಾರೆ. ಘಟನಾ ಸ್ಥಳದಲ್ಲಿ ಮೊಬೈಲ್ ಫೋನ್, ಸಿಮ್ ಕಾರ್ಡ್, ಡೇಟಾ ಕಾರ್ಡ್​ಗಳನ್ನ ಪೊಲೀಸರು ವಶಪಡಿಸಿಕೊಂಡಿದ್ಧಾರೆ. ಐಇಡಿ ಅನ್ನು ಅಸೆಂಬಲ್ ಮಾಡುವಾಗಲೇ ಸ್ಫೋಟಗೊಂಡಿರಬಹುದು. ಮೃತಪಟ್ಟ ವ್ಯಕ್ತಿಯಿಂದಲೇ ಬಾಂಬ್ ಸ್ಫೋಟಕ್ಕೆ ಪ್ರಯತ್ನವಾಗುತ್ತಿದ್ದಿರಬಹುದು ಎಂಬುದು ತನಿಖಾ ಸಂಸ್ಥೆಗಳ ಶಂಕೆ ಎಂದು ಮೂಲಗಳು ಮಾಹಿತಿ ನೀಡಿವೆ.

  ದುರದೃಷ್ಟಕ್ಕೆ ಬಾಂಬ್ ಸ್ಫೋಟದಿಂದ ನೀರಿನ ಕೊಳಾಯಿಗೆ ಮುರಿದು ನೀರು ಉಕ್ಕಿ ಬಂದಿದ್ದರಿಂದ ಬಾಂಬ್​ನ ಕೆಲ ಪ್ರಮುಖ ವಸ್ತುಗಳು ನಾಪತ್ತೆಯಾಗಿವೆ. ಹೀಗಾಗಿ, ಬಾಂಬ್ ಮೂಲ ಪತ್ತೆಹಚ್ಚುವ ಕಾರ್ಯಕ್ಕೆ ತೊಡಕಾಗಿದೆ. ಐಇಡಿ ಸ್ಫೋಟಕ್ಕೆ ಬಳಸಲಾದ ವಸ್ತುವನ್ನು ಹುಡುಕಲಾಗುತ್ತಿದೆ. ಆದರೆ, ಸ್ಫೋಟಕ್ಕೆ ಭಾರೀ ಪ್ರಮಾಣದ ಸ್ಫೋಟಕವನ್ನಂತೂ ಬಳಸಲಾಗಿತ್ತು ಎಂದು ಮೂಲಗಳು ಹೇಳುತ್ತಿವೆ.

  ಪಂಜಾಬ್ ಸರ್ಕಾರ ಕೇಂದ್ರದ ನೆರವು ಪಡೆಯುತ್ತಿದೆ. ಎನ್​ಐಎಗೆ ತನಿಖೆಯ ಹೊಣೆ ವಹಿಸುವಂತೆ ಕೇಂದ್ರ ಸರ್ಕಾರಕ್ಕೆ ಪಂಜಾಬ್ ಮನವಿ ಮಾಡುವ ಸಾರ್ಧಯತೆ ಇದೆ. ಈಗ ಸಿಕ್ಕಿರುವ ಸ್ಫೋಟಕಗಳನ್ನ ಅಧ್ಯಯನ ಮಾಡಲು ಕೇಂದ್ರದ ಸಹಾಯ ಪಡೆಯಲಾಗುತ್ತಿದೆ.

  ಇದನ್ನೂ ಓದಿ: Citizenship: ಭಾರತ ದೇಶದ ಪೌರತ್ವಕ್ಕಾಗಿ ಮುಗಿಬಿದ್ದ ಪಾಕಿಸ್ತಾನಿಯರು, ಇಲ್ಲಿರೋದೇ ಇಷ್ಟವಂತೆ!

  ಪಾಕಿಸ್ತಾನ ಬೆಂಬಲಿತ ಜಾಲ ರೂಪಿತಗೊಂಡಿದ್ದು ಪಂಜಾಬ್​ನಲ್ಲಿ ಇನ್ನೂ ಹಲವು ಕಡೆ ಬಾಂಬ್ ದಾಳೀಗೆ ಸಂಚು ರೂಪಿಸಲಾಗಿದೆ ಎಂದು ಕೇಂದ್ರ ಗುಪ್ತಚರ ಸಂಸ್ಥೆಗಳು ಶಂಕಿಸಿವೆ.

  ರೌಡಿಗಳ ಜಾಲ ಬಳಕೆ:

  ಪಾಕಿಸ್ತಾನ ಈಗ ಹೊಸ ಮಾದರಿಯಲ್ಲಿ ಭಯೋತ್ಪಾದನಾ ಜಾಲ ಹೆಣೆದಿದೆ. ವಿವಿಧ ದೇಶಗಳಿಂದ ಗ್ಯಾಂಗ್​ಸ್ಟರ್​ಗಳನ್ನ ಇತ್ತೀಚೆಗೆ ಪಾಕಿಸ್ತಾನಕ್ಕೆ ಕರೆಯಿಸಿ ಲೂದಿಯಾನದಂಥ ದಾಳಿಗಳಿಗೆ ಯೋಜಿಸಲಾಗುತ್ತಿದೆ. ಲೂಧಿಯಾನ ಕೋರ್ಟ್ ಸ್ಫೋಟಕ್ಕೆ ಸ್ಥಳೀಯ ಗ್ಯಾಂಗ್​ಸ್ಟರ್​ಗಳು ಅಥವಾ ಅಪರಾಧಿಗಳು ಹಾಗೂ ಪಂಜಾಬ್​ನಲ್ಲಿ ಈ ಕ್ರಿಮಿನಲ್​ಗಳು ಹೊಂದಿರುವ ಜೈಲು ಸಂಪರ್ಕವನ್ನ ಬಳಸಿಕೊಂಂಡಿರುವ ಸಾಧ್ಯತೆ ಇದೆ ಎಂದು ಹಿರಿಯ ಅಧಿಕಾರಿಗಳು ಶಂಕಿಸಿದ್ದಾರೆ.

  ಕುಖ್ಯಾತ ಗ್ಯಾಂಗ್​ಸ್ಟರ್​ಗಳಾದ ಕುಲ್ವಿಂದರ್ ಸಿಂಗ್ ಅಲಿಯಾಸ್ ಖಾನ್​ಪುರಿಯಾ, ಹರ್ವಿಂದರ್ ಸಿಂಗ್ ಅಲಿಯಾಸ್ ರಿಂಡಾ ಸಿಂಗ್ ಮೊದಲಾದವರನ್ನ ಭಾರತದಲ್ಲಿ ದಾಳಿ ನಡೆಸಲು ಸುಪಾರಿ ಕೊಡಲಾಗಿದೆ. ಗ್ಯಾಂಗ್​ಸ್ಟರ್ ಕುಲ್ವಿಂದರ್ ಸಿಂಗ್ ಈ ಹಿಂದೆ ಕಾಂಬೋಡಿಯಾದಲ್ಲಿದ್ದವ. 2019ರಲ್ಲಿ ಮಲೇಷ್ಯಾದಲ್ಲೂ ಇದ್ದ. ಇನ್ನು, ರಿಂಡಾ ಸಿಂಗ್ ಪಂಜಾಬ್​ನಿಂದ ಇತ್ತೀಚೆಗೆ ಪಾಕಿಸ್ತಾನಕ್ಕೆ ಹೋಗಿದ್ದನೆನ್ನಲಾಗಿದೆ. ಸ್ವತಃ ರಿಂಡಾ ಸಿಂಗ್ ಅಕಾ ಹರ್ವಿಂದರ್ ಸಿಂಗ್​ನೇ ಲೂಧಿಯಾನ ಸ್ಫೋಟವನ್ನು ಯೋಜಿಸಿದ್ದಿರಬಹುದು. ಇದಕ್ಕಾಗಿ ಆತ ಜೈಲ್ ನೆಟ್ವರ್ಕ್​ನ ಸಹಾಯ ಪಡೆದಿರುವ ಸಾಧ್ಯತೆ ಇದೆ.

  ಇದನ್ನೂ ಓದಿ: IT Raid: ಉದ್ಯಮಿ ಮನೆಯಲ್ಲಿ 150 ಕೋಟಿ; ಹಣದ ರಾಶಿ ಕಂಡು ಸುಸ್ತಾದ ಅಧಿಕಾರಿಗಳು

  ಪಾಕಿಸ್ತಾನದಿಂದ ಡ್ರೋನ್ ಮೂಲಕ ಬಂದಿರಬಹುದು:

  ಆದರೆ, ಸ್ಫೋಟಕ್ಕೆ ಬೇಕಾದ ಸಾಮಗ್ರಿ ಮತ್ತಿತರ ಪರಿಕರಗಳನ್ನ ಸ್ಥಳೀಯವಾಗಿ ವ್ಯವಸ್ಥೆ ಮಾಡಿರುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ವಸ್ತುಗಳನ್ನ ಒಂದು ಸ್ಥಳಕ್ಕೆ ಸಂಗ್ರಹಿಸಲು ಸ್ಥಳೀಯ ನೆಟ್ವರ್ಕ್​ನ ಸಹಾಯದಿಂದ ಡ್ರೋನ್​ಗಳನ್ನ ಬಳಸಿ ಮಾಡಿರುವ ಸಾಧ್ಯತೆ ಹೆಚ್ಚು ಎಂದು ಶಂಕಿಸಲಾಗಿದೆ.

  “ಇಷ್ಟು ದೊಡ್ಡ ಪ್ರಮಾಣದ ಮತ್ತು ಉಚ್ಚಮಟ್ಟದ ಸ್ಫೋಟಕಗಳನ್ನ ಸ್ಥಳೀಯವಾಗಿ ವ್ಯವಸ್ಥೆ ಮಾಡುವುದು ಕಷ್ಟ. ಪಾಕಿಸ್ತಾನ ಬೆಂಬಲಿತ ಗ್ಯಾಂಗ್​ಸ್ಟರ್​ಗಳು ಪಾಕಿಸ್ತಾನದ ಉಗ್ರ ಸಂಘಟನೆಗಳ ಸಹಾಯದಿಂದ ಈ ಪರಿಕರಗಳನ್ನ ಡ್ರೋನ್​ಗಳ ಮೂಲಕ ಭಾರತಕ್ಕೆ ಕಳುಹಿಸಿರಬಹುದು. ಪಂಜಾಬ್​ನ ಲೋಕಲ್ ಗ್ಯಾಂಗ್​ಸ್ಟರ್​ಗಳಿಗೆ ಈ ಸ್ಫೋಟಕಗಳನ್ನ ಒದಗಿಸಿರಬಹುದು. ಈ ಗ್ಯಾಂಗ್​ಸ್ಟರ್​ಗಳು ತಮ್ಮ ಜೈಲ್ ನೆಟ್ವರ್ಕ್ ಮೂಲಕ ಸ್ಫೋಟ ಆಯೋಜಿಸಿರಬಹುದು” ಎಂದು ತನಿಖೆಯಲ್ಲಿ ಭಾಗಿಯಾಗಿರುವ ಹಿರಿಯ ಅಧಿಕಾರಿಯೊಬ್ಬರು ನ್ಯೂಸ್​18ಗೆ ತಿಳಿಸಿದ್ಧಾರೆ.

  ಕಳೆದ ವರ್ಷ ಪಂಜಾಬ್ ಪೊಲೀಸರು ದಿಲ್​ಪ್ರೀತ್-ರಿಂಡಾ ಗ್ಯಾಂಗ್​ನ ರೌಡಿಯೊಬ್ಬನನ್ನು ಬಂಧಿಸಿದ್ದರು. ಈತನ ಮೇಲೆ 20 ಪ್ರಕರಣಗಳಿದ್ದವು. ಆಗ ರಿಂಡಾ ಸಿಂಗ್​ನನ್ನು ಹಿಡಿಯಲು ಪೊಲೀಸರು ಬಲೆಬೀಸಿದ್ದರು. ಆದರೆ, ಪ್ರತ್ಯೇಕತಾವಾದಿ ಉಗ್ರ ಸಂಘಟನೆ ಬಬ್ಬರ್ ಖಲ್ಸಾದ ಮುಖ್ಯಸ್ಥ ವಾಧವಾ ಸಿಂಗ್ ನೆರವಿನಿಂದ ರಿಂಡಾ ಸಿಂಗ್ ಪಂಜಾಬ್​ನಿಂದ ಕಾಲ್ಕಿತ್ತು ಪಾಕಿಸ್ತಾನ ಸೇರಿಕೊಂಡಿದ್ದನೆನ್ನಲಾಗಿದೆ.
  Published by:Vijayasarthy SN
  First published: