ದಿನಕ್ಕೆ ರೂ 50 ಹೂಡಿಕೆ ಮಾಡಿ, ಕಡೆಗೆ ಬರೋಬ್ಬರಿ 34 ಲಕ್ಷ ಲಾಭ ಗಳಿಸಿ: ಇಲ್ಲಿದೆ Savings Tips

Invest less get more in returns: 25 ನೇ ವಯಸ್ಸಿನಲ್ಲಿ ಇಲ್ಲಿ ಹೂಡಿಕೆ ಮಾಡಲು ಆರಂಭಿಸಿದರೆ ಮೇಲಿನ ಬೃಹತ್​ ಮೊತ್ತ ನಿಮ್ಮದಾಗುತ್ತದೆ. ನೀವು ಬೇಗನೆ ಹೂಡಿಕೆ ಮಾಡಲು ಪ್ರಾರಂಭಿಸಿದರೆ ನಿಮ್ಮ ಪಿಂಚಣಿ ಮೊತ್ತವು ದೊಡ್ಡದಾಗಿರುತ್ತದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  Savings Tips: ಹಣ ಗಳಿಸಲು ಹಣ ಬೇಕು ಎಂಬ ಮಾತು ನಿಜಕ್ಕೂ ಸತ್ಯ. ಇರುವ ಹಣ ನಿಮಗೆ ಹೆಚ್ಚಿನ ಹಣವನ್ನು ತಂದು ಕೊಡಲು ಹಣವನ್ನು ಎಲ್ಲಿ ಹೂಡಿಕೆ ಮಾಡಬೇಕು ಎಂದು ತಿಳಿದುಕೊಳ್ಳುವುದು ಮುಖ್ಯವಾಗಿದೆ. ಇದರಿಂದ ನಿಮಗೆ ಉತ್ತಮ ಲಾಭ ಸಿಗುತ್ತೆ. ನೀವು ಅಪಾಯವಿಲ್ಲದೆ  ಹಣ ಗಳಿಸಲು ಬಯಸಿದರೆ ನಿಮಗೆ ಹಲವು ಹೂಡಿಕೆ ಆಯ್ಕೆಗಳಿವೆ.  ಇವುಗಳಲ್ಲಿ ಒಂದು ಹೊಸ ಪಿಂಚಣಿ ವ್ಯವಸ್ಥೆ, ನಿಮ್ಮ ವೃದ್ಧಾಪ್ಯವನ್ನು ಸುಧಾರಿಸಲು ನೀವು ಹೂಡಿಕೆ ಮಾಡಬಹುದು. ನೀವು NPS ನಲ್ಲಿ ದಿನಕ್ಕೆ 50 ರೂ.ಗಳನ್ನು ಉಳಿಸಿದರೂ, ನಿವೃತ್ತಿಯ ಸಮಯದಲ್ಲಿ ನಿಮಗೆ 34 ಲಕ್ಷ ರೂ. ಸಿಗಲಿದೆ. ಇದರಲ್ಲಿ ಹೂಡಿಕೆ ಮಾಡುವುದು ಸಂಪೂರ್ಣವಾಗಿ ಸುಲಭ ಮತ್ತು ಕಡಿಮೆ ಅಪಾಯ ಇರುತ್ತದೆ.

  ಎನ್‌ಪಿಎಸ್ ಮಾರುಕಟ್ಟೆ-ಸಂಬಂಧಿತ ಹೂಡಿಕೆಯಾಗಿದೆ ಎಂಬುದನ್ನು ಗಮನಿಸುವುದು ಮುಖ್ಯವಾಗಿದೆ.  ಈ ಯೋಜನೆಯಡಿ ಹಣವನ್ನು ಎರಡು ಸ್ಥಳಗಳಲ್ಲಿ ಹೂಡಿಕೆ ಮಾಡಬಹುದುದಾಗಿದೆ. ಅಂದರೆ ಷೇರು ಮಾರುಕಟ್ಟೆ ಮತ್ತು ಸಾಲ ಅಂದರೆ ಸರ್ಕಾರಿ ಬಾಂಡ್‌ಗಳು ಮತ್ತು ಕಾರ್ಪೊರೇಟ್ ಬಾಂಡ್‌ಗಳು. ಖಾತೆ ತೆರೆಯುವ ಸಮಯದಲ್ಲಿ ಮಾತ್ರ ನೀವು ಎಷ್ಟು NPS ಹಣವು ಈಕ್ವಿಟಿಗೆ ಹೋಗುತ್ತದೆ ಎಂಬುದನ್ನು ನಿರ್ಧರಿಸಬಹುದು. ಸಾಮಾನ್ಯವಾಗಿ, ಶೇ .75 ರಷ್ಟು ಹಣ ಈಕ್ವಿಟಿಗೆ ಹೋಗಬಹುದು. ಇದರರ್ಥ ಇದರಲ್ಲಿ ನೀವು PPF ಅಥವಾ EPF ಗಿಂತ ಸ್ವಲ್ಪ ಹೆಚ್ಚಿನ ಆದಾಯವನ್ನು ಪಡೆಯುವ ನಿರೀಕ್ಷೆಯಿದೆ.

  ನಾವು ನಿಮಗೆ ಹೇಳಲು ಹೊರಟಿರುವುದು ನೀವು ಈಗಷ್ಟೇ ಕೆಲಸ ಆರಂಭಿಸಿದ್ದಲ್ಲಿ, ನಿಮ್ಮಲ್ಲಿ ಹೂಡಿಕೆ ಮಾಡಲು ಹೆಚ್ಚು ಹಣವಿರಲ್ಲ. ಆಗ ನೀವು ದಿನಕ್ಕೆ 50 ರೂಪಾಯಿ ಉಳಿಸಬಹುದು ಅದನ್ನು NPS ನಲ್ಲಿ ಹೂಡಿಕೆ ಮಾಡಬಹುದು.  ಈ ಸಮಯದಲ್ಲಿ ನಿಮಗೆ 25 ವರ್ಷ ವಯಸ್ಸಾಗಿದೆ ಎಂದು ಭಾವಿಸೋಣ. ನೀವು NPS ನಲ್ಲಿ ತಿಂಗಳಿಗೆ 1,500 ರೂ ಹೂಡಿಕೆ ಮಾಡಿದರೆ, ಅಂದರೆ ದಿನಕ್ಕೆ  50 ರೂ ಮತ್ತು 60 ವರ್ಷಗಳ ನಂತರ ನಿವೃತ್ತಿ ತೆಗೆದುಕೊಂಡರೆ ನೀವು ಸತತ 35 ವರ್ಷಗಳ ಕಾಲ ಅದರಲ್ಲಿ ಹೂಡಿಕೆ ಮಾಡಿರುತ್ತೀರಿ. ಈಗ ನೀವು 10%ದರದಲ್ಲಿ ಆದಾಯವನ್ನು ಪಡೆದುಕೊಂಡಿದ್ದೀರಿ ಎಂದು ಭಾವಿಸೋಣ. ಆದ್ದರಿಂದ ನೀವು ನಿವೃತ್ತರಾದಾಗ, ನಿಮ್ಮ ಒಟ್ಟು ಪಿಂಚಣಿ ಸಂಪತ್ತು 34 ರೂ. ಲಕ್ಷವಾಗಿರುತ್ತದೆ.

  NPS ನಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿ

  • ವಯಸ್ಸು: 25 ವರ್ಷಗಳು

  • ಹೂಡಿಕೆ: ತಿಂಗಳಿಗೆ 1,500 ರೂ.

  • ಹೂಡಿಕೆ ಅವಧಿ: 35 ವರ್ಷಗಳು

  • ಅಂದಾಜು ಆದಾಯ: 10%


  Bookkeeping ನಲ್ಲಿ NPS ಹೂಡಿಕೆ

  •  ಒಟ್ಟು ಹೂಡಿಕೆ: 6.30 ಲಕ್ಷ ರೂ.

  • ಪಡೆದ ಒಟ್ಟು ಬಡ್ಡಿ: ರೂ 27.9 ಲಕ್ಷ

  • ಪಿಂಚಣಿ ಸಂಪತ್ತು: 34.19 ಲಕ್ಷ ರೂ

  • ಒಟ್ಟು ತೆರಿಗೆ ಉಳಿತಾಯ: 1.89 ಲಕ್ಷ ರೂ


  ಈಗ, ನೀವು ಈ ಎಲ್ಲಾ ಹಣವನ್ನು ಒಂದೇ ಬಾರಿಗೆ ಹಿಂಪಡೆಯಲು ಸಾಧ್ಯವಿಲ್ಲ. ನೀವು ಅದರಲ್ಲಿ 60 ಪ್ರತಿಶತವನ್ನು ಮಾತ್ರ ಹಿಂಪಡೆಯಬಹುದು. ಉಳಿದ 40 ಪ್ರತಿಶತವನ್ನು ನೀವು ವರ್ಷಾಶನ ಯೋಜನೆಯಲ್ಲಿ ಹಾಕಬೇಕು. ಇದರಿಂದ ನೀವು ಪ್ರತಿ ತಿಂಗಳು ಪಿಂಚಣಿ ಪಡೆಯುತ್ತೀರಿ. ನಿಮ್ಮ ಹಣದ 40% ಅನ್ನು ನೀವು ವರ್ಷಾಶನಕ್ಕೆ ಹಾಕಿದ್ದೀರಿ ಎಂದು ಭಾವಿಸೋಣ. ಆದ್ದರಿಂದ ನೀವು 20.51 ಲಕ್ಷ ರೂ.ಗಳ ಒಟ್ಟು ಮೊತ್ತವನ್ನು ಹಿಂಪಡೆಯಬಹುದು. ಬಡ್ಡಿ 8%ಎಂದು ಭಾವಿಸಿದರೆ, ನಿಮ್ಮ ಮಾಸಿಕ ಪಿಂಚಣಿ 9,000 ರೂ. ಆಗಿತುತ್ತದೆ.

  ಇದನ್ನೂ ಓದಿ: Investment Guide: ಆರ್ಥಿಕ ಪ್ರಗತಿಗಾಗಿ ಯಾವ ಹೂಡಿಕೆ ತಂತ್ರಗಳನ್ನು ಅಳವಡಿಸಿಕೊಳ್ಳಬೇಕು? ಲಾಭ ಗಳಿಸುವುದು ಹೇಗೆ?

  ಪಿಂಚಣಿ ಖಾತೆ:

  • ವರ್ಷಾಶನ: 40 ಪ್ರತಿಶತ ಅಂದಾಜು

  • ಬಡ್ಡಿ ದರ: 8%

  • ಸ್ವೀಕರಿಸಿದ ಒಟ್ಟು ಮೊತ್ತ: 20.51 ಲಕ್ಷ ರೂ

  • ಮಾಸಿಕ ಪಿಂಚಣಿ: ರೂ 9,111


  ಇದನ್ನೂ ಓದಿ: Investment Tips: ಮಾರುಕಟ್ಟೆ ಪರಿಣಿತರಿಂದ ಉತ್ತಮ ಹೂಡಿಕೆ ಸಲಹೆಗಳು; ಹೇಗೆ ಹೂಡಿಕೆ ಮಾಡಬೇಕು?

  25 ನೇ ವಯಸ್ಸಿನಲ್ಲಿ ಇಲ್ಲಿ ಹೂಡಿಕೆ ಮಾಡಲು ಆರಂಭಿಸಿದರೆ ಮೇಲಿನ ಬೃಹತ್​ ಮೊತ್ತ ನಿಮ್ಮದಾಗುತ್ತದೆ. ನೀವು ಬೇಗನೆ ಹೂಡಿಕೆ ಮಾಡಲು ಪ್ರಾರಂಭಿಸಿದರೆ ನಿಮ್ಮ ಪಿಂಚಣಿ ಮೊತ್ತವು ದೊಡ್ಡದಾಗಿರುತ್ತದೆ. ಪಿಂಚಣಿಯ ಮೊತ್ತವು ನೀವು ಮಾಸಿಕ ಹೂಡಿಕೆ ಮಾಡುತ್ತಿರುವ ಮೊತ್ತವನ್ನು ಅವಲಂಭಿಸಿರುತ್ತದೆ. ನೀವು ಯಾವ ವಯಸ್ಸಿನಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿದ್ದೀರಿ ಅನ್ನೋದು ನೀವು ಪಡೆಯುವ ಲಾಭವನ್ನು ಅವಲಂಬಿಸಿರುತ್ತದೆ. ನಾವು ಇಲ್ಲಿ ತೆಗೆದುಕೊಂಡಿರುವ ಉದಾಹರಣೆಯು ಅಂದಾಜು ಆದಾಯಗಳ ಮೇಲೆ. ಪ್ರತಿಯೊಂದು ಸಂದರ್ಭದಲ್ಲೂ ಇದು ಭಿನ್ನವಾಗಿರಬಹುದು.
  Published by:Sharath Sharma Kalagaru
  First published: